ಡ್ಯೂಲ್ : ಇತಿಹಾಸ ಹಾಗೂ ದಂತಕಥೆಗಳಿಂದ ಕೂಡಿದ ಸ್ಥಳ

0
384

ಪಶ್ಚಿಮ ಬಂಗಾಲದಲ್ಲಿ ರಜೆ ಕಳೆಯುವ ಯೋಜನೆಯಿದ್ದರೆ, ನಿಮ್ಮ ಮನಸ್ಸಿಗೆ ಥಟ್ಟ್ ನೆನಪಾಗುವುದು ನಾಲ್ಕು ಸ್ಥಳಗಳು-ಕೋಲ್ಕತ್ತ, ಡಾರ್ಜಿಲಿಂಗ್, ಶಾಂತಿನಿಕೇತನ್ ಮತ್ತು ಢಿಗಾ. ಆದರೆ, ಬಂಗಾಲದ ವೈಭವಯುತ ಇತಿಹಾಸವನ್ನು ನೆನಪಿಸುವ ಇನ್ನು ಪಳೆಯುಳಿಕೆಯ ಅನೇಕ ಸ್ಥಳಗಳು ರಾಜ್ಯದ ಕೆಲವೊಂದು ಮೂಲೆಗಳಲ್ಲಿ ಇನ್ನೂ ಜೀವಂತವಾಗಿವೆ. ಇವು ಇಡೀ ಕುಟುಂಬಕೆಕ್ ಮೋಜು ನೀಡುವಂಥ ಸ್ಥಳಗಳು.ಅಂತಹ ಒಂದು ಸ್ಥಳ ಡ್ಯೂಲ್-ನಗರದಿಂದ 4 ಗಂಟೆಗಳ ಕಾರ್ ಪ್ರಯಾಣ. ಇಂದು ಡ್ಯೂಲ್ ನ ಆಕರ್ಷಣೆಗಳನ್ನು ಅನ್ವೇಷಿಸೋಣ.

ಟೆರಾಕೋಟ ದೇವಾಲಯಗಳು

Ichai Ghosh Temple

ಇಲ್ಲಿರುವ ಗೋಪುರ ಶೈಲಿಯ 50 ಅಡಿ ಎತ್ತರದ ದೇವಾಲಯಗಳು 500 ವರ್ಷ ಹಳೆಯವು. ಘುರಿಷಾ ಗ್ರಾಮದಲ್ಲಿರುವ ರಘುನಾಥಜೀಯ ಚಾರ್ಚಲ ದೇವಸ್ಥಾನ ನೋಡಲು ಮರೆಯದಿರಿ(ಇಲ್ಲಂಬಜಾರ್ ಸಮೀಪ). ಈ ದೇವಸ್ಥಾನವನ್ನು 1633 ರಲ್ಲಿ ನಿರ್ಮಿಸಲಾಯಿತು. ಶ್ರೀ ರಾಮನನ್ನು ಇಲ್ಲಿ ಪೂಜಿಸುತ್ತಾರೆ.

ಜೈದೇವ ಕವಿಯ ಮನೆ:

Joydev Kenduli

ಜೈದೇವ್ ಕೆಂಡುಲಿ, ಕವಿ ಜೈದೇವನ ಹುಟ್ಟೂರು. ಸಂಸ್ಕೃತ ಪುರಾಣ ಕಾವ್ಯ ಗೀತ್ ಗೋವಿಂದದ ಕರ್ತೃ. ಇದು ರಾಧಾ-ಕೃಷ್ಣರ ಪ್ರಣಯ ಕಥೆಯನ್ನು ಸಾರುವಂಥ ಕಾವ್ಯ.

ಅಜಯ್ ನದಿದಂಡೆ

Ajay River

ಪ್ರಕೃತಿ ಪ್ರಿಯರಿಗೆ ಅಜಯ್ ನದಿದಂಡೆ ಅತ್ಯಂತ ಪ್ರಶಸ್ತವಾದ ಸ್ಥಳ. ಆದರೆ ಕೆಲವು ಭಾಗಗಳಲ್ಲಿ ಉಸುಬುನೆಲದ ಕಾಣದ ಅಪಾಯಗಳಿವೆ.; ಈ ವಿಷಯದಲ್ಲಿ ಯಾರಾದರೂ ಸ್ಥಳೀಯರ ಮಾರ್ಗದರ್ಶನ ಪಡೆಯುವುದು ಉತ್ತಮ. ನದಿ ಬಹಳ ಆಳವಿಲಲ್ದಿದ್ದರೂ, ಕೆಲವು ಸಮಯಗಳಲ್ಲಿ ಸುಳಿ/ಪ್ರವಾಹ ಜೋರಾಗಿರುತ್ತದೆ. ದಂಡೆಯು ಮರಳುಮಯವಾಗಿದ್ದು, ನಿಜವಾದ ನದಿಯನ್ನು ನೋಡಲು ಸಾಕಷ್ಟು ದೂರ ನಡೆಯಬೇಕು.

ಜನಪದ ಹಾಡಿನ ಸಂತೆ(ಬೌಲ್ ಮೇಳ)

Baul Mela

ಬೌಲ್ ಮೇಳವನ್ನು ನೋಡಬೇಕೆಂದರೆ ಮಕರ ಸಂಕ್ರಾಂತಿ(ಜನವರಿ ಮಧ್ಯಭಾಗ) ಒಳ್ಳೆಯ ಸಮಯ. ಬಂಗಾಲದ ವಿವಿಧ ಭಾಗಗಳಿಂದ ಬೌಲ್ ಜನಪದ ಗಾಯಕರು ಈ ಸಮಯದಲ್ಲಿ ಇಲ್ಲಿ ಮೇಳವಿಸುತ್ತಾರೆ. ಇದು ಮೂರು ದಿನಗಳ ಕಾಲ ನಡೆಯುವ ಮೇಳ. ಮೇಲದ ಸಂದರ್ಭದಲ್ಲಿ ವಿವಿಧ ರಿತಿಯ ಜನರು ನದಿಯಲ್ಲಿ ಮುಳುಗೆದ್ದು ಸ್ನಾನ ಮಾಡುವುದನ್ನು ನೋಡಬಹುದು.

ಘರ್ ಅರಣ್ಯ

Garh Forests

ಪ್ರಕೃತಿಪ್ರಿಯರಿಗೆ ಘರ್ ಅರಣ್ಯ ಪ್ರಶಸ್ತ ಸ್ಥಳ. ಇಲ್ಲಿರುವಾಗ, ಶ್ಯಾಮಪುರ ದೇವಾಲಯಕ್ಕೆ ಭೇಟಿ ನೀಡಲು ಮರೆಯದಿರಿ. ಮೂಲ ದೇವಸ್ಥಾನವು 1000 ಕ್ಕೂ ಹೆಚ್ಚು ವರ್ಷ ಹಳೆಯದು ಎಂದು ಹೇಳುತ್ತ್ತಾರೆ. ಈಗಿರುವ ದೇವಸ್ಥಾನವನ್ನು ಬುರುದ್ವಾನ್ ರಾಜಕುಟುಂಬ ನಿರ್ಮಿಸಿತು.

ಯಾವಾಗ ಭೇಟಿ ನೀಡಬೇಕು?

ಡ್ಯೂಲ್ ಗೆ ವರ್ಷದ ಯಾವ ಕಾಲದಲ್ಲಾದರೂ ಭೇಟಿ ನೀಡಬಹುದಾದರೂ, ಚಳಿಗಾಲ ಅತ್ಯಂತ ಒಳ್ಳೆಯ ಕಾಲ.

ಡ್ಯೂಲ್ ತಲುಪುವುದು ಹೇಗೆ?

ಡ್ಯೂಲ್ ತಲುಪಲು ಅತ್ಯುತ್ತಮ ಮಾರ್ಗವೆಂದರೆ, ಬೋಲ್ಪುರ ಶಾಂತಿನಿಕೇತನ ರೈಲು ನಿಲ್ದಾಣದವರೆಗೆ ರೈಲಿನಲ್ಲಿ ಹೋಗಿ. ಪ್ರವಾಸಿಗರು ದುರ್ಗಾಪುರ ರೈಲು ನಿಲ್ದಾಣದಲ್ಲೂ ಇಳಿದುಕೊಳ್ಳಬಹುದು. ಅಲ್ಲಿ ಸಾಕಷ್ಟು ಎಕ್ಸ್ ಪ್ರೆಸ್ ರೈಲುಗಳು ನಿಲ್ಲುತ್ತವೆ.

ಮುಂದಿನ ಬಾರಿ ನಗರದ ಸದ್ದು-ಗದ್ದಲ, ಗೋಜಲುಗಳಿಂದ ಓಡಿಹೋಗಬೇಕೆನಿಸಿದರೆ, ಡ್ಯೂಲ್ ಗೆ ಪ್ರಯಾಣ ಬೆಳೆಸಿ.

 

Originally written by Chaitali Das. Read here.

LEAVE A REPLY

Please enter your comment!
Please enter your name here