ದೇಶದಾದ್ಯಂತ ರೈಲ್ವೇ ನಿಲ್ದಾಣಗಳು ಅತ್ಯಮೋಘ ರೀತಿಯಲ್ಲಿ ಬದಲಾಗುತ್ತಿವೆ, ಸಂಸ್ಕೃತಿಯ ಮೌಲ್ಯಗಳನ್ನು ಮತ್ತು ಶುಚಿತ್ವವನ್ನು ಪುನರ್ ವಿಮರ್ಶಿಸುತ್ತಾ ಒಂದು ’ಉತ್ತಮ ಭಾರತ’ ದಂತೆ ಕಾಣಲು ಆರಂಭವಾಗಿದೆ. ಈ ಬದಲಾವಣೆ ಮಂತ್ರವು ರೈಲೇ ನಿಲ್ದಾಣಗಳ ಮೇಲೆ ಒಂದು ಮೋಡಿಯಂತೆ ಕೆಲಸ ಮಾಡುತ್ತಿದೆ, ಇತ್ತೀಚಿನ ವರೆಗೂ ಕಣ್ಣುಬೇನೆಯಂತೆ ಪರಿಗಣಿಸಿದಂತಹ ಸ್ಥಳಗಳನ್ನು ಒಳಗೊಂಡಂತೆ ಹೆಚ್ಚಿನ ನಿಲ್ದಾಣಗಳು ಉತ್ತಮ ಬದಲಾವಣೆಯಾಗಿವೆ.
1. ಚೆನ್ನೈ ಕೇಂದ್ರೀಯ ರೈಲ್ವೇ ನಿಲ್ದಾಣ – ಕಳೆಹೀನ ಗೋಡೆಗಳು ಮತ್ತು ಆಸಕ್ತಿರಹಿತ ಅಲಂಕಾರಗಳು ಈಗ ಜನರನ್ನು ಇಲ್ಲಿ ಬರಮಾಡಿಕೊಳ್ಳುವುದಿಲ್ಲ, ಇದಕ್ಕಾಗಿ ಚೆನ್ನೈನ ಎನ್.ಐ.ಎಫ್.ಟಿ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ಹೇಳಬೇಕು. ಈ ಕಲಾತ್ಮಕ ಚಿತ್ರಗಳು ತಮಿಳುನಾಡಿನ ಜನರ, ಕಲೆಯ, ಸಂಸ್ಕೃತಿಯ ಮತ್ತು ಪ್ರಕೃತಿಯ ನಿರೂಪಣೆಯಂತಿವೆ.
2. ಬೊರಿವಲಿ ರೈಲ್ವೇ ನಿಲ್ದಾಣ – ಮೇಕ್ ಏ ಡಿಫರೆನ್ಸ್ (ಎಂಏಡಿ) ಎಂಬ ಹೆಸರಿನ ಒಂದು ಸ್ವಯಂಸೇವ ಸಂಘವು ಅದರೊಂದಿಗೆ 500 ಸ್ವಯಂ ಸೇವಕರು ಈ ರೈಲ್ವೇ ನಿಲ್ದಾಣಕ್ಕೆ ಒಂದು ಸಂಪೂರ್ಣ ರೋಮಾಂಚಕ ಅಲಂಕಾರವನ್ನು ನೀಡಿದ್ದಾರೆ.
ಮುಂಬಯಿಯಲ್ಲಿ ಬೊರಿವಲಿ ಪ್ರದೇಶದ ಸೊಗಡನ್ನು ರಚಿಸಿದ್ದಾರೆ, ಎಲ್ಲದಕ್ಕು ಒಂದು ಕಾಳಜಿಯುಕ್ತ ಬದಲಾವಣೆಯನ್ನು ನೀಡಲಾಗಿದೆ – ಮೆಟ್ಟಿಲುಗಳಿಂದ ಬಾಗಿಲವರೆಗೂ ಅಂತೆಯೇ ಟಿಕೆಟ್ ಕೌಂಟರ್ ನಿಂದ ಮೇಲ್ಸೇತುವೆ ವರೆಗೂ.
3. ಸವಾಯಿ ಮಾಧೊಪುರ್ ರೈಲ್ವೇ ನಿಲ್ದಾಣ – ಈ ರೈಲ್ವೇ ನಿಲ್ದಾಣದ ಗೋಡೆಗಳು ಜಾನಪದ ಕಲೆಯ ಆರಾಧ್ಯ ತಾಣವಾಗಿವೆ. ಅದನ್ನು ’ಪ್ರವಾಸಿ-ಸ್ನೇಹಿ ನಿಲ್ದಾಣ’ ಎನ್ನುವ ಬಿರುದಿನಿಂದ ಮಾನ್ಯತೆಗೊಳಿಸಲಾಗಿದೆ.
ಪುನರುತ್ಥಾನ ಯೋಜನೆಗೆ ವರ್ಲ್ಡ್ ವೈಡ್ ಫಂಡ್ (WWF) ನಿಧಿ ಸಹಾಯ ಮಾಡಿದೆ, ಪ್ರದೇಶದ ಪ್ರಾಣಿ ಪಕ್ಷಿ ಸಂಕುಲವನ್ನು ರಚಿಸಲಾಗಿದೆ ಚಿತ್ರಕಲೆ, ಗ್ರಾಫಿಟ್ಟಿ, ಮತ್ತು ಫಲಕಗಳ ಸಹಕಾರದೊಂದಿಗೆ.
4. ಕಿಂಗ್ ಸರ್ಕಲ್ ರೈಲ್ವೇ ನಿಲ್ದಾಣ, ಮುಂಬಯಿ – ಒಂದೊಮ್ಮೆ ಹಳೆಯ ಕಳೆರಹಿತ ನಿಲ್ದಾಣವಾದ, ಕಿಂಗ್’ಸ್ ಸರ್ಕಲ್ ಈಗ ಕಾಂತಿಯುಕ್ತ ಮತ್ತು ವರ್ಣರಂಜಿತವಾಗಿದೆ. 2000ಕ್ಕು ಹೆಚ್ಚಿನ ಜನರನ್ನು ಒಳಗೊಂಡ ಶುಚಿ ಕಾರ್ಯ ಮತ್ತು ಚಿತ್ರಕಲೆಯು ನಿಲ್ದಾಣದ ಎಲ್ಲಾ ಗೋಡೆಗಳಲ್ಲೂ ಸಾಮಾಜಿಕ ಸಂದೇಶಗಳನ್ನು ಹೊಂದಿವೆ.
5. ಭುಬನೇಶ್ವರ್ ರೈಲ್ವೇ ನಿಲ್ದಾಣ – ಬಾಕುಲ್ ಫೌಂಡೇಷನ್ ಉಪಕ್ರಮದ ಮುಖಾಂತರ, ನಿಲ್ದಾಣದ ಖಾಲಿ ಗೋಡೆಗಳಿಗೆ ವರ್ಣರಂಜಿತ ಅರ್ಥವನ್ನು ನೀಡಲಾಗಿದೆ. 13 ವಿಭಿನ್ನ ಸಮಿತಿಗಳೊಂದಿಗೆ ಒಡಿಸ್ಸಾದ ಹಲವಾರು ಜಿಲ್ಲೆಗಳ ಶ್ರೀಮಂತ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ, ಇಂದು ಈ ನಿಲ್ದಾಣವು ಒಂದು’ ಕಲಾ ನಿಲ್ದಾಣ’ ದಂತೆ ಕಾಣುತ್ತದೆ.
6. ಅಲಿಘರ್ ರೈಲ್ವೇ ನಿಲ್ದಾಣ – ಕೆಲವು ವಿಚಿತ್ರ ವಿನ್ಯಾಸಗಳೊಂದಿಗೆ ಈ ರೈಲ್ವೇ ನಿಲ್ದಾಣಕ್ಕೆ ಒಂದು ಅತ್ಯಂತ ವರ್ಣಮಯ ಮತ್ತು ಅಮೋಘ ಅಲಂಕಾರವನ್ನು ನೀಡಲಾಗಿದೆ. ನಿಲ್ದಾಣದ ಪ್ರತಿ ಭಾಗವು ಅಧುನಿಕ ಕಲೆ ಮತ್ತು ಸರ್ವಕಾಲಿಕ ವಿನ್ಯಾಸದ ಒಂದು ಸಮ್ಮಿಶ್ರಣವನ್ನು ಪ್ರತಿಬಿಂಬಿಸುವ ಮೂಲಕ ಅದನು ಸುಂದರ ಮತ್ತು ಶುಭ್ರವಾಗಿ ಕಾಣುವಂತೆ ಮಾಡುತ್ತದೆ.
ನಿಜವಾಗಿಯೂ, ಇಂತಹ ಪ್ರಯತ್ನಗಳು ರೈಲ್ವೇ ನಿಲ್ದಾಣಗಳ ಅಲಂಕಾರದ ಆಲೋಚನೆಯೊಂದಿಗೆ ಭಾರತೀಯ ನಗರಗಳ ಐತಿಹಾಸಿಕತೆಯ ಬಗ್ಗೆ ತಿಳುವಳಿಕೆಯನ್ನು ಹರಡಲು ಒಂದು ಅಮೂಲ್ಯ ಯತ್ನವಾಗಿದೆ.