ಢಾಕಿಯಾ ಢಾಕ್ ಲಾಯಾ(ಅಂಚೆಯವ ಅಂಚೆ ತಂದ)-ಭಾರತದ ಅಪರೂಪದ ಅಂಚೆ ವ್ಯವಹಾರ!

0
1619

ಸ್ವಾತಂತ್ರ್ಯ ಬಂದ ನಂತರದಲ್ಲಿ ವಿಶಿಷ್ಟ ಅಂಚೆ ವ್ಯವಸ್ಥೆಯ ಭಾಗವಾಗಿ, ಇಂದು ನಮ್ಮ ದೇಶ ವಿಶ್ವದಲ್ಲೇ ಅತಿ ದೊಡ್ಡ ಅಂಚೆ ಕಾರ್ಯಜಾಲ ಹೊಂದಿದೆ. ಆದರೆ ಸುಮ್ಮನೆ ಅದರ ಬಗ್ಗೆ ಬಢಾಯಿ ಕೊಚ್ಚಿಕೊಳ್ಳುವುದು ಬೇಡ. ಭಾರತದಲ್ಲಿನ ಅಪರೂಪದ ಅಂಚೆ ಕಚೇರಿಗಳ ಬಗ್ಗೆ ಇನ್ನೂ ಎಷ್ಟೋ ವಿಸ್ಮಯಕಾರಿ ಅಂಶಗಳಿವೆ !

  • ಭಾರತದ ಪ್ರಥಮ ತೇಲುವ ಅಂಚೆ ಕಚೇರಿ

ದಾಲ್ ಸರೋವರ, ಜಮ್ಮು ಮತ್ತು ಕಾಶ್ಮೀರ

Floating Post Office - Dal Lake, Srinagar

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಪ್ರಮುಖ ಆಕರ್ಷಣೆ ಎಂದರೆ, ಅಲ್ಲಿರುವ ದಾಲ್ ಸರೋವರ ತನ ಸಹಜ ಸೌಂದರ್ಯಕ್ಕೆ ಹೆಸರಾಗಿರುವ ಈ ಸರೋವರ, ಭಾರತದಲ್ಲೇ ಪ್ರಥಮ ತೇಲುವ ಅಂಚೆ ಕಚೇರಿ ಹೊಂದಿರುವ ಖ್ಯತೈಗೂ ಭಾಜನವಾಗಿದೆ.ಪಾರಂಪರಿಕ ಅಂಚೆ ಕಚೇರಿಯಾಗಿ, ಮೊದಲು ಇದನ್ನು ನೆಹ್ರು ಪಾರ್ಕ್ ಅಂಚೆ ಕಚೇರಿ ಎಂದು ಕರೆಯಲಾಗುತ್ತಿತ್ತು. 2011 ರಲ್ಲಿ ಮರುನಾಮಕರಣವಾಯಿತು.

ಬೃಹತ್ ದೋಣಿಮನೆಯಲ್ಲಿ ಸ್ಥಾಪನೆಯಾಗಿರುವ ಈ ಅಂಚೆ ಕಚೇರಿಯಲ್ಲಿ ಅಂಚೆ ವಸ್ತುಸಂಗ್ರಾಹಲಯವೂ ಇದ್ದು(ರಾಜ್ಯ ಅಂಚೆ ಇಲಾಖೆಯ ಅಂಚೆ ಇತಿಹಾಸವನ್ನು ತಿಳಿಸುತ್ತದೆ), ಇತರ ವಸ್ತುಗಳ ಜೊತೆ ಅಂಚೆ ಚೀಟಿಗಳನ್ನೂ ಮಾರುವ ಮಳಿಗೆ ಹೊಂದಿದೆ. ಈ ವಸ್ತುಗಳ ಪೈಕಿ ಚಿತ್ರದ ಅಂಚೆ ಕಾರ್ಡ್ ಗಳು, ಶುಭಕೋರುವ ಕಾರ್ಡ್ ಗಳು, ಸ್ಥಳೀಯ ಸ್ಮಾರಕ ವಸ್ತುಗಳು, ಲೇಖಾಸಾಮಗ್ರಿ ಹಾಗೂ ಕಾಶ್ಮೀರ್ರ ಕುರಿತು ಅನೇಕ ಪುಸ್ತಕಗಳು ಇಲ್ಲಿ ಸಿಗುತ್ತದೆ.

Floating Post Office

ಈ ತೇಲುವ ಅಂಚೆ ಕಚೇರಿಯಿಂದ ಅಂಚೆಗೆ ಹಾಕಲಾದ ಪ್ರತಿಯೊಂದರ ಮೇಲಿರುವ ಮೊಹರು ಸಹ ವಿಶಿಷ್ಟವಾದದ್ದು-ದಿನಾಂಕ ಮತ್ತು ವಿಳಾಸದ ಜೊತೆ, ದಾಲ್ ಸರೋವರದಲ್ಲಿ ಶಿಕರ ನಡೆಸುವ ಒಬ್ಬ ಅಂಬಿಗನ ಚಿತ್ರದ ವಿನ್ಯಾಸವಿದೆ.

  • ವಿಶ್ವದ ಅತಿ ಎತ್ತರದ ಸ್ಥಾನದ ಅಂಚೆ ಕಚೇರಿ

ಹಿಕ್ಕಿಂ, ಹಿಮಾಚಲ ಪ್ರದೇಶ

Hikkim Post Office

15,500 ಅಡಿ ಎತ್ತರದಲ್ಲಿ ಸ್ಥಾಪಿತವಾಗಿರುವ ಹಿಕ್ಕಿಂನ ಅಂಚೆ ಕಚೇರಿ, ವಿಶ್ವದ ಅತ್ಯಂತ ಎತ್ತರದ ಸ್ಥಾನದಲ್ಲಿರುವ ಅಂಚೆ ಕಚೇರಿ.ನವೆಂಬರ್ 5, 1983 ರಂದು ಇದರ ಉದ್ಘಾಟನೆಯಾಯಿತು. ಆಗಿನಿಂದ, ರಿಂಚೆನ್ ಚೆರ್ರಿಂಗ್ ಎನ್ನುವವರು ಈ ಶಾಖೆಯ ಅಂಚೆ ಮಾಸ್ತರರಾಗಿದ್ದಾರೆ. ಹಿಕ್ಕಿಂ, ಹಿಮಾಚಲ ಪ್ರದೇಶದ ಲಹೌಲ್ ಮತ್ತು ಸ್ಪಿತಿ ಜಿಲ್ಲೆಯ ಒಂದು ಗ್ರಾಮ. ಹಿಮದ ಕಾರಣ ವರ್ಷದ ಆರು ತಿಂಗಳು ಈ ಅಂಚೆ ಕಚೇರಿ ಮುಚ್ಚಿರುತ್ತದೆ.

Hikkim Post Office

ವಿದೇಶಗಳಿಗೆ ಪವಿತ್ರಯಾತ್ರೆಗಳನ್ನು ಕೈಗೊಳ್ಳಲು ಸಮೀಪದ ಸಂನ್ಯಾಸಿಗಳ ಮಂದಿರಗಳ ಸಂನ್ಯಾಸಿಗಳು ಈ ಅಂಚೆ ಕಚೇರಿಯಿಂದ ತಮ್ಮ ಪಾಸ್ ಪೋರ್ಟ್ ಪಡೆಯುತ್ತಾರೆ. ಸ್ಥಳೀಯ ರೈತರೂ ಇಲ್ಲಿ ತಮ್ಮ ಉಳಿತಾಯ ಖಾತೆ ಹೊಮ್ದಿದ್ದಾರೆ ಹಾಗೂ ಕುತೂಹಲ ತುಂಬಿದ ಪ್ರವಾಸಿಗರು ಅಂಚೆ ಕಾರ್ಡ್ ಕಳಿಸಲು ಇಲ್ಲಿಗೆ ಬರುತ್ತಾರೆ.

  • ಭಾರತದ ಹೊರಗೆ ಭಾರತೀಯ ಅಂಚೆ ಕಚೇರಿ

ದಕ್ಷಿಣ್ ಗಂಗೋತ್ರಿ ಅಂಚೆ ಕಚೇರಿ, ಅಂಟಾರ್ಟಿಕ

dAKSHIN-gANGOTRI-po1 (1)

ದಕ್ಷಿಣ ಉಪಖಂಡವಾದ ಅಂಟಾರ್ಟಿಕಾದಗೆ ಮೂರನೆ ಭಾರತೀಯ ಶೋಧಯಾತ್ರೆ ಸಂದರ್ಭದಲ್ಲಿ ಫೆಬ್ರವರಿ 24, 1984 ರಿಂದ ಈ ಅಂಚೆ ಕಚೇರಿ ಕಾರ್ಯೋನ್ಮುಖವಾಯಿತು. ಹಿಮ ಕರಗಿಸುವ ಘಟಕ, ಪ್ರಯೋಗಾಲಯಗಳು, ಶೇಖರಣೆ ಮತ್ತು ಮೋಜಿನ ಚಟುವಟಿಕೆಗಳ ಸೇರಿದಂತೆ ಬಹು ಬೆಂಬಲ ವ್ಯವಸ್ಥೆ ಆಗಿತ್ತು.

ಆದರೆ ಜನವರಿ 26, 1988 ರಂದು, ಗೋವಾದಲ್ಲಿ ಅಂಚೆ ಇಲಾಖೆಯಡಿ ದಕ್ಷಿಣ್ ಗಂಗೋತ್ರಿ ಅಂಚೆ ಕಚೇರಿ ಸ್ಥಾಪನೆಯಾಯಿತು. 1987 ರಲ್ಲಿ ಏಳನೆ ಭಾರತೀಯ ವೈಜ್ಞಾನಿಕ ಶೋಧಯಾತ್ರೆಯ ಸದಸ್ಯರಾಗಿ ಅಂತಾತಿಕಾಗೆ ಹೋಗಿದ್ದ ವಿಜ್ಞಾನಿ ಜಿ. ಸುಧಾಕರ್ ರಾವ್, ಇದರ ಪ್ರಥಮ ಗೌರವಾನ್ವಿತ ಅಂಚೆ ಮಾಸ್ತರರಾದರು. ಈ ಮಧ್ಯೆ, ಅಂಟಾರ್ಟಿಕಾದಲ್ಲಿದ್ದ ದಕ್ಷಿಣ್ ಗಂಗೋತ್ರಿ ಅಂಚೆ ಕಚೇರಿಯು1990 ರಲ್ಲಿ ಅರ್ಧ ಹಿಮದಿಂದ ಮುಳುಗಿದಾಗ, ಅದನ್ನು ಕಾರ್ಯಾಚರಣೆಯಿಂದ ಸ್ಥಗಿತಗೊಳಿಸಲಾಯಿತು.

Dakshin Gangotri PO

ಅಂಟಾರ್ಟಿಕಾದಲ್ಲಿ ಹಿಮಾವೃತ ಪ್ರದೇಶದಲ್ಲಿದ್ದ ಅಂಚೆ ಕಚೇರಿಯ ಕಟ್ಟಡದ ನೆನಪಿಗೆ ಈ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು

ದೇಶವಾಗಿ ನಾವು ಸಾಂಸ್ಕೃತಿಕವಾಗಿ ಶ್ರೀಮಂತರು. ಪ್ರತಿ ಮೂಲೆ ಮೂಲೆಯಲ್ಲಿ ಅನೇಕ ಅಪರೂಪದ ಸಂಗತಿ/ವಸ್ತುಗಳಿಂದ ಕೂಡಿ, ವಿಶ್ವದ ಅತಿ ದೊಡ್ದ ಪ್ರಜಾಪ್ರಭುತ್ವ ದೇಶವಾಗಿ ಭಾರತ ಮಿನುಗುತಾರೆಯಂಯೆ ಮಿಂಚುತ್ತಿದೆ.

 

LEAVE A REPLY

Please enter your comment!
Please enter your name here