ಚೆನ್ನೈ ಮೆಟ್ರೋ: ಅದರ ಉದ್ದೇಶ ಇನ್ನೂಈಡೇರಬೇಕಾಗಿದೆ

0
420

ಚೆನ್ನೈ ಮೆಟ್ರೋ ಪ್ರಾರಂಭವಾದಾಗಿನಿಂದಲೂ ಅನೇಕ ಏಳು ಬೀಳುಗಳನ್ನು ಕಂಡಿದೆ. ಮೆಟ್ರೋ ಚೆನ್ನಾಗಿ ನಿರ್ವಹಿಸಲ್ಪಟ್ಟಿದೆ ಮತ್ತು ನಿಲ್ದಾಣವು ಸ್ವಚ್ಛವಾಗಿದೆ. ಇದು ಸಾರ್ವಜನಿಕ ಸಾರಿಗೆಗೆ ಯೋಗ್ಯ ವಿಧಾನವಾಗುವುದನ್ನು ನಿರೀಕ್ಷಿಸಲಾಗಿತ್ತು, ಆದರೂ ಪ್ರಸಕ್ತ ಸನ್ನಿವೇಶವು ವಿಭಿನ್ನ ಚಿತ್ರಣವನ್ನು ನೀಡುತ್ತದೆ.

ಉತ್ತಮ ಪ್ರಾರಂಭ

Chennai Metro Gates
ಪ್ರಾರಂಭದಲ್ಲಿ, ಚೆನ್ನೈ ಮೆಟ್ರೋ ಕೇವಲ 7 ನಿಲ್ದಾಣಗಳಿಗೆ ಸೀಮಿತವಾಗಿತ್ತು ಆದರೆ ಹೆಚ್ಚಿನ ಸ್ಥಳಗಳನ್ನು ಒಳಗೊಳ್ಳುವುದು ಯೋಜನೆಯಾಗಿತ್ತು. ಹವಾನಿಯಂತ್ರಿತ ರೈಲುಗಳು, ಟೋಕನ್‌ಳು ಮತ್ತು ಸ್ಮಾರ್ಟ್ ಕಾರ್ಡ್‌ಗಳನ್ನು ಕಂಡು ಸ್ಥಳೀಯರು ಸಂತೋಷಗೊಂಡಿದ್ದರು. ಇದು ಚೆನ್ನೈ ಜನರಿಗೆ ಒಂದು ಜಾಲಿರೈಡ್ ತರ ಆಗಿತ್ತು.

ಕಳೆಗುಂದುವಿಕೆ
ಉತ್ಸಾಹವು ಬೇಗವೇ ಕಳೆಗುಂದಿತು ಮತ್ತು ಸಾರ್ವಜನಿಕರು ಸ್ಥಳೀಯ ರೈಲುಗಳು, ಎಂಆರ್‌ಟಿಎಸ್ ಮತ್ತು ಬಸ್‌ಗಳನ್ನೇ ಆಯ್ದುಕೊಂಡಿದ್ದರಿಂದ ಮಟ್ರೋ ನಿಲ್ದಾಣಗಳನ್ನು

  • ಕೇಳುವವರಿಲ್ಲದಂತಾಯಿತು. ಚೆನ್ನೈ ಮೆಟ್ರೋ ಎರಡು ಕಾರಣಗಳಿಂದಾಗಿ ಸಾರ್ವಜನಿಕರಿಂದ ವಿಸೃತವಾಗಿ ಅಳವಡಿಸಲ್ಪಟ್ಟಿಲ್ಲ.
  • ಕೇವಲ ಏಳು ನಿಲ್ದಾಣಗಳಿದ್ದು ಇದು ವಿಸ್ತಾರವಾದ ಎಂದು ಗುರುತಿಸಲ್ಪಟ್ಟ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಎದುರು ತುಂಬಾ ಕಡಿಮೆ.

ದುಬಾರಿ ಯೋಜನೆ

Chennai Metro running
ಪರ್ಯಾಯ ಸಾರಿಗೆ ವಿಧಾನ ಮತ್ತು ಚೆನ್ನೈ ಮೆಟ್ರೋ ನಡುವಿನ ಅಧಿಕ ಬೆಲೆ ವ್ಯತ್ಯಾಸವು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿ ಇದನ್ನು ಅಳವಡಿಸಿಕೊಳ್ಳುವಲ್ಲಿ ಅಡ್ಡಿಯಾಗಿದೆ. ಸರ್ಕಾರಿ ಬಸ್‌ಗಳು ಮತ್ತು ಶೇರ್ ಆಟೋಗಳು ಎರಡೂ ಸಿದ್ಧವಾಗಿ ಲಭ್ಯವಿದೆ.
ಸೀಮಿತ ತಲುಪುವಿಕೆ
ಬೆಲೆ ಕಡಿಮೆಯಾದರೂ, ಕಳಪೆ ಸಂಪರ್ಕವು ಇನ್ನೊಂದು ಸಮಸ್ಯೆಯಾಗಿರಬಹುದು. ಮೆಟ್ರೋ ತನ್ನ ಸೇವೆಯನ್ನು ಹೆಚ್ಚಿನ ಸ್ಥಳಗಳಿಗೆ ವಿಸ್ತರಿಸಿದಲ್ಲಿ, ಮತ್ತು ಬಳಸಲು ಕೈಗೆಟಕುವಂತಿದ್ದಲ್ಲಿ, ಖಂಡಿತವಾಗಿಯೂ ಯಶಸ್ವಿಯಾಗುತ್ತದೆ.
ಕೀರ್ತಿಯ ಗಳಿಗೆ

Chennai Metro & floods
2015ರಲ್ಲಿ ಚೆನ್ನೈನಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ, ನೀರಿನ ಮೇಲಿದ್ದ ಮೆಟ್ರೋದ ಇಲವೇಟೆಡ್ ಟ್ರ್ಯಾಕ್‌ಗಳು ಉತ್ತಮ ರೀತಿಯಲ್ಲಿ ಸಾಗಲು ಮತ್ತು ಅಲ್ಲಿದ ಜನರನ್ನು ಸಂಪರ್ಕಿಸಲು ಸಹಾಯ ಮಾಡಿತು. ಇದು ಖಂಡಿತವಾಗಿಯೂ ಕಳೆದ ಒಂದು ವರ್ಷದಲ್ಲಿ ಚೆನ್ನೈ ಮೆಟ್ರೋದ ಒಂದು ಅತೀ ದೊಡ್ಡ ಸಾಧನೆಯಾಗಿದೆ.
ಪ್ರಯಾಣಿಕರ ಆದ್ಯತೆಯ ಸಾರಿಗೆ ವ್ಯವಸ್ಥೆಯಾಗುವ ತನಕ ಅದು ಬಹುದೂರ ಸಾಗಬೇಕಿದೆ.

 

Originally written by Gomathi. Read here.

LEAVE A REPLY

Please enter your comment!
Please enter your name here