ಚಂಡಿಗಡ್ ನಲ್ಲಿನ ಪಾಕಶಾಲೆಯ ದೃಶ್ಯಗಳು ಇತ್ತೀಚಿನ ಸಮಯದಲ್ಲಿ ಹೆಚ್ಚಿನ ಆವೇಗವನ್ನು ಪಡೆದಿವೆ. ಶ್ರೀಮಂತ ರೆಸ್ಟೋರೆಂಟ್ ಗಳಿಂದ ಹಿಡಿದು ರಸ್ತೆ-ಬದಿಯ ಮಳಿಗೆಗಳ ವರೆಗೆ, ನಗರವು ಹೆಚ್ಚಿನ ಕೊಡುಗೆಯನ್ನು ಒದಗಿಸುತ್ತದೆ! ನಗರದಲ್ಲಿ ನೀವು ಹೋಗಬಹುದಾದ ಕೆಲವು ಆಯ್ಕೆಗಳನ್ನು ನಾವೀಗ ನೋಡೋಣ.
ಸಿಂಧಿ ಸ್ವೀಟ್ಸ್: ಸೆಕ್ಟಾರ್ 17 ಮಾರುಕಟ್ಟೆಯಲ್ಲಿ ಸ್ಥಾಪಿತವಾಗಿದ್ದು , ನಿಮ್ಮ ದಿನವನ್ನು ಬಾಯಿಯಲ್ಲಿ ನೀರುರಿಸುವ ಚನ್ನ ಬಟೂರದೊಂದಿಗೆ ಹಾಗು ಒಂದು ಸಾಂಪ್ರದಾಯಿಕ ಮಣ್ಣಿನ ಗಡಿಗೆಯಲ್ಲಿ ಬಡಿಸುವ ತಂಪಾದ ಸಿಹಿ ಲಸ್ಸಿಯ ಒಂದು ಲೋಟದೊಂದಿಗೆ ಪ್ರಾರಂಭಿಸಲು ಇದು ಒಂದು ಒಳ್ಳೆಯ ಆಯ್ಕೆ. ಬುಂದಿ ಕೆ ಲಡ್ಡು ಇಲ್ಲಿ ತಿನ್ನಲೇ ಬೇಕಾದ ಮತ್ತೊಂದು ಪದಾರ್ಥ.
ನಿಕ್ ಬೇಕರ್ಸ್: ಈ ಯುರೋಪಿನ ವಿನ್ಯಾಸದ ಬೇಕರಿ-ವ-ಕೆಫೆಯು ಸುಮಾರು ಒಂದು ದಶಕದಿಂದ ಸ್ಥಳಿಯರ ಒಂದು ಅಚ್ಚುಮೆಚ್ಚಿನ ಸ್ಥಳ. ಇದು ವಿವಿಧ ಬಗೆಯ ಕ್ವಿಚಸ್, ಟಾರ್ಟ್ಸ್, ಪೇಸ್ಟ್ರೀಸ್ ಮತ್ತು ಕೇಕ್ ಗಳನು ಒದಗಿಸುತ್ತದೆ. ಅವರ ಫ್ರೂಟ್ ಪಂಚ್ ಅನ್ನು ಆಸ್ವಾದಿಸಲೇ ಬೇಕು, ಅದರಲ್ಲಿ ಋತುವಿಗೆ ತಕ್ಕ ತಾಜಾ ಹಣ್ಣಗಳು, ಕ್ರೀಮ್ ಮತ್ತು ಸಕ್ಕೆರೆ ಪಾಕವು ತುಂಬಿರುತ್ತದೆ! ಇತರೆ ವಿಶೇಷತೆಗಳೆಂದರೆ ಪಾಸ್ತಾ ಮತ್ತು ಮಟನ್
ಪಾಲ್ ಡಾಬಾ: ಸೆಕ್ಟಾರ್ 28ರಲ್ಲಿ ಸ್ಥಾಪಿತವಾಗಿರುವ ಇದು ಅತ್ಯಂತ ಹಳೆಯ ಡಾಬಾಗಳಲ್ಲಿ ಒಂದು ಆದರೆ ಸುತ್ತಲೂ ಮಂಚಗಳಿರುವ ಡಾಬಾಗಳಂತಲ್ಲ! ಇದರಲ್ಲಿ ಆರಾಮದಾಯಕ ಕುರ್ಚಿಗಳಿವೆ ಹಾಗು ಅಧಿಕೃತ ಪಂಜಾಬಿ ಆಹರವನ್ನು ಬಡಿಸಲಾಗುತ್ತದೆ. ಇಲ್ಲಿ ಬಡಿಸುವ ಚಿಕನ್, ದಾಲ್ ಮಖನಿ, ಕಡಾಯಿ ಪನ್ನೀರ್ ಹಾಗು ಆಲೂ ಪರಾಟಗಳು ಬಹಳ ರುಚಿಕರ.
ಸೇಥಿ ಡಾಬಾ: ಇದು ಮಧ್ಯರಾತ್ರಿಯಲ್ಲಿ ಹಸಿವಾಗುವ ಇರುಳಾತ್ಮಗಳಿಗೆ ಒಂದು ಸಂರಕ್ಷನಿದ್ದ ಹಾಗೆ! ಚಂಡಿಗಡ-ಅಂಬಾಲ ಹೆದ್ದಾರಿಯಲ್ಲಿ (ಜಿರಾಕ್ಪುರ್ ಹತ್ತಿರ)ಸ್ಥಾಪಿತವಾಗಿದೆ. ಮುಖ್ಯ ನಗರದಿಂದ ಕೇವಲ 20 ನಿಮಿಷಗಳ ದೂರದಲ್ಲಿ. ನೀವು ಈ ಸ್ಥಳದಲ್ಲಿ ಎಲ್ಲಾ ಕಡೆ ಮಂಚಗಳನ್ನು ಕಾಣುತ್ತೀರಿ ಹಾಗು ಖಾದ್ಯಪಟ್ಟಿಯಲ್ಲಿರುವ ಡಫ್ಫಾಲಿಯು ನಿಮಗೆ ನಿಜವಾದ ಪಂಜಾಬಿ ಅನುಭವವನ್ನು ನೀಡುತ್ತದೆ. ಇಲಾಯ್ಚಿ ವಾಲಿ ಚಾಯ್, ಮಿಸ್ಸಿ ರೋಟಿ, ಸರ್ಸೊ ಕ ಸಾಗ್ ಹಾಗು ಮಕ್ಕಿ ಕಿ ರೋಟಿ ಇಲ್ಲಿನ ವಿಶೇಷತೆಗಳು.
ಮೋನಿಕಾಸ್: ಅಲಂಕಾರವನ್ನು ನೋಡಬೇಡಿ! ಸೆಕ್ಟಾರ್ 8 ಮಾರುಕಟ್ಟೆಯಲ್ಲಿ ಸ್ಥಾಪಿತವಾಗಿರುವ, ಇದು ನಿಮಗೆ ಹೊರಗಿನಿಂದ ಅಷ್ಟು ಪ್ರಭಾವಶಾಲಿಯಾಗಿ ಕಾಣುವುದಿಲ್ಲ ಆದರೆ ರುಚಿಕರವಾದ ಕೇಕ್ಸ್ ಮತ್ತು ಪೇಸ್ಟ್ರೀಸ್ ಅನ್ನು ಒದಗಿಸುತ್ತದೆ. ಮೋನಿಕಾಸ್ ನಲ್ಲಿನ ರೆಡ್ ವೆಲ್ವೆಟ್ ಕೇಕ್ ಹಾಗು ಚಾಕಲೆಟ್ ಕೇಕ್ ಅನ್ನು ಕಂಡಿತವಾಗಿಯೂ ಮಿಸ್ ಮಾಡಿಕೊಳ್ಳಬಾರದು.