ಚಂಡೀಗಡದಿಂದ ಕಡೆಯ-ಕ್ಷಣದ ಮುಂಗಾರಿನ ಸ್ಥಳಗಳು

0
783

ಒಂದೊಮ್ಮೆ ಚಂಡೀಗಡಕ್ಕೆ ಬಹಳ ಹತ್ತಿರದಲ್ಲಿ ವಾಸಿಸುತ್ತಿದ್ದರೆ, ಆಗ, ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಂದು ಪ್ರಯಾಣವಾಡುವುದಕ್ಕೆ ಮುಂಗಾರು ಒಂದು ಉತ್ತಮವಾದ ಕಾಲ. ಆ ವಿಶಾಲವಾದ ಬೆಟ್ಟಗಳು ಮತ್ತು ಸೊಬಗಾದ ಜಲಪಾತಗಳು, ಎತ್ತರದ-ಮಳೆಯನ್ನು ಕಾಣುವ ಮರಗಳು ಹಾಗೂ ಮಂಜು ಕವಿದ ಪರಿಸರಗಳು, ಇವೆಲ್ಲವನ್ನು ಚಂಡಿಗಡದ 100-150 ಕಿಲೋಮೀಟರ್ ಗಳಲ್ಲಿ ನೀವು ಅನುಭವಿಸಬಹುದು. ನಿಮ್ಮ ಪ್ರವಾಸತಾಣವನ್ನು ಒಂದು ವಿಶೇಷವಾದ ಸ್ಥಳವನ್ನಾಗಿ ಮಾಡುವ ಕೆಲವು ಆಯ್ದ ಸ್ಥಳಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ

ಮೋರ್ನಿ ಬೆಟ್ಟಗಳು, ಹರಿಯಾಣ

Morni Hills
ಮೋರ್ನಿ ಬೆಟ್ಟಗಳು ಚಂಡೀಗಡದಿಂದ 45 ಕಿಲೋಮೀಟರ್ ದೂರವಿರುವ, ಪಂಚಕುಳ ಜಿಲ್ಲೆಯಲ್ಲಿನ ಒಂದು ಆಕರ್ಷಕ ತಾಣ. ಈ ಮನಮೋಹಕ ಬೆಟ್ಟ ಪ್ರದೇಶವು ಮೂರು ಕೆರೆಗಳನ್ನು (ಅಥವಾ ತಾಲಗಳು)ಹೊಂದಿದೆ – ಬಡಾ ಟಿಕ್ಕರ್ ತಾಲ್, ಟಿಕ್ಕರ್ ತಾಲ್ ಮತ್ತು ಚೋಟ ಟಿಕ್ಕರ್. ಮೈನವಿರೇಳಿಸುವ ದೃಶ್ಯಗಳ ಹೊರತಾಗಿ, ಇಲ್ಲಿ ಒಂದು ಪುರಾತನ ಕೋಟೆ ಇದೆ ಹೆಸರು ಮೋರ್ನಿ ಕೋಟೆ (ಅಥವಾ ಮೀರ್ ಜಾಫರ್ ಅಲಿ ಕೋಟೆ) ಅದು ಹಳೆಯ ವಸ್ತುಶಿಲ್ಪದ ಮನಮೋಹಕ ಸ್ಪೂರ್ತಿದಾಯಕವಾದುದು.

ಪರ್ವಾನೋ, ಹಿಮಾಚಲ್ ಪ್ರದೇಶ್

Parwanoo Cable Car
ನೆಲೆಸಿರುವ ಶಿವಲಿಕ್ ನ ಬೆಟ್ಟಪ್ರದೇಶದ ನಡುವೆ, ಈ ಸ್ಥಳವು ಮುಂಗಾರಿನ ವಾರಾಂತ್ಯದ ಒಂದು ಉಲ್ಲಾಸಕರ ಸ್ಥಳವಾಗಿದೆ. ಮರಗಳ ನಡುವಿನ ಕಾಲುದಾರಿ ಒಂದು ಅತ್ಯಂತ ಆಕರ್ಷಣೀಯ ಜಾಗ ಅದರೊಂದಿಗೆ ಕೇಬಲ್ ಕಾರ್ ಬೆಟ್ಟದಲ್ಲಿ ಅಪ್ಪಿಕೊಂಡು ಇರುವ ರೆಸಾರ್ಟ್ ಅನ್ನು ಸಂಪರ್ಕಗೊಳಿಸುತ್ತದೆ. 2 ಕಿಲೋಮೀಟರ್ ಉದ್ದದ ಹಗ್ಗದದಾರಿಯು ಕೆಲವೇ ನಿಮಿಷಗಳಲ್ಲಿ ಮಳೆಯಲ್ಲಿ ಮಿಂದಿರುವ ಮರಗಳ ಶ್ರೇಣಿಯನ್ನು ಪ್ರದರ್ಶಿಸುತ್ತದೆ. ಸಾಗರ ಮಟ್ಟಕ್ಕಿಂತ 5,000 ಅಡಿಗೂ ಎತ್ತರದಲ್ಲಿರುವ, ಪರ್ವಾನೋ ಮುಂಗಾರಿನಲ್ಲಿ ಜೀವಕಳೆ ಪಡೆಯುತ್ತದೆ ದಟ್ಟವಾದ ಸಸ್ಯಲೋಕ, ಹತ್ತಿರದ ಮೋಡ ದಟ್ಟಣೆ ಮತ್ತು ತಾಜಾ ಬೆಟ್ಟದ ಗಾಳಿಗಳು ಇಲ್ಲವೆ. ಸಾಹಸಕ್ರೀಡೆ, ಐಷಾರಾಮಿ ಮತ್ತು ಕ್ರೀಯಾಶೀಲ ಕ್ರೀಡೆಗಳಿಂದ ಒಬ್ಬರು ಈ ಎಲ್ಲಾ ಅನಭವಗಳನ್ನ ಇಲ್ಲಿ ಪಡೆಯಬಹುದು.

ಕಸೌಲಿ, ಹಿಮಾಚಲ್ ಪ್ರದೇಶ್

Kasauli
ಓಕ್ ಮತ್ತು ಚೆಸ್ಟ್ ನಟ್ಸ್ ಮರಗಳಿಂದ ತುಂಬಿರುವ, ನಗರ ಶೈಲಿಯ ಹೋಟೆಲ್ ಕೊಠಡಿಗಳು ಅವುಗಳ ಕಡಿಮೆ ಧರಪಟ್ಟಿಯ ವಿಶೇಷತೆಗಳು ಕಸೌಲಿಯನ್ನು ಒಂದು ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಒಂದಾಗಿಸುತ್ತದೆ. ಅದಲ್ಲದೆ ಏಷಿಯಾದ ಅತ್ಯಂತ ಹಳೆಯ ಮಧ್ಯದ ಬಟ್ಟಿಗಳನ್ನು ಹೊಂದಿದೆ. ಹಾಗಾಗಿ, ಒಂದು ಚಾವಣಿ-ಇಲ್ಲದ ಕೆಫೆಗಳು ಮತ್ತು ಬೆಟ್ಟದ ತುದಿಯಲ್ಲಿ ನೆಲೆಸಿದ ಮೊಡಗಳ ದೃಶ್ಯ, ಹಸಿರು ಎಲೆಗಳ ಮೇಲಿನ ಇಬ್ಬನಿಗಳು, ಮತ್ತು ನಿಮ್ಮ ಕೂದಲಿನ ನಡುವಿನ ಹರಿಯುವ ತಂಪಾದ ಗಾಳಿಯು, ನಿಮ್ಮನ್ನು ಒಂದು ಉಲ್ಲಾಸಮಯ ಅನುಭವವನ್ನು ಹೊಂದಲು ಪ್ರೇರೇಪಿಸುತ್ತದೆ. ಇಲ್ಲಿ ಮತ್ತೊಂದು ಪ್ರಖ್ಯಾತವಾದ ನೆಚ್ಚಿನ ಮಳೆಗಾಲದ ಖಾದ್ಯವೆಂದರೆ ಬ್ಯಾಂಡ್ ಸಮೋಸ (ಇದು ಬೆಣ್ಣೆ ಲೀಪಿತ ಬನ್ ನೊಂದಿಗೆ ಒಂದು ಸಮೋಸವನ್ನ ತುಂಬಿರುವ ಖಾದ್ಯ) ಅದರೊಂದಿಗೆ ಬಿಸಿ ಚಹಾ ಜೊತೆಗೂಡಿದೆ.

ಮುಘಲ್ ಸರೈ, ದೋರಾಹ, ಪಂಜಾಬ್

Mughal Sarai Doraha
ಮುಘಲ್ ಸರೈ, ಅಥವಾ ಹೆಚ್ಚು ಜನಪ್ರಿಯವಾಗಿ ಕರೆಯುವುದು ರಂಗ್ ದೇ ಬಸಂತಿ ಕೋಟೆ ಎಂದು (ಆರ್.ಬಿ.ಡಿ ಕೋಟೆ) ಅದು ಚಂಡೀಗಡದಿಂದ 86 ಕಿಲೋಮೀಟರ್ ದೂರದಲ್ಲಿದೆ. ಈ ಸುಂದರ ವಸ್ತುಶಿಲ್ಪವನ್ನು ಮುಘಲ್ ರಾಜನಾದ ಜಹಂಗೀರ್ ನಿರ್ಮಿಸಿದನು ಇದು ಮುಘಲರ ತಂಡಗಳಿಗೆ ವಿಶ್ರಾಂತಿ ತಾಣವಾಗಿತ್ತು. ಊಹಿಸಿ ನೋಡಿ ಒಂದು ಬೃಹತ್ ಕೋಟೆ ನಡುವಿನಲ್ಲಿ ಒಂದು ಸಮೃದ್ಧ ಸಸ್ಯರಾಶಿ ಹಾಗಾಗಿ ಇದರಲ್ಲಿ ಇರುವ ಮಳೆಯ ಸ್ಪರ್ಶವು ಸ್ವಲ್ಪ ಪ್ರಣಯಾತ್ಮಕ ತಾಣವಗುತ್ತದೆ.

ಚೈಲ್, ಹಿಮಾಚಲ್ ಪ್ರದೇಶ್

Chail
ಪ್ರಕೃತಿಯ ಮಡಿಲನಲ್ಲಿ ಒಂದು ಮೌನವಾದ ವಾರಾಂತ್ಯದ ಪ್ರಯಾಣವನ್ನು ಎದುರು ನೋಡುತ್ತಿದ್ದೀರಾ? ಹಾಗಿದ್ದರೆ ಶಿಮ್ಲಾಗೆ ಹೋಗಲೇ ಬೇಕು ಮತ್ತು ಆಲೋಚನಾತೀತ ಅನುಭವ ಹೊಂದಿರಿ. ಚೈಲ್ ಅನ್ನು ಪರಿಶೋಧಿಸಿ! ಎತ್ತರದ ದೇವದಾರು ಮತ್ತು ಚೇರ್ ಪೈನ್ ಮರಗಳಿಂದ ಕೂಡಿದ, ಚೈಲ್ ಟ್ರೆಕ್ಕಿಂಗ್ ಮಾಡುವವರಿಗೆ ಒಂದು ಸುಂದರ ತಾಣ. ಸಾಧುಪುಲ್ ನಲ್ಲಿನ ಚೈಲ್ ಸ್ಯಾಂಚುರಿ ಮತ್ತು ಚೈಲ್ ಗುರುದ್ವಾರಗಳು ನೀವು ನೋಡಲೇ ಬೇಕಾದ ಜಾಗಗಳು.

LEAVE A REPLY

Please enter your comment!
Please enter your name here