ನಿಮಗೆ ತಿಳಿಯಬೇಕಾದ ಸುವಿಧಾ ರೈಲು ನಿಯಮಗಳು

0
1415
Kannada travel blog

ಈ ರೈಲುಗಳು ಪ್ರಯಾಣವನ್ನು ಸುಲಭಗೊಳಿಸಲು ವಿನ್ಯಾಸ ಮಾಡಲಾಗಿವೆ ಆದರೂ, ಇವುಗಳ ನಿಯಮಗಳು ಪ್ರಯಾಣಿಕರಿಗೆ ಯಾವಾಗಲು ತೊಂದರೆಗಳನ್ನು ಸೃಷ್ಠಿಸುತ್ತವೆ. ಹಾಗಾಗಿ, ಸುವಿಧಾ ರೈಲುಗಳಲ್ಲಿ ಪ್ರಯಾಣ ಮಾಡಲು ಕೆಳಗೆ ಸೂಚಿಸಲಾದ ಕೆಲವು ನಿಯಮಗಳನ್ನು ಓದಿಕೊಳ್ಳಿ ಮತ್ತು ಸುಲಭವಾಗಿ ಪ್ರಯಾಣಿಸಿ.

ಬುಕಿಂಗ್ ಅವಧಿ

ಈ ರೈಲುಗಳು ಅಂತಾಗ್ಯೂ ಹಬ್ಬಗಳ ಜನಸಂದಣಿಯ ಅವಧಿಯಲ್ಲಿ ಯಾವುದೇ ದೃಡೀಕರಿಸದ ಟಿಕೆಟ್ ಗಳು ಇಲ್ಲದ ಪ್ರಯಾಣಿಕರಿಗೆ ಒಂದು ಸಂತಸದ ನೆಮ್ಮದಿಯನ್ನು ತರುವುದಾಗಿರುತ್ತದೆ. ಇದಕ್ಕಾಗಿಯೇ ಸುವಿಧಾ ರೈಲುಗಳಿಗಾಗಿ ಟಿಕೇಟುಗಳನ್ನು ಗರಿಷ್ಠ 30 ದಿನಗಳ ನಂತರ ಮತ್ತು ಕನಿಷ್ಟ 10 ದಿನಗಳ ಮುಂಚಿತವಾಗಿ ಬುಕ್ ಮಾಡಬಹುದಾಗಿರುತ್ತದೆ. ಟಿಕೆಟ್ ಗಳನ್ನು ಆನ್ಲೈನ್ ಮೂಲಕ ಅಂತೆಯೇ, ಕೌಂಟರ್ ಗಳಲ್ಲಿಯೂ ಸಹ ಬುಕ್ ಮಾಡಬಹುದಾಗಿರುತ್ತದೆ.

ರೈಲು ವೈವಿಧ್ಯತೆಗಳು

ಮೂರು ಬಗೆಯ ಸುವಿಧಾ ರೈಲುಗಳಿವೆ. ಮೊದಲನೆಯ ವರ್ಗವು ರಾಜಧಾನಿ ರೈಲುಗಳ ಮಾದರಿಯಲ್ಲಿ, ಕನಿಷ್ಠ ನಿಲ್ದಾಣಗಳೊಂದಿಗೆ ಸಂಪೂರ್ಣವಾಗಿ ಹವಾನಿಯಂತ್ರಿಕ ರೈಲುಗಳಾಗಿವೆ. ಎರಡನೆಯ ವರ್ಗವು ಡುರೊಂಟೊ ರೈಲುಗಳ ಮಾದರಿಯಲ್ಲಿ, ಕನಿಷ್ಠ ನಿಲ್ದಾಣಗಳೊಂದಿಗೆ ಹವಾನಿಯಂತ್ರಿಕ ಮತ್ತು ಹವಾನಿಯಂತ್ರಣ-ರಹಿತ ಮಿಶ್ರಣದ ಸುವಿಧಾ ರೈಲುಗಳು ಇವೆ. ಮತ್ತು ಮೂರನೆ ವರ್ಗದಲ್ಲಿ ಎಕ್ಸ್ ಪ್ರಸ್ ರೈಲುಗಳಂತೆಯೇ ಹವಾನಿಯಂತ್ರಿತ ಮತ್ತು ಹವಾನಿಯಂತ್ರಣ-ರಹಿತವಾದ ಸಂಯೋಜನೆಯೊಂದಿಗೆ ಹಾಗೂ ಮಧ್ಯಂತರ ನಿಲ್ದಾಣಗಳಿರುವ ರೈಲುಗಳಾಗಿವೆ.ಟಿಕೆಟ್ ನ ದರಗಳು ಬದಲಾಗುತ್ತವೆ; ಯಾವ ಬಗೆಯ ಸುವಿಧಾ ರೈಲುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬುದರ ಮೇಲೆ ಅಧಾರಪಟ್ಟಿರುತ್ತದೆ.

ಟಿಕ್ಕೆಟು ದರಗಳು ಮತ್ತು ವಿನಾಯಿತಿಗಳು

ಪ್ರತಿ 20% ಆಸನಗಳು ಮಾರಾಟವಾಗುತ್ತಿದ್ದಂತೆ ದರಗಳು ಏರಿಕೆಗೊಳ್ಳುವ ಬದಲಾಗುವ ದರ ನೀತಿಯನ್ನು ಸುವಿಧಾ ರೈಲುಗಳಲ್ಲಿ ಅಳವಡಿಸಲಾಗಿದೆ. ಆದರೆ ಗರಿಷ್ಠ ದರವು ತತ್ಕಾಲ್ ದರಗಳ ಮೂರು ಪಟ್ಟಿಗಿಂತ ಹೆಚ್ಚಾಗುವಂತಿಲ್ಲ. ಒಂದೊಮ್ಮೆ ಒಂದು ನಿರ್ದಿಷ್ಟ ರೈಲುಗಳಿಗಾಗಿ ಟಿಕ್ಕೆಟುಗಳು ಮಾರಾಟವಾಗದೆ ಉಳಿದರೆ, ಅದನ್ನು ಭೌತಿಕ ಬುಕಿಂಗ್ ಕೌಂಟರ್ ಗಳಿಗೆ ವರ್ಗಾಯಿಸಲಾಗುವುದು. ಮಹಿಳೆಯರಿಗೆ, ಮಕ್ಕಳಿಕೆ ಅಥವಾ ಹಿರಿಯ ನಾಗರೀಕರಿಗೆ ಯಾವುದೇ ವಿಶೇಷ ವಿನಾಯಿತಿಗಳಿಲ್ಲ.

ಗುರುತಿನ ಕಾರ್ಡ್ ಗಳು ಅತ್ಯಾವಶ್ಯಕ

ಸುವಿಧಾ ರೈಲುಗಳನ್ನು ಏರುವ ಮುನ್ನ, ನಿಮ್ಮ ಬಳಿ ಒಂದು ಗುರುತಿನ ಪುರಾವೆ ಇದೆಯೇ ಎಂದು ಖಾತರಿಪಡಿಸಿಕೊಳ್ಳಿ. ಎಲ್ಲಾ ಪ್ರಯಾಣಿಕರಿಗೆ ಫೋಟೊ ಗುರುತಿನ ಪುರಾವೆಯು ಕಡ್ಡಾಯ ಮತ್ತು ಪ್ರಯಾಣದ ಅವಧಿಯಲ್ಲಿ ಪರಿಶೀಲಿಸಲಾಗುವುದು. ಒಂದೊಮ್ಮೆಯಾವುದೇ ಒಬ್ಬ ಪ್ರಯಾಣಿಕರ ಬಳಿ ಒಂದು ಮಾನ್ಯ ಗುರುತಿನ ಪುರಾವೆ ಇಲ್ಲದೆ ಇದ್ದರೆ, ಆತನು/ಆಕೆಯನ್ನು ರೈಲಿನಿಂದ ಇಳಿಯಲು ತಿಳಿಸಬಹುದಾಗಿರುತ್ತದೆ.

ರದ್ದುಪಡಿಸುವ ನಿಯಮಗಳು

ಒಂದೊಮ್ಮೆ ನೀವು ಸುವಿಧಾ ರೈಲುಗಳನ್ನು ರದ್ದುಪಡಿಸಬೇಕಾಗಿದ್ದರೆ ಅದನ್ನು ರೈಲಿನ ನಿಗದಿಪಡಿಸಿದ ಹೊರಡುವ ಸಮಯಕ್ಕಿಂತ ಕನಿಷ್ಠ 6 ಗಂಟೆಗಳ ಮುನ್ನ ಅಥವಾ ವೇಳಾಪಟ್ಟಿ ಸಿದ್ಧಗೊಳ್ಳುವ ಮುನ್ನ ಯಾವುದೇ ಮುಂಚಿತವೋ ಅದರ ಪ್ರಕಾರವಾಗಿ ಮಾಡಬೇಕಾಗಿರುತ್ತದೆ. ಟಿಕ್ಕೆಟುಗಳನ್ನು ರದ್ದು ಪಡಿಸಿದಾಗ, ನೇರ 50%ಬುಕಿಂಗ್ ಮೊತ್ತವನ್ನು ಮಾತ್ರ ಮರುಪಾವತಿಸಲಾಗುವುದು. ಟಿಕ್ಕೆಟುಗಳನ್ನು ಯಶಸ್ವಿಯಾಗಿ ರದ್ದುಪಡಿಸಿದ ನಂತರ, ಇ-ಟಿಕ್ಕೆಟಿನ ಮರುಪಾವತಿಯ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಅಥವಾ ಕ್ರೆಡಿಟ್ ಕಾರ್ಡಿನ ಖಾತೆಗೆ ಜಮೆಮಾಡಲಾಗುವುದು.

LEAVE A REPLY

Please enter your comment!
Please enter your name here