ರೈಲು ಟಿಕೆಟ್ಟು ರದ್ದತಿಯ ಬಗ್ಗೆ ನಿಮಗೆ ತಿಳಿದಿರಬೇಕಾದ ಎಲ್ಲವು ಇಲ್ಲಿವೆ

1
1585

ರದ್ದತಿಯ ನಂತರ ನಿಮಗೆ ಸಿಗುವ ಹಿಂಪಾವತಿ ಹಣದಿಂದ ನಿಮ್ಮಲ್ಲಿ ಬಹಳ ಜನರಿಗೆ ಆಘಾತವಾಗಿದೆ ಎಂದು ನಾನು ಬಲ್ಲೆ. ಹಾಗಾಗಿ, ನಾವು ಬಹಳಷ್ಟು ಸನ್ನಿವೇಶಗಳಲ್ಲಿ ರೈಲು ಟಿಕೆಟ್ ಗಳನ್ನು ರದ್ದು ಪಡಿಸುತ್ತೀವಿ, ಆದರು ನಮಗೆ ರದ್ದತಿ ನಿಯಮಗಳ ಬಗ್ಗೆ ಅರಿವಿರುವುದಿಲ್ಲ. ಅದಕ್ಕಾಗಿ, ರೈಲ್‍ಯಾತ್ರಿ ಯಲ್ಲಿ ನಾವು ಅರ್ಥಮಾಡಿಕೊಳ್ಳಲು ಸುಲಭವಾದ ರೀತಿಯಲ್ಲಿ ಮತ್ತು ಸರಳವಾಗಿ ನಿಯಮಗಳನ್ನು ಪ್ರಸ್ತುಪಡಿಸುತ್ತಿದ್ದೇವೆ. ಅವು ಈ ರೀತಿಯಾಗಿವೆ…

ರದ್ದತಿ ಶುಲ್ಕ ಎಂದರೇನು?

ಕಾಯಂ ಆದ ಅಥವಾ ಆರ್.ಎ.ಸಿ ಟಿಕೆಟ್ಟುಗಳನ್ನು ಹೊಂದಿರುವ ಪ್ರಯಾಣಿಕರು ತಾವಾಗಿಯೇ ತಮ್ಮ ಟಿಕೆಟ್ಟುಗಳನ್ನು ರದ್ದುಪಡಿಸಬೇಖಾಗಿರುತ್ತದೆ. ಆದರೆ ವೇಟ್ಲಿಸ್ಟೇಡ್ ಟಿಕೆಟ್ಟುಗಳಿಗಾಗಿ, ಒಂದೊಮ್ಮೆ ಅವು ಅಂತಿಮ ಚಾರ್ಟ್ ರಚನೆಯ ಸಮಯದಲ್ಲಿ ಕಾಯಂ ಆಗದಿದ್ದ ಪಕ್ಷದಲ್ಲಿ ಆಗ ರದ್ದತಿಯು ಸ್ವಯಂಚಾಲಿತವಾಗಿ ನಡೆಯುತ್ತದೆ ಮತ್ತು ಪೂರ್ತಿ ಹಿಂಪಾವತಿಯನ್ನು ಒದಗಿಸಲಾಗುತ್ತದೆ. ಇಲ್ಲಿ ರೈಲು ಹೊರಡುವ 48 ಗಂಟೆಗಳ ಮುನ್ನ ರದ್ದುಪಡಿಸಿದ ಟಿಕೆಟ್ಟುಗಳಿಗೆ ವಿಧಿಸುವ ರದ್ದತಿ ಶುಲ್ಕಗಳ ವಿವರಗಳನ್ನು ಒದಗಿಸಲಾಗಿದೆ.

ಸ್ಲೀಪರ್ ಕ್ಲಾಸ್ ರದ್ದತಿ ಶುಲ್ಕಗಳು: ರೂ. 120 (ಕಾಯಂ ಆದ ಟಿಕೆಟ್ಟುಗಳಿಗಾಗಿ), ರೂ 60 (ಆರ್.ಎ.ಸಿ ಅಥವಾ ವೇಟ್ಲಿಸ್ಟ್ ಟಿಕೆಟ್ಟುಗಳಿಗಾಗಿ) ಪ್ರತಿ ಪ್ರಯಾಣಿಕರ ಅಧಾರದ ಮೇಲೆ.

3 ಎಸಿ ಗಾಗಿ ರದ್ದತಿ ಶುಲ್ಕಗಳು:ರೂ 180 (ಕಾಯಂ ಆದ ಟಿಕೆಟ್ಟುಗಳಿಗಾಗಿ), ರೂ 60 (ಆರ್.ಎ.ಸಿ ಅಥವಾ ವೇಟ್ಲಿಸ್ಟ್ ಟಿಕೆಟ್ಟುಗಳಿಗಾಗಿ) ಪ್ರತಿ ಪ್ರಯಾಣಿಕರ ಅಧಾರದ ಮೇಲೆ.

2 ಎಸಿ ಗಾಗಿ ರದ್ದತಿ ಶುಲ್ಕಗಳು:ರೂ 200 (ಕಾಯಂ ಆದ ಟಿಕೆಟ್ಟುಗಳಿಗಾಗಿ), ರೂ 60 (ಆರ್.ಎ.ಸಿ ಅಥವಾ ವೇಟ್ಲಿಸ್ಟ್ ಟಿಕೆಟ್ಟುಗಳಿಗಾಗಿ) ಪ್ರತಿ ಪ್ರಯಾಣಿಕರ ಅಧಾರದ ಮೇಲೆ.

1 ಎಸಿ ಗಾಗಿ ರದ್ದತಿ ಶುಲ್ಕಗಳು:ರೂ 240 (ಕಾಯಂ ಆದ ಟಿಕೆಟ್ಟುಗಳಿಗಾಗಿ), ರೂ 60 (ಆರ್.ಎ.ಸಿ ಅಥವಾ ವೇಟ್ಲಿಸ್ಟ್ ಟಿಕೆಟ್ಟುಗಳಿಗಾಗಿ) ಪ್ರತಿ ಪ್ರಯಾಣಿಕರ ಅಧಾರದ ಮೇಲೆ.

ಭಾಗಶಃ ರದ್ದು ಎಂದರೇನು ಮತ್ತು ಅದರ ನಿಯಮಗೇಳು?

Irctc blog in Kannada

ಭಾಗಶಃ ರದ್ದು ನಿಮಗೆ 1 ಅಥವಾ 2 ವ್ಯಕ್ತಿಗಳ ಟಿಕೆಟ್ಟುಗಳನ್ನು ರದ್ದು ಮಾಡಲು ಅನುಮತಿಸುತ್ತದೆಅಂತೆಯೇ ಇತರೆ ಟಿಕೆಟ್ಟುಗಳನ್ನು ಮಾನ್ಯವಾಗಿ ಉಳಿಸುತ್ತದೆ. ಒಂದೊಮ್ಮೆ,, ನೀವು 5 ಪ್ರಯಾಣೀಕರಿಗಾಗಿ ಒಂದೇ ನಮೂನೆಯಲ್ಲಿ ಟಿಕೆಟ್ಟುಗಳನ್ನು ಬುಕ್ ಮಾಡಿದ್ದರೆ, ಈಗ, 2 ಪ್ರಯಾಣಿಕರ ಟಿಕೆಟ್ಟುಗಳು ಕಾಯಂ ಆಗಿವೆ, 1 ಪ್ರಯಾಣಿಕನದು ಆರ್.ಎ.ಸಿ ಹಾಗೂ ಉಳಿದ 2 ಪ್ರಯಾಣಿಕ ಟಿಕೆಟ್ಟುಗಳು ವೇಟ್ಲಿಸ್ಟ್ ಆಗಿವೆ. ಭಾಗಶಃ ರದ್ದು ಮೂಲಕ ನೀವು ಆರ್.ಎ.ಸಿ ಮತ್ತು ವೇಟ್ಲಿಸ್ಟ್ ಇರುವ ಪ್ರಯಾಣಿಕರ ಟಿಕೆಟ್ಟೂಗಳನ್ನು ರದ್ದು ಮಾಡಬಹುದು, ಹಾಗೆಯೇ ಕಾಯಂ ಆದ ಟಿಕೆಟ್ಟುಗಳಿರುವಇಬ್ಬರ ಪ್ರಯಾಣಿಕರು ರೈಲನ್ನು ಪ್ರವೇಶಿಸಬಹುದು ಮತ್ತು ಪ್ರಯಾಣದ ಸಮಯದಲ್ಲಿ ತಮ್ಮ ಬರ್ತ್ ಅನ್ನು ಪಡೆದುಕೊಳ್ಳಬಹುದು.

ರದ್ದು ಆದ ನಂತರ ನನಗೆ ಪಾವತಿ ಅರುವುದು ಹೇಗೆ?

ಪ್ರಯಾಣದ ಎಷ್ಟು ಸಮಯಕ್ಕೆ ಮುನ್ನ (ಎಷ್ಟು ಗಂಟೆಗಳಿಗೆ ಮುನ್ನ) ಟಿಕೆಟ್ಟನ್ನು ರದ್ದು ಪಡಿಸಲಾಯಿತು ಎನ್ನುವುದರ ಮೇಲೆ ನಿಮ್ಮ ಹಿಂಪಾವತಿ ಮೊತ್ತವು ಅಧಾರಪಟ್ಟಿರುತ್ತದೆ.

ರೈಲಿನ ನಿರ್ಗಮನಕ್ಕೆ 119ದಿನಗಳ – 48ಗಂಟೆಗಳಿಗೆ ಮುನ್ನ

ಈ ಪರಿಸ್ಥಿತಿಯಲ್ಲಿ, ಪ್ರಯಾಣಕ್ಕಾಗಿ ಆಯ್ಕೆ ಮಾಡಿದ ವರ್ಗದ ಆಧಾರದ ಮೇಲೆ ಪ್ರಯಾಣಿಕರಿಗೆ ರೂ 120 – 240 ನಡುವಿನ ರದ್ದತಿ ಶುಲ್ಕವನ್ನು ಕಳೆದು ಸಂಪೂರ್ಣ ಹಿಂಪಾವತಿಯನ್ನು ಪಡೆಯುತ್ತಾರೆ.

ರೈಲಿನ ನಿರ್ಗಮನಕ್ಕೆ 12 ಗಂಟೆಗಳಿಗೆ ಮುನ್ನ

ಒಂದೊಮ್ಮೆ ನೀವು 48 ಗಂಟೆಗಳ ಅಂತಿಮ ಸಮಯವನ್ನು ತಪ್ಪಿದರೂ ಸಹ, ನೀವು ಹಿಂಪಾವತಿ ಮೌಲ್ಯದ ಒಂದು ಗಮನಾರ್ಹ ಭಾಗವನ್ನು ನಿಮ್ಮ ಖಾತೆಯಲ್ಲಿ ಜಮೆಯಾಗುವುದನ್ನು ನಿರೀಕ್ಷಿಸಬಹುದು. ಅದಾಗ್ಯೂ, 25% ಮೂಲ ದರದ ಮೌಲ್ಯ ಅಥವಾ ರದ್ದತಿ ಶುಲ್ಕ (ಯಾವುದು ಅಧಿಕವೋ ಅದನ್ನು) ಕಡಿತಗೊಳಿಸಲಾಗುವುದು.

ರೈಲಿನ ಅಂತಿಮ ಚಾರ್ಟ್ ರಚನೆಯ ಸಮಯದಲ್ಲಿ ಅಥವಾ 4 ಗಂಟೆಗಳಿಗೆ ಮುನ್ನ

ಬಹಳಷ್ಟು ಸಮಯದಲ್ಲಿ ಪ್ರಯಾಣದ ಆರಂಭಕ್ಕೆ 4 ಗಂಟೆಗಳಿಗೆ ಮುನ್ನ ರೈಲಿನ ಅಂತಿಮ ಚಾರ್ಟ್ ರಚನೆಯಾಗುತ್ತದೆ. ಹಾಗೂ ಪ್ರಯಾಣ-ಮಾಡದ ಪ್ರಯಾಣಿಕರ ಆಸನಗಳ ಮರುವ್ಯವಸ್ಥೆಗೆ ಭಾರತೀಯ ರೈಲ್ವೇಸ್ ನೀಡಿರುವ ಅಂತಿಮ ಅವಕಾಶವಾಗಿರುತ್ತದೆ. ಹಾಗಾಗಿ, ಅಂತಿಮ ಚಾರ್ಟ್ ರಚನೆಗೆ ಮುನ್ನ ರೈಲ್ ಟಿಕೆಟ್ಟುಗಳನ್ನು ರದ್ದು ಪಡಿಸದಾಗ, ಹಾಗೂ 12 ಗಂಟೆಗಳ ಸಮಯಾವಧಿಯ ನಂತರ, ರದ್ದತಿ ಶುಲ್ಕಗಳು ಅಥವಾ ಮೂಲ ದರದ 50% ದಷ್ಟು ಮೊತ್ತವನ್ನು (ಯಾವುದು ಅಧಿಕವೋ ಅದನ್ನು) ಕಡಿತಗೊಳಿಸಲಾಗುವುದು.

ಸ್ವಯಂಚಾಲಿತ-ಹಿಂಪಾವತಿ ಸಂಸ್ಕರಣೆಯಾಗುವ ಇತರೆ ಪ್ರಸಂಗಗಳು ಯಾವುವು?

ವೇಟ್ಲಿಸ್ಟ್ ಟಿಕೆಟ್ಟುಗಳ ಹೊರತಾಗಿಯೂ, ನಿಮ್ಮ ಟಿಕೆಟ್ ದರದ ಸಂಪೂರ್ಣ ಹಣವನ್ನು ಸ್ವಯಂಚಾಲಿತವಾಗಿ-ಹಿಂಪಾವತಿಯನ್ನು ನಿಮಗೆ ಭಾರತೀಯ ರೈಲ್ವೇಸ್ ಒದಗಿಸುತ್ತದೆ.

ರೈಲ್ ರದ್ದು:ಒಂದೊಮ್ಮೆ ನಿಮ್ಮ ರೈಲು ಕೆಲವು ಕಾರಣಗಳಿಂದ ರದ್ದಾಗಬಹುದು, ನಿಮಗೆ ರೈಲಿನ ಟಿಕೆಟ್ ದರದ ಸಂಪೂರ್ಣ ಹಿಂಪಾವತಿಯನ್ನು ಒದಗಿಸಲಾಗುತ್ತದೆ.

ರೈಲು ತಡವಾಗಿ ಹೊರಟಾಗ:ಒಂದೊಮ್ಮೆ ರೈಲು ನಿಮ್ಮ ಹತ್ತುವ ನಿಲ್ದಾಣವನ್ನು 3 ಗಂಟೆ ಅಥವಾ ಅದಕ್ಕು ಹೆಚ್ಚು ಸಮಯ ವಿಳಂಬವಾಗಿ ಬರುತ್ತಿರುವಾಗ ನೀವು ಸಂಪೂರ್ಣ ಟಿಕೆಟ್ಟು ದರವನ್ನು ಹಿಂಪಾವತಿ ಪಡೆಯಲು ಕ್ಲೇಮು ಮಾಡಬಹುದು. ಅಂತಹ ಹಿಂಪಾವತಿಯನ್ನು ಕ್ಲೇಮು ಮಾಡಲು ನೀವು ಸ್ಟೇಷನ್ ಮ್ಯಾನೇಜರ್ ಕಚೇರಿಯಿಂದ ಟಿಡಿಆರ್ ಅನ್ನು ಫೈಲ್ ಮಾಡಬಹುದು. ಒಂದೊಮ್ಮೆನೀವು ರೈಲನ್ನು ಹತ್ತಿದ್ದು, ಆನಂತರ ನಿಮ್ಮ ಟಿಡಿಆರ್ ಅನ್ನು ಶೂನ್ಯ ಎಂದು ಪರಿಗಣಿಸಿ ಅಮಾನ್ಯಗೊಳಿಸಲಾಗುವುದು.

ರೈಲಿನ ಮಾರ್ಗ ಪರಿವರ್ತಿಸಿದರೆ: ರೈಲಿನ ಮಾರ್ಗ ಪರಿವರ್ತಿಸಿದರೆ ಮೂರನೆ ಪ್ರಸಂಗ ಸಂಭವಿಸುತ್ತದೆ ಹಾಗೂ ನೀವು ಈ ಬದಲಾದ ಮಾರಗದಲ್ಲಿ ಪ್ರಯಾಣಿಸಲು ಇಚ್ಛಿಸದಿದ್ದರೆ. ಮತ್ತೊಮ್ಮೆ, ನೀವು 72ಗಂಟೆಗಳ ಒಳಗಾಗಿ ಸ್ಟೇಷನ್ ಮ್ಯಾನೇಜರ್’ರವರ ಕಚೇರಿಯಲ್ಲಿ ಟಿಡಿಆರ್ ಸಲ್ಲಿಸಬೇಕು.

ಟಿಕೆಟ್ಟು ದರದ ಭಾಗಶಃ ಹಿಂಪಾವತಿ ಮಾಡುವ ಇತರೆ ಪ್ರಸಂಗಗಳು ಯಾವುವು?

Kannada Blog

ಟಿಕೆಟ್ಟು ದರದಲ್ಲಿ ವ್ಯತ್ಯಾಸದ ಹಿಂಪಾವತಿಯನ್ನು ನಿಮಗೆ ಒದಗಿಸುವ ಇನ್ನು ಹಲವು ಪ್ರಸಂಗಗಳಿವೆ.

ಈ ಪ್ರಸಂಗಳು ಇವುಗಳನ್ನು ಒಳಗೊಂಡಿವೆ:

ಏಸಿ ಕೆಲಸ ಮಾಡದಿದ್ದಾಗ(ಏಸಿ ವರ್ಗದಲ್ಲಿ): ಒಂದೊಮ್ಮೆ ಏಸಿ ಕೋಚ್ ನಲ್ಲಿ ಆಸನ ಕಾಯ್ದಿರಿಸಲಾಗಿದ್ದರೆ ಮತ್ತು ಏಸಿ ಕೆಟ್ಟಿದ್ದರೆ (ಅಥವಾ ಕೆಲಸ ಮಾಡುತ್ತಿಲ್ಲವಾದರೆ) ನೀವು ಟಿಟಿಇಗೆ ಇದರ ವರದಿ ಮಾಡಬೇಕು. ತಪಾಸಣೆಯ ನಂತರ, ಏಸಿ ದುರಸ್ಥಿ ಮಾಡಲಾಗುವುದು. ಆದರೆ ಒಂದೊಮ್ಮೆ ಏಸಿ ಕೆಲಸ ಮಾಡದಿದ್ದರೆ, ಟಿಟಿಇ ದರದ ವ್ಯತ್ಯಾಸವನ್ನು (ನಿಮ್ಮ ವರ್ಗ ಮತ್ತು ಸ್ಲೀಪರ್ ವರ್ಗದ ನಡುವಿನ ವ್ಯತ್ಯಾಸ) ಹಿಂಪಾವತಿಸಬಹುದು.

ಆಸನವು ಕೆಳ ವರ್ಗದಲ್ಲಿ ನಿಗದಿಸಲಾಗಿದ್ದರೆ: ಒಂದೊಮ್ಮೆ ಕಾಯಂಗೊಂಡ ಆಸನವು ಒಂದು ಕೆಳ ವರ್ಗದಲ್ಲಿ ನಿಗದಿಯಾಗಿದ್ದರೆ ನೀವು ನಿಮ್ಮ ಹಿಂದೆ-ಬುಕ್ ಮಾಡಿದ ವರ್ಗದ ಮತ್ತು ನಿಮಗೆ ಪ್ರಸ್ತುತವಾಗಿ ನಿಗದಿಯಾಗಿರುವ ಆಸನದ ವರ್ಗದ ದರದ ನಡುವಿನ ವ್ಯತ್ಯಾಸವನ್ನು ನೀವು ಕ್ಲೇಮು ಮಾಡಬಹುದು.

ನಿಮ್ಮ ಪ್ರಸಂಗದಲ್ಲಿ ಅನ್ವಯಿಸುವ ಕೆಲವು ನಿಯಮಗಳನ್ನು ನಾವು ಬಿಟ್ಟಿರಬಹುದು ಎಂದು ನಮಗೆ ತಿಳಿದಿದೆ, ಹಾಗಾಗಿ ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸುವ ಮೂಲಕ ಅಂತಹ ನಿಯಮಗಳನ್ನು ನಮ್ಮ ಗಮನಕ್ಕೆ ತರಬಹುದು. ನಿಮಗೆ ಸಹಾಯ ಮಾಡುವುದು ನಮಗೆ ಸಂತಸದ ಸಂಗತಿ.

1 COMMENT

LEAVE A REPLY

Please enter your comment!
Please enter your name here