ಕೊಯಮತ್ತೂರಿನ 6 ಪಾರಂಪರಿಕ ಭೋಜನಗೃಹಗಳು

0
973

ವ್ಯಾಪಕವಾಗಿ ತಮಿಳುನಾದಿನ ಆಡಳಿತಾತ್ಮಕ ಹಾಗೂ ಜವಳಿ ರಾಜಧಾನಿ ಎಂದು ಕರೆಯಲ್ಪಡುವ ಕೊಯಮತ್ತೂರು, ಅಲ್ಲಿಗೆ ಬರುವ ಪ್ರವಾಸಿಗರಿಗೆ ಆಹಾರದ ವಿಷಯದಲ್ಲೂ ನಿರಾಶೆಗೊಳಿಸುವುದಿಲ್ಲ. ಕೊಯಮತ್ತೂರಿನ ನಗರದ ತುಂಬ ಸರಪಳಿ ರೆಸ್ಟಾರೆಂಟಗಳಿದ್ದರೂ, ಗಮನ ಸೆಳೆಯುವ ಹಲವಾರು ಪಾರಂಪರಿಕ ಭೋಜನಗೃಹಗಳೂ ಇವೆ.

Geetha Cafe

ಗೀತಾ ಕೆಫೆ: 80 ವರ್ಷ ಹಳೆಯ ಈ ಕೆಫೆ ಕೊಯಮತ್ತೂರು ರೈಲ್ವೆ ನಿಲ್ದಾಣದ ಎದುರಲ್ಲೇ ಇದೆ. ಬೆಳಗಿನ ಉಪಾಹಾರಕ್ಕೆ ಇದು ಅತ್ಯಂತ ಪ್ರಶಸ್ತ ಸ್ಥಳ. ಇಡ್ಲಿ, ವಡೆ, ಪೊಂಗಲ್,ಸಾದಾ, ರೋಸ್ಟ್ ಮತ್ತು ಮಸಾಲೆ ದೋಸೆಗಳಂಥ ಸ್ವಾದಿಷ್ಟ ತಿನಿಸುಗಳೂ ಸಹ ಅಷ್ಟೇನೂ ದುಬಾರಿಯಿಲ್ಲದ ದರಗಳಲ್ಲಿ ಇಲ್ಲಿ ಸಿಗುತ್ತದೆ. ಗೀತಾ ಕೆಫೆಯಲ್ಲಿ ತಯಾರಿಸುವ ಆಹಾರಕ್ಕೆ ಅಡಿಗೆ ಸೋಡ, ತಾಳೆ ಎಣ್ಣೆ ಈರುಳ್ಳಿ ಅಥವಾ ಬೆಳ್ಳುಳ್ಳಿ ಉಪಯೋಗಿಸುವುದಿಲ್ಲ.

Adyar Ananda Bhavan

ಅಡ್ಯಾರ್ ಆನಂದ ಭವನ್ : ಈ ಸಿಹಿತಿನಿಸುಗಳ ಅಂಗಡಿ, ತನ್ನ ರಸಮಲೈಗೆ ಪ್ರಸಿದ್ಧ. ಇಲ್ಲಿ ನೀಡುವ ಚಾಟ್ ಗಳು ಬಾಯಲ್ಲಿ ನೀರು ತರಿಸುತ್ತವೆ. ಪ್ರತಿ ವರ್ಷ ಈ ಹೊಟೆಲ ನಲ್ಲಿ 12 ದಶಲಕ್ಷ ಡಾಲರ್ ಮೌಲ್ಯದಷ್ಟು ಸಿಹಿ ತಿನಿಸುಗಳು ಮಾರಾಟವಾಗುತ್ತವೆ.

CS Meals Hotel

ಸಿ ಎಸ್ ಭೋಜನ ಹೊಟೆಲ್: ಇದೊಂದು ಬ್ರಾಹ್ಮಣರ ಹೊಟೆಲ್. 1939 ರಿಂದಲೂ ಸಾಂಪ್ರದಾಯಿಕ ದಕ್ಷಿಣ ಭಾರತ ಆಹಾರ ಒದಗಿಸುತ್ತ ಬಂದಿದೆ. ಈ ರೆಸ್ಟಾರಂಟ್ ನ ಫಾಸ್ಟ್ ಫುಡ್ ವಿಭಾಗವೂ ಬಹಳ ಜನಪ್ರಿಯ. ಪೊಲೀಸ್ ಕಮಿಷಣರ್ ಕಚೇರಿಯ ಸಮೀಪದಲ್ಲಿದೆ ಈ ರೆಸ್ಟಾರಂಟ್.

Kovai Biryani

ಕೋವೈ ಬಿರಿಯಾನಿ ಹೊಟೆಲ್: 1985 ರಲ್ಲಿ ಆರಂಭವಾದ ಈ ಹೊಟೆಲ್, ಕಿಕನಿ ಶಾಲೆ ಕೆಳ ಸೇತುವೆಯ ಸಮೀಪ ಗಾಂಧೀನಗರ ಪ್ರದೇಶದಲ್ಲಿರುವ ರಾಮನಗರದಲ್ಲಿ ಇದೆ. ಈ ಹೊಟೆಲ್, ತನ್ನ ಕೋಳಿ ಅಥವಾ ಮಾಂಸದ ಧಂ ಬಿರಿಯಾನಿಗೆ ಪ್ರಸಿದ್ಧ ಇತರ ವೈವಿಧ್ಯತೆಗಳೆಂದರೆ ಕೊಂಗು, ಹೈದರಾಬಾದಿ, ಚೆಟ್ಟಿನಾಡು ಮತ್ತು ದಿಂಡಿಗಲ್ ಬಿರಿಯಾನಿ ಲಿವರ್ ಫ್ರೈ ಮತ್ತು ನಾಟ್ಟುಕೋಳಿ ಕರ್ರಿ ಸಹ ಜನಪ್ರಿಯ.

Sree Annapoorna Sree Gowrishankar Hotels

ಶ್ರೀ ಅನ್ನಪೂರ್ಣ ಶ್ರೀ ಗೌರಿಶಂಕರ ಹೊಟೆಲ್: ಇದು 48 ವರ್ಷ ಹಳೆಯ ದಕ್ಷಿಣ ಭಾರತೀಯ ರೆಸ್ಟಾರಂಟ್ ಸರಪಳಿ. ಕೊಯಮತ್ತೂರಿನ 16 ಬೇರೆ ಬೇರೆ ಸ್ಥಳಗಳಲ್ಲಿ ಇದರ ಶಾಖೆಗಳಿವೆ. ಇಲ್ಲಿ ಸಿಗುವ ಇಡ್ಲಿ, ಸಾಂಬಾರ್ ವಡೆ ಮತ್ತು ಮಸಾಲೆ ದೋಸೆಗಳ ರುಚಿಯನ್ನು ಮರೆಯಲು ಸಾಧ್ಯವೇ ಇಲ್ಲ. ಈ ರೆಸ್ಟಾರಂಟ್ ನ ಅತ್ಯಂತ ಜನಪ್ರಿಯ ಆಹಾರವೆಂದರೆ ಡ್ರಾಗನ್ ಪನ್ನೀರ್-ಗರಿಗರಿಯಾದ ಪನ್ನೀರ್ ಹಾಗೂ ಬಾಯಲ್ಲಿ ನೀರು ತರಿಸುವ ಗ್ರೇವಿಯನ್ನು ಒಳಗೊಂಡ ಒಂದು ಬಗೆಯ ಫಾಸ್ಟ್ ಫುಡ್.

Andhra Ruchulu

ಆಂಧ್ರ ರುಚುಲು: ಕೊಯಮತ್ತೂರಿನ ಗಣಪತಿ ಬಳಿ ಇರುವ ಈ ರೆಸ್ಟಾರಂಟ್, ನೈಜ್ಯ ಆಂಧ್ರ ಭೋಜನ ಒದಗಿಸುವುದರ ಜೊತೆಗೆ, ಗೊಂಗುರ ಚಿಕನ್, ನಾಟ್ಟುಕೋಳಿ ಫ್ರೈ, ಮೀನ್ ಪೊಲಿಚಾರು, ಮಟನ್ ವೇಪುಂಡು, ಫಿಂಗರ್ ಫಿಶ್ ಹಾಗೂ ಇತರ ಪ್ರಾನ್ ಆಹರಗಳಿಗೂ ಪ್ರಸಿದ್ಧ. ಇಬ್ಬರು ಹೊಟ್ಟೆ ತುಂಬ ಭೋಜನ ಸವಿಯಲು ರೂ. 600 ಸಾಕು.

LEAVE A REPLY

Please enter your comment!
Please enter your name here