ಹೊಸ ಲಗೇಜ್ ನಿಯಮಗಳು

0
1677
Kannada blog Indian railway

ಏಸಿ ಮೊದಲ ದರ್ಜೆಯ ಪ್ರಯಾಣಿಕರು ಉಚಿತವಾಗಿ 70 ಕೆಜಿ ಲಗೇಜ್ ಅನ್ನು ಮತ್ತು ಪಾರ್ಸೆಲ್ ಕಚೇರಿಯಲ್ಲಿ ಹೆಚ್ಚುವರಿ ತೂಕಕ್ಕೆ ಪಾವತಿಸುವ ಮೂಲಕ ಗರಿಷ್ಠ 150 ಕೇಜಿಗಳನ್ನು ಹೊತ್ತೊಯ್ಯಬಹುದು.

ಏಸಿ ಟೂ ಟೈರ್ ಪ್ರಯಾಣಿಕರಿಗೆ ಉಚಿತವಾಗಿ 50 ಕೇಜಿ ಲಗೇಜನ್ನು ಅನುಮತಿಸಲಾಗಿದೆ ಮತ್ತು ಸ್ಟೇಷನ್’ನ ಲಗೇಜ್/ಪಾರ್ಸೆಲ್ ಕಚೇರಿಯಲ್ಲಿ ಹೆಚ್ಚುವರಿ ತೂಕಕ್ಕೆ ಪಾವತಿ ಮಾಡುವ ಮೂಲಕ ಗರಿಷ್ಠ 100 ಕೇಜಿಗಳನ್ನು ಹೊತ್ತೊಯ್ಯಬಹುದು.

ಏಸಿ III ಅಥವಾ ಏಸಿ ಚೇರ್ ಕಾರ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಉಚಿತವಾಗಿ 40 ಕೆಜಿ ಲಗೇಜ್ ಅನ್ನು ಮತ್ತು ಗರಿಷ್ಠ 40 ಕೇಜಿಗಳನ್ನು ಹೊತ್ತೊಯ್ಯಬಹುದು.

ಸ್ಲೀಪರ್ ಕ್ಲಾಸ್ ಪ್ರಯಾಣಿಕರು ಉಚಿತವಾಗಿ 40 ಕೇಜಿಗಳನ್ನು ಅನುಮತಿಸಲಾಗಿದೆ, ಹಾಗೂ ಹೆಚ್ಚಿನ ತೂಕಕ್ಕೆ ಪಾವತಿ ಮಾಡಿದ ನಂತರ ಅವರು ಗರಿಷ್ಠ 80 ಕೇಜಿಗಳನ್ನು ಹೊತ್ತೊಯ್ಯಬಹುದು.

Kannada railway blog

ಎರಡನೆ ದರ್ಜೆಯ ಪ್ರಯಾಣಿಕರಿಗೆ ಉಚಿತವಾಗಿ 35 ಕೇಜಿಗಳನ್ನು ಅನುಮತಿಸಲಾಗಿದೆ. ಅವರು ಲಗೇಜ್/ಪಾರ್ಸೆಲ್ ಕಚೇರಿಯಲ್ಲಿ ಹೆಚ್ಚುವರಿ ತೂಕಕ್ಕೆ ಪಾವತಿ ಮಾಡುವ ಮೂಲಕ ಗರಿಷ್ಠ 70ಕೇಜಿಗಳನ್ನು ಹೊತ್ತೊಯ್ಯಬಹುದು.

5 ರಿಂದ 12 ವರ್ಷದ ನಡುವಿನ ಮಕ್ಕಳಿಗೆ ಅವರು ಪ್ರಯಾಣ ಮಾಡುತ್ತಿರುವ ವರ್ಗಕ್ಕೆ ಅನುಗುಣವಾಗಿ ಅನುಮತಿಯಿರುವ ಉಚತ ಲಗೇಜ್ ನ ಕೇವಲ ಅರ್ಧದಷ್ಟನ್ನು ಮಾತ್ರ ಅನುಮತಿಸಲಾಗಿದೆ. ಅಂತಹ ಸನ್ನಿವೇಶಗಳಲ್ಲಿ ಉಚಿತ ಅನುಮತಿಯು 50 ಕೇಜಿಗಳಿಗೆ ಮೀರಬಾರದು.

ನೀವು ಹೊತ್ತೊಯ್ಯುವಂತಹ ಟ್ರಂಕ್ ಗಳು, ಸ್ಯೂಟ್ ಕೇಸ್ ಗಳು ಅಥವಾ ಬಾಕ್ಸ್ ಗಳ ಇರಬೇಕಾದ ನಿಗದಿತ ವಿಸ್ತೀರ್ಣವು: 100 ಸೆಮೀ x 60 ಸೆಮೀ x 25 ಸೆಮೀ. ಹೆಚ್ಚುವರಿ ಲಗೇಜನ್ನು ಲಗೇಜ್ ವ್ಯಾನಿಗೆ ಕಳುಹಿಸಲಾಗುವುದು.

ಹೆಚ್ಚುವರಿ ಲಗೇಜನ್ನು ಬುಕ್ ಮಾಡುವುದು ಹೇಗೆ?

ನಿಮ್ಮ ರೈಲ್ ಹತ್ತುವ ರೈಲ್ವೇ ನಿಲ್ದಾಣವನ್ನು ಮುಂಚಿತವಾಗಿ ತಲುಪಿ ಮತ್ತು ಪಾರ್ಸೆಲ್ ಕಚೇರಿಯಲ್ಲಿ ಲಗೇಜ್ ಬಗ್ಗೆ ವಿಚಾರಿಸಿ. ಹೆಚ್ಚುವರಿ ಲಗೇಜನ್ನು ರೈಲು ಹೊರಡುವ ಕನಿಷ್ಠ 30 ನಿಮಿಷಗಳ ಮುಂಚಿತವಾಗಿ ಬುಕ್ ಮಾಡುವ ಅಗತ್ಯವಿದೆ.

ಹೆಚ್ಚುವರಿ ಬ್ಯಾಗೇಜಿಗೆ ಇರುವ ಘೋಷಣ ನಮೂನೆಯನ್ನು ತುಂಬಿ ಮತ್ತು ಅದನ್ನು ತೂಕ ಮಾಡಿಸಿ.

ಶುಲ್ಕ ವ್ಯತ್ಯಾಸವನ್ನು ಪಾವತಿಸಿ ಮತ್ತು ಸ್ಲಿಪ್ ಪಡೆಯಿರಿ

ಅಗತ್ಯವಿದ್ದಾಗ ಟಿಟಿಇ ಗೆ ಈ ಸ್ಲಿಪನ್ನು ತೋರಿಸಬೇಕು.

ಬುಕ್ ಮಾಡಿದ ನಂತರ, ಹೆಚ್ಚುವರಿ ಲಗೇಜನ್ನು ಬ್ರೇಕ್ ವ್ಯಾನ್ ನಲ್ಲಿ ಕಳುಹಿಸಲಾಗುತ್ತದೆ.

ಹೆಚ್ಚುವರಿ ಲಗೇಜ್ ಬುಕಿಂಗ್’ನ ಕನಿಷ್ಠ ಶುಲ್ಕವು ರೂ. 30 ರಿಂದ ಆರಂಭವಾಗುತ್ತದೆ.

ಭಾರತೀಯ ರೈಲುಗಳಲ್ಲಿ ಅನುಮತಿ ಇಲ್ಲದಂತಹ ಲಗೇಜಿನ ವಿಧಗಳು?

ಆಸಿಡ್ ಅಥವಾ ಸುಲಭವಾಗಿ ಉರಿಯುವ ಅನಿಲ ಪದಾರ್ಥಗಳನ್ನು ಹೊಂದಿರುವ ಯಾವುದೇ ಸರಕುಗಳು.

ಆಕ್ಸಿಜನ್ ಸಿಲೆಂಡರ್ ಜೊತೆಗೆ ಅದರ ಸ್ಟಾಂಡ್, ಒಂದೊಮ್ಮೆ ಅನುಮತಿಸಿದರೆ, ಅದು ಉಚಿತ ಲಗೇಜ್ ಅನುಮತಿಯ ಭಾಗವಾಗಿರುತ್ತದೆ. ಒಂದು ವೈದ್ಯಕೀಯ ಪ್ರಮಾಣಪತ್ರವನ್ನು ತೋರಿಸುವ ಅಗತ್ಯವಿರುತ್ತದೆ.

ವಾಣಿಜ್ಯ ಸರಕು ಪದಾರ್ಥಗಳಿಗೆ ಅನುಮತಿ ಇಲ್ಲ. ಲಗೇಜ್ ವ್ಯಾನ್ ನಲ್ಲಿ ಹೊತ್ತೊಯ್ಯಲು ವಿಶೇಷ ಬುಕಿಂಗ್ ನ ಅಗತ್ಯವಿರುತ್ತದೆ.

ಯಾವುದೇ ಆಕ್ರಮಣಕಾರಿಅಥವಾಅವಹೇಳನಕಾರಿವಸ್ತುಗಳ ಅನುಮತಿ ಇಲ್ಲ.

ಯಾವುದೇ ಹಕ್ಕಿಗಳು, ಮೀನುಗಳು, ನಾಯಿಗಳು ಅಥವಾ ಬೆಕ್ಕುಗಳಿಗೆ ಅನುಮತಿ ಇಲ್ಲ. ಇವುಗಳಿಗಾಗಿ ಪಾರ್ಸೆಲ್ ಕಚೇರಿಯಲ್ಲಿ ಬುಕಿಂಗ್ ಪಡೆಯಬೇಕು ಅಥವಾ ಒಂದು ಸಂಪೂರ್ಣ ಏಸಿ ಮೊದಲ ದರ್ಜೆಯ ಕೂಪ್ ಅನ್ನು ಬುಕ್ ಮಾಡಬೇಕು.

LEAVE A REPLY

Please enter your comment!
Please enter your name here