ಜೀವಿತಾವಧಿಯಲ್ಲಿ ಒಮ್ಮೆ ಬರುವ ಈ ಯಾತ್ರೆಯಾದ, ಚಾರ್ ಧಾಮ್ ತೀರ್ಥಯಾತ್ರೆಯು ದೀರ್ಘವಾದ, ಕಠಿಣವಾದ ಮತ್ತು ಅದಕ್ಕೆ ಸಮನಾದ ಪ್ರತಿಫಲ ನೀಡುವ ಯಾತ್ರೆ. ಹತ್ತಿರದ ರೈಲುತಾಣವಾದ ಹರಿದ್ವಾರದೊಂದಿಗೆ ಜನರು ಯಮುನೋತ್ರಿಗೆ ಪ್ರಯಾಣಿಸುತ್ತಾರೆ ಅಲ್ಲಿ ಯಮೂನಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ಎಲ್ಲ ಕಾರ್ಯಗಳು ಪ್ರಾರಂಭವಾಗುತ್ತವೆ. ಇಲ್ಲಿಂದ ಭಕ್ತಾದಿಗಳು ಗಂಗೋತ್ರಿಗೆ ಮುಂದುವರಿಯುತ್ತಾರೆ, ಆನಂತರ ಕೇದಾರನಾಥ ಮತ್ತು ಅಂತಿಮವಾಗಿ ಬದ್ರಿನಾಥಕ್ಕೆ ತೆರಳುತ್ತಾರೆ. ದಾರಿ ಮಧ್ಯದಲ್ಲಿ, ಎಲ್ಲರೂ ಸಹ ವಿವಿಧ ಸುಪ್ರಸಿದ್ಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಾರೆ ಮತ್ತು ಈ ಮನಮೋಹಕವಾದ ಪ್ರಕೃತಿ ಸೌಂದರ್ಯದಲ್ಲಿ ಚಾರಣ ಮಾಡುತ್ತಾ ತಮ್ಮ ಪಾಪಗಳನ್ನು ತೊಳೆದುಕೊಳ್ಳುತ್ತಾರೆ.
ಧಾಮ್ 1: ಗಂಗೋತ್ರಿ
ಉತ್ತರಕಾಶಿ ಜಿಲ್ಲೆಯಲ್ಲಿ ಸ್ಥಾಪಿತವಾದ, ಗಂಗೋತ್ರಿ ಭೂಪ್ರದೇಶವು ಭೋರ್ಗೆರೆಯುವಶುದ್ಧನೀರಿನ ತೊರೆಗಳಿಂದ ಮತ್ತು ಎಲ್ಲೆಡೆಯು ಹಸಿರ ಸಸ್ಯರಾಶಿಯಿಂದ ಅಲಂಕೃತವಾಗಿದೆ. ಹಿಂದು ಪುರಾಣಗಳ ಪ್ರಕಾರವಾಗಿ, ಇದು ಗಂಗಾ ನದಿಯ ಉಗಮ ಸ್ಥಾನ. ಗಂಗೋತ್ರಿಯ ನೀರೇ ಬದ್ರಿನಾಥ ಮತ್ತು ಕೇದಾರನಾಥಕ್ಕೆ ಮುಂದುವರಿಯುತ್ತದೆ, ಅವುಗಳೆ ಚಾರ್ ಧಾಮ್ ನ ಮುಂದಿನ ನಿಲ್ದಾಣಗಳು. ಇಲ್ಲಿ ನೀವು ಗಂಗೋತ್ರಿ ದೇವಾಲಯವನ್ನು ಭೇಟಿ ಮಾಡುತ್ತಿರಿ, ಗಂಗ್ನಾನಿ – ನಿವಾರಣಾ ಗುಣಲಕ್ಷಣಗಳಿರುವ ಬಿಸಿ ಸಲ್ಫರ್ ನ ಉಗಮದ ಚಿಲುಮೆ – ಇದರ ಅಡಿಯಲ್ಲಿ ಮುಳುಗಿದೆ ಶಿವಲಿಂಗ, ಇಲ್ಲಿಂದಲೇ ಗಂಗಾದೇವಿಯು ಇತರೆ ಧಾರ್ಮಿಕ ಸ್ಥಳಗಳಿಗೂ ಮೊದಲು ಈ ಮಾನವಲೋಕವಾದ ಭೂಮಿಯನ್ನು ಪ್ರವೇಶಿಸಿದಳು.
ಧಾಮ್ 2:ಯಮುನೋತ್ರಿ
ಈ ಪವಿತ್ರ ನಗರವು ಯಮುನಾ ದೇವಿಗೆ ಮುಡಿಪಾಗಿ ಇರಿಸಿಲಾಗಿದೆ. ಯಮುನಾ ನದಿಯು ಇಲ್ಲಿನ ಕಲಿಂದಿ ಬೆಟ್ಟಗಳ ನಡುವಿನ ಒಂದು ಸ್ಥಳದಿಂದ ಉಗಮವಾಗುತ್ತದೆ ಇಲ್ಲಿಯ ಪ್ರತೀತಿ. ಯಮುನೋತ್ರಿಗೆ ತಲುಪಲು, ಭಕ್ತಾದಿಗಳು ಜಾನಕಿಚಟ್ಟಿ ಇಂದ ಒಂದು ಸಣ್ಣ ಚಾರಣ ಮಾಡಬೇಕು. ಅದಾಗ್ಯೂ, ಒಬ್ಬರು ಕುದುರೆ ಸವಾರಿ ಅಥವಾ ಪಲ್ಲಕಿಯ ಪ್ರವಾಸದೊಂದಿಗೆ ಕಾಲ್ನಡಿಗೆಯನ್ನು ತಪ್ಪಿಸಬಹುದು. ಈ ಎರಡು ಅನುಕೂಲಕಗಳ ಬೆಲೆಯ ಶ್ರೇಣಿಯು ರೂ.500-1200 ಅಷ್ಟೆ. ಮುಖ್ಯ ದೇವಾಲಯದ ಭೇಟಿಯ ಹೊರತಾಗಿ ಇಲ್ಲಿ, ನೀವು ಸೂರ್ಯ ಕುಂಡ, ಸಪ್ತರಿಷಿ ಕುಂಡ ಮತ್ತು ಜಾನಕಿ ಚಟ್ಟಿಗಳನ್ನು ಸಹ ನೀವು ಭೇಟಿ ಮಾಡಬಹುದು ಇವುಗಳು ಚಾರಣಗಳ ಕೇಂದ್ರಸ್ಥಳ.
ಧಾಮ್ 3: ಕೇದಾರನಾಥ
ಗುಪ್ತಕಾಶಿಯಲ್ಲಿನ ರುದ್ರಪ್ರಯಾಗದಿಂದ 86 ಕಿಮೀ ದೂರದಲ್ಲಿ ಇರುವುದೇ ಕೇದಾರನಾಥ. ಇದನ್ನು ಸುಂದರವಾದ ಬೆಟ್ಟಗುಡ್ಡಗಳ ಮಾರ್ಗ, ಹುಲ್ಲುಗಾವಲು, ಉಷ್ಣ ವಲಯಗಳು, ಅತ್ಯಾಕರ್ಷಕ ಪರ್ವತ ಶ್ರೇಣಿಗಳು ಮತ್ತು ಹಚ್ಚ ಹಸಿರ ಸಸ್ಯರಾಶಿಯ ಮೂಲಕ ಪ್ರಯಾಣಿಸಿ ತಲುಪಬಹುದು. ಮಹಾ ಶಿವನ 12 ಜ್ಯೋತಿರ್ಲಿಂಗಗಳಲ್ಲಿ, ಇದು ಅತ್ಯಂತ ಮಹತ್ವಪೂರ್ಣವಾದುದು. ಕೇದಾರನಾಥ ನಲ್ಲಿ, ನೀವು ಭೈರವ ದೇವಾಲಯ ಮತ್ತು ಸಟೊಪಂಥ್ ಮೇಲಿರುವ ಮಹಾಪಂಥ ಅನ್ನು ಭೇಟಿ ಮಾಡಬಹುದು ಇದನ್ನು ಸ್ವರ್ಗದ ಮುಖ್ಯದ್ವಾರವೆಂದು ಸಹ ನಂಬಲಾಗುತ್ತದೆ. ಅಂತೆಯೇಇಲ್ಲಿ ಕೇದಾರನಾಥ ವನ್ಯಜೀವಿ ಅಭಯಾರಣ್ಯವಿದೆ ಇದು ತನ್ನ ಶ್ರೀಮಂತ ಸಸ್ಯರಾಶಿ ಮತ್ತು ಪ್ರಾಣಿಸಂಕುಲಕ್ಕೆ ಹೆಸರುವಾಸಿ.
ಕೇದಾರನಾಥನ ಭೇಟಿಗಾಗಿ ನೋಂದಣಿ: ಕೇದಾರನಾಥನ ಪ್ರವಾಸಕ್ಕಾಗಿ ಪೂರ್ವ ನೋಂದಣಿ ಅತಿಅವಶ್ಯಕ. ನೋಂದಣಿಯನ್ನು ಭೌತಿಕವಾಗಿ ನೋಂದಣಿ ಕೌಂಟರ್ ಗಳಲ್ಲಿ ಅಥವಾ ಆನ್ಲೈನ್ ಮೂಲಕ ಮಾಡಬಹುದು. ನಿಮಗೆ ಒಂದು ಪ್ರವಾಸ ಕಾರ್ಡ್ ಅನ್ನು ವಿತರಿಸಲಾಗುತ್ತದೆ ನಿಮ್ಮ ಪ್ರಯಾಣದ ಪರ್ಯಂತವು ಅದನ್ನು ಜೊತೆಗೆ ತೆಗೆದುಕೊಂಡು ಹೋಗುವುದು ಅತ್ಯಗತ್ಯ
ವೈದ್ಯಕೀಯ ಪ್ರಮಾಣಪತ್ರ: ಗುಪ್ತಕಾಶಿ ಅಥವಾ ಸೋನ್ ಪ್ರಯಾಗದಲ್ಲಿನ ವೈದ್ಯಕೀಯ ಕೇಂದ್ರಗಳಿಂದ ವೈದ್ಯಕೀಯ ಅರ್ಹತಾ ಪ್ರಮಾಣ ಪತ್ರ ಪಡೆದ ನಂತರವೇ ನೀವು ಈ ಪ್ರಯಾಣ ಮುಂದುವರಿಸಬಹುದು. ಒಂದೊಮ್ಮೆ ವೈದ್ಯಕೀಯ ವರದಿಗಳು ಏನಾದರೂ ವಿಷಮಾವಸ್ಥೆಯನ್ನು ಸೂಚಿಸಿದರೆ ನಿಮ್ಮನ್ನು ಚಾರಣ ಮಾಡಲು ಅನುಮತಿಸುವುದಿಲ್ಲ, ಅದಾಗ್ಯೂ ನೀವು ಹೆಲಿಕಾಫ್ಟರ್ ಮೂಲಕ ಕೇದಾರನಾಥವನ್ನು ತಲುಪಬಹುದು.
ಧಾಮ್ 4: ಬದ್ರಿನಾಥ
ಗರ್ಹ್ವಾಲ್ ಹಿಮಾಲಯದ ನಟ್ಟನಡುವಿನಲ್ಲಿ ಸ್ಥಾಪಿತವದ, ಈ ಪವಿತ್ರ ನಗರದ ಭೇಟಿಗಾಗಿ ವಿಶೇಷ ಅನುಮತಿಯ ಅಗತ್ಯವಿದೆ. ಈ ದೇವಾಲಯವನ್ನು ತಲುಪಲು ನೀವು ಜೋಶಿಮಾತ್ ದಿಂದ ಒಂದು ಕಾರ್ ಅನ್ನು ಬಾಡಿಗೆಗೆ ಪಡೆಯಬಹುದು, ಆದರೆ ಎಲ್ಲಾ ಕಾರುಗಳು ಬದ್ರಿನಾಥಕ್ಕೆ ನಿಗದಿತ ಸಮಯದಲ್ಲಿ ಮಾತ್ರ ಅನುಮತಿಸಲಾಗುವುದು (6-7 ಮುಂಜಾನೆ, 9-10 ಮುಂಜಾನೆ, 11-12 ಮಧ್ಯಾನ, 2-3 ಮಧ್ಯಾಮ and 4:30-5:30 ಸಂಜೆ). ಅದಾಗ್ಯೂ, ಒಂದೊಮ್ಮೆ ನೀವು ಸರತಿ ಸಾಲಿನಲ್ಲಿ ಕಾದು ಸುಸ್ತಾದರೆ ಹಾಗೂ ವೇಗವಾಗಿ ದರ್ಶನ ಮಾಡಬೇಕಾದರೆ ಆಗ ಗೇಟ್ ನಂ 3ರ ಹತ್ತಿರದ ಟಿಕೆಟ್ ಕೌಂಟರ್ ಕಡೆಗೆ ಹೋಗಿ ಹಾಗೂ ವೇಧ ಪಾಠ ಪೂಜೆಯ ಚೀಟಿಯನ್ನು ಖರೀದಿಸಿ. ಅದರ ಬೆಲೆ ಒಬ್ಬ ವ್ಯಕ್ತಿಗೆ ರೂ.2500. ಹಾಗು 15 ನಿಮಿಷಗಳ ಒಳಗಾಗಿ ದರ್ಶನವಾಗುತ್ತದೆ. ಕೊನೆಯದಾಗಿ, ದೇವಾಲಯದ ಬಾಗಿಲುಗಳು ಏಪ್ರಿಲ್ ನಿಂದ ಮೇ ತಿಂಗಳ ಒಳಗೆ ತೆರೆಯಲಾಗುತ್ತದೆ ಮತ್ತು ನವೆಂಬರ್ ನಂತರ ಮುಚ್ಚಲಾಗುತ್ತದೆ