ಪ್ರತಿನಿತ್ಯ ಗರಿಷ್ಟ ಭಕ್ತಾದಿಗಳು ಬರುವ 5 ದೇವಸ್ಥಾನಗಳು

0
691

ಭಾರತ ದೇವರುಗಳ ಹಾಗೂ ಉತ್ಸವಗಳ ನಾಡು. ಭಾರತದ ಉದ್ದಗಲದಲ್ಲಿ ಸ್ಥಾಪಿತವಾಗಿರುವ ಲಕ್ಷಾಂತರ ದೇವಸ್ಥಾನಗಳ ಪೈಕಿ, ಕೆಲವು ನಿಜಕ್ಕೂ ಸುಪ್ರಸಿದ್ಧವಾಗಿವೆ. ಇದು ದೇವಸ್ಥಾನಗಳ ಸ್ಥಾನ ಮಾನದ ವಿಷಯವಲ್ಲ, ಅವುಗಳ ಜನಪ್ರಿಯತೆಗೆ ಸಂಖ್ಯೆಗಳ ಓರೆಗಲ್ಲು ಅಷ್ಟೆ. ಪ್ರತಿನಿತ್ಯ ಗರಿಷ್ಟ ಭಕ್ತಾದಿಗಳು ಬರುವ 5 ದೇವಸ್ಥಾನಗಳ ಪಟ್ಟಿ ಇಲ್ಲಿದೆ.

ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನ

ಸರಾಸರಿ ಪ್ರತಿನಿತ್ಯ ಬರುವ ಭಕ್ತಾದಿಗಳು: 65,000-70,000

ಹೇಗೆ ತಲುಪುವುದು: ತಿರುಪತಿ ರೈಲು ನಿಲ್ದಾಣದಿಂದ 26 ಕಿ.ಮೀ

ದೇವಸ್ಥಾನಗಳ ಪೈಕಿ ಅತಿ ಹೆಚ್ಚಿನ ಭಕ್ತರನ್ನು ಆಕರ್ಷಿಸುವ ದೇವಸ್ಥಾನ. ಮಹಾ ವಿಷ್ಣುವಿನ ಎಂಟು ಪವಿತ್ರ ನಿವಾಸಗಳಲ್ಲಿ ಈ ದೇವಸ್ಥಾನ ಸಹ ಒಂದು ಎಂದು ಪರಿಗಣಿಸಲಾಗಿದೆ. ಕಲಿಯುಗ ಇರುವವರೆಗೆ ಇಲ್ಲಿರುವ ದೇವರ ಮೂರ್ತಿ ಬಾಳುತ್ತದೆ ಮತ್ತು ಭಕ್ತಾದಿಗಳು ತಮ್ಮ ಸಂಕಟಗಳಿಂದ ವಿಮೋವನೆ ಹೊಂದುತ್ತಾರೆ ಎಂದು ನಂಬಲಾಗಿದೆ

ವೈಷ್ಣೋದೇವಿ ದೇವಸ್ಥಾನ

Vaishno Devi

ಸರಾಸರಿ ಪ್ರತಿನಿತ್ಯ ಬರುವ ಭಕ್ತಾದಿಗಳು: 60,000-63,000

ಹೇಗೆ ತಲುಪುವುದು: ಖತ್ರಾರೈಲು ನಿಲ್ದಾಣದಿಂದ 15 ಕಿ.ಮೀ.

ಭಾರತದ ಹಿಂದುಗಳಿಗೆ ಇದೊಂದು ಪವಿತ್ರ ದೇವಸ್ಥಾನ. ದೇವಸ್ಥಾನ ತಲುಪಲು 13 ಕಿ.ಮೀ. ಕಾಲ್ನಡಿಗೆಯಲ್ಲಿ ಬೆಟ್ಟ ಗುಡ್ಡ ಕಾಡು ಹಾದಿಯಲ್ಲಿ ಸಾಗಬೇಕು,ಇಲ್ಲಿನ ದೇವಿಯಿಂದ ಕರೆ ಬರೆದ ಹೊರತು, ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡಲು ಆಗುವುದಿಲ್ಲ ಎಂಬ ಪ್ರತೀತಿ ಇದೆ. ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ, ಒಟ್ಟಾರೆ ಅಭ್ಯುದಯ, ಉತ್ತಮ ಆರೋಗ್ಯ ಲಭಿಸುತತ್ದೆ ಎಂದು ಭಕ್ತರುಉ ನಂಬುತ್ತಾರೆ.

ಪದ್ಮನಾಭಸ್ವಾಮಿ ದೇವಸ್ಥಾನ

Padmanabhaswamy Temple

ಸರಾಸರಿ ಪ್ರತಿನಿತ್ಯ ಬರುವ ಭಕ್ತಾದಿಗಳು: 50,000-55,000

ಹೇಗೆ ತಲುಪುವುದು: ತಿರುವನಮ್ತಪುರ ಕೇಂದ್ರ ರೈಲು ನಿಲ್ದಾಣದಿಂದ 1ಕಿ.ಮೀ.

ತಮ್ಮ ಅಭ್ಯುದಯಕ್ಕಾಗಿ ಪ್ರಾರ್ಥಿಸಲು ಬರುವ ಭಕ್ತರಿಂದ ಇಲ್ಲಿನ ಮೂಲದೇವರಿಗೆ ಚಿನ್ನವನ್ನು ಅರ್ಪಿಸಲಾಗುತ್ತದೆ. ನೀವು ದೇವರಿಗೆ ಎಷ್ಟು ಅರ್ಪಿಸುವಿರೋ ಅದಕ್ಕಿಂತ ಬಹುಪಟ್ಟು ಹೆಚ್ಚಿನ ಸಂಪತ್ತು ನಿಮಗೆ ಸಿಗುತ್ತದೆ ಎಂಬ ನಂಬಿಕೆ ಇದೆ.ಅಂದಮೇಲೆ, ವಿಶ್ವದಲ್ಲಿ ಇದು ಅತ್ಯಂತ ಶ್ರೀಮಂತ ದೇವಸ್ಥಾನವಾಗಿರುವುದರಲ್ಲಿ ಆಶ್ಚರ್ಯವಿಲ್ಲ.

ಸ್ವರ್ಣ ಮಂದಿರ

Thiruvananthapuram

ಸರಾಸರಿ ಪ್ರತಿನಿತ್ಯ ಬರುವ ಭಕ್ತಾದಿಗಳು: 40,000-45,000

ಹೇಗೆ ತಲುಪುವುದು: ಅಮೃತಸರ ರೈಲು ನಿಲ್ದಾಣದಿಂದ 2 ಕಿ.ಮೀ.

ಹರ್ ಮಂದಿರ ಸಾಬ್ ಎಂದೂ ಕರೆಯಲಾಗುವ ಈ ಮಂದಿರ, ಸಿಖ್ಖರ ಪವಿತ್ರ ಧಾರ್ಮಿಕ ಸ್ಥಳ. ಭಾರತದ ನಾನಾ ಭಾಗಗಳಿಂದ ಸಿಖ್ಖರು ಪಂಜಾಬಿನ ಈ 16ನೇ ಶತಮಾನದ ಪವಿತ್ರ ಸನ್ನಿಧಿಗೆ ಭೇಟಿ ನೀಡುತ್ತಾರೆ. ಈ ಗುರುದ್ವಾರದಲ್ಲಿ ಭಾರತದ ಅತಿ ದೊಡ್ದಪಾಕಶಾಲೆಯಿದೆ. ಭಕ್ತರು ಸ್ವಾದಿಷ್ಟವಾದ ಲಂಗರ್ ಆಹಾರವನ್ನು ಇಲ್ಲಿ ಸವಿಯಬಹುದು

ಜಗನ್ನಾಥ ದೇವಾಲಯ

Jagannath Temple

ಸರಾಸರಿ ಪ್ರತಿನಿತ್ಯ ಬರುವ ಭಕ್ತಾದಿಗಳು: 30,000-33,000

ಹೇಗೆ ತಲುಪುವುದು: ಪುರಿ ರೈಲು ನಿಲ್ದಾಣದಿಂದ 3ಕಿ.ಮೀ.

ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಹಿಂದು ಭಕ್ತರು ಭೇಟಿ ನೀಡಬೇಕಾದ ನಾಲ್ಕು ಪವಿತ್ರಧಾಮ ಪ್ರವಾಸಿ ಸ್ಥಳಗಳಲ್ಲಿ ಒಂದು. ಈ ದೇವಸ್ಥಾನದ ಪ್ರತಿಷ್ಠಾಪಿತ ದೇವರು ಜಗನ್ನಾಥ. ಶ್ರೀ ಕೃಷ್ಣನ ಮರುಜನ್ಮ ರೂಪ. 12 ನೇ ಶತಮಾನದ ಈ ದೇವಸ್ಥಾನದ ಅತ್ಯಂತ ಸುಂದರ ವಾಸ್ತುಶಿಲ್ಪವಲ್ಲದೆ, ದೇವಸ್ಥಾನದೊಳಗೆ ವಿಶೇಷ ಪಾವಿತ್ರ್ಯತೆ ಮತ್ತು ಚೈತನ್ಯ ತುಂಬಿದೆ ಎಂದು ಭಕ್ತರು ನಂಬಿದ್ದಾರೆ. ಜಿವಂತ ಮಾನವನ ಆಳೆತ್ತರದ ಸ್ವಾಮಿ ಜಗನ್ನಾಥನ ವಿಗ್ರಹ ಸುಂದರವಾಗಿದೆ.

LEAVE A REPLY

Please enter your comment!
Please enter your name here