ಮೈಸೂರು ನಮಗೆ ವಿವಿಧ ವಸ್ತುಗಳನ್ನು ನೆನಪಿಸುತ್ತದೆ ಅವುಗಳೆಂದರೆ ಆಕರ್ಷಕ ರೇಷ್ಮೇ ಸೀರೆ, ಮೈಸೂರು ಅರಮನೆ, ಮತ್ತು ಜನಪ್ರಿಯವಾದ ಸ್ಯಾಂಡಲ್ ಸೋಪ್. ಅದಾಗ್ಯೂ, ಫುಡೀಗಳು ಕೇವಲ ಮೈಸೂರ್ ಪಾಕ್ ನನ್ನು ಮಾತ್ರ ಹೇಳುತ್ತಾರೆ; ಇದು ಈ ಪ್ರತಿಷ್ಠಿತ ನಗರದ ಪ್ರಾಂತೀಯ ಖಾದ್ಯ.
ನವಿರಾದ ಭಕ್ಷ್ಯದ ಇತಿಹಾಸ
ಮೈಸೂರು ಪಾಕನ್ನು ಮೊದಲಿಗೆ ಮಾದಪ್ಪ ಎಂಬ ವ್ಯಕ್ತಿಯು ಮೈಸೂರು ಅರಮನೆಯಲ್ಲಿ ತಯಾರಿಸಿದರು. ಆತನು ಪ್ರಾಯೋಗಿಕವಾಗಿ ಕಡಲೇಹಿಟ್ಟನ್ನು ಮತ್ತು ತುಪ್ಪವನ್ನು ಸೇರಿಸಿ ಒಂದು ಹೊಸ ಬಗೆಯ ಗಟ್ಟಿ ಪಾಕವನ್ನು ಮಾಡಿದನು. ಆ ಪಾಕವು ಗಟ್ಟಿಯಾದ ಮೇಲೆ ಕೇಕ್-ನಂತಹ ಸಿಹಿಯಾಯಿತು. ಆತನು ಅದನ್ನು ಕೃಷ್ಣ ರಾಜ ವಡೆಯರ್ ಗೆ ಪ್ರಸ್ತುತ ಪಡಿಸಿದನು, ಇವರು ಮೈಸೂರು ಅರಸರಲ್ಲಿ ಅತ್ಯಂತ ಜನಪ್ರಿಯವಾದವರು. ಅರಸರಿಗೆ ಇದು ಬಹಳ ಇಷ್ಟವಾಯಿತು ಹಾಗು ಆದಕ್ಕೆ ಪ್ರಖ್ಯಾತ ಸಿಹಿಖಾದ್ಯದ ಸ್ಥಾನವನ್ನು ನೀಡಿದರು. ಮಾದಪ್ಪ ಅದಕ್ಕೆ ಹೆಚ್ಚಿನ ಪದಾರ್ಥಗಳನ್ನು ಸೇರಿಸಿದನು ಹಾಗೂ ಅದನ್ನು ಮೈಸೂರ್ ಪಾಕಾ ಎಂದು ಕರೆದನು (ಪಾಕಾ ಎಂದರೆ ಕನ್ನಡದಲ್ಲಿ ಒಂದು ಸಕ್ಕರೆಯ ಮಿಶ್ರಣ ಎಂದು). ಮುಂದುವರದಂತೆ, ಮೈಸೂರು ಪಾಕಾವನ್ನ ಜನಪ್ರಯವಾಗಿ ಮೈಸೂರ್ ಪಾಕ್ ಅಥವಾ ಮೈಸೂರೆಪ ಎಂದು ಕರೆಯಲಾಗುತ್ತದೆ.
ನಗರದ ಹೊರಗೆ ಮತ್ತು ಭಕ್ಷ್ಯಗಳು
ಚೆನ್ನೈ ಎಂದರೆ ಪಾಕಾ ಸವಿಯುವ ತಾಣ. ಶ್ರೀ ಕೃಷ್ಣ ಸ್ವೀಟ್ಸ್, ಇದು ಚೆನ್ನೈ-ಮೂಲದ ಖಾದ್ಯಗಳ ಅಂಗಡಿಯ ಒಂದು ಜಾಲವಾಗಿದ್ದು, ಮೈಸೂರ್ ಪಾಕ್ ನ ಒಂದು ನಂಬಿಕಸ್ಥ ಮೂಲಸ್ಥಳವಾಗಿದೆ. ಆದರೆ ಹಳೆಯ ತಲೆಮಾರಿನವರು ಇಂದಿಗೂ ಶ್ರೀ ಕೃಷ್ಣ ಸ್ವೀಟ್ಸ್ ನಲ್ಲಿನ ಮೈಸೂರ್ ಪಾಕ್ ಅನ್ನು ಒಂದು ಬದಲಾದ ಅವೃತ್ತಿಯ ಸಿಹಿ ಎಂದು ಹಾಗೂ ಇದು ಸಾಂಪ್ರದಾಯಿಕ ರೀತಿಯದ್ದಲ್ಲ ಎಂದು ನಂಬುತ್ತಾರೆ.
ಸಾಂಪ್ರದಾಯಿಕ ಮೈಸೂರ್ ಪಾಕ್ ಗಾಗಿ ಹುಡುಕಾಟವೇ
ಚೆನ್ನೈನಲ್ಲಿ ಮೈಸುರ್ ಪಾಕ್ ಮಾರಾಟ ಮಾಡುವ ಹಲವಾರು ಸ್ವೀಟ್ಸ್ ಅಂಗಡಿಗಳಿವೆ, ಆದರೆ ಸಾಂಪ್ರದಯಿಕ ರೀತಿ ಮೈಸೂರ್ ಪಾಕನ್ನು ಮೈಸೂರಿನ ಬೀದಿಗಳಲ್ಲೇ ತಯಿಸಲಾಗುತ್ತದೆ ಎನ್ನುವ ನಂಬಿಕೆ ಇದೆ. ಬಾಂಬೆ ಟಿಫನ್ನೀಸ್ ಮತ್ತು ಗುರು ಸ್ವೀಟ್ಸ್ (ಇವೆರಡೂ ಸಹ ಮೈಸೂರ್ ಅರಮನೆಯ ಹತ್ತಿರ ಇವೆ) ಗಳನ್ನು ಈ ರುಚಿಕರ ಭಕ್ಷವನ್ನು ಸವಿಯುವ ಉತ್ತಮವಾದ ಸ್ಥಳ ಎಂದು ಪರಿಗಣಿಸಲಾಗಿದೆ. ಮಾದಪ್ಪ ಈ ಸಿಹಿಯನ್ನು ಸೃಷ್ಠಿಸಿದವರು, ಗುರು ಸ್ವೀಟ್ಸ್ ನ ಪ್ರಸ್ತುತ ಮಾಲೀಕರ ತಾತನವರು. ಹಾಗಾಗಿ, ಇದು ಸಾಂಪ್ರದಾಯಿಕ ಮೈಸೂರ್ ಪಾಕ್ ಅನ್ನು ಸವಿಯುವ ಉತ್ತಮ ಸ್ಥಳ ಎನ್ನಬಹುದು.
ಗುರು ಸ್ವೀಟ್ ಮಾರ್ಟ್
ಗುರು ಸ್ವೀಟ್ಸ್ ಸಯ್ಯಾಜಿ ರಾವ್ ರಸ್ತೆಯಲ್ಲಿ ಸ್ಥಾಪಿತವಾಗಿದೆ (ಮೈಸೂರು ಅರಮನೆಯ ಹಿಂದಿನ ಪ್ರವೇಶದ್ವಾರದಿಂದ ಕಾಲ್ನಡಿಗೆಯ ದೂರದಲ್ಲಿದೆ). ಇದು ನೋಡಲು ಹೆಚ್ಚು ಪ್ರಸಿದ್ಧ-ಸ್ಥಳದಂತೆ ಕಾಣುವಿದಿಲ್ಲ. ಈ ಅಂಗಡಿಯಲ್ಲಿ ಪ್ರವೇಶದ್ವಾರ ಅಥವಾ ಲಾಬಿ ಅಂತಹ ಸ್ಥಳವಿಲ್ಲ. ನೀವು ಫುಟ್ ಪಾತ್ ನಲ್ಲಿ ನಿಲ್ಲಬೇಕು ಹಾಗೂ ಗಾಜಿನ ಜಾರ್ ನಲ್ಲಿನ ಖಾದ್ಯಗಳನ್ನು ಬೆರೆಳು ತೋರಿಸಿ ಕೇಳಬೇಕು. ಇದರ ಪ್ರಸ್ತುತ ಮಾಲೀಕರಲ್ಲಿ ಒಬ್ಬರಾದ, ನಟರಾಜ್, ಅವರು ಈ ಸಿಹಿ ಖಾದ್ಯವನ್ನು ತಮ್ಮ ಮುತ್ತಾತನವರೇ ಸೃಷ್ಟಿಸಿದ್ದು ಎಮ್ದು ಹೇಳಿಕೊಳ್ಳುತ್ತಾರೆ. ಇವರು ಇಲ್ಲಿ ಇಂದಿಗೂ ಸಾಂಪ್ರದಾಯಿಕ ಪದ್ದತಿಯಲ್ಲಿ ಮೈಸೂರ್ ಪಾಕ್ ಮಾಡಲಾಗುತ್ತದೆ, ಉಳಿದ ಎಲ್ಲಾ ಪದಾರ್ಥಗಳನ್ನು ಮನೆಯಲ್ಲ ತಯಾರಿಸಲಾಗುತ್ತದೆ, ಕೇವಲ ಸಕ್ಕರೆ, ಏಲಕ್ಕ ಮತ್ತ ಅರಿಶಿಣವನ್ನ ಮಾತ್ರ ಹೊರಗಿಂದ ತರಲಾಗುತ್ತದೆ. ಮೈಸೂರ್ ಪಾಕನ್ನ ಬಿಟ್ಟರೆ, ಹಾಲಿನ ಬರ್ಫಿ ಗಳು ಸಹ ಈ ಅಂಗಡಿಯಲ್ಲ ರುಚಿಕರವಾದ ಖಾದ್ಯ.