ಭಾರತದಲ್ಲಿ ಭೇಟಿ ಕೊಡಲೇ ಬೇಕಾದ 5 ಚಹಾ ಉದ್ಯಾನವನಗಳು

0
770

ಅತ್ಯುತ್ತಮ ಗುಣಮಟ್ಟ ಟಿ ಉತ್ಪಾದನೆಗೆ ಭಾರತ ಜಗತ್ ಪ್ರಸಿದ್ಧ.ಈ ಕಾರಣಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಚಹಾ ಪ್ರವಾಸೋದ್ಯಮ ಬಹಳ ಜನಪ್ರಿಯವಾಗುತ್ತಿದೆ. ಚಹಾ ಉದ್ಯಾನವನಗಳ ಸುತ್ತಲಿನ ವಾತಾವರಣ ನಿಜಕ್ಕೂ ಮನಮೋಹಕ. ಇಲ್ಲಿ ಓಡಾಡುವುದೆಂದರೆ, ಆನಂದದಿಂದ ಸ್ವರ್ಗ ಕಂಡಷ್ಟೇ ಸುಖವಾಗುತ್ತದೆ.

ಚಹಾ ಪ್ರವಾಸೋದ್ಯಮಕ್ಕೆ ಅತ್ಯಂತ ಪ್ರಶಸ್ತ ಕಾಲವೆಂದರೆ ನವೆಂಬರ್ ಮತ್ತು ಮಾರ್ಚ್ ವರೆಗಿನ ತಿಂಗಳು. ನೋಡಲೇಬೇಕಾದ ಅತ್ಯಂತ ಸುಂದರ ಚಹಾ ಉದ್ಯಾನವನಗಳನ್ನು ಈ ಕೆಳಗೆ ನೀಡಲಾಗಿದೆ:

Darjeeling Tea Tourism

ಡಾರ್ಜಿಲಿಂಗ್, ಪಶ್ಚಿಮ ಬಂಗಾಲ: ದಾರ್ಜಿಲಿಂಗ್ ತಲುಪಲು ನ್ಯೂ ಜಲಪಾಯ್ ಗುರಿಯಿಂದ ದಾರ್ಜಿಲಿಂಗ್ ಹಿಮಾಲಯನ್ ರೈಲಿನಲ್ಲಿ ಪ್ರಯಾಣಿಸಿ. ಭಾರತದ ಒಟ್ಟಾರೆ ಚಹಾ ಉತ್ಪಾದನೆಯಲ್ಲಿ 25% ಚಹಾ ಡಾರ್ಜಿಲಿಂಗ್ ನ ಚಹಾ ಎಸ್ಟೇಟ್ ಗಳಿಂದ ಬರುತ್ತದೆ.ಹ್ಯಾಪಿ ವ್ಯಾಲಿ ಎಸ್ಟೇಟ್ ಮತ್ತು ಗ್ಲೆನ್ ಬರ್ನ್ ಟೀ ಎಸ್ಟೇಟ್ ಗಳನ್ನು ನೋಡಲೇಬೇಕು.

Jorhat Tea Estate

ಜೋರ್ಹಟ್, ಅಸ್ಸಾಂ: ಅಸ್ಸಾಂನ ಬ್ರಹ್ಮಪುತ್ರ ಕಣಿವೆಯಲ್ಲಿರುವ ಜೋರ್ಹಟ್, “ವಿಶ್ವದ ಚಹಾ ರಾಜಧಾನಿ” ಎಂದು ಪ್ರಖ್ಯಾತವಾಗಿದೆ. ಜೋರ್ಹಟ್ ರೈಲ್ವೆ ನಿಲ್ದಾಣದಿಂದ ಅನತಿ ದೂರದಲ್ಲಿದೆ. ಅಡ್ದಬ್ಯಾರಿ ಟೀ ಎಸ್ಟೇಟ್ ಪಕ್ಕದಲ್ಲಿ ಮಲಗಿಕೊಂಡ ಕಾಡು ಮಹ್ಸೀರ್ ಗಳನ್ನು ನೋಡುವುದೇ ಒಂದು ನಯನಮನೋಹರ ದೃಶ್ಯ.

Munnar Tea Estate

ಮುನ್ನಾರ್, ಕೇರಳ: ಕೇರಳದ ಜನಪ್ರಿಯ ಗಿರಿಧಾಮವನ್ನು ಪ್ರವೇಶಿಸುತ್ತಿದ್ದಂತೆ ನಿಮ್ಮ ಕಣ್ಣಿಗೆ ಕಾಣುವುದು ಮೈಲಿಗಟ್ಟಲೆ ದೂರ ಹಚ್ಚ ಹಸುರಿನ ಚಹಾ ಉದ್ಯಾನವನಗಳು. ಈ ಚಹಾ ತೋಟಗಳು ಅಲುವಾ ರೈಲ್ವೆ ನಿಲ್ದಾಣದ ಸಮೀಪದಲ್ಲಿವೆ. ಇಲ್ಲಿ ನೀವು ನಲ್ಲತನ್ನಿ ಎಸ್ಟೇಟ್ ಹಾಗೂ ಕುಂದಲೆ ಟೀ ತೋಟಗಳಲ್ಲಿ ಚಹಾ ಎಲೆ ಆರಿಸುವ ಹಾಗೂ ಚಹಾದ ಸೊಪ್ಪಿನಿಂದ ಚಹಾಪುಡಿ ತಯಾರಿಸುವ ಪ್ರಕ್ರಿಯೆಯನ್ನು ನೋಡಬಹುದು.

Conoor Tea Estate

ಕೂನೂರ್, ತಮಿಳುನಾಡು: ಕುನೂರ್ ತಲುಪಲು ಕೊಯಮತ್ತೂರಿನಿಂದ ನೀಲಗಿರಿ ಮೌಂಟನ್ ರೈಲ್ವೆ ಹತ್ತಿರಿ. ಗಾಢ ಬಣ್ಣದ ಹಾಗೂ ಅತ್ಯಂತ ಸುವಾಸನೆಭರಿತ ಚಹಾ ಸೊಪ್ಪುಗಳಿಗೆ ಈ ಜಾಗ ಪ್ರಸಿದ್ಧ. ಇಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳಗಳೆಂದರೆ ಹೈ ಫೀಲ್ಡ್ ಟೀ ಫ್ಯಾಕ್ಟರಿ, ಟ್ರಾಂಕ್ವಿಲ್ ಟೀ ಲಾಂಜ್ ಮತ್ತು ಸಿಂಗಾರ ಟೀ ಎಸ್ಟೇಟ್.

Palampur Tea Estate

ಪಾಲಂಪುರ್, ಹಿಮಾಚಲ ಪ್ರದೇಶ: ಉತ್ತರ ಭಾರತದ ಚಹಾ ರಾಜಧಾನಿ ಎಂದು ಪ್ರಖ್ಯಾತವಾಗಿರುವ ಈ ಸ್ಥಳ, ಅತ್ಯಂತ ದೊಡ್ಡ ಚಹಾ ತೋಟಗಳನ್ನು ಹೊಂದಿದೆ. ಈ ತೋಟಗಳು ಧೌಲಧರ್ ಬೆಟ್ಟಗಳ ನಡುವಿದೆ. ಪೈನ್ ಮರಗಳ ಸಾಲುಗಳಿಂದ ಲಂಕೃತವಾಗಿರುವ ಚಹಾ ತೋಟಗಳನ್ನು ಕಣ್ತುಂಬ ನೋಡಿ ಸವಿಯಬಹುದು. ಕಂಗ್ರ ತಲುಪಲು ಪಠಾನ್ ಕೋಟ್ ನಿಂದ ಕಂಗ್ರ ಕಣಿವೆ ರೈಲು ಹತ್ತಿ. ರೈಲ್ವೆ ನಿಲ್ದಾಣದಿಂದ ಅತಿ ಸಮೀಪದಲ್ಲೇ ಚಹಾ ತೋಟಗಳಿವೆ.

ಇಳಿಜಾರಿನ ಚಹಾ ತೋಟಗಳೊಂದಿಗಿನ ಗುಡ್ಡಗಳು ಹಾಗೂ ಚಿಕ್ಕ ಚಿಕ್ಕ ತೊರೆಗಳನ್ನು ನೋಡುತ್ತಿದ್ದರೆ ಎಂಥದ್ದೇ ಒತ್ತಡವನ್ನೂ ಮರೆಸುತ್ತವೆ.

LEAVE A REPLY

Please enter your comment!
Please enter your name here