ಸುಖನ ಕೆರೆ : ಪಾದಸ್ಪರ್ಷವಾಗದ ರಸ್ತೆಗಳು

0
478

ಶಿವಾಲಿಕ್ ಬೆಟ್ಟಗಳ ಹಿನ್ನೆಲೆಯಿರುವ ಸುಖನ ಕೆರೆ ಚಂಧೀಗಢದ ಅತ್ಯಂತ ಪ್ರಶಸ್ತ ಪ್ರಶಾಂತ ತಾಣ. ನಗರದ ಗದ್ದಲದಿಂದ ದೂರವಾಗಿ ಮನಸ್ಸಿಗೆ ಸ್ವಲ್ಪ ಶಾಂತಿ ಪಡೆದುಕೊಳ್ಳಲು ಜನ ಇಲ್ಲಿಗೆ ಬರುತ್ತಾರೆ. ಇಲ್ಲಿ ನೀವು ದೋಣಿ ವಿಹಾರ ಮಾಡುತ್ತ ತಿಳಿನೀಲಿಯ ಬಾನಿನ ಕೆಳಗೆ ಪ್ರಶಾಂತ ನೀರಿನ ಮೇಲೆ ತೇಲಿ.

ಹಿಂಬದಿಯ ರಸ್ತೆಯ ಹಾದಿಯಲ್ಲಿ

Back Road from Sukhna Lake

ಗಾಲ್ಫ್ ಕೋರ್ಸ್ ಗೆ ಸಮಾನಾಂತರ ರಸ್ತೆಯಯ ಹಾದಿ ಹಿಡಿದು ಕೆರೆಯ ಹಿಂಬದಿಯಲ್ಲಿ 3.5 ಕಿ.ಮೀ. ನಡೆಯಿರಿ. ನಗರದ ಗದ್ದಲದಿಂದ ಪ್ರಶಾಂತತೆಯ ಅನುಭವ ನಿಮಗಾಗುತ್ತದೆ. ಕೆರೆಯ ಹಿಂಭಾಗದಲ್ಲಿ ನಿಶ್ಬದ ಉದ್ಯಾನವನವೆಂದು ಕರೆಯಲ್ಪಡುವ ಬುದ್ಧನ ಪ್ರತಿಮೆಯ ಇರುವ ಧ್ಯಾನ ಮಾಡುವ ಸ್ಥಳ ಕಾಣುತ್ತದೆ. ನಿಶಬ್ದದ ಅನುಭವ ಬೇಕೆನ್ನುವವರು ನಿಶ್ಚಿತವಾಗಿ ಇದನ್ನು ನೋಡಲೇಬೇಕು.

ದಿವ್ಯ ನಿಶಬ್ದತೆ

Budhha in Sukhna Lake

ಸುಖನ ಕೆರೆಯೆ ಪ್ರಧಾನ ಬದಿಯಲ್ಲಿ ಮಕ್ಕಳಿಗೆ ಮೋಜಿನ ಸವಾರಿಗಳು, ಅಸಂಖ್ಯಾತ ಆಹಾರ ಮಳಿಗೆಗಳು, ಸ್ಕೆಚಿಂಗ್ ಸ್ಟಾಲ್ ಇತ್ಯಾದಿಗಳಿಂದ ಚಟುವತಿಕೆಯಿಂದ ತುಂಬಿರುತ್ತದೆ. ಕೆರೆಯ ಈ ಬದಿಯಲ್ಲಿ ಮುಂಜಾವಿನಲ್ಲಿ ನಡೆದುಕೊಂಡು ಹೋದರೆ ಗಿರಿಧಾಮದ ಅನುಭವ ಸಿಗುತ್ತದೆ. ಇಲ್ಲಿನ ಬುದ್ಧನ ಸುಂದರ ಪ್ರತಿಮೆ ಒಂದು ಅನನ್ಯ ಕಲಾತ್ಮಕತೆಗೆ ಉದಾಹರಣೆ.ಅದ್ಭುತವಾಗಿ ವಿನ್ಯಾಸಪಡಿಸಲಾದ ಈ ಪ್ರತಿಮೆ, ರಾತ್ರಿಯ ಮಂದ ಬೆಳಕಿನಲ್ಲಿ ಅತಿ ನಯನಮನೋಹರವಾಗಿ ಕಾಣುತ್ತದೆ. ಇನ್ನೊಂದೆಡೆ ನದಿಯ ಕಲರವ ಮನಸ್ಸಿಗೆ ಮತ್ತಷ್ಟು ತಂಪು ನೀಡುತ್ತದೆ. ಸೈಬೀರಿಯನ್ ಬಾತುಕೋಳಿ, ಕೊಕ್ಕರೆಗಳು ಹಾಗೂ ಸ್ಟಾರ್ಕ್ ಗಳಂಥ ವಲಸಿಗ ಹಕ್ಕಿಗಳನ್ನು ಚಳಿಗಾಲದಲ್ಲಿ ಕಾಣಬಹುದು.

ಹಸಿರಿನ ಮಧ್ಯೆ

Sukhna Wildlife Sanctuary

ಕೆರೆಯ ಈಶಾನ್ಯ ದಿಕ್ಕಿನಲ್ಲಿ ಸುಖನ ವನ್ಯಜೀವಿ ಪಕ್ಷಿಧಾಮ ಎಂದು ಕರೆಯಲ್ಪಡುವ ಅರಣ್ಯ ಪ್ರದೇಶವಿದೆ. ಈ ಅರಣ್ಯದಲ್ಲಿ ಭಾರತದ ಮೊಲ, ಸಾಂಬಾರ್(ಜಿಂಕೆ ಜಾತಿ), ಮುಳ್ಳುಹಂದಿ, ಮುಂಗುಸಿ ಮುಂತಾದ ಬಗೆ ಬಗೆಯ ಪ್ರಾಣಿಗಳು ಕಾಣಸಿಗುತ್ತವೆ.ಪಕ್ಷಿಪ್ರಿಯರಿಗೆ 150 ಕ್ಕೂ ಹೆಚ್ಚು ಪಕ್ಷಿ ಜಾತಿಗಳು ಕಂಡುಬರುತ್ತವೆ. ಈ ಸ್ಥಳದ ಸೂಕ್ಷ್ಮತೆಯನ್ನು ಗಮನದಲ್ಲಿರಿಸಿಕೊಂಡು, ಈ ಸ್ಥಳಕ್ಕೆ ಭೇಟಿ ನೀಡುವ ಮುನ್ನ ಅರಣ್ಯ ಸಂರಕ್ಷಕರು ಹಾಗೂ ಪ್ರಧಾನ ವನ್ಯಜೀವಿ ವಾರ್ಡನ್, ಯು.ಟಿ. ಚಂಧೀಗಢ ಇವರಿಗೆ ಅರ್ಜಿ ಸಲ್ಲಿಸಬೇಕು.

ಸುಖನದಲ್ಲಿ ಇತರ ಆಕರ್ಷಣೆಗಳು

  • ರಾಕ್ ಗಾರ್ಡನ್
  • ತೆರೆದ ಹಸ್ತದ ಸ್ಮಾರಕ
  • ಚಂಧೀಗಢ ಗಾಲ್ಫ್ ಕ್ಲಬ್

 

Originally written by Saniya Pasricha. Read here.

LEAVE A REPLY

Please enter your comment!
Please enter your name here