ಮತ್ತಷ್ಟು ಆಜ್ಞಾತ ಆರ್.ಎ.ಸಿ ನಿಯಮಗಳ ಬಗ್ಗೆ ತಿಳಿದುಕೊಳ್ಳಿ

0
7097

ರೋಮಾಂಚನಕಾರಿ ಕಥಾ ಹಂದರವಿರುವ ಪತ್ತೇದಾರಿ ಕಾದಂಬರಿ ಓದುವುದೆಂದರೆ ನಿಮಗೆ ಇಷ್ಟವೇ? ಹಾಗಿದ್ದರೆ, ಕೆಲವು ಭಾರತೀಯ ರೈಲ್ವೇ ನಿಯಮಗಳು ಮತ್ತು ಷರತ್ತುಗಳನ್ನು ಓದುವಾಗಲೂ ಸಹ ನಿಮಗೆ ಅದೇ ರೀತಿಯ ಅನುಭವವಾಗಬಹುದು. ಅಚ್ಚರಿ ಏನು ಇಲ್ಲ, ಸಾಮಾನ್ಯ ರೈಲು ಪ್ರಯಾಣೀಕರ ಮನಸಿನಲ್ಲಿ ಸಾವಿರಾರು ಪ್ರಶ್ನೆಗಳಿರುತ್ತವೆ. ಆರ್.ಎ.ಸಿ (ರದ್ದತಿಗಳ ಮೇಲೆ ಕಾಯ್ದಿರಿಸುವಿಕೆ) ಟಿಕೆಟ್ ನಿಯಮಗಳು. ಆರ್.ಎ.ಸಿಯ ಸಾಮಾನ್ಯ ನಿಯಮಗಳ ಬಗ್ಗೆ ಮಾತನಾಡುವ ನೂರಾರು ವೆಬ್ ಸೈಟುಗಳುಗಳಿವೆ, ಆದರೆ ಪ್ರಯಾಣಿಕರಿಗೆ ತಿಳಿಯದೇ ಇರುವ ಹಲವಾರು ಮುಸುಕು ಪ್ರದೇಶಗಳಿವೆ. ರೈಲ್ ಯಾತ್ರಿಯಲ್ಲಿ, ನಾವು ಇಂತಹ ಕೆಲವು ಪ್ರಶ್ನೆಗಳನ್ನು ಉತ್ತರಿಸುವ ಮೂಲಕ ರೈಲು ಪ್ರಯಾಣಿಕರಿಗೆ ಸಹಕರಿಸಬಯಸುತ್ತೇವೆ. ನೆನಪಿರಲು, ಇದನ್ನು ಬಹಳ ಸರಳವಾಗಿ ಹೇಳಲು ಪ್ರಯತ್ನಿಸುತ್ತವೆ.

ಒಂದು ಸಾಮಾನ್ಯ ಎಕ್ಸ್ ಪ್ರೆಸ್ ರೈಲಿನಲ್ಲಿ ಆರ್.ಎ.ಸಿ ಕೋಟ ಅಡಿಯಲ್ಲಿ ಎಷ್ಟು ಸೀಟುಗಳನ್ನು ಕಾಯ್ದಿರಿಸಲಾಗಿರುತ್ತದೆ?

RAC Quota
ಒಂದು ಸಾಮಾನ್ಯ ಎಕ್ಸ್ ಪ್ರೆಸ್ ರೈಲಿನಲ್ಲಿ 142 ಟಿಕೆಟುಗಳನ್ನು ಆರ್.ಎ.ಸಿ ಕೋಟದ ಅಡಿಯಲ್ಲಿ ಇರಿಸಲಾಗಿರುತ್ತದೆ. ವಿವರಣೆ (ನಿಮಗೆ ಅರ್ಥವಾಗಲು ಅನುಕೂಲವಾಗಲೆಂದು, ನಾವು ಸ್ಲೀಪರ್ ಕೋಚ್ ಅನ್ನು ಉದಾಹರಣೆಯಾಗಿ ತೆಗೆದುಕೊಳ್ಳುತ್ತೇವೆ): ಒಂದು ಸಾಮಾನ್ಯ ಮಟ್ಟದಲ್ಲಿ ಯಾವುದೇ ಎಕ್ಸ್ ಪ್ರೆಸ್ ರೈಲಿನಲ್ಲಿ 12 ಸ್ಲೀಪರ್ ಕೋಚ್ ಇರುತ್ತವೆ. ಪ್ರತಿ 12 ಸ್ಲೀಪರ್ ಕೋಚಿನಲ್ಲಿಯೂ 72 ಸೀಟುಗಳಿರುತ್ತವೆ, ಹಾಗಾಗಿ ಒಟ್ಟು ಲಭ್ಯರಿವ ಸೀಟುಗಳೆಂದರೆ 864 (72×12). ಯಾವುದೇ ಎಕ್ಸ್ ಪ್ರೆಸ್ ರೈಲಿನಲ್ಲಿ, ಆರ್.ಎ.ಸಿ ಕೋಟದ ಅಡಿಯಲ್ಲಿ ಕಾಯ್ದಿರಿಸಿದ ಒಟ್ಟು ಬರ್ಥುಗಳೆಂದರೆ 71. ಈಗ, ಈ ಪ್ರತಿಯೊಂದು 71 ಬರ್ಥುಗಳನ್ನು ಇಬ್ಬರು ಪ್ರಯಾಣಿಕರು ಹಂಚಿಕೊಳ್ಳುತ್ತಾರೆ, ಹಾಗಾಗಿ ಸಾಂಪ್ರದಾಯಿಕವಾಗಿ ಒಟ್ಟು ಆರ್.ಎ.ಸಿ ಲೆಕ್ಕವು 142 (71×2).

ನೀವು ಆರ್.ಎ.ಸಿ ಟಿಕೆಟಿನಲ್ಲಿ ಪ್ರಯಾಣ ಮಾಡಬಹುದೇ?

Berth Sharing on RAC
95% ಕ್ಕು ಹೆಚ್ಚಿನ ಸನ್ನಿವೇಶಗಳಲ್ಲಿ ನೀವು ಪ್ರಯಾಣ ಮಾಡುವುದು ಖಚಿತ, ಅದಾಗ್ಯೂ ನೀವು ನಿಮ್ಮ ಬರ್ಥನ್ನು ಮತ್ತೊಬ್ಬ ಪ್ರಯಾಣಿಕನೊಡನೆ ಹಂಚಿಕೊಳ್ಳಬೇಕಾಗಿರುತ್ತದೆ. ನಿಮಗೆ ತಿಳಿದಂತೆ, ಸೈಡ್ ಲೋಯರ್ ಬರ್ಥ ಸೀಟುಗಳನ್ನು ಆರ್.ಎ.ಸಿ ಕೋಟದ ಅಡಿಯಲ್ಲಿ ನಿಗದಿಪಡಿಸಲಾಗಿರುತ್ತದೆ, ಒಂದೊಮ್ಮೆ ಟಿಕೆಟ್ ಕನ್ಪರ್ಮ್ ಆಗದಿದ್ದರೆ ಅಥವಾ ರೈಲಿನಲ್ಲಿ ಯಾವುದೇ ಸ್ಥಳಾವಕಾಶವಿಲ್ಲದಿದ್ದರೆ ಅದನ್ನು ಇಬ್ಬರು ಹಂಚಿಕೊಳ್ಳಬೇಕು. ಆದರೆ ಕೆಲವು ಸನ್ನಿವೇಶಗಳಲ್ಲಿ ನೀವು ಪ್ರಯಾಣ ಮಾಡಲಾಗುವುದಿಲ್ಲ, ಉತ್ತರವನ್ನು ಕೆಳಗೆ ಓದಿ.

ಆರ್.ಎ.ಸಿ ಟಿಕೆಟನ್ನು ವೇಟ್-ಲಿಸ್ಟ್ ಗೆ ಕಳುಹಿಸುತ್ತಾರೆಯೇ?

RAC to waiting list
ಹೌದು, ಅದಾಗ್ಯೂ ಇದು ಬಹಳ ವಿರಳವಾಗಿ ಸಂಭವಿಸುತ್ತದೆ, ಆದರೂ ಆರ್.ಎ.ಸಿ ಟಿಕೆಟ್ ಅನ್ನು ವೇಟ್-ಲಿಸ್ಟ್ ಗೆ ಕಳುಹಿಸಬಹುದು. ಒಂದುವೇಳೆ ರೈಲುಗಳ ಕೆಲವು ಕೋಚುಗಳು ಲಭ್ಯವಿಲ್ಲದಾಗ ಮತ್ತು ಸೀಟುಗಳ ಅಭಾವವಿದ್ದರೆ ಇಂತಹ ಕ್ರಮವನ್ನು ತೆಗೆದುಕೊಳ್ಳಬಹುದು. ಒಂದೊಮ್ಮೆ, ರೈಲಿನಲ್ಲಿ 12 ಕೋಚುಗಳಿವೆ ಎಂದುಕೊಳ್ಳಿ ಮತ್ತು ಅವುಗಳ 1 ಕೋಚಿನಲ್ಲಿ ತಾಂತ್ರಿಕ ಸಮಸ್ಯೆ ಬಂದರೆ ಹಾಗೂ ಪ್ರಯಾಣ ಸಾಧ್ಯವಿಲ್ಲದಿದ್ದರೆ. ಹಾಗಾಗಿ, ಕನ್ಪರ್ಮ್ ಆದ ಟಿಕೆಟಿನ ಪ್ರಯಾಣಿಕರು ಒಂದು ಕಡಿಮೆ ಕೋಚಿನೊಂದಿಗೆ ಪ್ರಯಾಣಿಸಬೇಕಾಗಿರುತ್ತದೆ. ಇಂತಹ ಅತಿ ವಿರಳ ಸಂದರ್ಭದಲ್ಲಿ ಆರ್.ಎ.ಸಿ ಟಿಕೆಟನ್ನು ವೇಟ್-ಲಿಸ್ಟಿಗೆ ಕಳುಹಿಸಬಹುದು.

ಆರ್.ಎ.ಸಿ ಟಿಕೆಟುಗಳಲ್ಲಿ ಯಾವುದಾದರೂ ವರ್ಗಗಳಿವೆಯೇ?
ಸ್ಪಷ್ಟವಾಗಿ ಹಾಗಿರುವುದಿಲ್ಲ, ಆದರೆ ಆರ್.ಎ.ಸಿ ಟಿಕೆಟ್ ಕೋಟದಲ್ಲಿ ಒಂದು ಮಾನ್ಯ ತುರ್ತು ಕೋಟ ಇರುತ್ತದೆ. ಈ ತುರ್ತು ಕೋಟದಿಂದ ವಿಐಪಿಗಳು, ರೈಲ್ವೇ ಸಿಬ್ಬಂದಿ ಇತ್ಯಾದಿಗಳು ಟಿಕೆಟ್ ಬುಕ್ ಮಾಡಬಹುದು. ಅವುಗಳನ್ನು ಕೆಲವು ಸನ್ನಿವೇಶಗಳಲ್ಲಿ ಕನ್ಪರ್ಮ್ ಮಾಡುವುದಿಲ್ಲ. ಹೆಚ್ಚಿನ ಸಮಯದಲ್ಲಿ ಈ ಟಿಕೆಟ್ ಗಳನ್ನು ಕನ್ಪರ್ಮೇಷನ್ ಗಾಗಿ ಸರಿತಿಯಲ್ಲಿರಿಸಿದಾಗ ಸಾಮಾನ್ಯ ಆರ್.ಎ.ಸಿ ಬುಕಿಂಗ್ ನಲ್ಲಿಯೇ ಆಧ್ಯತೆ ನೀಡಲಾಗುತ್ತದೆ.

ಆರ್.ಎ.ಸಿ ಟಿಕೆಟ್ ಗಳ ಕನ್ಪರ್ಮೇಶನ್ ಯಾವಾಗಲು ಸರಣಿ ಸಂಖ್ಯೆಗಳನ್ನು ಅನುಸರಿಸುತ್ತದೆಯೇ?
ಇಲ್ಲ, ಎಲ್ಲ ಸನ್ನಿವೇಶಗಳಲ್ಲಿ ಅಲ್ಲ! ಆರ್.ಎ.ಸಿ ಕೋಟದಲ್ಲಿ ತುರ್ತು ಕೋಟ ಇರುವುದನ್ನು ನೀವು ಗಮನಿಸಿರಬಹುದು. ಹಾಗಾಗಿ ಆರ್.ಎ.ಸಿ 1 ಅನ್ನು ಮೊದಲಿಗೆ ಕನ್ಪರ್ಮ್ ಮಾಡಬಹುದು, ಬಹಳ ವಿರಳ ಸಮಯದಲ್ಲಿ ತುರ್ತು ಕೋಟದ ಕಾರಣದಿಂದಾಗಿ ಆರ್.ಎ.ಸಿ ಯಲ್ಲಿನ ಕೆಳವರ್ಗದ ಸರಣಿ ಸಂಖ್ಯೆಯಲ್ಲಿನ ಒಂದು ಟಿಕೆಟ್ ಕನ್ಪರ್ಮ್ ಆಗಬಹುದು.

ಒಂದುವೇಳೆ ನಿಮ್ಮ ಬಳಿ ಆರ್.ಎ.ಸಿ ಟಿಕೆಟ್ ಇದ್ದರೆ, ನಿಮಗೆ ಯಾವಾಗಾಲೂ ಸೈಡ್ ಲೋಯರ್ ಬರ್ಥ್ ಸೀಟುಗಳನ್ನೇ ನಿಗದಿಪಡಿಸಲಾಗುತ್ತದೆಯೇ?
ಇದು ಸಾಮಾನ್ಯ ವಿದಿ; ಅದಾಗ್ಯೂ, ಹಲವಾರು ಸನ್ನಿವೇಶಗಳಲ್ಲಿ ಯಾವಾಗ ಕನ್ಪರ್ಮ್ ಆದ ಟಿಕೆಟ್ ಗಳ ರದ್ದುಪಡಿಸುವಿಕೆ ಪ್ರಮಾಣವು ಹೆಚ್ಚಿರುವ ಸಮಯದಲ್ಲಿ ಮಿಡಲ್ ಅಥವಾ ಅಪ್ಪರ್ ಬರ್ಥ್ ಗಳನ್ನು ಸಹ ಪ್ರಯಾಣಿಕರಿಗೆ ನಿಗದಿಪಡಿಸಬಹುದು. ಇದು ಅಪರೂಪವಾಗಿ ಸಂಭವಿಸುತ್ತದೆ.

ಆರ್.ಎ.ಸಿ ಟಿಕೆಟೂಗಳಿರುವ ಕೆಲವು ಪ್ರಯಾಣಿಕರಿಗೆ ಒಂದೇ ಬರ್ಥನ್ನು ನಿಗದಿಪಡಿಸಿರುತ್ತಾರೆ ಏಕೆ?

RAC Solo Berth
ಕೆಲವು ಸಯಮದಲ್ಲಿ ಆರ್.ಎ.ಸಿ ಟಿಕೆಟ್ ಇರುವ ವ್ಯಕ್ತಿಗೆ ಒಂದು ಬರ್ಥ್ ಅನ್ನು, ಯಾವುದೇ ಸಾಮಾನ್ಯ ಹಂಚಿಕೆ ಇಲ್ಲದೆ ನಿಗದಿಪಡಿಸಿರುವುದನ್ನು ನೀವು ನೋಡಿರುತ್ತೀರಿ. ಇಂತಹ ಒಂದು ಸಂತಸದ ಸನ್ನಿವೇಶ ಒದಗಿ ಬರುವ ಕಾರಣವೆಂದರೆ, ಯಾವಾಗ ಒಬ್ಬ ವ್ಯಕ್ತಿಗೆ ಕೊನೆಯ ಸಮಯದಲ್ಲಿ ಮತ್ತು ಮರು-ನಿಗದಿಗೆ ಸಮಯವಿಲ್ಲದ ಸನ್ನಿವೇಶದಲ್ಲಿ ಟಿಕೆಟ್ ಕನ್ಪರ್ಮ್ ಆದಾಗ ಅದೇ ಸೀಟ್ ಆತನಿಗೆ ನಿಗದಿಯಾಗುತ್ತದೆ.

ಟಿಕೆಟ್ ಗಳು ಏತಕ್ಕಾಗಿ ಎರಡು ಆರ್.ಎ.ಸಿ ಸಂಖ್ಯೆಗಳನ್ನು ತೋರಿಸುತ್ತದೆ. ಉದಾ: ಆರ್.ಎ.ಸಿ15/ಆರ್.ಎ.ಸಿ9?
ಇಂತಹ ಪರಿಸ್ಥಿತಿಯಿಂದ ಹಲವಾರು ಮಂದಿ ಗೊಂದಲಗೊಳ್ಳುತ್ತಾರೆ. ಹಾಗೆಂದರೆ ನೀವು ಬುಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಿದ ನಂತರ ನೀವು ಆರ್.ಎ.ಸಿ 15 ರಲ್ಲಿದ್ದಿರಿ, ಆದರೆ ಪ್ರಕ್ರಿಯೆ ಮುಗಿಯುವ ಅವಧಿಯಲ್ಲಿ ಇನ್ನೂ 6 ಟಿಕೆಟ್ ಗಳು ರದ್ದಾಗಿವೆ, ಹಾಗಾಗಿ ನಿಮ್ಮನ್ನು ಆರ್.ಎ.ಸಿ 9 ಕ್ಕೆ ಈಗಿನ ಪ್ರಸ್ತುತ ಸ್ಥಾನಕ್ಕೆ ಮುಂದೂಡಲಾಗಿದೆ ಎಂದರ್ಥ.

ಒಂದೊಮ್ಮೆ ನೀವು ಮತ್ತೊಬ್ಬ ವ್ಯಕ್ತಿಯೊಡನೆ ಪ್ರಯಾಣಿಸುತ್ತಿದ್ದರೆ (ಒಂದೇ ಪಿಎನ್.ಅರ್) ಮತ್ತು ಆರ್.ಎ.ಸಿ 3 ಮತ್ತು 4 ಇದ್ದರೆ, ನೀವು ಒಟ್ಟಿಗೆ ಕುಳಿತುಕೊಳ್ಳುತ್ತೀರಾ?

Family travel on RAC quota
ಆರ್.ಎ.ಸಿ ಟಿಕೆಟುಗಳು ರದ್ದತಿಗಳು ಇದ್ದರೆ ಮಾತ್ರವೇ ಕನ್ಪರ್ಮ್ ಆಗುತ್ತವೆ. ಹಾಗಾಗಿ, ನಿಮ್ಮ ಟಿಕೆಟೂಗಳ ಪ್ರಗತಿಯು ರದ್ದತಿಯ ಮೇಲೆ ಆಧಾರ ಪಟ್ಟಿರುತ್ತವೆ. ಅದಾಗ್ಯೂ, ಭಾರತೀಯ ರೈಲ್ವೇ ಸಾಮಾನ್ಯವಾಗಿ ಒಂದೇ ಪಿ.ಎನ್.ಆರ್ ಇರುವವರಿಗೆ ಒಂದೇ ಸ್ಥಳದಲ್ಲಿ ಟಿಕೆಟ್ ಗಳನ್ನು ನಿಗದಿಪಡಿಸಲು ಪ್ರಯತ್ನಿಸುತ್ತದೆ. ಹಾಗಾಗಿ, ನೀವು ಒಂದೇ ಸೀಟನ್ನು ಹಂಚಿಕೊಳ್ಳುವ ಸಾಧ್ಯತೆ ಇರುತ್ತದೆ.

ಒಂದು ಆರ್.ಎ.ಸಿ ಟಿಕೆಟ್ ನ ಕನ್ಪರ್ಮೇಶನ್ ಅನ್ನು ಊಹೆ ಮಾಡುವ ಸಾಧ್ಯತೆ ಇದೆಯೇ?
ಹೌದು, ಅದನ್ನು ಊಹೆ ಮಾಡಬಹುದು ಮತ್ತು ಅದನ್ನೇ ರೇಲ್ ಯಾತ್ರಿಯಲ್ಲಿ ನಾವು ಮಾಡುವುದು. ಆದರೆ ಅಂತಹ ಒಂದು ವಿಶ್ಲೇಷಣೆಗೆ, ಜನಸಂದಣಿಯ ಒಂದು ವಿವರಣಾತ್ಮಕ ವಿಶ್ಲೇಷಣೆ, ರದ್ದತಿಯ ಇತಿಹಾಸ ಮತ್ತು ರೈಲುಗಳ ಆನ್-ಟೈಮ್ ಕಾರ್ಯಾಚರಣೆಯ ಅಗತ್ಯವಿರುತ್ತದೆ.

LEAVE A REPLY

Please enter your comment!
Please enter your name here