ಭಾರತದ 5 ಅಸಾಮಾನ್ಯ ಮಾರುಕಟ್ಟೆಗಳು

0
607

ಭಾರತೀಯ ಮಾರುಕಟ್ಟೆಗಳ ಸುತ್ತ ಇರುವ ಜಾದೂ, ಕಣ್ಣಿಗೆ ಕಾಣುವುದೆಲ್ಲವನ್ನೂ ಕೊಳ್ಳಬೇಕೆನ್ನುವ ಬಯಕೆ ಹುಟ್ಟಿಸುತ್ತದೆ. ಎಲ್ಲಾ ತರಹದ ನಾನಾ ವಸ್ತುಗಳು ನೋಡಿದರೆ, ಎಲ್ಲವನ್ನೂ ಕೊಂಡುಕೊಳ್ಳಬೇಕೆನಿಸದೆ ಇರುವುದಿಲ್ಲ. ಮಾರುಕಟ್ಟೆಗಳಲ್ಲಿ, ಸುತ್ತಮುತ್ತ ಜನಜಂಗುಳಿ, ಗದ್ದಲ, ವ್ಯಾಪಾರಿಗಳ ಕೂಗಾಟ, ಪೈಪೋಟಿ ನೋಡಿದಾಕ್ಷಣ ನಿಮ್ಮೊಳಗಿನ ಗಿರಾಕಿ ಜಾಗೃತಗೊಳ್ಳುತ್ತಾನೆ. ಸಾಮಾನ್ಯ ಮಾರುಕಟ್ಟೆಗಳಲ್ಲದೆ ಕೆಲವು ವಿಶಿಷ್ಟ ಮಾರುಕಟ್ಟೆಗಳೂ ಇವೆ. ಅವುಗಳ ಪಟ್ಟಿ ಇಲ್ಲಿದೆ ನೋಡಿ:

Ima Keithel market

ಇಮಾಕೈಥಲ್, ಮಣಿಪುರ: ಇದು 150 ವರ್ಷ ಹಳೆಯದಾದ ಮಾರುಕಟ್ಟೆ. ಇಂಫಾಲದ ಹೃದ್ಭಾಗದಲ್ಲಿ ನೆಲೆಯಾಗಿದೆ. ಇದು ಪ್ರಪಂಚದ”ಸರ್ವ ಮಹಿಳಾ ಮಾರುಕಟ್ಟೆ”. ಇಲ್ಲಿ 5000 ಕ್ಕೂ ಅಧಿಕ ಮಹಿಳಾ ವ್ಯಾಪಾರಿಗಳಿದ್ದಾರೆ. ತಾಜಾ ತರಕಾರಿ, ಹಣ್ಣು ಮತ್ತು ಇತರ ಅವಶ್ಯ ದಿನಸಿಗಳಲ್ಲದೆ, ಇಮಾಕೈಥಲ್ ತನ್ನ ಕ್ಯೂರಿಯೋ ಅಂಗಡಿಗಳು ಹಾಗೂ ಈಶಾನ್ಯದ ವಿಶಿಷ್ಟ ಜವಳಿ/ಉಡುಪುಗಳಿಗೆ ಪ್ರಖ್ಯಾತವಾಗಿದೆ.

Jonbeel Market

ಜಾನ್ ಬೀಲ್ ಮಾರುಕಟ್ಟೆ, ಅಸ್ಸಾಂ: ಖಂಡಿತವಾಗಿಯೂ “ಅಪರೂಪಗಳಲ್ಲಿ ಅಪರೂಪದ ಮಾರುಕಟ್ಟೆ”. ಇಂದಿಗೂ ಇಲ್ಲಿ ಬಾರ್ಟರ್ ಪದ್ಧತಿ ಜೀವಂತವಾಗಿದೆ. ದಯಾಂಗ್ ಬೇಲ್ಗುರಿಯ ಜಾನ್ ಬೀಲ್(ಮೋರಿಗಾಂವ್ ಜಿಲ್ಲೆಯ ಜಗೀರೋಡ್ ಬಳಿ) ನಲ್ಲಿ ಬಿಗು ಮಾಸದಲ್ಲಿ ಮಾರುಕಟ್ಟೆ ಮೂರು ದಿನಗಳು ಮಾತ್ರ ತೆರೆದಿರುತ್ತದೆ. ಸುತ್ತಮುತ್ತಲಿನ ಬುಡಕಟ್ಟುಜನಾಂಗದವರು ಇಲ್ಲಿಗೆ ಬಂದು ತಮ್ಮೊಂದಿಗೆ ದಿನಸಿ, ಜಾನುವಾರು, ಮೀನು ಇತ್ಯಾದಿಗಳ ದಾಸ್ತಾನು ತರುತ್ತಾರೆ. ನೀವು ಏನನ್ನು ಖರೀದಿಸುವಿರೋ, ಅಷ್ಟೇ ಪ್ರಮಾಣದ ನಿಮ್ಮ ಬಳಿ ಇರುವ ದಾಸ್ತಾನನ್ನು ನೀಡಬೇಕು.

Floating Market

ತೇಲುವ ಮಾರುಕಟ್ಟೆ, ಕಾಶ್ಮೀರ: ಸ್ಥಳೀಯರ ಪ್ರಕಾರ, ಶಿಖರಗಳಲ್ಲಿ ಬೆಳೆಸಲಾದ ಹಣ್ಣು ಮತ್ತು ತರಕಾರಿಗಳು ದಾಲ್ ಸರೋವರದ ದಂಡೆಯಲ್ಲಿ ಬೆಳೆಯಲಾಗುತ್ತವೆ ಮತ್ತು ಮಾರುವ ಕೇವಲ 2 ಗಂಟೆಗಳ ಮುಂಚೆ ಅವುಗಳನ್ನು ಕಟಾವು ಮಾಡಿ ಮಾರುಕಟ್ಟೆಗೆ ತರಲಾಗುತ್ತದೆ. ಪ್ರತಿನಿತ್ಯ ಬೆಳಿಗ್ಗೆ 5 ರಿಂದ 7 ರವರೆಗೆ ಅತ್ಯಂತ ತಾಜಾ ಹಣ್ಣು-ತರಕಾರಿಗಳು ಇಲ್ಲಿ ಸಿಗುತ್ತವೆ.

Attar Market

ಅತ್ತರ್ ಮಾರುಕಟ್ಟೆ, ಉತ್ತರಪ್ರದೇಶ: ಸುಗಂಧ ತೈಲಗಳು, ಗುಲಾಬಿ ಪನ್ನೀರು, ಅಗರಭತ್ತಿ ಮತ್ತು ಅತ್ಯುಚ್ಛಗುಣಮಟ್ಟದ ಅತ್ತರ್(ಸುಗಂಧ ದ್ರವ್ಯ) ಈ ಮಾರುಕಟ್ಟೆಯ ವಿಶಿಷ್ಟತೆ. ಈ ಮಾರುಕಟ್ತೆಯಲ್ಲಿ 650 ಕ್ಕೂ ಹೆಚ್ಚು ವಿವಿಧ ಬಗೆಯ ಸುಗಂಧ ದ್ರವ್ಯಗಳು ಸಿಗುತತ್ವೆ.

Sonepur Cattle Market

ಸೋನೆಪುರ್ ಜಾನುವಾರು ಮಾರುಕಟ್ಟೆ, ಬಿಹಾರ : ಇದು, ಒಂದು ತಿಂಗಳ ದೀರ್ಘ ಕಾಲ ನಡೆಯುವ ಮಾರುಕಟ್ಟೆ-ಮೇಳ.ಗಂಗಾ ನದಿಯ ಡದಲ್ಲಿ ನವೆಂಬರ್ ತಿಂಗಳಲ್ಲಿ ಆರಂಭವಾಗುತ್ತದೆ. ಎಲ್ಲ ಜಾತಿಯ ನಾಯಿಗಳು, ಎಮ್ಮೆಗಳು, ಕತ್ತೆಗಳು, ಹೇಸರಗತ್ತೆಗಳು, ಪರ್ಷಿಯನ್ ಕುದುರೆಗಳು, ಮೊಲಗಳು, ಆನೆಗಳು, ಆಡುಗಳು ಮತ್ತು ಪಕ್ಷಿಗಳಅನ್ನು ಇಲ್ಲಿ ಖರೀದಿಸಬಹುದು.

LEAVE A REPLY

Please enter your comment!
Please enter your name here