ಕೋಚಿನ ನ ೫ ಪಾರಂಪರಿಕ ಖಾನಾವಳಿಗಳು

0
1173

By Niji N. G.

ಕೋಚಿನ ಎಲ್ಲಾ ರೀತಿಯ ಅಹಾರ ಶೈಲಿಗಳನ್ನೂ ಹೊಂದಿದೆ – ಚೈನೀಸ್, ಇಟಾಲಿಯನ್, ಉತ್ತರ ಭಾರತ ಮತ್ತು ನೈಜ ಕೇರಳದ ಆಹಾರ. ನಾವು ಈ ನಗರದ ಮೂಲೆ ಮೂಲೆಗಳನ್ನು ಸುತ್ತಿ, ಕೋಚಿನ ನಲ್ಲಿ ಅತ್ಯುತ್ತಮ ರುಚಿಯ ಆಹಾರವನ್ನು ನೀಡುತ್ತಿರುವ ಹಳೇಯ ರೆಸ್ಟೊರೆಂಟ್ ಗಳನ್ನು ಕಂಡೆವು. ಅನೇಕ ದಶಕಗಳಿಂದಲೂ ಕೋಚಿನ್ ನ ಆಹಾರ ಸಂಸ್ಕೃತಿಯ ಭಾಗವಾಗಿರುವ ಕೆಲವು ರೆಸ್ಟೊರೆಂಟ್ ಗಳು ಲ್ಲಿವೆ.

Bharath Coffee House

ಭಾರತ್ ಕಾಫಿ ಹೌಸ್: ಈ ಕಾಫಿ ಹೌಸ್ ಸ್ಥಾಪಿತವಾದ ನಿಖರವಾದ ದಿನ ತಿಳಿದಿಲ್ಲ, ಆದರೆ ಇದರ ಲೂಯಿ ಹಾಲ್ ನಲ್ಲಿರುವ ಫಲಕವನ್ನು ನೋಡಿದರೆ, ಭಾರತ್ ಕಾಫಿ ಹೌ ಅನ್ನು ಮೊದಲ ವಿಶ್ವಯುದ್ಧದ ಸಮಯದಲ್ಲಿ ಆರಂಭಿಸಲಾಯಿತು. ಇದು ಇಡ್ಲಿ, ದೋಸೆ ಗಳಿಂದ ಹಿಡಿದು ಚಪಾತಿ/ಪೂರಿಗಳವರೆಗೆ ಅನೇಕ ದಕ್ಷಿಣ ಭಾರತೀಯ ಖಾದ್ಯಗಳನ್ನು ಮತ್ತು ಉತ್ತರ ಭಾರತದ ಸಮೋಸಗಳಂತಹ ಖಾದ್ಯಗಳನ್ನು ಮತ್ತು ಕೇರಳದ್ದೇ ಆದ ಅಡವನ್ನೂ ನೀಡುತ್ತದೆ. ಎರ್ನಾಕುಲಂ ರೈಲು ನಿಲ್ದಾಣ – ೩ ಕಿಮೀ.

Hotel Kayikkas

ಹೋಟೆಲ್ ಕಾಯಿಕ್ಕಾಸ್: ಇದು ನಗರದ ಅತಿ ಹಳೇಯ ಮಾಂಸಾಹಾರಿ ಖಾನಾವಳಿಯಾಗಿದ್ದು, ತನ್ನ ಚಿಕನ್ ಬಿರ್ಯಾನಿಗೆ ಬಹಳ ಪ್ರಸಿದ್ಧವಾಗಿದೆ. ಇದು ಸಣ್ಣ ನಗರಗಳಲ್ಲಿಯೂ ಮಳಿಗೆಗಳನ್ನು ಹೊಂದಿದೆ, ಆದರೆ ಇದರ ಪ್ರಮುಖ ಶಾಖೆ ಇರುವುದು ಮಟ್ಟಂಚೇರಿಯಲ್ಲಿ. ಹಳೇಯ ಕೋಚಿನಿಗರು ಹೇಳುವಂತೆ ಭಾರತವು ಸ್ವಾತಂತ್ರ್ಯ ಪಡೆದ ನಂತರ ಇದನ್ನು ಒಂದು ಸಣ್ಣ ಅಂಗಡಿಯನ್ನಾಗಿ ಆರಂಭಿಸಲಾಯಿತು, ಆಗಿನಿಂದಲೂ ಅದು ಬಹಳ ಎತ್ತರಕ್ಕೆ ಏರಿದೆ. ಈ ಖಾನಾವಳಿಗೆ ಜನರನ್ನು ಆಕರ್ಷಿಸುವ ಇದರ ಬಿರ್ಯಾನಿಯ ವಿಧಾನವನ್ನು ಇನ್ನೂ ಯಾರೂ ಸರಿಯಾಗಿ ತಿಳಿದಿಲ್ಲ. ಎರ್ನಾಕುಲಂ ರೈಲು ನಿಲ್ದಾಣ – ೧೧ ಕಿಮೀ

Bharat Hotel

ಭಾರತ್ ಹೋಟೆಲ್ (BTH): ೧೯೬೪ರಲ್ಲಿ ಸ್ಥಾಪಿಸಲಾದ ಈ ಖಾನಾವಳಿಯು ನಗರದ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ. ಇದು ಕೋಚಿನ್ ನ ಹಿನ್ನೀರಿನಲ್ಲಿರುವ ಸುಭಾಶ್ ಪಾರ್ಕ್ ನಲ್ಲಿದೆ. ಈ ಖಾನಾವಳಿಯು ಅತ್ಯುತ್ತಮ ಶಾಖಾಹಾರಿ ಖಾದ್ಯಗಳಲ್ಲದೆ, ಶ್ರೀಮಂತಿಕೆಯನ್ನು ಸೂಸುವ ಪರಿಸರ ಮತ್ತು ಸೇವೆಯನ್ನು ನೀಡುತ್ತದೆ. ಇದರ ಕಾಕ್ ಟೇಲ್, ಚಹಾ ಮತು ಬಾಂಬೆ ಚಾಟ್ ಗಳಲ್ಲದೆ, ಇತರ ಶಾಖಾಹಾರಿ ಖಾದ್ಯಗಳು ಬಹಳ ರುಚಿಕರವಾಗಿವೆ. ಕೆಲವೊಮ್ಮೆ ನೀವು ಇಲ್ಲಿ ಯಾವುದೋ ಮಲಯಾಳಿ ನಟರನ್ನೋ ಅಥವಾ ರಾಜಕಾರಣಿಯನ್ನೋ ಕಂಡರೂ ಕಾಣಬಹುದು. ಎರ್ನಾಕುಲಂ ರೈಲು ನಿಲ್ದಾಣ – ೮ ಕಿಮೀ

Hotel Colombo

ಹೋಟೆಲ್ ಕೊಲೊಂಬೊ: ಈ ಖಾನಾವಳಿಯ ಶ್ರೀಲಂಕಾದ ಸಂಬಂಧದ ಬಗ್ಗೆ ಯಾರಿಗೂ ಖಚಿತವಾಗಿ ತಿಳಿದಿಲ್ಲ, ಆದರೆ ಸ್ಥಳೀಯರ ಪ್ರಕಾರ ಇದನ್ನು ೧೯೫೨ ಒಬ್ಬ ಸಿಲೋನೀ ವಲಸಿಗರು ಕಟ್ಟಿರಬಹುದು. ಖಾನಾವಳಿಯ ಹೊರಗಿನ ಫಲಕದಲ್ಲಿ ಹೀಗೆ ಬರೆದಿದೆ: “ಹೊಸ ಪೀಳಿಗೆಗೆ ಸಾಂಪ್ರದಾಯಿಕ ರುಚಿ”, ಅಂದರೆ ಆಧುನಿಕತೆಯ ಲೇಪನವಿರುವ ಸಾಂಪ್ರದಾಯಿಕ ಮಲಯಾಳೀ ಆಹರವನ್ನು ಇಲ್ಲಿ ಸೇವಿಸಬಹುದು. ಇಲ್ಲಿನ ಫಿಶ್ ಕರಿ, ಶೆವೆರ್ಮಾಸ್, ಕೆಬಾಬ್ ಮತ್ತು ಅರೇಬಿಯನ್ ಆಹಾರವನ್ನು ಖಂಡಿತ ಸವಿಯಬೇಕು. ಎರ್ನಾಕುಲಂ ರೈಲು ನಿಲ್ದಾಣ – ೨ ಕಿಮೀ.

Grand Hotel

ಗ್ರಾಂಡ್ ಹೋಟೆಲ್: ೧೯೬೩ರಲ್ಲಿ ಸ್ಥಾಪಿತವಾದ ಈ ಖಾನಾವಳಿಯು ವಿವಿಧ ರೀತಿಯ ಶಾಖಾಹಾರಿ ಮತ್ತು ಮಾಂಸಾಹಾರಿ ಆಹಾರವನ್ನು ಒದಗಿಸುತ್ತದೆ. ಸಾಂಪ್ರದಾಯಿಕ ಕೇರಳದ ಆಹಾರ, ಫಿಶ್ ಕರಿಯಿಂದ, ಸಿರಿಯನ್ ಮತ್ತು ಮುಘಲಾಯ್ ಖಾದ್ಯಗಳವರೆಗೆ, ಇಲ್ಲಿ ಎಲ್ಲವೂ ಲಭ್ಯವಿದೆ. ಕರಿಮೀನ್ ಪೊಳ್ಳಿಚಾಟ್ಟು, ಕ್ರೀಂ ಕ್ಯಾರಾಮೆಲ್, ಫಿಶ್ ಬಿರ್ಯಾನಿ, ಮತ್ತು ನದನ್ ಸದ್ಯಾ ಇಲ್ಲಿ ಖಂಡಿತ ವಿಸಬೇಕಾದ ಖಾದ್ಯಗಳು. ಎರ್ನಾಕುಲಂ ರೈಲು ನಿಲ್ದಾಣ – ೭೦೦ ಮೀ.

LEAVE A REPLY

Please enter your comment!
Please enter your name here