ಮುಂಬೈನ ಅತ್ಯಂತ ಹಳೆಯ ಗಣಪತಿ ಮಂಡಲಗಳು

0
1616

ಗಣಪತಿ ಬಪ್ಪ ಮೋರಿಯ!! ಈ ಮಂತ್ರಘೋಷವು ಮಹರಾಷ್ಟ್ರದ ಹಲವಾರು ಜನರ ಎದೆಯಲ್ಲಿ ಉಲ್ಲಾಸವನ್ನು ನೀಡುತ್ತದೆ. ಗಣಪತಿ ಪೂಜೆಯ ಸಂಪ್ರದಾಯವನ್ನು ನಿಜವಾಗಲೂ ಉತ್ತೇಜಿಸಲು ನೀವು ನಗರದ ಐತಿಹಾಸಿಕ ಪೂಜ ಮಂಡಲಗಳನ್ನು ಭೇಟಿ ಮಾಡಲೇ ಬೇಕು. ನಾವು ಮುಂಬೈನಲ್ಲಿ ಅತ್ಯಂತ ಹಳೆಯ ಪೂಜೆಗಳನ್ನು ನಿಮಗೆ ಪಟ್ಟಿ ಮಾಡಿ ಕೊಡುತ್ತೇವೆ

ಕೇಶವಜಿ ನಾಯಕ್ ಚೌಲ್, ಗಿರ್ಗಾಂ – 125 ವರ್ಷಗಳು

Keshavji Naik Chawl
ಇದು ಮೊಟ್ಟಮೊದಲ ಸಾರ್ವಜನಿಕ ಗಣಪತಿ ಪೂಜಾ ಸ್ಥಳ, 1893ರಲ್ಲಿ ಆರಂಭವಾಯಿತು. ಈ ಮಂಡಲವು ಪರಿಸರ-ಸ್ನೇಹಿ ಆಚರಣೆಗೆ ಮತ್ತು ಸಣ್ಣ ಗಣಪತಿ ಮೂರ್ತಿಗಳಿಗೆ ಜನಪ್ರಿಯವಾದುದು. ಯಾವುದೇ ಲೌಡ್ ಸ್ಪೀಕರ್ ಗಳಿಲ್ಲದೆ, ಡೋಲು-ನಗಾಡೆ ಇಲ್ಲದೆ ಒಂದು ಸಾಂಪ್ರದಾಯಿಕ ಪೂಜೆ ಮಾಡುವ ಸ್ಥಳವಿದು. ಇಲ್ಲಿನ ಮೂರ್ತಿಯನ್ನು ಕಳೆದ 4 ಜನಾಂಗಗಳಿಂದ ಅದೇ ಶಿಲ್ಪಿ ಕುಟೂಂಬದವರಿಂದ ನಿರ್ಮಿಸಲಾಗುತ್ತಿದೆ. ಆಯೋಜನ ಸಮಿತಿಯು ನಿಯಮಿತವಾಗಿ ಭಜನ ಕಾರ್ಯಕ್ರಮಗಳನ್ನು, ಮಕ್ಕಳಿಗೆ ಸ್ಪರ್ಧೆಗಳನ್ನು ನಡೆಸುತ್ತಾರೆ. ಮಂಡಲವನ್ನು ಭೇಟಿ ಮಾಡುವ ಉತ್ತಮ ಸಮಯವೆಂದರೆ ಸಂಜೆ 5-11ಗಳು.
ಹತ್ತಿರದ ರೈಲಲುದ್ವಾರ: ಚಾರ್ನಿ ರಸ್ತೆ

ಚಿಂಚ್ಪೋಕಿಳಿಚ ಚಿಂತಾಮಣಿ, ಚಿಂಚ್ಪೋಕಿಳಿ – 98 ವರ್ಷಗಳು

Chinchpoklicha Chintamani
ಚಿಂಚ್ಪೋಕಿಳಿಚ ಚಿಂತಾಮಣಿ (ಚಿಂಚ್ಪೋಕಿಳಿ ಸಾರ್ವಜನಿಕ ಉತ್ಸವ ಮಂಡಲ) ಮುಂಬೈಯಲ್ಲಿನ ಎರಡನೆಯ ಅತ್ಯಂತ ಹಳೆಯ ಗಣೇಶೋತ್ಸವ ಮಂಡಲವಾಗಿದ್ದು 1920ರಲ್ಲಿ ಸ್ಥಾಪಿತವಾಗಿರುತ್ತದೆ. ಪೂಜ ಸಮಿತಿಯು ಹಲವಾರು ಸಾಮಾಜಿಕ ಹಿತಾಸಕ್ತಿ ಕಾರ್ಯಕ್ರಮಗಳಿಗೆ ನಿಗದಿಯಾಗಿರುತ್ತದೆ ಅಂದರೆ ರಕ್ತ ಮತ್ತು ನೇತ್ರ ದಾನದ ಕ್ಯಾಂಪುಗಳು, ನಿರ್ಗತಿಕರು ಮತ್ತು ಬಡವರಿಗೆ ಸಹಾಯ ಮಾಡುವುದು. ಇದು ಮುಬೈಯಲ್ಲಿನ ಅತ್ಯಂತ ನಂಬುಗೆಯ ಮತ್ತು ನಿಷ್ಠಾವಂತ ಮಂಡಲಗಳಲ್ಲಿ ಒಂದು ಎಂದು ಹೆಸರುವಾಸಿಯಾಗಿದ್ದು.
ಹತ್ತಿರದ ರೈಲುದ್ವಾರ: ಚಿಂಚ್ಪೋಕಿಳೀ

ಮುಂಬೈಚ ರಾಜ, ಗಣೇಶ್ ಗಲ್ಲಿ – 90 ವರ್ಷಗಳು

Mumbaicha Raja
1928ರಲ್ಲಿ ಪೆರು ಚೌಲ್ ನ ಸುತ್ತಮುತ್ತಲಿನ ಯುವಕರು “ಲಾಲ್ ಬಾಗ್ ಸಾರ್ವಜನಿಕ ಉತ್ಸವ ಮಂಡಲ” ಅನ್ನು ಆರಂಭಿಸಿದರು. ಲೋಕಮಾನ್ಯ ತಿಲಕರು ಈ ಸಾಮಾನ್ಯ ತಾಣದ ಮೂಲಕ ಸಾಮಾನ್ಯ ಜನರಲ್ಲಿ ಸ್ವಾತಂತ್ರ ಹೋರಾಟದ ಕಿಚ್ಚನ್ನು ಹಚ್ಚುವ ಉದ್ದೇಶದಿಂದ ಗಣೇಶ ಹಬ್ಬವನ್ನು ಆರಂಭಿಸಿದರು. ಈ ಗುರಿಯನ್ನು ಮನದಲ್ಲಿ ಇರಿಸಿಕೊಂಡು ಕೆಲವು ಲಾಲ್ ಬಾಗ್ ಸಾರ್ವಜನಿಕ ಮಂಡಲ’ದ ಮೂರ್ತಿಗಳು 1945ರಲ್ಲಿ ಏಳು ಕುದುರೆಗಳನ್ನು ಸವಾರಿ ಮಾಡುತ್ತಿರುವ ಸುಬಾಷ್ ಚಂದ್ರ ಬೋಸರಂತೆ ನಿಂತಿರುವ ಗಣೇಶನ ಮೂರ್ತಿಯನ್ನು ಉಡುಗೊರೆ ನೀಡಿದರು.
ಹತ್ತಿರದ ರೈಲುದ್ವಾರ: ಚಿಂಚ್ಪೋಕಿಳೀ

ಲಾಲ್ ಬಾಗುಚ ರಾಜ, ಲಾಲ್ ಬಾಗ್ – 84 ವರ್ಷಗಳು

Lalbaugcha Raja
ಮುಂಬೈಯಲ್ಲಿನ ಅತ್ಯಂತ ಜನಪ್ರಿಯ ಸಾರ್ವಜನಿಕ ಗಣಪತಿ ಮಂಡಲಗಳಲ್ಲಿ ಒಂದಾಗಿದೆ ಹಾಗು ಪ್ರದೇಶದಲ್ಲಿ ಒಂದು ಅತಿದೊಡ್ಡ ಜನ ಜಂಗುಳಿಯನ್ನು ಬರಮಾಡಿಕೊಳ್ಳುವ ಮಂಡಲ, ಲಾಲ್ ಬಗುಚ ರಾಜ. ಮೂರ್ತ್ರಿಯನ್ನು11 ದಿನಗಳು ಪ್ರದರ್ಶನಕ್ಕೆ ಇರಿಸಲಾಗುತ್ತದೆ, ಆನಂತರ ಅದನ್ನು ಅನಂತ ಚತುರ್ದಶಿಯ ಒಳ್ಳೆಯ ದಿನದಂದು ನೀರಿನಲ್ಲಿ ಮುಳಿಗಿಸಲಾಗುತ್ತದೆ. ಇಲ್ಲಿ ಎರಡು ಸಾಲುಗಳಿರುತ್ತವೆ – ನವಷಿ ಸಾಲು ಮತ್ತು ಮುಖ್ ದರ್ಶನಾಚಿ ಸಾಲು. ನವಷಿ ಸಾಲು ತಮ್ಮ ಕೋರಿಕೆಗಳನ್ನು ಪೂರೈಸಿಕೊಳ್ಳಲು ಇಚ್ಚಿಸುವ ಜನರಿಗಾಗಿ. ಈ ಸಾಲಿನಲ್ಲಿ ನೀವು ವೇದಿಕೆಗೆ ಹೋಗಬಹುದು ಹಾಗೂ ಲಾಲ್ ಬಗುಚ ರಾಜನ ಪಾದವನ್ನು ಮುಟ್ಟಲು ಅವಕಾಶವಿರುತ್ತದೆ. ಮತ್ತೊಂದು ಸಾಲು ಮುಖ ದರ್ಶನಕ್ಕಾಗಿ ಇರುತ್ತದೆ ಅಂದರೆ, ವೇದಿಕೆಗೆ ಹೋಗದೆ ಮೂರ್ತಿಯ ದರ್ಶನ ಮಾಡುವ ಅವಕಾಸವಿರುತ್ತದೆ.
ಹತ್ತಿರದ ರೈಲುದ್ವಾರ: ಕರ್ರಿ ರಸ್ತೆ

LEAVE A REPLY

Please enter your comment!
Please enter your name here