ಕಿಬ್ಬರ್ : ಸ್ಪಿತಿ ಕಣಿವೆಯ ವೈಢೂರ್ಯ

0
625

ಹಾವಿನಂತ ರಸ್ತೆಗಳಿಂದ ನಿಮ್ಮನ್ನು ಸ್ವಾಗತಿಸುವ ಸ್ಪ್ತಿ ಕಣಿವೆ ಅಲ್ಲಲ್ಲಿ ಹಚ್ಚ ಹಸುರಿನ ನೆಲ ಹಾಗೂ ಮನಮೋಹಕ ಪ್ರಕೃತಿ ಸೌಂದರ್ಯದಿಂದ ಕೂಡಿದೆ.ಸಮುದ್ರ ಮಟ್ಟದಿಂದ ಹಲವು ಸಾವಿರ ಅಡಿ(12,500 ಅಡಿ) ಎತ್ತರದಲ್ಲಿದೆ ಈ ಪ್ರದೇಶ. ಪರ್ವತ ಸರೋವರಗಳು, ಹಿಮಪದರದ ಜಲಮೂಲಗಳು ಹಾಗೂ ಶಿಖರಗಳ ತುದಿಯಲ್ಲಿ ಮಂದಿರಗಳಿಂದ ಕೂಡಿದ ಸುಂದರ ನೋಟ. ನಿಮ್ಮ ರಜೆ ಪ್ರವಾಸಕ್ಕೆ ಇನ್ನೇನು ಬೇಕು?

ಕಜಾ

Road to Spiti Valley
ರಾ.ಹೆ. 22 ರಲ್ಲಿ ಚಲಿಸುತ್ತ ಹೋಗಿ, ಖಬ್ ಸಂಗಮ ಹಾಗೂ ನಾಕೊ ಗ್ರಾಮ ದಾಟಿದರೆ ಸಿಗುತ್ತದೆ ಕಜಾ. ಈಗ ಗ್ರಾಮವು ವಾಣಿಜ್ಯಮಯವಾಗಿದ್ದರೂ, ತನ್ನ ಹಿಂದಿನ ಸೊಬಗನ್ನು ಉಳಿಸಿಕೊಂಡಿದೆ. ಈಗ ಅಲ್ಲಿನ ಬಣ್ಣ ಬಣ್ನದ ಅಂಗಡಿಗಳು ಹಾಗೂ ಮನೆಗಳು ಅದರ ಸೌಂದರ್ಯಕೆಕ್ ಇನ್ನಷ್ಟು ಮೆರಗು ನೀಡುತ್ತವೆ. ಪ್ರಮುಖ ಸಂನ್ಯಾಸಿ ಮಂದಿರ ಹಾಗೂ ಕಿಬ್ಬರ್ ಗ್ರಾಮ ಒಳಗೊಂಡ ಇದರ ಸುತ್ತಮುತ್ತಲಿನ ಪ್ರದೇಶಗಳನ್ನೂ ನೀವು ಅನ್ವೇಷಿಸಲೇಬೇಕು.

ಪ್ರಮುಖ ಸಂನ್ಯಾಸಿ ಮಂದಿರ(ಕೀ ಮಾನೆಸ್ಟ್ರಿ)

Key Monastery
ಕಜಾವನ್ನು ಸಾಕಷ್ಟು ನೋಡಿದ ಮೇಲೆ, ಕಜಾದಲ್ಲಿ ಹೆಚ್ ಆರ್ ಟಿ ಸಿ ಬಸ್ ಹತ್ತಿ 14 ಕಿ.ಮೀ. ದೂರ ಪ್ರಯಾಣ ಮಾಡಿದರೆ ಕೀ ಮಾನೆಸ್ಟ್ರಿ ತಲುಪುವಿರಿ. ಗುಡ್ದದ ಮೇಲಿರುವ 1000 ವರ್ಷ ಹಳೆಯ ಈ ಮಂದಿರವನ್ನು ಒಂದೂವರೆ ಗಂಟೆಯೊಳಗೆ ತಲುಪಬಹುದು. ರಸ್ತೆಯು ಮಂದಿರದ ದ್ವಾರದವರೆಗೆ ಹೋಗುತ್ತದೆ. ಅಲ್ಲಿಂದ ಕಾಂಕ್ರೀಟ್ ಮೆಟ್ಟಿಲುಗಳ ಹಾದಿ ನಿಮ್ಮನ್ನು ಸ್ವಾಗತಿಸುತ್ತದೆ. ಅದನ್ನು ಹತ್ತಿ ಹೋದರೆ ಮಂದಿರದ ಮುಂಭಾಗದ ಪ್ರಾಂಗಣದಲ್ಲಿರುವಿರಿ.

ಕಿಬ್ಬರ್-ವಿಶ್ವದ ಅತಿ ಎತ್ತರದ ಗ್ರಾಮ

Kibber village
ಕೀ ಮಾನ್ಸ್ಟ್ರಿ ಪ್ರವಾಸ ಮುಗಿಸಿದ ನಂತರ, ಮಂದಿರದ ಪ್ರಾಂಗಣದಿಂದ ಕಿಬ್ಬರ್ ಗೆ 15 ನಿಮಿಷಗಳ ದಾರಿ. 4,270 ಮೀಟರ್ ಎತ್ತರದಲ್ಲಿದೆ ಗ್ರಾಮ. ರಸ್ತೆಯ ಮೂಲಕ ಹೊರಗಿನ ಪ್ರಪಂಚಕೆಕ್ ಉತ್ತಮ ಸಂಪರ್ಕ ಹೊಂದಿದೆ.

ಅತ್ಯಂತ ಸುಂದರ ಪ್ರಕೃತಿಯಿಂದ ಕೂಡಿದ ಕಿಬ್ಬರ್ ಗ್ರಾಮ ಬಹಳ ಪ್ರಶಾಂತವಾದ ಗ್ರಾಮ. ಈ ಸಣ್ಣ ಗ್ರಾಮದ ಸಾಮುದಾಯಿಕ ಜೀವನದ ಅನೂಭವ ಆನಂದಿಸಲು ಒಂದು ಹೋಮ್ ಸ್ಟೇ ಬಾಡಿಗೆಗೆ ಪಡೆಯಿರಿ. ಮುಂಜಾವದಲ್ಲಿ ಕಾಲ್ನಡಿಗೆಯಲ್ಲಿ ಸುತ್ತಾಡುತ್ತ ರೈತರು ಹೊಲ ಉಳುವುದನ್ನು ನೋಡಿ; ಸ್ಥಳೀಯ ಒಣಗಿದ ಹಣ್ಣು ಮತ್ತು ಇತರ ಹಣ್ಣುಗಳನ್ನು ಸವಿಯಿರಿ. ಗ್ರಾಮದ ಪಕ್ಕಕ್ಕೆ ಹರಿಯುವ ಸ್ಪಿತಿ ನದಿ, ಸೂರ್ಯಾಸ್ತದ ವೇಳೆಯಲ್ಲಿ ಕರಗಿದ ಚಿನ್ನದಂತೆ ಕಾಣುತ್ತದೆ.

Kibber Village

ಸ್ಪಿತಿ ಎಂದರೆ “ ಮಧ್ಯ ಭೂಮಿ”. ಇದು ಟಿಬೆಟ್ ಹಾಗೂ ಇಂಡಿಯ ಮಧ್ಯದಲ್ಲಿ ನೆಲೆಯಾಗಿರುವುದರಿಂದ ಈ ಹೆಸರು. ಆದ್ದರಿಂದಲೇ, ಕಿಬ್ಬರ್ ಒಳಗೊಂಡಂತೆ ಸ್ಪಿತಿಯಲ್ಲಿರುವ ಎಲ್ಲಾ ಗ್ರಾಮಗಳಲ್ಲೂ ಟಿಬೆಟನ್ ಬೌದ್ಧಧರ್ಮದ ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಪ್ರತಿಫಲಿಸುತ್ತವೆ. ಭೌದ್ಧ ಧರ್ಮ ಇಲ್ಲಿನ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿದೆ. ಸ್ಥಳೀಯರು ಸ್ಥಳೀಯ ಬೌದ್ಧ ಉಸವಗಳನ್ನು ಆಚರಿಸುವುದನ್ನು ನೀವು ನೋಡಬಹುದು. ಸ್ಥಳೀಯ ಸಮುದಾಯದಲ್ಲಿ ಸಮರಸತೆ ಹಾಗೂ ಸಾಂಸ್ಕೃತಿಕ ವಿನಿಮಯಕ್ಕೆ ಈ ಉತ್ಸವಗಳು ಬಹಳ ಪ್ರಶಸ್ತವಾದ ವೇದಿಕೆ ಒದಗಿಸುತ್ತವೆ. ಫಗ್ಲಿ ಮತ್ತು ಗೊಚಿಯಂಥ ಸ್ಥಳೀಯ ಹಬ್ಬಗಳ ಭಾಗವಾಗಿರಲು ಜನರು ಬಣ್ನ ಬಣ್ಣದ ಉಡುಗೆ ತೊಡುತ್ತಾರೆ. ಇತರ ಪ್ರಸುದ್ಧ ಮೇಳಗಳೆಂದರೆ ಲಡರ್ಚ, ಪೌರಿ ಮತ್ತು ತ್ಸೇಷು. ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಉತ್ಸವ ಹಬ್ಬಗಳು ನಡೆಯುತ್ತವೆ. ಮೇಲೆ ತಿಳಿಸಿದ ಮೂರು ಮೇಳಗಳು ಈ ಎರಡು ತಿಂಗಳ್ಳುಗಳಲ್ಲಿ ಆಚರಿಸಲಾಗುತ್ತದೆ. ಬಹುತೇಕ ಮೇಲಗಳು/ಉತ್ಸವಗಳು ಕಿಬ್ಬರ್ ಗ್ರಾಮದ ಇಳಿಜಾರಿನ ಬಯಲುಗಳಲ್ಲಿ ನಡೆಯುತ್ತವೆ. ಕುಲ್ಲು, ಲಹೌಲ್, ಕಿನ್ನೌರ್, ರಾಂಪುರ್ ಮತ್ತು ಸ್ಪಿತಿಗಳಿಂದ ಬರುವ ವ್ಯಾಪಾರಿಗಳು ಇಲ್ಲಿ ತಮ್ಮ ಸರಕುಗಳನ್ನು ಪ್ರದರ್ಶಿಸಿ ಮಾರುತ್ತಾರೆ.

ಮುಂದಿನ ಬಾರಿ ಹಿಮಾಚಲ ಪ್ರದೇಶಕೆಕ್ ಭೇಟಿ ನೀಡಿದಾಗ ಹುದುಗಿದ ಈ ಅಮೂಲ್ಯ ರತ್ನಗಳನ್ನು ನೋಡಲು ಮರೆಯಬೇಡಿ.

 

Originally written by Yashpal Sharma. Read here

 

LEAVE A REPLY

Please enter your comment!
Please enter your name here