ರಾಜಸ್ಥಾನದಲ್ಲಿ ನೋಡಲೇಬೇಕಾದ ವನ್ಯಜೀವಿ ಅಭಯಾರಣ್ಯಗಳು

0
1836

ದೊರೆಗಳ ಭೂಮಿಯಾಗಿರುವ ‘ರಾಜಸ್ಥಾನವು’ ಅದರ ಹವೇಲಿಗಳು, ಕೋಟೆಗಳು, ಮ್ಯೂಸಿಯಂಗಳು ಮತ್ತು ಮರುಭೂಮಿ ಸವಾರಿಗಳಿಗೆ ಪ್ರಸಿದ್ಧವಾಗಿದ್ದು ಜೊತೆಗೆ ಅಪಾಯದಂಚಿನಲ್ಲಿರುವ ಪ್ರಾಣಿಗಳಿಗೂ ತವರಾಗಿದೆ. ಈ ರಜಪೂತರ ಭೂಮಿಯು ಹಲವು ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳನ್ನು ಹೊಂದಿದೆ.

Ranthambore National Park
ರಂತಂಬೋರ್ ರಾಷ್ಟ್ರೀಯ ಉದ್ಯಾನವನ, ಸವಾಯ್ ಮದೋಪುರ್: 1980ರಲ್ಲಿ ರಾಷ್ಟ್ರೀಯ ಉದ್ಯಾನವನವಾಗಿ ಘೋಷಿಸಲ್ಪಟ್ಟಿದ್ದು, ಹುಲಿ, ಚಿರತೆ, ನೀಲ್ಗೈ, ಚಿತಾಲ್ ಮುಂತಾದ ಪ್ರಾಣಿಗಳನ್ನು ಅವುಗಳ ಸ್ವಾಭಾವಿಕ ವಾಸಸ್ಥಾನದಲ್ಲಿ ನೋಡಲು ಅತ್ಯುತ್ತಮ ಸ್ಥಳವಾಗಿದೆ. ಪ್ರವಾಸಿಗರ ಮತ್ತು ವನ್ಯಜೀವಿ ಛಾಯಾಗ್ರಾಹಕ ಅಚ್ಚುಮೆಚ್ಚಾದ ಮಂಚಾಲಿ-ಹೆಣ್ಣುಹುಲಿಯನ್ನು ನೋಡಲೇಬೇಕು. ಆಕೆಯು ಒಮ್ಮೆ 10 ಅಡಿ ಉದ್ದದ ಮೊಸಳೆಯನ್ನು ಕೊಂದಿದ್ದಳು ಮತ್ತು ಅಂದಿನಿಂದ “ಕ್ರೊಕಡೈಲ್ ಕಿಲ್ಲರ್” ಎಂಬ ಸ್ಥಾನವನ್ನು ಪಡೆದಿದ್ದಳು.

ಸವಾಯ್ ಮದೋಪುರ್ ಅತ್ಯಂತ ಸಮೀಪದ ರೈಲು ಮಾರ್ಗವಾಗಿದೆ.

Sariska National Park

 

ಸರಿಸ್ಕ ರಾಷ್ಟ್ರೀಯ ಉದ್ಯಾನವನ, ಅಲ್ವಾರ್: ಸರಿಸ್ಕರು ಹುಲಿಗಳನ್ನು ಯಶಸ್ವಿಯಾಗಿ ಸ್ಥಳಾಂತರಗೊಳಿಸಿದ ಮೊದಲ ರಾಷ್ಟ್ರೀಯ ಉದ್ಯಾನವನವಾಗಿದೆ. 2005ರಲ್ಲಿ, ಅರಣ್ಯದಲ್ಲಿ ಯಾವುದೇ ಹುಲಿಗಳು ಇರದೇ ಇರುವುದನ್ನು ಅರಣ್ಯ ಅಧಿಕಾರಿಗಳು ಕಂಡುಕೊಂಡಿದ್ದರು ಮತ್ತು ಇತರ ರಕ್ಷಣಾತರಣ್ಯದಿಂದ ಸಾಕಷ್ಟು ಹುಲಿಗಳನ್ನು ತರಲಾಗಿತ್ತು. ಇಂದು, ಸರಿಸ್ಕವು ಸುಮಾರು 14 ಹುಲಿಗಳನ್ನು ಹೊಂದಿದೆ. ಇದು ಕಂಡು ಕವುಜಗ(ಪೆರ್ಡಿಕ್ಸ್), ಬಿಳಿ-ಗಂಟಲಿನ ಕಿಂಗ್‌ಫಿಶರ್, ಮತ್ತು ಭಾರತೀಯ ಹದ್ದು-ಗೂಬೆ ಮುಂತಾದ ಅಪರೂಪದ ಪಕ್ಷಿ ಪ್ರಬೇಧಗಳನ್ನೂ ಕಾಣಬಹುದು.
ಅಲ್ವರ್ ಸಮೀಪದ ರೈಲುಮಾರ್ಗವಾಗಿದೆ (36 ಕಿ. ಮೀ.ದೂರದಲ್ಲಿದೆ)

Darrah National Park
ದರ್ರಾ ರಾಷ್ಟ್ರೀಯ ಉದ್ಯಾನವನ, ಕೋಟ: ದರ್ರಾ ವನ್ಯಜೀವಿ ಅಭಯಾರಣ್ಯ, ಚಂಬಲ್ ವನ್ಯಜೀವಿ ಅಭಯಾರಣ್ಯ ಮತ್ತು ಜಸ್ವಂತ್ ಸಾಗರ್ ವನ್ಯಜೀವಿ ಅಭಯಾರಣ್ಯ ಒಟ್ಟಾಗಿ ಸುಂದರ ದರ್ರಾ ಅಭಯಾರಣ್ಯವನ್ನುಒಳಗೊಂಡಿದೆ. ದರ್ರಾ ರಾಷ್ಟ್ರೀಯ ಉದ್ಯಾನವನವಾಗುವ ಮುನ್ನ ಅದು ಕೋಟ ಮಹಾರಾಜರ ಭೇಟೆಯಾಡುವ ಸ್ಥಳವಾಗಿತ್ತು. ಇಲ್ಲಿ ಕಾಡುಹಂದಿ, ಜಿಂಕೆ, ತೋಳಗಳು ಮತ್ತು ಕಪ್ಪು ಚಿರತೆಗಳು ಇಲ್ಲಿರುವ ವಿವಿಧ ಪ್ರಬೇಧಗಳಾಗಿವೆ. ಚಂದ್ರಭಾಗ ನದಿಯ ದಂಡೆಲ್ಲಿ 7ನೇ ಮತ್ತು 8ನೇ ಶತಮಾನದ ಸುಂದರವಾದ ದೇವಾಲಯಗಳೂ ಇವೆ.
ಈ ಅಭಯಾರಣ್ಯಕ್ಕೆ ಸಮೀಪದ ರೈಲುಮಾರ್ಗ ಕೋಟ (50 ಕಿ.ಮೀ ದೂರದಲ್ಲಿದೆ).

Mount Abu Sanctuary
ಮೌಂಟ್ ಅಬು ಅಭಯಾರಣ್ಯ, ಮೌಂಟ್ ಅಬು: ಕಂದು ಬಣ್ಣದ ಬಾತುಕೋಳಿ, ಚಿರತೆಗಳು, ಲಾಂಗೂರ್‌ಗಳು, ಹೈನಾಗಳು, ಮುಳ್ಳುಹಂದಿಗಳು ಮತ್ತು ಹೆಡ್‌ಹಾಗ್ ಮುಂತಾದ 250ಕ್ಕೂ ಹೆಚ್ಚಿನ ಪ್ರಬೇಧಗಳನ್ನು ಇಲ್ಲಿ ಕಾಣಬಹುದಾಗಿದೆ. ಇದು ಟ್ರೆಕ್ಕರ್‌ಗಳಿಗೆ ರಾಜಸ್ಥಾನದಲ್ಲಿ ಅತ್ಯಂತ ಪ್ರಶಸ್ತ ತಾಣವಾಗಿದೆ.
ಈ ಅಭಯಾರಣ್ಯವು ಅಬು ರಸ್ತೆಯಿಂದ 25 ಕಿ.ಮೀ. ದೂರದಲ್ಲಿದೆ.

Sita Mata Wildlife Sanctuary
ಸೀತಾ ಮಾತ ವನ್ಯಜೀವಿ ಅಭಯಾರಣ್ಯ, ಪ್ರತಾಪ್‌ಘರ್: ಈ ಅಭಯಾರಣ್ಯವು “ಹಾರುವ ಅಳಿಲು” ಗಳ ವಾಸಸ್ಥಾನವಾಗಿದೆ. ಫೆಬ್ರವರಿ ಮತ್ತು ಮಾರ್ಚ್ ಮಧ್ಯದ ಅವಧಿಯು ಹಾರುವ ಅಳಿಲುಗಳನ್ನು ನೋಡಲು ಉತ್ತಮ ಸಮಯವಾಗಿದೆ ಈ ಸಮಯದಲ್ಲಿ ಹೆಚ್ಚಿನ ಮಹುವ ಮರಗಳು ಅವುಗಳ ಎಲೆಗಳನ್ನು ಉದುರಿಸುತ್ತವೆ. ಸಣ್ಣ ಗ್ರೀಬ್, ಕಂದು ಹಳದಿ ಬಣ್ಣದ ಹದ್ದು, ನೇರಳೆ ನೀರುಕೋಳಿ ಮತ್ತು ಜುಟ್ಟಿನ ಲಾರ್ಕ್ ಮುಂತಾದ ಸುಮಾರು 130 ವಿಧಗಳ ಪಕ್ಷಿಗಳನ್ನು ಇಲ್ಲಿ ಕಾಣಬಹುದಾಗಿದೆ.
ಉದಯಪುರ ಈ ವನ್ಯಜೀವಿ ಅಭಯಾರಣ್ಯಕ್ಕೆ ಸಮೀಪದ ರೈಲುನಿಲ್ದಾಣವಾಗಿದೆ.

LEAVE A REPLY

Please enter your comment!
Please enter your name here