ಅಲ್ಲಾಹಬಾದ್ ನಲ್ಲಿನ ಕುಂಭ ಮೇಳದ ಬಗ್ಗೆ ನಿಮಗೆ ಎಂದಿಗೂ ತಿಳಿಯದ 8 ಸತ್ಯಾಂಶಗಳು

0
2585
Kannada Religious Blog

ಜನವರಿ 2019 ಬಂದರೆ, ಮತ್ತು ಎಲ್ಲಾ ರಸ್ತೆಗಳು ಉತ್ತರಪ್ರದೇಶದಲ್ಲಿನ ಪ್ರಯಾಗರಾಜ್ (ಅಲ್ಲಾಹಬಾದ್)ಗೆ ದಾರಿ ಮಾಡಿಕೊಡುತ್ತವೆ. ಜನವರಿ 15 ರಿಂದ ಮಾರ್ಚ್ 4, 2019ರ ವರೆಗೂ ಈ ಪುಣ್ಯ ಕ್ಷೇತ್ರದ ತ್ರಿವೇಣಿ ಸಂಗಮದಲ್ಲಿ ಆಯೋಜಿಸಲಾಗುವ ಕುಂಭ ಮೇಳ ಉತ್ಸವದ ಸಮಯವಿದು. ಚಿಕ್ಕ ವಯಸ್ಸಿನಿಂದಲು ನಾವೆಲ್ಲರೂ ಸಹ ’ಕುಂಭದ ಮೇಳ” ದಲ್ಲಿರುವ ಜನಸಂದಣಿಯ ಬಗ್ಗೆ ಹಲವಾರು ಕಥೆಗಳನ್ನು ಕೇಳಿರುತ್ತೇವೆ. ಜನಸಾಗರ ಎಷ್ಟು ದೊಡ್ಡದಾಗಿರುತ್ತದೆ ಎಂದರೆ ನೀವು ಸುಲಭವಾಗಿ ದಾರಿ ತಪ್ಪಬಹುದು. ಹಾಗೂ ಈ ವರ್ಷ, ಅಲ್ಲಾಹಬಾದ ಅರ್ಧ ಕುಂಭ ಮೇಳ (ಅದು ಪ್ರತಿ 6 ವರ್ಷಗಳಲ್ಲಿ ಒಮ್ಮೆ ಬರುವ ಮೇಳ) ವನ್ನು ಆಯೋಜಿಸಿದೆ. ಹಾಗಾಗಿ ಈ ವಿಶೇಷ ಜಾತ್ರೆಯನ್ನು ನೋಡಲು ಲಕ್ಷಾಂತರ ಧರ್ಮನಿಷ್ಟ ಹಿಂದುಗಳು ಪ್ರಯಾಣಿಸಬಹುದು ಎಂದು ನೀವು ನಿರೀಕ್ಷಿಸಬಹುದು. ಕುಂಭ ಮೇಳಕ್ಕೆ “ಪ್ರಪಂಚದ ಅತಿದೊಡ್ಡ ಧಾರ್ಮಿಕ ಯಾತ್ರಾರ್ಥಿಗಳ ಸಂಗಮ” ಎನ್ನುವ ದಾಖಲೆ ಇದೆ. ಹಾಗೂ ಮುಂಬರುತ್ತಿರುವ ಕುಂಭವು ಈ ಸಂಪ್ರದಾಯವನ್ನು ಎತ್ತಿಹಿಡಿಯುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಒಂದೊಮ್ಮೆ ನೀವು ಲಕ್ಷಾಂತರ ಭಕ್ತಾದಿಗಳ ಸಂಗಮವೇ ಕುಂಭ ಮೇಳದ ವಿಶೇಷತೆ ಎಂದು ತಿಳಿದಿದ್ದರೆ, ನಿಮಗೆ ಈ ಕೆಳಗಿನ ಸತ್ಯಾಂಶಗಳಿಂದ ಅಚ್ಚರಿಯಾಗಲಿದೆ. ಹಾಗಾಗಿ ಇದನ್ನು ಒಮ್ಮೆ ಓದಿ ನೋಡಿ.

Book Train Ticket

#1: ಪುರಣಾ ಕಥನ

 Kumbh Mela Mythology

ಕುಂಭ’ ಎನ್ನುವ ಪದದ ಅರ್ಥ ‘ಅಮೃತದ ಪಾತ್ರೆ’ (ಅಮರತ್ವದ ಪಾನ) ಎಂದು. ಸಮುದ್ರ ಮಂಥನದ ಸಮಯದಲ್ಲಿ, ದೇವ ಮತ್ತು ದಾನವರು ಅಮೃತವನ್ನು ಒಂದು ‘ಕುಂಭ’ ದಲ್ಲಿ ಪತ್ತೆ ಮಾಡಿದರು ಎಂದು ನಂಬಲಾಗುತ್ತದೆ. ಇಬ್ಬರಿಗೂ ಸಹ ಅದರ ಮೇಲೆ ಆಸೆಯಾಗಿತ್ತು. ಬ್ರಹ್ಮ ದೇವನ ಆಜ್ಞೆಯಂತೆ ದೇವಗಣದಲ್ಲಿನ ಒಬ್ಬ ದೇವ ಅಮೃತವನ್ನು ತೆಗೆದುಕೊಂಡು ಓಡಿದನು. ಹಾಗಿದ್ದರೂ ದಾನವರು, ಅವನ ಬೆನ್ನು ಹತ್ತಿ ಕುಂಭವನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ಈ ಕಸಿದಾಟವು ಮುಂದುವರಿಯಿತು ಹಾಗೂ ಅಮೃತವು 4 ಸ್ಥಳಗಳಲ್ಲಿ ಚೆಲ್ಲಿತು: ಅಲ್ಲಾಹಬಾದ್, ಇಂದೋರ್, ನಾಸಿಕ್ ಮತ್ತು ಹರಿದ್ವಾರ. ಈ ನಾಲ್ಕು ಸ್ಥಳಗಳು ಇಂದು ಕುಂಭ ಮೇಳದ ಪುಣ್ಯ ಕ್ಷೇತ್ರಗಳಾಗಿವೆ.

ಪುರಾಣದ ಪ್ರಕಾರ, ದೂರ್ವಾಸ ಮುನಿಯು ಕುಪಿತನಾಗಿ ದೇವಗಣಕ್ಕೆ ಶಾಪವಿತ್ತನು. ಇದು ದೇವಗಣದ ಶಕ್ತಿಯನ್ನು ಕುಂದಿಸಿತು ಹಾಗೂ ಅಸುರರು (ದಾನವರು) ಭೂಮಿಯ ಮೇಲೆ ಹಿಂಸಾತ್ಮಕ ದಾಳಿ ಮಾಡಲು ಆರಂಭಿಸಿದರು. ಹಾಗಾಗಿ, ಬ್ರಹ್ಮ ದೇವನು ಅಮೃತವನ್ನು ಮಂಥನ ಮಾಡಲು ದೇವಗಣಕ್ಕೆ ಮತ್ತು ಅಸುರರಿಗೆ ಸಲಹೆ ನೀಡಿದನು. ಅದರಂತೆ ಅವರು ಮಾಡಿದರೆ, ಆದರೆ ಪ್ರಕ್ರಿಯೆಯ ಮಧ್ಯದಲ್ಲಿ, ಅಸುರರು ಅಮೃತದಿಂದ ನಮ್ಮನ್ನು ದೇವಗಣದವರು ದೂರವಿರಿಸುತ್ತಾರೆ ಎಂದು ಅರ್ಥಮಾಡಿಕೊಂಡರು. ಹಾಗಾಗಿ, ಅವರು 12 ದಿನಗಳ ಕಾಲ ದೇವಗಣವನ್ನು ಬೆನ್ನಟ್ಟಿದರು ಮತ್ತು ಅ ಸಮಯದಲ್ಲಿ ಅಮೃತದ ಹನಿಗಳು ನಾಲ್ಕು ವಿಭಿನ್ನ ಜಾಗಗಳಲ್ಲಿ ಬಿದ್ದವು. ಅಮೃತದ ಬಿಂದುಗಳು ನದಿಗಳನ್ನು ಸಹ ಅಮೃತವಾಗಿ ಪರಿವರ್ತಿಸಿದವು ಎಂದು ಹೇಳಲಾಗುತ್ತದೆ. ಪ್ರಯಾಗರಾಜದಲ್ಲಿರುವ ಪುಣ್ಯ ನದಿಗಳಾದ ಗಂಗಾ, ಯಮುನಾ, ಮತ್ತು ಸರಸ್ವತಿಯ ಸಂಗಮವು ಅಂತಹ ಒಂದು ಕ್ಷೇತ್ರ ಎನ್ನಲಾಗುತ್ತದೆ.

Book RailYatri Hotels 

#2: ಮೊದಲ ಐತಿಹಾಸಿಕ ಉಲ್ಲೇಖ

Kumbh-Mela-History

ಕುಂಭ ಮೇಳದ ಮೊದಲ ಐತಿಹಾಸಿಕ ದಾಖಲೆಯನ್ನು ಪ್ರಖ್ಯಾತ ಚೈನೀಸ್ ಪ್ರವಾಸಿಗನಾದ, ಹ್ಯುನ್ ತ್ಸಾಂಗ್ ನ ಖಾತೆಯಲ್ಲಿ ಕಾಣಬಹುದು, ಆತನು ರಾಜ ಹರ್ಷವರ್ಧನನ ಆಳ್ವಿಕೆಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದನು. ಹ್ಯುನ್ ತ್ಸಾಂಗನು ತನ್ನ ಬರವಣಿಗೆಯಲ್ಲಿ ಮಹರಾಜ ಹರ್ಷವರ್ಧನನಿಂದ ಆಯೋಜಿಸಲಾದ ಒಂದು ಸಂಪ್ರದಾಯವನ್ನು ಉಲ್ಲೇಖಿಸುತ್ತಾನೆ ಅದರಲ್ಲಿ ನೂರಾರು ಭಕ್ತಾದಿಗಳು ಪ್ರಯಾಗದಲ್ಲಿರುವ ಎರಡು ನದಿಗಳ ಸಂಗಮದಲ್ಲಿ ಮುಳುಗಿ ಸ್ನಾನ ಮಾಡಿದರು ಎಂದು ಹೇಳುತ್ತಾನೆ.

Book Train Ticket

#3: ನೀವು ಕುಂಭ ಮೇಳಕ್ಕೆ ಯಾವಾಗ ಹೋಗಬೇಕು

Ardh Kumbh-2019

ಪುಣ್ಯ ನದಿಗಳ ನೀರು ಅಮೃತವಾಗಿ ಬದಲಾಗುವುದು ಎಂದು ನಂಬುವಂತಹ ಕೆಲವು ದಿನಾಂಕಗಳಂದು ಕುಂಭ ಮೇಳವನ್ನು ನಡೆಸಲಾಗುತ್ತದೆ. ಹಾಗಾಗಿ, ಕುಂಭ ಮೇಳದ (ಅರ್ಧ ಅಥವಾ ಮಹಾ ಕುಂಭ ಮೇಳದ) ದಿನಾಂಕಗಳನ್ನು ನಿರ್ಧರಿಸುವ ಮುನ್ನ ಸೂರ್ಯ, ಚಂದ್ರ ಮತ್ತು ಗುರು ಗ್ರಹಗಳ ಸ್ಥಾನವನ್ನು ಪರಿಗಣಿಸಲಾಗುತ್ತದೆ. ಸಾಧಾರಣವಾಗಿ, ಅಲ್ಲಾಹಬಾದ್ ನಲ್ಲಿ ಮಾಘ ಮಾಸದ ಸಮಯದಲ್ಲಿ, ಯಾವಾಗ ಗ್ರಹಗಳ ಸ್ಥಾನವು ನಿಖರವಾಗಿರುತ್ತವೆಯೋ ಆಗ ಕುಂಭ ಮೇಳವನ್ನು ಆಯೋಜಿಸಲಾಗುತ್ತದೆ. ಈ ಸಮಯದಲ್ಲಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರೆ ಭಕ್ತಾದಿಗಳು ತಮ್ಮ ಪಾಪಗಳನ್ನು ಕಳೆದುಕೊಳ್ಳುತ್ತಾರೆ ಎಂದು ನಂಬಲಾಗಿದೆ. ಈ ವರ್ಷ ಆ ಮಂಗಳಕರ ದಿನಾಂಕಗಳೆಂದರೆ ಜನವರಿಯ 14, 27, ಫೆಬ್ರವರಿಯ 6, 15, 17, 21, 25.

Food on Train 

#4: ನೋವಿಗಿಂತ ನಂಬಿಕೆ ದೊಡ್ಡದು

ಸಹಜವಾಗಿ ಇದನ್ನು ಚಳಿಗಾಲದ ಮಾಸದಲ್ಲಿ ಆಯೋಜಿಸಲಾಗುತ್ತದೆ ಆಗ ನದಿಯೂ ಬಹಳ ತಂಪಾಗಿರುತ್ತದೆ, ವಿಶೇಷವಾಗಿ ಭಾರತದ ಉತ್ತರ ಭಾಗಗಳಲ್ಲಿ, ಆಗ ಅಂತಹ ಮುಂಜಾನೆಯ ಚಳಿಯ ಸಮಯದಲ್ಲಿಯೂ ನದಿಯಲ್ಲಿ ಮುಳುಗಿ ಸ್ನಾನ ಮಾಡಲು ದೊಡ್ಡದಾದ ಆತ್ಮಸ್ಥೈರ್ಯ ಬೇಕು. ಹಾಗೂ ಲಕ್ಷಾಂತರ ಭಕ್ತಾದಿಗಳು ಧರ್ಮನಿಷ್ಠೆಯ ನಂಬಿಕೆಯ ಸಲುವಾಗಿ ಈ ನೋವನ್ನು ಆನಂದದಿಂದ ಅನುಭವಿಸುತ್ತಾರೆ. ಮೊದಲು ಶನಿ ಸ್ನಾನವನ್ನು ಮಕರ ಸಂಕ್ರಾಂತಿಯಂದು ಮಾಡಲಾಗುತ್ತದೆ ಹಾಗೂ ಕಡೆಯ ಸ್ನಾನವನ್ನು ಮಾರ್ಚ್ 4, 2019ರಂದು (ಮುಂದಿನ ತಿಂಗಳ ಹುಣ್ಣಿಮೆಯಂದು) ಮಾಡಲಾಗುತ್ತದೆ. ಇದರ ಮಧ್ಯದಲ್ಲಿನ ಸ್ನಾನದ ದಿನಾಂಕಗಳೆಂದರೆ ಹುಣ್ಣಿಮೆಯ ದಿನಗಳು, ಅಮವಾಸ್ಯೆ ದಿನಗಳು ಮತ್ತು ವಸಂತ ಪಂಚಮಿಯ ದಿನ.

Book Outstation Cabs

#5: ನಾಗ ಸಾಧುಗಳನ್ನು ಅನಿರೀಕ್ಷಿತವಾಗಿ ಭೇಟಿ ಮಾಡುವ ಸಮಯ

Culture in Kumbh

ನಾಗ ಸಾಧುಗಳನ್ನು ನೋಡಲು ಕುಂಭ ಮೇಳವು ಉತ್ತಮ ಅವಕಾಶವನ್ನು ನೀಡುತ್ತದೆ, ನಾಗ ಸಾಧುಗಳೆಂದರೆ ಅವರು ಎಲ್ಲಾ ಭೌತಿಕ ವಸ್ತುಗಳನ್ನು, ಆನಂದಗಳನ್ನು ಮತ್ತು ಐಷಾರಾಮಿ ಬದುಕನ್ನು ತ್ಯಜಿಸಿದವರು. ಅವರು ಮಹಾ ಶಿವನ ನಿಷ್ಟಾವಂತ ಭಕ್ತರು ಮತ್ತು ಕುಂಭ ಮೇಳವನ್ನು ಹೊರತುಪಡಿಸಿ ಸಾರ್ವಜನಿಕವಾಗಿ ನೋಡಲು ಎಂದಿಗೂ ಸಿಗುವುದಿಲ್ಲ. ಈ ಹಬ್ಬದ ಸಮಯದಲ್ಲಿ ಅವರು ಅಲ್ಲಾಹಬಾದಿನಲ್ಲಿ ಮತ್ತು ಇತರೆ ಕುಂಭ ಮೇಳದ ಸ್ಥಳಗಳಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. ಸಾಧುಗಳು ಆಯುಧಗಳೊಂದಿಗೆ (ಅಂದರೆ ಕೋಲುಗಳು ಮತ್ತು ಖಡ್ಗಗಳ) ಜೊತೆಯಲ್ಲಿ ಯುದ್ಧ ಕೌಶಲ್ಯವನ್ನು ಪ್ರದರ್ಶಿಸುತ್ತಿರುವುದನ್ನು ನೋಡಬಹುದು. ಅವರಿಗೆ ಅವರೇ ಕೊಡುವಂತಹ ಶಿಕ್ಷೆಯೇ ಅವರ ಉತ್ತಮಸಮಯದಂತೆ ನಿಮಗೆ ಕಾಣುತ್ತದೆ. ನೀವು ಅವರನ್ನು ಅವರ ದೃಷ್ಠಿಕೋನಗಳು, ಪರಿಕಲ್ಪನೆಗಳು ಮತ್ತು ಸಿದ್ಧಾಂತಗಳ ಬಗ್ಗೆಯೂ ಕೇಳಬಹುದು ಒಂದೊಮ್ಮೆ ನೀವು ಆಸಕ್ತಿಕರವಾಗಿ ಕಂಡರೆ ಅವರು ಸಹ ನಿಮ್ಮೊಂದಿಗೆ ಸಂತಸದಿಂದ ಚರ್ಸಿಸುತ್ತಾರೆ. ನಾಗ ಸಾಧುಗಳ ಹೊರತಾಗಿ, ಇತರೆ ಹಿಂದು ಧರ್ಮದ ಪುಣ್ಯ ಪುರುಷರು ಸಹ ಇಲ್ಲಿಗೆ ಭೇಟಿ ನೀಡುತ್ತಾರೆ. ಅಂತಹ ಕೆಲವು ವರ್ಗಗಳಲ್ಲಿ ಕಲ್ಪವಾಸಿಸ್ (ದಿನಕ್ಕೆ ಮೂರು ಭಾರಿ ಸ್ನಾನ ಮಾಡುವವರು) ಮತ್ತು ಊರ್ದವಾವಹುರರು (ದೇಹವನ್ನು ಕಟ್ಟುನಿಟ್ಟಾದ ತಪ್ಪಸ್ಸಿಗೆ ಒಡ್ಡುವ ನಂಬಿಕೆ ಉಳ್ಳವರು) ಬರುತ್ತಾರೆ.

RailYatri Bus Booking

#6: ಅತಿದೊಡ್ಡ ಜನಸಾಗರ

ಕುಂಭ ಮೇಳವನ್ನು ಆಯೋಜಿಸಿದ ಪ್ರತಿ ಬಾರಿಯು ಸಹ, ಜನಸಾಗರದ ಹಿಂದಿನ ದಾಖಲೆಯನ್ನು ಮುರಿದಿರುವುದು ಕಾಣುತ್ತದೆ. ಈ ಹಿಂದೆಯೇ ಸೂಚಿಸಿದಂತೆ, ಈ ಮಹಾಮೇಳವು ಭೂಮಿಯ ಮೇಲಿರುವ ಮಾನವ ಸಮಾಜದ ಅತಿದೊಡ್ಡ ಶಾಂತಿಯುತ ಸಮ್ಮೇಳನವಾಗಿರುತ್ತದೆ. ಅಲ್ಲಾಹಬಾದಿನಲ್ಲಿ ನಡೆದ 2013ರ ಮೇಳವು ಇಲ್ಲಿಯ ವರೆಗಿನ ಅತಿದೊಡ್ಡ ಭಕ್ತಾದಿಗಳ ಹಾಜರಿಯ ದಾಖಲೆಯನ್ನು ಹೊಂದಿದೆ. ಕುಂಭ ಮೇಳ 2013ರಲ್ಲಿ 120 ದಶಲಕ್ಷ ಜನರ ಭಾರಿ ಸಮೂಹವನ್ನು ನೋಡಲಾಯಿತು! ಈ ವರ್ಷ ಅಲ್ಲಾಹಬಾದ್ ತಮ್ಮ ದಾಖಲೆಯನ್ನು ಮತ್ತೊಮ್ಮೆ ಮುರಿಯುತ್ತದೆಯೇ? ಕಾಲವೆ ಉತ್ತರಿಸಬೇಕು.

#7: ವಿಶಿಷ್ಟ ಹನುಮಾನ್ ದೇವಾಲಯವನ್ನು ನೋಡುವ ಅವಕಾಶ

Hanuman-Temple

ಅಲ್ಲಾಹಬಾದಿನಲ್ಲಿ ನಡೆಯು ಕುಂಭ ಮೇಳದ ಪ್ರಮುಖ ಆಕರ್ಷಣೆಗಳಲ್ಲಿ ಒಂದೆಂದರೆ ಹನುಮಾನ್ ದೇವಾಲಯವನ್ನು ನೋಡುವ ಅವಕಾಶ. ಇದು ಒಂದು ವಿಭಿನ್ನ ದೇವಾಲಯ, ಇದು ವರ್ಷದ ಬಹಳಷ್ಟು ಕಾಲ ಗಂಗಾ ನದಿಯ ನೀರಿನಲ್ಲಿ ಮುಳುಗಿಯೇ ಇರುತ್ತದೆ. ಹಿಂದು ಪುರಾಣದ ಪ್ರಕಾರ, ಗಂಗಾ ನದಿಯು ಭಗವಂತನಾದ ಹನುಮಾನನ ಪಾದಗಳನ್ನು ಮುಟ್ಟಲು ತಮ್ಮ ನೀರಿನ ಮಟ್ಟವನ್ನು ಹೆಚಿಸಿಕೊಂಡಿತು ಹಾಗಾಗಿ ದೇವಾಲಯವು ನೀರಿನಲ್ಲಿ ಮುಳುಗಿದೆ ಎನ್ನುವ ಪ್ರತೀತಿ ಇದೆ. ಆದರೆ ಕುಂಭ ಮೇಳದ ಸಮಯದಲ್ಲಿ ದೇವಾಲಯವು ನೀರಿನಿಂದ ಹೊರಬರುತ್ತದೆ. ಈ ವಿಶಿಷ್ಟ ದೇವಾಲಯದ ಒಳಗೆ ಭಗವಂತನಾದ ಹನುಮಂತನ ಒಂದು ದೊಡ್ದ ಮೂರ್ತಿಯು ಆಶ್ರಿತ ಭಂಗಿಯಲ್ಲಿ ಕುಳಿತಿರುವುದನ್ನು ನೋಡಬಹುದು (ಅದು 20 ಅಡಿ ಉದ್ದವಿದೆ).

#8: ಭಾರಿ ಹಣಕಾಸಿನ ಸಂಭಮ

ನಿರುದ್ಯೋಗವೇ ಒಂದು ದೊಡ್ಡ ಸಮಸ್ಯೆಯಾದಂತಹ ರಾಷ್ಟ್ರದಲ್ಲಿ, ಕುಂಭ ಮೇಳವು ಬಹಳಷ್ಟು ಜನರಿಗೆ ಒಂದು ತಾತ್ಕಾಲಿಕ ಸಂಪಾದನೆಯ ಮೂಲವನ್ನು ಒದಗಿಸುತ್ತದೆ. ಕುಂಭ ಮೇಳ 2013ರ ಅಂದಾಜಿನಂತೆ ಈ ಮಹಾಮೇಳದ ಸಮಯದಲ್ಲಿ ಸರಿಸುಮಾರು 650,000 ಉದ್ಯೋಗಳು ಸೃಷ್ಟಿಯಾಗಿದ್ದವು ಮತ್ತು ಒಟ್ಟಾರೆ ರೂ. 12, 000 ಕೋಟಿಗಳಷ್ಟು ಸಂಪಾದನೆಯಾಗಿತ್ತು. ಇದು ಹಲವರಿಗೆ ಸಂತಸದ ಸುದ್ದಿಯಲ್ಲವೇ!

ಈ ವಿಶಿಷ್ಟ ಧಾರ್ಮಿಕ ಮಹಾಮೇಳಕ್ಕೆ ನೀವು ಸಹ ಭೇಟಿ ಮಾಡಲು ಆಲೋಚಿಸಿದ್ದೀರಾ? ಒಳ್ಳೆಯದು, ಒಂದು ಗೊಂದಲರಹಿತ ಪ್ರವಾಸವನ್ನು ಯೋಜಿಸಲು ನಿಮಗೆ ಸಹಾಯ ಮಾಡುವಂತಹ ಎಲ್ಲಾ ಸೇವೆಗಳು ರೈಲ್ ಯಾತ್ರಿಯಲ್ಲಿವೆ. ನಮ್ಮ ಸೇವೆಗಳನ್ನು ಒಮ್ಮೆ ವೀಕ್ಷಿಸಿ.

Book Train Ticket

LEAVE A REPLY

Please enter your comment!
Please enter your name here