ಮುಂಬಯಿನ ೧೦೦ಕಿಮೀ ಅಂತರದಲ್ಲಿರುವ ತಾಣಗಳು

0
721

By Mavis Pereira

ಮುಂಬಯಿಯು ಎಂದೂ ಮಲಗದ ನಗರ. ಆದಎರ್ ನಿಮಗೆ ತಿಳಿದಿದೆಯೇ, ವಿರಾಮಕ್ಕಾಗಿ ಒಂದು ಘಂಟೆಯ ಡ್ರೈವ್ ನಿಂದ ನೀವು ಒಂದು ಸುಂದರವಾದ ಗಿರಿಧಾಮ ಕ್ಕೆ, ನಗರದ ಗಡಿಬಿಡಿ ಮತ್ತು ಸದ್ದಿನಿಂದ ದೂರ ಹೋಗಬಹುದು.

ಖೊಪೊಲಿ

ಮುಂಬಯಿಯ ದಕ್ಷಿಣದಲ್ಲಿ ೮೦ ಕಿಮೀ ದೂರವಿರುವ ಖೊಪೊಲಿ, NH ೪ ನಲ್ಲಿ, ಸಹ್ಯಾದ್ರಿ ಬೆಟ್ಟದ ತಪ್ಪಲಿನಲ್ಲಿರುವ ಕೈಗಾರಿಕಾ ನಗರ. ಇದು ವರ್ಷಪೂರ್ತಿಯ ಧಾಮವಾಗಿದ್ದರೂ, ಇದನ್ನು ನೋಡಲು ಉತ್ತಮವಾದ ಸಮಯವೆಂದರೆ ವರಣನ ಆರ್ಭಟದಲ್ಲಿ; ಆಗ ಈ ಗಿರಿಧಾಮವು ಮಂಜು ಮತ್ತು ಮಳೆಯಲ್ಲಿ ಮುಸುಕಿರುತ್ತದೆ. ಖೊಪೊಲಿಯ ಆಕರ್ಷಣೆಗಳೆಂದರೆ:

Kalote Lake

ಜೆನಿತ್ ಜಲಪಾತ: ಇದು ೨೫ ಅಡಿ ಎತ್ತರದ ಜಲಪಾತ. ಇದು ರಾಕ್ ಕ್ಲೈಂಬಿಂಗ್ ಮತ್ತು ರ‍್ಯಾಪ್ಪೆಲಿಂಗ್ ಗೆ ಪ್ರಮುಖ ಆಕರ್ಷಣೆಯಾಗಿದೆ.

ಕಲೊಟೆ ಕೆರೆ: ಇದೊಂದು ನೈಸರ್ಗಿಕ, ಪ್ರಶಾಂತ ಕೆರೆ. ಇದರ ಸುತ್ತಲೂ ಇರುವ ಬೆಟ್ಟಗಳ ಮಧ್ಯ ನೀವು ಆರಾಮವಾಗಿ ವಿಶ್ರಮಿಸಬಹುದು. ಇಲ್ಲಿ ಮಳೆಗಾಲದಲ್ಲಿ ಕಾಣುವ ಒಂದು ಜಲಪಾತವಿದೆ – ಕಲೊಟೆ ಜಲಪಾತ.

Ballareshwar Temple

ಅಷ್ಟವಿನಾಯಕ ದೇವಾಲಯ: ಧರ್ಮಶ್ರದ್ಧೆಯುಳ್ಳವರಿಗೆ, ಎಂಟರಲ್ಲಿ ಎರಡು ಅಷ್ಟವಿನಾಯಕ ದೇವಾಲಯಗಳನ್ನು ವೀಕ್ಷಿಸಬಹುದು – ವರದ ವಿನಾಯಕ ಮಹದ್ ಮತ್ತು ಬಲ್ಲಾರೇಶ್ವರ ದೇವಾಲಯ.

ಇಮೇಜಿಕಾ: ಇದು ೩೦೦ ಎಕರೆಗಳ ಪ್ರದೇಶದಲ್ಲಿ ಹರಡಿಕೊಂಡಿರುವ ವಿಶ್ವಮಟ್ಟದ ಥೀಂ ಪಾರ್ಕ್. ಇಲ್ಲಿ ನೀವು ವಿವಿಧ ರೀತಿಯ ರೈಡ್ ಅಥವಾ ವಾಟರ್ ಪಾರ್ಕ್ ನಲ್ಲಿ ಆನಂದಿಸಬಹುದು. ಇಲ್ಲೊಂದು ಸ್ನೋಪಾರ್ಕ್ ಕೂಡ ಇದೆ.

Vadivali Lake

ಕಾಂಶೆಟ್:

ಪಶ್ಚಿಮಘಟ್ಟಗಳ ನಡುವೆ ಅವಿತಿರುವ ಇದು ಮುಂಬಯಿನಿಂದ ೧೧೦ ಕಿಮೀ ದೂರದಲ್ಲಿದೆ. ಇದು ನೋಡಲು ಗಿರಿಧಾಮಕ್ಕಿಂತ ಗ್ರಾಮೀಣ ಪ್ರದೇಶದಂತಿದೆ. ಇದನ್ನು ವೀಕ್ಷಿಸಲು ಸರಿಯಾದ ಸಮಯ ಅಕ್ಟೋಬರ್ ನಿಂದ ಮಾರ್ಚ್. ಇದರ ಶ್ರೀಮಂತ ಸಸ್ಯರಾಶಿ, ಪ್ರಶಾಂತವಾದ ಕೆರೆಗಳು ಮತ್ತು ಬೆಟ್ಟಗಳ ಸಾಲು ಆರಾಮಿಸಲು ಮತ್ತು ಆನಂದಿಸಲು ಉತ್ತಮ ಸ್ಥಾನವಾಗಿಸಿವೆ. ಕಾಂಶೆಟ್ ನಲ್ಲಿ ನೀವು ಇದನ್ನು ಮಾಡಬಹುದು:

Dhak Bahiri Fort

ಢಾಕ್ ಬಾಹಿರಿ ಕೋಟೆ: ರಾಯಘಡ ಜಿಲ್ಲೆಯ ಬೆಟ್ಟದ ಕೋಟೆಯನ್ನು ದೇವ ಭಾಯ್ರಿಗೆ ಸಮರ್ಪಿಸಲಾಗಿದೆ; ಇವರು ಥಾಕುರ್ ಆದಿವಾಸಗಳ ದೈವ. ಹಿಂದೆ ಸುತ್ತಮುತ್ತಲಿನ ಪ್ರದೇಶವನ್ನು ಕಾಪಾಡಲು ಇದನ್ನು ಬಳಸಲಾಗುತ್ತಿತ್ತು, ಮತ್ತು ಮೇಲೆ ೫-೬ ನೀರಿನ ತೊಟ್ಟಿಗಳಿವೆ ಮತ್ತು ಒಂದು ಗುಹೆಯಲ್ಲಿ ಎರಡು ತೊಟ್ಟಿಗಳಿವೆ. ಗುಹೆಯಲ್ಲಿ ಪಾತ್ರೆಗಳನ್ನು ಇಡಲಾಗಿದೆ. ಸ್ಥಳೀಯರು ಹೇಳುವಂತೆ, ಈ ಪಾತ್ರೆಗಳನ್ನು ಕದಿಯಲು ಯಾರಾದರೂ ಯತ್ನಿಸಿದರೆ, ಬಾಹಿರಿಯು ಅವರನ್ನು ಶಿಕ್ಷಿಸುತ್ತಾನೆ. ೨೭೦೦ ಅಡಿ ಎತ್ತರವಿರುವ ಈ ಕೋಟೆಗೆ ನಡೆದು ಹೋಗುವುದು ಸುಲಭವಲ್ಲ, ಆದರೆ ದಾರಿಯಲ್ಲಿ ಕಲ್ಲಿನ ಕೆತ್ತನೆಯ ಮೆಟ್ಟಿಲುಗಳಿವೆ. ಮೇಲಿನಿಂದ ನೀವು ಇತರ ಪ್ರಮುಖ ತಾಣಗಳಾದ ರಾಜ್ಮಾಚಿ, ಡ್ಯೂಕ್ಸ್ ನೋಸ್, ಮಾಣಿಕ್ ಘಡ್, ಕರ್ನಾಲಾ, ಭೀಮಾಶಂಕರ, ವಿಸಾಪುರ್ ಇತ್ಯಾದಿಗಳನ್ನು ನೋಡಬಹುದು.

 

ತಲುಪುವುದು ಹೇಗೆ?

ಇಳಿಯಲು ಸೂಕ್ತವಾದ ರೈಲು ನಿಲ್ದಾಣವೆಂದರೆ ಲೋನಾವಾಲಾ (ಖಾಪೊಲಿಯಿಂದ ೮ ಕಿಮೀ ದೂರ ಮತ್ತು ಖಾಂಶೆಟ್ ನಿಂದ ೧೬ ಕಿಮೀ ದೂರ).

LEAVE A REPLY

Please enter your comment!
Please enter your name here