ಮುಂಬೈನ 5 ಪಾರಂಪರಿಕ ಉಪಾಹಾರಗೃಹಗಳು

0
1156

ಮುಂಬೈಯಿಗರು ಆಹಾರ ಪ್ರಿಯರು. ಅದರ ಬಗ್ಗೆ ಸಂದೇಹವೇ ಇಲ್ಲ. ಭಾರತದ ವಾಣಿಜ್ಯ ರಾಜಧಾನಿಯಾದ ಇಲ್ಲಿ, ವಡಾಪಾವ್ ಮತ್ತು ಪಾವ್ ಭಾಜಿಯಂತಹ ಬೀದಿ ತಿನಿಸುಗಳಿಂದ ಹಿಡಿದು ಅತ್ಯುತ್ತಮ ಊಟದ ಹೋಟೇಲುಗಳವರೆಗೆ ಎಲ್ಲವೂ ಇವೆ. ಮುಂಬೈಗೆ ಹೋಗುವ ಆಲೋಚನೆ ಇದ್ದರೆ ನಾಮ ಬಲದಿಂದ ಪ್ರಸಿದ್ಧವಾದ ಉಆಪಾಹಾರಗೃಹಗಳಿಗೆ ಹೋಗಬೇಡಿ. ಮುಂಬೈನಲ್ಲಿ ಅನೇಕ ಪಾರಂಪರಿಕ ಉಪಾಹಾರಗೃಹಗಳಿವೆ. ಅಲ್ಲಿ ನಿಮ್ಮ ಜೀವನಪೂರ್ತಿ ನೆನೆಸುವಂತಹ ಆಹಾರಗಳು ಸಿಗುತ್ತವೆ. ಹಾಗಿದ್ದರೆ ಇನ್ನಷ್ಟು ವಿವರಗಳು ಬೇಕೇ? ಓದಿ….

Pancham Puriwala

1.ಪಂಚಮ್ ಪೂರಿವಾಲಾ: ದಿನದ ಆರಂಭ ಶುಭಪ್ರದವಾಗಿರಬೇಕೇ?! ಪಂಚಮ್ ಪೂರಿವಾಲಾದಿಂದ ಆರಂಭಿಸಿ. 1853ರಲ್ಲಿ ಆರಂಭವಾದ ಇದು ಅತ್ಯಂತ ರುಚಿಕರವಾದ ಆಲೂ ಭಾಜಿ ಮತ್ತು ಪೂರಿಗಳನ್ನು ಒದಗಿಸುತ್ತದೆ. ಇದರ ರುಚಿಗೆ ಸಾಟಿ ಇಲ್ಲ. ನೋಡಲಿಕ್ಕೆ ಅಷ್ಟು ಸೊಗಸಿಲ್ಲದಿದ್ದರೂ ಪೂರಿಗಳ ರುಚಿ ಮಾತ್ರ ಭರ್ಜರಿಯಾಗಿ ಜನರನ್ನು ಆಕರ್ಷಿಸುತ್ತದೆ. ಪ್ರತಿನಿತ್ಯ ಜನಜಂಗುಳಿ. ಛತ್ರಪತಿ ಶಿವಾಜಿ ಟರ್ಮಿನಸ್ ನಿಂದ 300 ಮೀ. ಗಿಂತ ಕಡಿಮೆ ದೂರದಲ್ಲಿರುವ ಇದು ನೀವು ಸಂದರ್ಶಿಸಲೇಬೇಕಾದ ಸ್ಥಳ!

K. Rustom Ice Cream

2. ಕೆ ರುಸ್ತುಂ ಐಸ್ ಕ್ರೀಂ: ಮುಂಬೈನ ಅತ್ಯಂತ ಜನಪ್ರಿಯ ಐಸ್ ಕ್ರೀಂ ಪಾರ್ಲರ್, ಕೆ ರುಸ್ತುಂ ಐಸ್ ಕ್ರೀಂ ಪಾರ್ಲರ್. ಆದರೆ ನಿಮಗಿದು ಗೊತ್ತೇ? ಇದು 1953 ರಲ್ಲಿ ಶುರುವಾಗಿದ್ದು ಒಂದು ಕೆಮಿಸ್ಟ್ ಮತ್ತು ಜನರಲ್ ಪ್ರಾವಿಷನ್ ಅಂಗಡಿಯಾಗಿ. ಅಲ್ಲೇ ಒಂದು ಸಣ್ಣ ಐಸ್ ಕ್ರೀಂ ಕೌಂಟರ್ ಇತ್ತು. ಕೆಲವೇ ವರ್ಷಗಳಲ್ಲಿ ಕೆಮಿಸ್ಟ್ ಅಂಗಡಿ ಮಾಯವಾಗಿ ಐಸ್ ಕ್ರೀಂ ಪಾರ್ಲರ್ ತಲೆ ಎತ್ತಿತು. ಇಲ್ಲಿ ಐಸ್ ಕ್ರೀಂ ಸ್ಯಾಂಡ್ವಿಚ್ ಗಳು ಭಾರಿ ಸ್ವಾದಿಷ್ಟವಾಗಿರುತ್ತವೆ. ಇದೇನು ಎಂದು ಅಚ್ಚರಿಯೇ? ಹಾಂ ಸ್ವಲ್ಪ ಮಾಹಿತಿ ಕೊಟ್ಟುಬಿಡುತ್ತೇವೆ: ಎರಡು ತೆಳುವಾದ ಗರಿಗರಿ ವೇಫರುಗಳ ನಡುವೆ ದಪ್ಪನೆಯ ಐಸ್ ಕ್ರೀಂ ಪದರವನ್ನು ಇಡಲಾಗಿರುತ್ತದೆ. ತಣ್ಣಗೇ ತಿನ್ನಬೇಕು! ಇದರಲ್ಲಿ ಹಲವಾರು ಸ್ವಾದಗಳಿವೆ. ಇದರಲ್ಲಿ ನೀವು ತಿನ್ನಲೇಬೇಕೆಂದು ನಾವು ಶಿಫಾರಸು ಮಾಡುವುದು: ರಂ ಎನ್ ರೈಸಿನ್, ಪೀಚ್ ಚಾಕೋ ನಟ್ ಮತ್ತು ವಾಲ್ನಟ್ ಕ್ರಂಚ್. ಕೆ ರುಸ್ತುಂ ರವರ ರಾಸ್ಪ್ ಬೆರಿ ಮತ್ತು ಮ್ಯಾಂಗೋ ಡಿಲೈಟ್ ಐಸ್ ಕ್ರೀಂಗಳು ಭಾರಿ ಜನಪ್ರಿಯ. ಈ ಪುರಾತನ ಇರಾನೀ ಐಸ್ ಕ್ರೀಂ ಪಾರ್ಲರ್ ಛತ್ರಪತಿ ಶಿವಾಜಿ ಟರ್ಮಿನಸ್ ನಿಂದ 3 ಕಿ.ಮೀ. ದೂರದಲ್ಲಿರುವ ಚರ್ಚ್ ಗೇಟ್ ನಲ್ಲಿದೆ.

Cafe Leopold

3. ಕೆಫೆ ಲಿಯೋಪೋಡ್: 1871 ರಲ್ಲಿ ಒಂದು ತೈಲ ಅಂಗಡಿಯಾಗಿದ್ದ ಇದು ಮುಂಬೈನ ಅತಿ ಪುರಾತನ ಕೆಫೆ. 2008ರ ಉಗ್ರರ ದಾಳಿಯಲ್ಲಿ ವಿಪರೀತವಾಗಿ ಹಾಳಾಗಿದ್ದರೂ ದಾಳಿಯಾದ ನಾಲ್ಕೇ ದಿನಗಳಲ್ಲಿ ಮತ್ತೆ ತೆರೆಯಿತು. ಇಲ್ಲಿ ಸಂಜೆ ಹೊತ್ತೆ ಸ್ವಲ್ಪ ಏನೋ ತಿಂದು ಹಾರ್ಟೆ ಹೊಡೆಯಲು ಸರಿಯಾದ ಸ್ಥಳ ಎಂದುಕೊಂಡಿದ್ದರೆ ಅದು ತಪ್ಪು ಕಲ್ಪನೆ. ಇಲ್ಲಿ ಸ್ವಾದಿಷ್ಟವಾದ ಅನೇಕ ಮುಖ್ಯ ಆಹಾರಗಳೂ ಸಿಗುತ್ತವೆ. ಇಲ್ಲಿ ಸಿಗುವ ಚೈನೀ ತಿನಿಸುಗಳು ಮತ್ತು ಪಾಸ್ತಾಗಳು ವಿಶೇಷ ಜನಪ್ರಿಯತೆ ಗಳಿಸಿವೆ. ಭಾರತೀಯ ಪ್ರವಾಸಿಗರಿಗಷ್ಟೇ ಅಲ್ಲ, ವಿದೇಶಿ ಪ್ರವಾಸಿಗರಿಗೂ ಈ ಕೆಫೆ ಅಚ್ಚುಮೆಚ್ಚು. ಇದು ಛತ್ರಪತಿ ಶಿವಾಜಿ ಟರ್ಮಿನಸ್ ನಿಂದ 3 ಕಿ.ಮೀ. ದೂರದಲ್ಲಿದೆ.

Sardar Pav Bhaji

4. ಸರ್ದಾರ್ ಪಾವ್ ಭಾಜಿ: ಮುಂಬೈಗೆ ಬಂದಿರೆಂದರೆ ಪಾವ್ ಭಾಜಿ ತಿನ್ನಲೇಬೇಕು; ಅದರಲ್ಲೂ ಸರ್ದಾರ್ ಪಾವ್ ಭಾಜಿ! ಇದು ಮುಂಬೈನಲ್ಲೆ ಅತ್ಯುತ್ತಮ ಪಾವ್ ಭಾಜಿ. ರಸಭರಿತವಾದ ಬೆಣ್ಣೆ ಪಾವ್ ಭಾಜಿ! ಒಳ್ಳೆ ಮಸಾಲೆಯಿಂದ ಕೂಡಿ ರುಚಿಕರವಾಗಿರುತ್ತವೆ. ಇಲ್ಲಿನ ವಿಶೇಷತೆ ಅಮೂಲ್ ಪಾವ್ ಭಾಜಿ. ಬಲ್ಲ ಮೂಲಗಳು ಹೇಳುವ ಪ್ರಕಾರ: ಇಲ್ಲಿ ನಿತ್ಯ 200+ ಕಿಲೋ ಅಮೂಲ್ ಬೆಣ್ಣೆ ಖರ್ಚಾಗುತ್ತದೆ! ಈ ತಿನಿಸೇ ಅಲ್ಲದೆ ಮಸಾಲಾ ಪಾವ್ ಭಾಜಿ ಮತ್ತು ಕ್ಯಾರಮಲ್ ಕಸ್ಟರ್ಡ್ ಕೂಡ ಬಹಳ ಸ್ವಾದಿಷ್ಟವಾಗಿರುತ್ತವೆ. ಮುಂಬೈ ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ 800 ಮೀ. ದೂರದಲ್ಲಿದೆ. ಮುಂಜಾನೆ 2.00 ಗಂಟೆಯವರೆಗೆ ತೆರೆದಿರುತ್ತದೆ.

Bademiya

5. ಬಡೇಮಿಯಾ: ಮುಂಬೈ ಬೀದಿ ತಿನಿಸು ಮಳಿಗೆ 1946 ರಲ್ಲಿ ಆರಂಭವಾಯಿತು. ರುಚಿಯಾದ ಕೆಬಾಬ್ ಗಳು ಬೇಕಿದ್ದರೆ ಬಡೇಮಿಯಾಗೇ ಹೋಗಬೇಕು. ಅಪ್ಪಟ ಮುಘಲಾಯ್ ತಿನಿಸುಗಳನ್ನು ನೀಡುವುದಕ್ಕಾಗಿ ಅನೇಕ ಪ್ರಶಸ್ತಿ/ಪುರಸ್ಕಾರಗಳನ್ನು ಗಳಿಸಿದೆ. ಬಡೇಮಿಯಾಗೆ ಹೋದರೆ ಇವುಗಳನ್ನು ಮರೆಯದಿರಿ: ಚಿಕನ್ ಟಿಕ್ಕಾ ರೋಲ್, ಬೈದಾ ರೋಟಿ, ಚಿಕನ್ ಬಿರ್ಯಾನಿ, ಮಟನ್ ಭೂನಾ ಅಥವಾ ಖೀಮಾ. ಇದು, ಛತ್ರಪತಿ ಶಿವಾಜಿ ಟರ್ಮಿನಸ್ ನಿಂದ 5 ಕಿ.ಮೀ. ದೂರದಲ್ಲಿ ಕೊಲಾಬಾದಲ್ಲಿದೆ. ರಾತ್ರಿ ಬಹಳ ಹೊತ್ತಿನವರೆಗೆ ತೆರೆದಿರುತ್ತದೆ.

 

Originally written by Aakash Karnani. Read here.