ವಾಯನಾಡಿನಲ್ಲಿ ವನ್ಯ ಮೃಗಗಳನ್ನು ನೋಡುವುದು

0
567
Tiger Safari

ವನ್ಯ ಮೃಗಗಳ ಸಫಾರಿಗಳನ್ನು ಆನಂದಿಸಲು ಕೇರಳದಲ್ಲಿನ ವಾಯನಾಡ್ ಒಂದು ಅತ್ಯುತ್ತಮವಾದ ಸ್ಥಳ. ಪ್ರಾಣಿಗಳನ್ನು ನೋಡಲು ಮುಂಜಾನೆಯ ಸಮಯವು ಉತ್ತಮವಾದುದು, ಹಾಗಾಗಿ ಮುಂಜಾನೆಯ ಸಫಾರಿಗಳಲ್ಲಿ ಹೊರಡಲು ಪ್ರಯತ್ನಿಸಿ ಮತ್ತು ಮುಂಜಾನೆ 8ಕ್ಕೆ ಮುನ್ನ ಅರಣ್ಯವನ್ನು ತಲುಪಿ. ಪ್ರಾಣಿಗಳು ಮುಂಜಾನೆಯಲ್ಲಿ ಅಲೆದಾಡಲು ಇಷ್ಟಪಡುತ್ತವೆ. ವಾಯನಾಡಿನಲ್ಲಿ ನೀವು ಕಾಡು ಬೆಕ್ಕುಗಳನ್ನು ನೋಡಲು ಉತ್ತಮ ಅವಕಾಶ ನೀಡುವ ಸ್ಥಳಗಳನ್ನು ಈ ಕೆಳೆಗೆ ಪಟ್ಟಿ ಮಾಡಲಾಗಿದೆ.

ತೋಲ್ ಪೆಟ್ಟಿ

Blog-Post-For_-Environment-Day-Special_cover-1 (1)

ತೋಲ್ ಪೆಟ್ಟಿ ವನ್ಯಜೀವಿ ಅಭಯಾರಣ್ಯವನ್ನು ಮೇಲ್ಭಾಗದ ವಾಯನಾಡ್ ಅರಣ್ಯ ಎಂದು ಕರೆಯುತ್ತಾರೆ. ಅದು ಹಲವಾರು ವನ್ಯ ಪ್ರಾಣಿಗಳ ಸಂಕುಲಗಳ ಮನೆಯಾಗಿದೆ ಅವುಗಳೆಂದರೆ ಆನೆಗಳು, ಹುಲಿಗಳು, ಚಿರತೆಗಳು, ಕರಡಿಗಳು, ಕಾಡು ನಾಯಿಗಳು, ಕಾಡೆಮ್ಮೆಗಳು, ಕೋತಿಗಳು, ಕಾಡು ಅಳಿಲುಗಳು ಮತ್ತು ಜಿಂಕೆಗಳು. ತೋಲ್ ಪಟ್ಟಿಯ ಮುಖ್ಯ ಆಕರ್ಷಣೆ ಎಂದರೆ ಆನೆಗಳು, ಕಾಡೆಮ್ಮೆ ಮತ್ತು ಹುಲಿ. ತೋಲ್ ಪಟ್ಟಿಯಲ್ಲಿ ಕಾಡೆಮ್ಮೆಯ ಒಂದು ಹಿಂಡನ್ನು ನೋಡುವುದಂತೂ ಬಹಳ ಖಚಿತ. ಒಂದೊಮ್ಮೆ ನೀವು ಮುಂಜಾನೆ 8 ಕ್ಕಿಂತ ಮುಂಚಿತವಾಗಿ ಹೋದರೆ, ನೀವು ಆನೆಗಳನ್ನು ಸಹ ನೋಡಬಹುದು. ಒಂದೊಮ್ಮೆ ನಿಮ ಅದೃಷ್ಟವಿದ್ದರೆ, ನೀವು ಹುಲಿಯನ್ನು ಸಹ ನೋಡಬಹುದು. ಯಾವುದೇ ಸಮಯದಲ್ಲಿಯೂ ಸಹ, ಕೇವಲ 10 ವಾಹನಗಳನ್ನು (ನೋಂದಾಯಿತ ಜಾಲಕರಿಂದ ಜೀಪುಗಳು, ಶಫರ್ಡ್) ಮಾತ್ರವೇ ಅರಣ್ಯದ ಒಳಗೆ ಅನುಮತಿಸಲಾಗುತ್ತದೆ.

ಸಫಾರಿ ಸಮಯ: (ಮುಂಜಾನೆ) 6 AM – 8 AM, (ಸಂಜೆ) 3 PM – 5:30 PM

ಖಚಿತವಾದ ನೋಡಬಹುದಾದ ಪ್ರಾಣಿ: ಕಾಡೆಮ್ಮೆ

ಸೂಚನೆ: ಭದ್ರತಾ ಕಾರಣಗಳಿಂದಾಗಿ ಅಭಯಾರಣ್ಯದ ಒಳಗೆ ವಯಕ್ತಿಕ ವಾಹನಗಳನ್ನು ಅನುಮತಿಸುವುದಿಲ್ಲ

ಹತ್ತಿರದ ರೈಲ್ವೇ ನಿಲ್ದಾಣ: ಥಳಸೇರಿ (60 ಕಿಮಿ ದೂರ)

ಮುತಂಗ

Blog-Post-For_-Environment-Day-Special_cover_2

ಮುತಂಗ ವನ್ಯಜೀವಿ ಅಭಯಾರಣ್ಯವು ತೋಲ್ ಪಟ್ಟಿಯ ಇನ್ನೊಂದು ಬದಿಯಲ್ಲಿದೆ. ಅದನ್ನು ಕೆಳಭಾಗದ ವಾಯನಾಡ್ ಅರಣ್ಯ ಎನ್ನುತ್ತಾರೆ. ನೀವು ನೋಡುವ ವಾಯನಾಡಿನ ಬಹಳಷ್ಟು ಆನೆಗಳ ಚಿತ್ರವನ್ನು ಮುತುಂಗದಲ್ಲಿಯೇ ತೆಗೆದಿರುತ್ತಾರೆ. ಕೇರಳ-ಕರ್ನಾಟಕ ಚೆಕ್-ಪೋಸ್ಟ್ ಗೆ ಹತ್ತಿರದಲ್ಲಿ ಒಂದು ದೊಡ್ಡ ಕೆರೆಯಿದೆ ಅಲ್ಲಿ ಆನೆಗಳ ಹಿಂಡುಗಳು ನೀರು ಕುಡಿಯಲು ಹಾಗೂ ಆಟವಾಡಲು ಮುಂಜಾನೆ ಅಂತೆಯೇ ಸಂಜೆಯೂ ಸಹ ಅಲ್ಲಿಗೆ ಬರುತ್ತವೆ. ಮುತುಂಗದಲ್ಲಿ ಕೋತಿಗಳನ್ನು, ಮಚ್ಚೆಯುಳ್ಳ ಜಿಂಕೆಗಳನ್ನು ಮತ್ತು ನವಿಲುಗಳನ್ನು ಸಹ ನೋಡಬಹುದು.

ಸಫಾರಿ ಸಮಯ: (ಮುಂಜಾನೆ) 6 AM – 9 AM, (ಸಂಜೆ) 3 PM – 6 PM

ಖಚಿತವಾದ ನೋಡಬಹುದಾದ ಪ್ರಾಣಿ: ಆನೆಗಳು (ಕೆರೆಯ ಹತ್ತಿರ)

ಹತ್ತಿರದ ರೈಲ್ವೇ ನಿಲ್ದಾಣ: ಕೋಳಿಕೊಡೆ (31 ಕಿಮಿ ದೂರ)

ತಿರುನೆಲ್ಲಿ

Blog-Post-For_-Environment-Day-Special_Kanha-National_3

ಕೇರಳದಲ್ಲಿನ ವಿಲಕ್ಷಣವಾದ ದೇವಸ್ಥಾನಗಳಲ್ಲಿ ತಿರುನೆಲ್ಲಿಯು ಸಹ ಹೆಸರುವಾಸಿ. ನಿಮಗೆ ಟ್ರೆಕ್ಕಿಂಗ್ ಮಾಡುವುದು ಇಷ್ಟವಾದರೆ, ತಿರುನೆಲ್ಲಿ ದೇವಸ್ಥಾನದಿಂದ ಮುಂದಕ್ಕೆ ಪಕ್ಷಿ ಪಾತಾಳಂ ಕಾಡಿನಲ್ಲಿ ನಡೆದು ಹೋಗಿ, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳನ್ನು ಮತ್ತು ಪ್ರಾಣಿಗಳನ್ನು ನೋಡಬಹುದು.

ಸಫಾರಿ ಸಮಯ: (ಮುಂಜಾನೆ) 7 AM – 9 AM, (ಸಂಜೆ) 3 PM – 5 PM

ಸೂಚನೆ: ಈ ಕಾಡಿನ ಒಳಗೆ ಪ್ರವಾಸ ಕೈಗೊಳ್ಳುವ ಮುನ್ನ ಅರಣ್ಯ ಇಲಾಖೆಯ ಅನುಮತಿಯನ್ನು ಪಡೆಯಬೇಕು; ಅಂತೆಯೇ ಬುಡಕಟ್ಟು ಗುಂಪುಗಳ ಸಹಾಯವನ್ನು ಪಡೆಯಬೇಕು. ವಾಯನಾಡ್-ತಿರುನೆಲ್ಲಿ ಮಾರ್ಗದಲ್ಲಿ ಒಂಟಿ ಸಲಗಗಳ ಬಗ್ಗೆ ಎಚ್ಚರಿಕೆ ಇರಲಿ ಏಕೆಂದರೆ ತಿರುನೆಲ್ಲಿ ದೇವಾಲಯದ ಸುತ್ತಮುತ್ತಲಿನ ಅರಣ್ಯದಲ್ಲಿ ಆನೆಗಳು ಆಶ್ರಯ ಪಡೆದುಕೊಳ್ಳುತ್ತವೆ.

ಹತ್ತಿರದ ರೈಲ್ವೇ ನಿಲ್ದಾಣ: ಕೋಳಿಕೊಡೆ (332 ಕಿಮಿ ದೂರ)

ಇತರೆ ವನ್ಯಜೀವಿ ಸ್ಥಳಗಳು, ನಾಗರಹೊಳೆ, ಮುತುಮಾಲ, ಬಂಡಿಪುರ

LEAVE A REPLY

Please enter your comment!
Please enter your name here