ಹಿಮಚ್ಛಾದಿತ ಧೌಲಾಧರ್ ಪರ್ವತ ಶ್ರೇಣಿಗಳ ಅಂತರಾಳದಳ್ಳಿ ಹುದುಗಿರುವ ಬೀರ್ ಬಿಲ್ಲಿಂಗ್, ಹಿಮಾಚಲ ಪ್ರದೇಶದ ರತ್ನತಾಣಗಳಲ್ಲಿ ಒಂದು. ಇದು, ವಿಶ್ವದ ಎರಡನೆ ಅತಿ ದೊಡ್ಡ ಜಿಗಿಯುವ ಪ್ಯಾರಾ ಗ್ಲೈಡಿಂಗ್ ತಾಣ. ಹಾಗಾಗಿಯೇ ಈ ಸರಳ ಮತ್ತು ಪ್ರಶಾಂತ ಸ್ಥಳಕ್ಕೆ ಜನರು ಆಕರ್ಷಿತರಾಗುತ್ತಾರೆ. ಇದಲ್ಲದೆ, ಬೀರ್ ಸುತ್ತ ನೋಡಲು, ಸವಿಯಲು ಇನ್ನೂ ಅನೇಕ ಸ್ಥಳಗಳಿವೆ.
ಬುದ್ಧಿಸ್ಟ್ ಸರ್ಕೀಟ್
ಬೀರ್ ನಲ್ಲಿ ಬೌದ್ಧ ಧರ್ಮದ ಸಂಚಾರವಿದೆ. ಸುಂದರ ಬೌದ್ಧ ದೇವಾಲಯಗಳು ಹಾಗೂ ಸ್ತುಪಾಗಳು ಈ ಸ್ಥಳದ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡುತ್ತವೆ. ಈ ಪುಟ್ಟ ಪಟ್ಟಣದಲ್ಲಿ ಟಿಬೆಟನ್ ನಿರಾಶ್ರಿತರ ದೊಡ್ಡ ವಸಾಹತು ಇದೆ. ಸ್ಥಳೀಯರು ಇದನ್ನು ಕಾಲೋನಿ ಎಂದು ಕರೆಯುತ್ತಾರೆ.ಭೇಟಿ ನೀಡಬಹುದಾದ ಕೆಲವು ಪ್ರಮುಕ ಬೌದ್ಧ ಮಂದಿರಗಳೆಂದರೆ:
- ಡ್ರಿಕುಂಗ್ ಡೋಜಿನ್ ತೆಕ್ಚೊ ಲಿಂಗ್ ಮಂದಿರ
- ಪಲ್ಯುಲ್ಚೋಕೋರ್ಲಿಂಗ್ ಮಂದಿರ
- ಡೀರ್ ಪಾರ್ಕ್ ಇನ್ಸ್ಟಿಟ್ಯೂಟ್
- ಟಿಬೆಟನ್ ಕರಕುಶಲ ಕೇಂದ್ರ
- ದಿ ಟ್ರೆಕ್ಕಿಂಗ್ ಟ್ರೈಲ್
ದಿ ಟ್ರೆಕ್ಕಿಂಗ್ ಟ್ರೈಲ್
ಬೀರ್ ಬಿಲ್ಲಿಂಗ್ ನ ಪ್ರತಿ ಮೂಲೆ ಮೂಲೆಯಲ್ಲಿ ಸಣ್ಣ ಪುಟ್ಟ ಟ್ರೆಕ್ ಹಾಗೂ ಜಾಡುಗಳು ಸಿಗುತ್ತವೆ. ಬೀರ್ ನಿಂದ ಹೊರಡುವ ಟ್ರೆಕ್ಕಿಂಗ್ ಟ್ರೈಲ್ ಗಳು ಎತ್ತರದ ಕಣಿವೆ ಹಾಗೂ ಕಿರಿದಾದ ಹಿಮಾವೃತ ಜಾಡುಗಳ ಮೂಲಕ ಹಾದುಹೋಗುತ್ತವೆ. ಬೀರ್ ನ ಪ್ರಶಾಂತಾತೆ ಹಾಗೂ ಸೌಂದರ್ಯ, ಪ್ರವಾಸಿಗರಿಗೆ ಮುದ ನೀಡುತ್ತದೆ.
- ಪ್ರಸಿದ್ಧ ಜಾಡುಗಳು : ಬಾರಾ ಬಂಗಲ್, ಘೋರ್ನಾಲ, ಮತ್ತು ಲಢಕ್ ಪ್ರದೇಶದ ಜಂಸ್ಕರ್ ಕಣಿವೆಗೆ ಹೋಗುವ ಜಾಡುಗಳು ಬೀರ್ ನ್ದ ಆರಂಭವಾಗುತ್ತವೆ. ಈ ಪ್ರದೇಶದಿಂದ ಆರಂಭವಾಗುವ ಇತರ ಸಣ್ಣ ಪುಟ್ಟ ಜಾಡುಗಳು ಹನುಮಾನ್ ಗಢ್, ಚಂಬಾ ಕಣಿವೆ, ಬರೋಟ್ ಕಣಿವೆ ಹಾಗೂ ರಾಜ್ ಗುಂಡಾದ ಸುಂದರ ಗ್ರಾಮಕ್ಕೆ ಹೋಗುತ್ತವೆ.
- ಕಿರು ಹೈಕ್ ಗಳು: ಕಿರು ಹೈಕ್ ಗಳು ಚೌಗನ್ ನ ಚಹಾ ಉದ್ಯಾನವನಗಳಿಗೆ ಒಯ್ಯುತ್ತವೆ ಅಥವಾ ಸುತ್ತಲಿನ ಪ್ರದೇಸಗಳಲ್ಲಿ ಹರಡಿಕೊಂಡಿರುವ ಸುಂದರ ಹಾಗೂ ಚಿಕ್ಕ ಹ್ಯಾಮ್ಲೆಟ್ ಗಳಿಗೆ ಕರೆದೊಯ್ಯುತ್ತವೆ
- ತಟನಿ ಟ್ರೆಕ್ : ಈ ಕಣಿವೆಯ ಮತ್ತೊಂದು ಅದ್ಭುತ ಟ್ರೆಕ್ ಹಾದಿ ಎಂದರೆ ತಟನಿ ಟ್ರೆಕ್. ಬೇರೆ ಟ್ರೆಕ್ ಗಳಿಗೆ ಹೋಲಿಸಿದರೆ ಇದು ಸ್ವಲ್ಪ ಕಷ್ಟದ ಹಾದಿ(ಬಾರ ಬಂಗಲ್ ಹೊರತುಪಡಿಸಿ). ಏಕೆಂದರೆ ಇಲ್ಲಿ ಇಳಿಜಾರು ಬಹಳ ಮತ್ತು ಟೆಕ್ ನ ಉದ್ದ 6 ಕಿ.ಮೀ. ಗಿಂತ ಕಡಿಮೆ ಇಲ್ಲ. ಜಲ ವಿದ್ಯುತ್ ಯೋಜನೆಯಿಂದ ಟ್ರೆಕ್ ಆರಂಭವಾಗಿ ತಟನಿಯ ಬಿಸಿ ಜಲಬುಗ್ಗೆಗಳಿಗೆ ಒಯ್ಯುತ್ತದೆ.
ಸ್ವರ್ಗದಂಥ ಗ್ರಾಮಗಳು
ರಾಜ್ ಗುಂಡ ಹಾಗೂ ಕುಲಾರ್ ಗುಂಡ ಎನ್ನುವ ಎರಡು ಅವಳಿ ಗ್ರಾಮಗಳು ದಟ್ಟವಾದ ಗುಂಡ ಅರಣ್ಯಪ್ರದೇಶದ ಮಧ್ಯದಲ್ಲಿವೆ(ಬೀರ್ ನಿಂದ 16-17 ಕಿ.ಮೀ). ಈ ಗ್ರಾಮಗಳು ನಗರದ ಜನಜಂಗುಳಿ ಹಾಗೂ ಗಜು ಗದ್ದಲಗಳಿಂದ ದೂರ. ಉತ್ಸಾಹಿಗಳು ಈ ಗ್ರಾಮಗಳಿಗೆ 2-3 ದಿನಗಳಲ್ಲಿ ಟ್ರೆಕ್ ಮಾಡಬಹುದು. ಕಣಿವೆಯ ಉದ್ದಗಲಕ್ಕೂ ಸುಂದರ ವನ್ಯಜೀವಿಯ ನಯನಮನೋಹರ ದೃಶ್ಯ ಕಾಣಬಹುದು.
ತಾರೆಗಳ ಅಡಿಯಲ್ಲಿ
ಬೀರ್ ನ ಹಸಿರು ಇಳಿಜಾರುಗಳು, ತಾರೆಗಳಿಂದ ಆವೃತವಾದ ಆಕಾಶದಡಿ ರಾತ್ರಿಯನ್ನು ಕಳೆಯಲಿಚ್ಛಿಸುವ ಪ್ರಕೃತಿ ಪ್ರಿಯರಿಗೆ ಸ್ವರ್ಗದ ಅನುಭವ ನೀಡುತ್ತದೆ. ಮೃದುವಾದ ಹಸಿರು ಹುಲ್ಲಿನ ಹಾಸಿಗೆಯ ಮೇಲೆ ಶಿಬಿರ ಸ್ಥಾಪಿಸಲು ಐದು ನಿಮಿಷ ಸಾಕು. ಬಯಲುರಿ ಸುತ್ತ ಸಂಗೀತ ಸಂಜೆ ಆಯೀಜಿಸುವ ಯೋಚನೆ ಇದ್ದರೆ, ಇದಕ್ಕಿಂತ ಪ್ರಶಸ್ತ ಸ್ಥಳ ನಿಮಗೆ ಸಿಗಲಾರದು.
ಸೂರ್ಯಾಸ್ತ ಸ್ಥಳ
ಇಲ್ಲಿನ ಸೂರ್ಯಾಸ್ತ ಸ್ಥಳ ಅನೇಕರನ್ನು ವಿಸ್ಮಯಗೊಳಿಸಿದೆ. 2400 ಮೀಟರ್ ಎತ್ತರದಲ್ಲಿರುವ ಈ ಸ್ಥಳ, ಜನಪ್ರಿಯ ಪ್ಯಾರಾಗ್ಲೈಡಿಂಗ್ ನಿವೇಶನವು ಕೆಳಮಟ್ಟದ ಭೂಮಿಯಿಂದ ಸಾವಿರಾರು ಅಡಿ ರ್ತ್ತರದಲ್ಲಿದ್ದು, ಕಾಂಗ್ರ ಕಣಿವೆಯ ಸೂರ್ಯಾಸ್ತ ವೀಕ್ಷಿಸಲು ವಿಹಂಗಮ ನೋಟ ನೀಡುತ್ತದೆ. ಒಂದು ರತರಿ ಶಿಬಿರದಲ್ಲಿ ಕಳೆಯುವುದಾದರೆ, ಮುಂಜಾವಿನಲ್ಲಿ ಪರ್ವತಗಳ ಹಿಂದಿನಿಂದ ಸೂರ್ಯೋದಯ ಕಾಣುವ ಅದೃಷ್ಟವೂ ನಿಮ್ಮದಾಗಬಹುದು
ಬೀರ್ ತಲುಪುವುದು ಹೇಗೆ?
- ರೈಲು ಮಾರ್ಗ: ಸಮೀಪದ ರೈಲು ನಿಲ್ದಾಣವೆಂದರೆ ಅಜು(ಕಾಂಗ್ರ ಮೂಲಕ ಫಠಾನ್ ಕೋಟ್ ಹಾಗೂ ಜೋಗಿಂದರ್ ನಗರ್ನ ಡುವಿನ ಕಿರಿದಾದ ರೈಲು ಮಾರ್ಗ) ಬೀರ್ ನಿಂದ 5 ಕಿ.ಮೀ ದೂರವಿದೆ
- ರಸ್ತೆ ಮಾರ್ಗ: ರಸ್ತೆಯ ಮೂಲಕ ಬೀರ್ ತಲುಪಲು ರಾ.ಹೆ. 20 ರಲ್ಲಿ ಬೀರ್ ರಸ್ತೆಯಲ್ಲಿ ತಿರುಗಿಕೊಳ್ಳಿ. ಬೈಜನಾಥ್ ಮತ್ತು ಜೋಗಿಂದರ್ ನಗರ್ ಮಧ್ಯೆ ಇದೆ.