ಗುಜರಾತ್‌ನಲ್ಲಿ ನೋಡಲೇಬೇಕಾದ ಗಿರಿಧಾಮಗಳು

0
729

ಪ್ರವಾಸೋದ್ಯಕ್ಕೆ ಸಂಬಂಧಿಸಿದಂತೆ ಗುಜರಾತ್ ಸಾಕಷ್ಟು ಕೊಡುಗೆಗಳನ್ನು ನೀಡಿದೆ ಮತ್ತು ಅದರ ಗಿರಿಧಾಮಗಳು ಭೇಟಿ ಮಾಡಲು ಒಂದು ಅಂತಹ ಕಾರಣವಾಗಿದೆ. ಆದ್ದರಿಂದ, ಇನ್ನು ಕಾಯುವುದು ಬೇಡ, ಕೂಡಲೇ ನಿಮ್ಮ ಲಗೇಜ್ ತುಂಬಿಸಿಕೊಳ್ಳಿ ಮತ್ತು ಗುಜರಾತ್ ಎಂಬ ರಾಜ್ಯದ ಅತ್ಯಂತ ಅದ್ಭುತವಾದ ಬಹುಮುಖ ಸ್ಥಳವಿವರಣೆ ಮತ್ತು ದೃಶ್ಯಾವಳಿಗಳನ್ನು ಅನ್ವೇಷಿಸಿ.

ಸಪೂತರ ಬೆಟ್ಟಗಳು

Saputara Hills
ಮಹಾರಾಷ್ಟ್ರದ ಗಡಿಯಲ್ಲಿರುವ, ಹಿತಕರ ಹವಾಮಾನವನ್ನು ಹೊಂದಿರುವ ಮತ್ತು ಆಕರ್ಷಕ ದೃಶ್ಯಾವಳಿಗಳನ್ನು ಹೊಂದಿರುವ ಸಪೂತರ ಬೆಟ್ಟಗಳು ಅತೀವ ವ್ಯಾಪಾರೀಕರಣಕ್ಕೆ ಇನ್ನೂ ಒಳಪಟ್ಟಿಲ್ಲ. ಇದು ಆದಿವಾಸಿ ಸಂಸ್ಕೃತಿಯನ್ನು ಉಳಿಸಿಕೊಂಡಿದ್ದು ಬುಡಕಟ್ಟು ಕಲೆಯನ್ನು ಪ್ರದರ್ಶಿಸುವಂತಹ ಕಲಾಗ್ರಾಮದಲ್ಲಿ ಇದನ್ನು ಕಾಣಬಹುದು. ಸಪೂತರ ಕೆರೆಯ ದಡದಲ್ಲಿನ ನಡಿಗೆಯು ಅತ್ಯಂತ ಆಹ್ಲಾದಕರವಾಗಿರುತ್ತದೆ. ಇಲ್ಲಿ ನೀವು ದೋಣಿ ವಿಹಾರ ಕೂಡ ಮಾಡಬಹುದು ಅಥವಾ ಕೆರೆ ಉದ್ಯಾನವನಕ್ಕೆ ಭೇಟಿ ನೀಡಬಹುದು. ಪುಷ್ಪಕ್ ಹಗ್ಗದ ಸೇತುವೆಯು ಕಣಿವೆಯ ಅದ್ಭುತ ದೃಶ್ಯವನ್ನು ನೀಡುತ್ತದೆ. ವಾನ್ಸ್‌ಡ ರಾಷ್ಟ್ರೀಯ ಉದ್ಯಾನವನ ಮತ್ತು ಪೂರ್ನ ಪಕ್ಷಿಧಾಮವನ್ನು ನೋಡಲೇಬೇಕು.
ಸಮೀಪದ ರೈಲುಮಾರ್ಗ: ವಾಘೈ(50 ಕಿ.ಮೀ)

ವಿಲ್ಸನ್ ಬೆಟ್ಟ

Wilson Hills
ಪುರಾತನ ವಿಲ್ಸನ್ ಬೆಟ್ಟವು ಪಂಗರ್ಬಾರಿ ವನ್ಯಜೀವಿ ಅಭಯಾರಣ್ಯ ಸಮೀಪದಲ್ಲಿದೆ. ಇಲ್ಲಿಂದ ಕಾಣುವ ಅರಬ್ಬೀ ಸಮುದ್ರದ ದೃಶ್ಯವು ಒಂದು ವಿಶಿಷ್ಟ ಅನುಭವವಾಗಿದೆ. ಶಂಕರ್ ಜಲಪಾತ ಮತ್ತು ಬಿಲ್ಪುಡಿ ಜಲಪಾತಗಳು ತಪ್ಪದೇ ನೋಡಬೇಕಾದ ಸ್ಥಳಗಳು

ಸಮೀಪದ ರೈಲುಮಾರ್ಗ: ವಲ್ಸದ್(60 ಕಿ.ಮೀ.)

ಡಾನ್ ಬೆಟ್ಟ

Don Hills
ದ್ರೋಣಾಚಾರ್ಯರಿಂದಾಗಿ ಹೆಸರು ಪಡೆದ ಡಾನ್ ಬೆಟ್ಟವು ಅಹ್ವ ಮತ್ತು ಸಪೂತರ ಬೆಟ್ಟಗಳಿಗೆ ಸಮೀಪದಲ್ಲಿದೆ. ಆಹ್ಲಾದಕರ ಹವಾಮಾನ ಮತ್ತು ಮನಮೋಹಕ ದೃಶ್ಯಾವಳಿಗಳು ನಿಸರ್ಗ ಪ್ರಿಯರನ್ನು ಕೈಬೀಸಿ ಕರೆಯುತ್ತದೆ. ಈ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ಹೊಸ ರಸ್ತೆಯಿಂದಾಗಿ ಗಿರಿಧಾಮವನ್ನು ಸುಲಭವಾಗಿ ತಲುಪಬಹುದು.
ಸಮೀಪದ ರೈಲುಮಾರ್ಗ: ಕೇವ್ಡಿ(130 ಕಿ.ಮೀ.)

 

Originally written by Uditi Gupta. Read here.

LEAVE A REPLY

Please enter your comment!
Please enter your name here