ತಮಿಳುನಾಡಿನ 5 ಬಾಯಿ ಚಪ್ಪರಿಸುವ ಆಹಾರಗಳು

0
1248

ತಮಿಳುನಾಡು ಒಂದು ಉತ್ತಮ ತಿನಿಸುಪ್ರಿಯ ಸ್ಥಳವಾಗಿದೆ ಯಾಕೆಂದರೆ ಈ ರಾಜ್ಯದಲ್ಲಿರುವ ಪ್ರತಿಯೊಂದು ಸ್ಥಳವೂ ತನ್ನದೇ ವಿಶಿಷ್ಟ ತಿನಿಸುಗಳನ್ನು ಹೊಂದಿರುವ ಹೆಗ್ಗಳಿಕೆಯಿದೆ. ಇಲ್ಲಿ ಕೆಲವು ತಿನಿಸುಗಳನ್ನು ನೀಡಲಾಗಿದ್ದು, ನೀವು ಅವುಗಳ ರುಚಿ ನೋಡದೇ ಇದ್ದರೂ, ಖಂಡಿತವಾಗಿಯೂ ಅವುಗಳ ಬಗ್ಗೆ ಕೇಳಿರುವಿರಿ.

Nagercoil Chips

ನಾಗರಕೋಯಿಲ್ ಚಿಪ್ಸ್: ಹಲಸಿನ ಕಾಯಿ ಚಿಪ್ಸ್ ಪ್ಯಾಕೆಟ್ ಇಲ್ಲದೆ ನಾಗರಕೋಯಿಲ್ ಭೇಟಿ ಪೂರ್ಣವಾಗುವುದಿಲ್ಲ. ಸ್ಥಳೀಯರಿಂದ ಕರೆಯಲ್ಪಡುವ ಚಕ್ಕವತಲ್, ನೀವು ನಿರಾಕರಿಸಲು ಸಾಧ್ಯವೇ ಇಲ್ಲದ ಒಂದು ವಿಧದ ಚಿಪ್ಸ್ ಆಗಿದೆ. ನಾಗರಕೋಯಿಲ್ ಬೀದಿಗಳು ತೆಂಗಿನಎಣ್ಣೆಯಲ್ಲಿ ಕರಿದ ಚಿಪ್ಸ್ ಪರಿಮಳಗಳಲ್ಲಿಯೇ ಮುಳುಗಿ ಹೋಗಿರುತ್ತವೆ. ಹಲಸಿನ ಕಾಯಿ ಚಿಪ್ಸ್ ಹೊರತಾಗಿ, ಈ ನಗರವು ನೇಂದ್ರಂ ಚಿಪ್ಸ್ ಎಂಬ ಬಾಳೆಹಣ್ಣು ಚಿಪ್ಸ್‌ಗೆ ಕೂಡಾ ಹೆಸರುವಾಸಿಯಾಗಿದೆ. ಇದು ನೀವು ಬೇರೆ ಕಡೆ ತಿನ್ನು ಉಪ್ಪುಳ್ಳ ಬಾಳೆಕಾಯಿ ಚಿಪ್ಸ್‌ಗಿಂತ ವಿಭಿನ್ನವಾಗಿದೆ ಮತ್ತು ವಿಶಿಷ್ಟ ರುಚಿಯನ್ನು ಹೊಂದಿದೆ.

Tirunelveli halwa

ತಿರುನಲ್ವೇಲಿ ಹಲ್ವ: ಈ ಹಲ್ವ ವಿಶೇಷವಾಗಿ ಬಾಯಲ್ಲಿ ಮೃದುವಾಗಿ ಕರಗುವ ಗುಣಕ್ಕಾಗಿ ಪ್ರಸಿದ್ಧವಾಗಿದೆ ಮತ್ತು ರೇಶ್ಮೆಯಂತ ಮೃದುವನ್ನು ಉಲ್ಲೇಖಿಸಲು ರೂಪಕವಾಗಿಯೂ ಬಳಸುತ್ತಾರೆ. ತಿರುನಲ್ವೇಲಿಯಲ್ಲಿ ಎರಡು ಪ್ರಮುಖ ಮಳಿಗೆಗಳಿವೆ- ಇರುಟ್ಟು ಕಡೈ ಮತ್ತು ಶಾಂತಿ ಸ್ವೀಟ್ಸ್ ಇವುಗಳು ವಿಶಿಷ್ಟವಾಗಿ ತಿರುನಲ್ವೇಲಿ ಹಲ್ವಕ್ಕೆ ಪ್ರಸಿದ್ಧಿಯಾಗಿದೆ.

Tuticorin Macaroon

ಟ್ಯೂಟಿಕಾರ್ನ್ ಮ್ಯಾಕರೂನ್ಸ್: ಮ್ಯಾಕರೂನ್ಸ್ ಅನ್ನು ಮುಖ್ಯವಾಗಿ ಮೊಟ್ಟೆಗಳು, ಸಕ್ಕರೆ ಮತ್ತು ಗೋಡಂಬಿ ಬೀಜಗಳಿಂದ ತಯಾರಿಸಲಾಗುತ್ತದೆ ಮತ್ತು ಹೆಚ್ಚು ಸಿಹಿ ಮತ್ತು ಕ್ಯಾಲರಿಗಳನ್ನು ಹೊಂದಿರುತ್ತದೆ. ಅವುಗಳು ಸಣ್ಣದಾಗ ಕೋನೀಯ ತುಂಡುಗಳಾಗಿದ್ದು, ಬಾಯಲ್ಲಿ ಇಟ್ಟಕೂಡಲೇ ಸಕ್ಕರೆಯು ಕರಗುತ್ತದೆ. ಒಂದು ಪ್ಯಾಕೆಟ್ ಖರೀದಿಸಿ, ಖಂಡಿತವಾಗಿಯೂ ನೀವು ಅಲ್ಲಿಂದ ಹೋಗುವಾಗ ಇನ್ನೊಂದು ತೆಗೆದುಕೊಳ್ಳದೇ ಇರುವುದಿಲ್ಲ.

Kutralam Parotta

ಕುಟ್ರಲಂ ಪರೋಟ: ತಮಿಳುನಾಡಿನ ಪರೋಟಗಳು ಉತ್ತರ ಭಾರತದ ಪರೋಟಗಳ ವಿಧಕ್ಕೆ ಸೇರಿದ್ದರೂ, ಅವುಗಳು ಭಿನ್ನವಾಗಿರುತ್ತದೆ. ಕುಟ್ರಲಂ ಪರೋಟವು ತಮಿಳುನಾಡಿನಲ್ಲಿ ಉತ್ತಮ ರುಚಿಯನ್ನು ನೀಡುತ್ತದೆ. ಕೇರಳ -ತಮಿಳುನಾಡು ಗಡಿಯಲ್ಲಿರುವ ಬಾರ್ಡರ್ ಶಾಫ್ ಎಂದು ಪ್ರಸಿದ್ಧಿಯಾಗಿರುವ ಸಣ್ಣ ಮಳಿಗೆಯು ಪರೋಟ ಪ್ರಿಯರು ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.

 

LEAVE A REPLY

Please enter your comment!
Please enter your name here