ಅಹಿಲ್ಯ ರಾಜ್ಯಭಾರ ಮಾಡಿದ ನಾಡು- ಕೋಟೆಯ ನಿವಾಸ ಸ್ಥಾನಕ್ಕಿಂತ ಮಿಗಿಲಾದ ಜಾಗ

0
381

ಇಂದು, ಪ್ರಖ್ಯಾತವಾದ ಅಹಿಲ್ಯ ಕೋಟೆ ನರ್ಮದ ನದಿಯ ದಂಡೆಯ ಮೇಲೆ ಭವ್ಯವಾಗಿ ತಲೆ ಎತ್ತಿ ನಿಂತಿದೆ.ಒಂದು ಕಾಲದಲ್ಲಿ ಅಹಿಲ್ಯ ಬಾಯ್ ಹೋಳ್ಕರ್ ಳ ರಾಜಧಾನಿ, ಇಂದು ಒಂದು ಐಷಾರಾಮಿ ಹೊಟೆಲ್ ಆಗಿ ಪರಿವರ್ತನೆಗೊಂಡು, ಅವಳ ಕಾಲ ಹಾಗೂ ಜೀವಿತದ ಕೆಲವು ಸುಂದರ ಸ್ಮಾರಕಗಳನ್ನು ಹೊಂದಿರುವ ಪುಟ್ಟ ವಸ್ತುಸಂಗ್ರಹಾಲಯವನ್ನೂ ಒಳಗೊಂಡಿದೆ. ಮಹೇಶ್ವರದ ಈ ಮಹಿಳಾ ಆಡಳಿತಗಾರ್ತಿ, ಕೇವಳ ತನ್ನ ರಾಜ್ಯಕೆಕ್ ಸೀಮಿತವಾಗದೆ, ದೂರದ ವಾರಣಾಸಿಯವರೆಗೆ ಕಲ್ಯಾಣಿಗಳನ್ನು, ದೇವಸ್ಥಾನಗಳನ್ನು ಹಾಗೂ ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಪುನರುಜ್ಜೀವಗೊಳಿಸುವಲ್ಲಿ ಅಪಾರ ಕೊಡುಗೆ ನೀಡಿದ್ದಾಳೆ.

ಅಹಿಲ್ಯ ಕೋಟೆ- ಸರಿಸಾಟಿಯಿಲ್ಲದ ವಾಸ್ತುಶಿಲ್ಪ ಕೃತಿ

Magnificent Ahilya Fort ನರ್ಮದಾ ನದಿಯ ದಂಡೆಯ ಮೇಲೆ ಎತ್ತರದಲ್ಲಿ ತಲೆ ಎತ್ತಿ ನಿಂತಿರುವ ಅಹಿಲ್ಯ ಕೋಟೆ, ಅತ್ಯದ್ಭುತ ತಂಗುದಾಣ. ಇಂದು, ಅದರ ಕೆಲವು ಭಾಗವನ್ನು ಐಷಾರಾಮಿ ಹೊಟೆಲ್ ಆಗಿ ಪರಿವರ್ತಿಸಲಾಗಿದ್ದು,ಇಂಧೋರ್ ನ ಕೊನೆಯ ಮಹಾರಾಜನ ಪುತ್ರ ಹಾಗೂ ಅಹಿಲ್ಯ ಬಾಯಿಯ ಸಂತಾನವಾದ ರಾಜಕುಮಾರ ರಿಚರ್ಡ್ ಹೋಳ್ಕರ್ ವಿನ್ಯಾಸ ಪಡಿಸಿದ ಮನೋಹರವಾದ 14 ಕೊಠಡಿಗಳನ್ನು ಹೊಂದಿದೆ.ಕಟ್ತಡವನ್ನು ಮಾಸಿದ ಹಳೆಯ ಕಲ್ಲಿನ ನೆಲಹಾಸುಗಳಿಂದ, ಪ್ರಾಚೀನ ಶಟರ್ ಬಾಗಿಲುಗಳು, ಬಾಗಿದ ಕಮಾನುಗಳು, ರಹಸ್ಯ ಮಹಡಿಗಳು, ಹಸಿರಿನ ಉದ್ಯಾನವನ ಗಳಿಂದ ಸುಸಜ್ಜಿತಗೊಳಿಸಿ, ಕೊಠಡಿಗಳಿಗೆ ವಿಶೇಷ ವಾಸ್ತುಶಿಲ್ಪ ವಿನ್ಯಾಸ ನೀಡಲಾಗಿದೆ.

ಪರಮಾನಂದದ ಕಿಟಕಿ

Window of Bliss

ಅಹಿಲ್ಯ ಬಾಯ್ ಪೂಜಾ ಸೇವೆಗಳನ್ನು ಕೈಗೊಳ್ಳುತ್ತಿದ್ದ ಲಿಂಗಾರ್ಚನ್ ಅಂಗಳ ಹಾಗೂ ನೂರಾರು ಶಿವಲಿಂಗಗಳಿವೆ. ಇಂದು ಇಲ್ಲಿ ನೀಮ್ ಮತ್ತು ಇಮ್ಲಿ ಎನ್ನುವ ಎರಡು ವಿಚಿತ್ರ ಕೊಠಡಿಗಳಿದ್ದು, ಇಲ್ಲಿನ ಕಿಟಕಿಗಳಿಂದ ನರ್ಮದೆಯ ವಿಹಂಗಮ ರಮಣೀಯ ನೋಟವನ್ನು ವೀಕ್ಷಿಸಬಹುದು.

ನದಿದಂಡೆಯ ಮೇಲಿನ ಕಲ್ಯಾಣಿಗಳು

Ghat besides the fort

ಸ್ವಲ್ಪ ಮುಂದೆ ಸಾಗಿದರೆ, ಕೋಟೆಯ ಮೆಟ್ಟಿಲುಗಳನ್ನು ಇಳಿದರೆ ಕಲ್ಯಾಣಿಗೆ ಹೋಗಬಹುದು.ಅಹಿಲ್ಯ ಕೋಟೆಯ ಅತುತ್ತಮ ಸಂಗತಿಗಳಲ್ಲಿ ಒಂದೆಂದರೆ, ನದಿದಂಡೆಯ ಮೆಟ್ಟಿಲುಗಳ ಮೇಲೆ ಕುಳಿತು ಭಾರತೀಯ ಜೀವನದ ನೋಟವನ್ನು ವೀಕ್ಷಿಸುವುದು. ಪ್ರತಿ ಮುಂಜಾನೆ ನರ್ಮದೆಯ ಮೇಲೆ ಸೂರ್ಯ ಉದಯಿಸುತ್ತಿದ್ದಂತೆ, ನೂರಾರು ಜನರು ನದಿಯಲ್ಲಿ ಮೀಯುವುದನ್ನು, ಪೀಜಿಸುವುದನ್ನು ಹಾಗೂ ಪ್ರಾರ್ಥನೆ ಮಾಡುವುದನ್ನು ನೋಡುವುದೇ ಒಂದು ಸುಂದರ ದೃಶ್ಯ.

ಇಲ್ಲಿ ದೇವರೊಂದಿಗೆ ಸುಲಭವಾಗಿ ಲೀನವಾಗಬಹುದು

Temple in Maheshwar

ಮಹೇಶ್ವರದ ಮತ್ತೊಂದು ಶ್ರೇಷ್ಟ ಸಂಗತಿ ಎಂದರೆ, ಇಲ್ಲಿನ ದೇವಸ್ಥಾನಗಳ ಸುತ್ತಮುತ್ತ ನಿಮಗೆ ಪುರೋಹಿತರ ಅಥವಾ ದಳ್ಳಾಳಿಗಳ ಕಾಟವಿಲ್ಲ. ಇಲ್ಲಿನ ದೇವಸ್ಥಾನಗಳಿಗೆ ವಾಣಿಜ್ಯತೆ ಇನ್ನೂ ತಟ್ಟಿಲ್ಲ. ಹಾಗಾಗಿ ಯಾವುದೋ ಒಂದು ಮೇಲೆಯಲ್ಲಿ ಕುಳಿತು ತನ್ಮಯತೆಯಿಂದ ದೇವರನ್ನು ಸುಲಭವಾಗಿ ಧ್ಯಾನಿಸಬಹುದು.

ಮಹೇಶ್ವರಿ ಸೀರೆಗಳ ಗೃಹಗಳ ಬಗ್ಗೆ ಯೋಚಿಸುತ್ತಿರುವಿರಾ?

Maheshwari Textiles and its sarees

ಶಿವನ ಭಕ್ತೆಯಾದ ರಾಣಿ ಅಹಿಲ್ಯ, ಜನರಿಗಾಗಿ ಅನೇಕ ದೇವಸ್ಥಾನಗಳನ್ನು ನಿರ್ಮಿಸುವುದಶ್ಟೇ ಅಲ್ಲದೆ, ಇಂದಿಗೂ ನಾರಿಯರು ಮೆಚ್ಚುವಂಥ ಸುಂದರ ಜವಳಿಗಳ ಉಡುಗೊರೆಯನ್ನೂ ನೀಡಿದಳು.ಮಹೇಶ್ವರ್ ನೇಯ್ಗೆ ಕೇಂದ್ರ ಪ್ರಸಿದ್ಧವಾದ ಹಾಗೂ ಮನೋಹರವಾದ ಮಹೇಶ್ವರಿ ಸೀರೆಗಳನ್ನು ತಯಾರಿಸುತ್ತದೆ. ಇವು ಸರಳವೂ, ಸುಂದರವೂ ಹಾಗೂ ಅಧುನಿಕವೂ ಆಗಿವೆ.

ಬೆಳದಿಂಗಳಲ್ಲಿ ದೋಣಿ ವಿಹಾರ

A boat ride along the banks of river Narmada

ಸಂಜೆ ತಾಪಮಾನ ಕಡಿಮೆಯಾದಂತೆ, ಸುಂದರವಾಗಿ ವರ್ಣರಂಜಿತವಾದ ದೋಣಿಗಳು ನಿಮ್ಮನ್ನು ನದಿವಿಹಾರಕ್ಕೆ ಕರೆದೊಯ್ಯಲು ಸಿದ್ಧವಾಗಿರುತ್ತವೆ. ಈ ವಿಹಾರದಲ್ಲಿ ಮಹೇಶ್ವರ ದೇವಸ್ಥಾನದ ಹಿಂಬದಿಯಲ್ಲಿ ಸೂರ್ಯಾಸ್ತದ ನೋಟ ಅತ್ಯಂತ ನಯನಮನೋಹರ. ಕತ್ತಲಾಗುತ್ತಿದ್ದಂತೆ, ನೂರಾರು ಹಣತೆಗಳನ್ನು ನದಿಯಲ್ಲಿ ತೇಲಿಬಿಡಲಾಗುವುದು. ಅವು ನಿಧಾನವಾಗಿ ಅಲೆಯೊಂದಿಗೆ ನದಿಯ ಹರಿವಿನ ಜೊತೆ ಹೋಗುತ್ತ ಜೊತೆಗೆ ನಿಮ್ಮ ಕನಸುಗಳನ್ನೂ ಹೊತ್ತೊಯ್ಯುತ್ತವೆ.

ಪ್ರಖ್ಯಾತವಾದ ಮಂಡು ನಗರ ಹಾಗೂ ದ್ವೀಪ ದೇವಾಲಯ ಓಂಕಾರೇಶ್ವರ ಸಮೀಪವೇ ಇದೆ. ಅಹಿಲ್ಯ ಮತ್ತು ಮಹೇಶ್ವರ, ಸರಳತೆಯ, ಪ್ರಶಾಂತತೆ ಹಾಗೂ ಮನಸ್ಸು ಹಗುರ ಮಾಡಿಕೊಳ್ಳಬಹುದಾದ ಸುಂದರ ತಾಣಗಳು ಮಹೇಶ್ವರಕ್ಕೆ ಅತ್ಯಂತ ಸಮೀಪದ ರೈಲು ನಿಲ್ದಾಣವೆಂದರೆ 39 ಕಿ.ಮೀ. ದೂರದಲ್ಲಿರುವ ಬರ್ವಾಹ ರೈಲು ನಿಲ್ದಾಣ. ರಸ್ತೆಯ ಮೂಲಕ ಸಮೀಪದ ನಗರವೆಂದರೆ ಇಂಧೋರ್. ಮುಂಬೈ, ದೆಹಲಿ, ಭೋಪಾಲ್ ಹಾಗೂ ಭಾರತದ ಅನೇಕ ನಗರಗಳಿಂದ ಇಲ್ಲಿ ರೈಲು ಸಂಪರ್ಕವಿದೆ. ರೈಲು ನಿಲ್ದಾಣದಿಂದ ಮಹೇಶ್ವರಕ್ಕೆ ಹೋಗಲು ಬೇಕಾದಷ್ಟು ಟ್ಯಾಕ್ಸಿಗಳು ಸಿಗುತ್ತವೆ.

LEAVE A REPLY

Please enter your comment!
Please enter your name here