6 ನೋಡಲೇಬೇಕಾದ ದಮನ್ ಮತ್ತು ಡಿಯು ಬೀಚ್ ಗಳು

0
2109

ಭಾರತದಲ್ಲಿನ ಸಮುದ್ರದಡಗಳು ಕೇವಲ ಮರಳು ಮತ್ತು ಸಮುದ್ರದ ಸಂಯೋಜನಯಾಗಿರುವುದಿಲ್ಲ. ಕೆಲವೊಮ್ಮೆ, ಅದರ ಅರ್ಥ ಚಾಟ್, ಆಟಿಕೆಗಳು ಮತ್ತು ಕಬ್ಬಿನ ಹಾಲಿನ ಮಾರಾಟಗಾರರ ದಂಡುಗಳು ಎಂದು. ಇತರೆ ಸಮಯದಲ್ಲಿ, ಒಂದು ಬೀಚ್ ಎಂದರೆ ಶುದ್ಧವಾದ ನೀರು ಹಾಗೂ ತಾಳೆ ಮರಗಳಾಗಿರುತ್ತದೆ, ಆದರೆ ಇತರರಿಗೆ ಅದೆಲ್ಲವೂ ಸಾಹಸಮಯ ಜಲಕ್ರೀಡೆಗಳ ತಾಣವಾಗಿರುತ್ತದೆ. ಆದರೆ ನೀವು ಪರಿಶುದ್ಧತೆಯನ್ನು ನೋಡಬಯಸಿದರೆ, ದಮನ್ ಮತ್ತು ಡಿಯು ಬೀಚ್ ಗಳೆ ನಿಮ್ಮ ನೆಚ್ಚಿನ ತಾಣಗಳು.

ದಮನ್ ನ ಉತ್ತಮ ಬೀಚ್ ಗಳು

ದೇವ್ಕಾ ಬೀಚ್

Kannada Travel Blog

ಅತಿ ಉದ್ದದ ಸಮುದ್ರತೀರ ವಿರುವ, ಈ ದಮನ್ ಬೀಚ್ ಕೆಲವು ಕೌಟುಂಬಿಕ ಆನಂದದ ಉತ್ತಮಸ್ಥಳ. ದೆವ್ಕಾ ಬೀಚ್ ನಲ್ಲಿ ಕೆಲವು ಕಲ್ಲಿನ ಬಂಡೆಗಳಿವೆ, ಹಾಗಾಗಿ, ಪ್ರತಿ ಭಾಗದಲ್ಲೂ ಈಜುವುದು ನಿಷಿದ್ಧ. ಇಲ್ಲಿನ ಅಮ್ಯುಸ್ಮೆಂಟ್ ಪಾರ್ಕ್ ಮನೋರಂಜನೆಗೆ ಸೇರ್ಪಡೆಯಾಗುತ್ತದೆ ಮತ್ತು ಮಕ್ಕಳಿಗೆ ಹೇಲಿ ಮಾಡಿಸಿದ ತಾಣ. ಕಾಫಿ ಹೀರುವುದು ಅಥವಾ ಕಡಲ ನೋಡುತ್ತಾ ಸುಟ್ಟ ಮೀನನ್ನು ಬಿಸಿ ತಟ್ಟೆಯಲ್ಲಿ ತಿನ್ನುವುದು, ದೆವ್ಕಾ ಬೀಚ್ ಆನಂದಭರಿತ ಪ್ರವಾಸವನ್ನು ನೀಡುತ್ತದೆ.

ಟ್ರವಿಯ: ಈ ಬೀಚ್ ನಲ್ಲಿ ಚಿನ್ನದ ಬಣ್ಣದ ಮರಳಿಲ್ಲ, ಆದರೆ ಇದು ಕಪ್ಪು ಮಣ್ಣಿನಿಂದ ತುಂಬಿದೆ.

 ಜಾಂಪೋರ್ ಬೀಚ್
Jampore-Beach

ದೇವ್ಕಾ ಬೀಚಿಗೆ ವಿಭಿನ್ನವಾಗಿ, ಜಾಂಪೋರ್ ಬೀಚ್ ಗೆ ಅದರದೇ ಆದ ಹೊಳಪಿದೆ. ದಮನ್ ನ ದಕ್ಷಿಣ ತುದಿಯಲ್ಲಿ ಸ್ಥಾಪಿತವಾದ, ಇದು ದಮನ್ ಬೀಚ್ ಸ್ವಲ್ಪ ಮನಃಶಾಂತಿಯನ್ನು ಬಯಸುವವರಿಗಾಗಿ. ಇಲ್ಲಿ, ಯಾವುದೇ ಅಮ್ಯುಸ್ಮೆಂಟ್ ಪಾರ್ಕ್ ಇಲ್ಲ ಅಥವಾ ನಿಮ್ಮ ಗಮನ ಸೆಳೆಯುವ ಹತ್ತಿರಹತ್ತಿರ ವಿರುವ ಅಂಗಡಿಗಳಿಲ್ಲ. ಅದಕ್ಕೆ ವಿರುದ್ಧವಾಗಿ ನೀವು ವಿಶ್ರಾಂತಿ ಪಡೆಯಲು, ಅರೇಬಿಯನ್ ಸಮುದ್ರದ ತಂಪಾದ ನೀರಿನಲ್ಲಿ ಈಜಲು ಅಥವಾ ಸರ್ವೆಮರಗಳ ತೋಟದ ನೆರಳಲ್ಲಿ ಕೂಡಬೇಕಾದರೆ, ಆಗ ಜಾಂಪೋರ್ ಬೀಚ್ ನಿಮ್ಮ ಬಗೆಯಾದುದು.

ಸಲಹೆ: ಈ ಬೀಚ್ ನಲ್ಲಿ ಆಕರ್ಷಕ ಸೂರ್ಯಾಸ್ತದ ದೃಶ್ಯಗಳನ್ನು ನೋಡಬಹುದು, ಅದರ ಪ್ರಕಾರವಾಗಿ ನಿಮ್ಮ ಪ್ರಯಾಣವನ್ನು ಯೊಜಿಸಿ.

ಡಿಯುನ ಉತ್ತಮ ಬೀಚ್ ಗಳು

ನಾಗೋವ ಬೀಚ್

Nagoa Beach

ಈ ಸಣ್ಣ ಮೀನುಗಾರಿಕೆ ಹಳ್ಳಿಯು ಒಂದು ಅಹ್ಲಾದಕರ ಡಿಯು ಬೀಚ್ ಅನುಭವವನ್ನು ನೀಡುತ್ತದೆ. ಕುದುರೆಆಕಾರದ ನಾಗೋವ ಬೀಚ್ ಒಂದು ಪ್ರಮುಖ ಪ್ರವಾಸಿ ಆಕರ್ಷಣೆ ಹಾಗೂ ಅತೀ ಹೆಚ್ಚು ಶ್ರೇಣಿಯ ಆನಂದವನ್ನು ಬಯಸುವ ಪ್ರವಾಸಿಗರಿಗೆ ವಿವಿಧ ದಾರಿಯನ್ನು ನೀಡುತ್ತದೆ ಅವುಗಳೆಂದರೆ ಬನಾನ ಬೋಟ್ ರೈಡ್, ಪ್ಯಾರಾಸೇಲಿಂಗ್, ಜೆಟ್ ಸ್ಕೀಯಿಂಗ್ ಮತ್ತು ಸರ್ಫಿಂಗ್. ತೆಂಗು ಮತ್ತು ಮುಸುಕಿನ ಜೋಳದ ಮಾರಾಟಗಾರಿಂದ ಕೂಡಿದ, ನಾಗೋವ ಬೀಚ್ ಡಿಯುನಲ್ಲಿ ಭೇಟಿ ಮಾಡಬೇಕಾದ ಅತ್ಯಂತ ಜನಪ್ರಿಯ ಸ್ಥಳವಾಗಿದೆ.

ಟ್ರಿವಿಯಾ: ನಾಗೋವ ಎಂದರೆ ಹೊಸ ಗೋವ“. ಪಾಳೆಗಾರರ ಆಡಳಿತದಲ್ಲಿ ಹಲವಾರು ಗೋವಾ ಕುಟುಂಬಗಳು ಈ ಬೀಚ್ ನಲ್ಲಿ ವಾಸವಿದ್ದರು.

ಚಕ್ರತೀರ್ಥ ಬೀಚ್

Chakratirth-Beach

ಹೆಚ್ಚು ಕಡಿಮೆ ಡಿಯು ನ ಮಧ್ಯಭಾಗದಲ್ಲಿರುಅ, ಚಕ್ರತೀರ್ಥ ಬೀಚ್ ಪ್ರಶಾಂತತೆ ಹುಡುಕುವವರ ತಾಣ. ಶಾಂತ ಮತ್ತು ವಿಭಿನ್ನವಾಗಿ ವ್ಯವಸ್ಥಿತವಾಗಿದ್ದು, ಕಡಲ ತೀರದ ಪರ್ಯಂತವೂ ಕಲ್ಲುಗಳ ಸಾಲಿದೆ, ಈ ಡಿಯು ಬೀಚ್ ನಲ್ಲಿ ಖಚಿತವಾದ ಫೋಟೊಗ್ರಫಿಕ್ ಸ್ಥಳಗಳ ಅತ್ಯಾಕರ್ಷಕ ವ್ಯವಸ್ಥೆ ಇದೆ. ಡಿಯುನ ಸೂರ್ಯಾಸ್ತ ಸ್ಥಳವು ಬೀಚ್ ನಲ್ಲಿದೆ ಹಾಗೂ ಆ ಸೂರ್ಯಾಸ್ತವನ್ನು ನೀವು ನೋಡದೆ ಇರಲು ಸಾಧ್ಯವಿಲ್ಲ. ಅಷ್ಟು ವರ್ಣರಂಜಿತವಾಗಿರುತ್ತದೆ.

ಟ್ರಿವಿಯಾ: ಚಕ್ರತೀರ್ಥವನ್ನು ಬೀಚ್ ಹತ್ತಿರವಿರುವ ಶ್ರೀ ಕೃಷ್ಣ ದೇವಾಲಯದ ಉಲ್ಲೇಖದಿಂದ ಹೆಸರಿಸಲಾಗಿದೆ. ಈ ದೇವಾಲಯಕ್ಕೆ ಹಲವಾರು ಧಾರ್ಮಿಕ ಹಿನ್ನೆಲೆಗಳಿವೆ.

 ಘೊಗ್ಲಾ ಬೀಚ್

Ghoghla-Beach

ಡಿಯು ನಿಂದ 15 ಕಿಮಿ ದೂರದಲ್ಲಿರುವ, ಘೊಗ್ಲ ಬೀಚ್ ಒಂದು ಆರಾಮದಾಯಕ ಅನುಭವವನ್ನು ಒದಗಿಸುವ ಡಿಯುನಲ್ಲಿನ ಮತ್ತೊಂದು ವೀಕ್ಷಿಸಲೇ ಬೇಕಾದ ಸ್ಥಳ. ನಾಗೋವ ಬೀಚ್ ನಮ್ತೆ ಹೆಚ್ಚು ಜನಪ್ರಿಯತೆ ಮತ್ತು ಜನಸಂದಣಿ ಇರದ ಬೀಚ್, ನೀವು ಕೆಲವು ಜಲಕ್ರೀಡಾ ಚಟುವಟಿಕೆಗಳನ್ನು ಇಲ್ಲಿಯೂ ಮಾಡಬಹುದು. ಘೋಗ್ಲಾ ಬೀಚ್ ನಿಮ್ಮ ಈಜಿನ ಸಾಮಗ್ರಿಗಳಿಗಾಗಿ ಒಂದು ನಿಶ್ಚಿತ ಸ್ಥಳವಾಗಿದೆ ಹಾಗೂ ನಿಮ್ಮ ಮಕ್ಕಳೊಂದಿಗೆ ಕೆಲವು ಸಮಯವನ್ನು ಕಳೆಯಬಹುದು. ಅಂತೆಯೇ ಮತ್ತೊಂದು ವಿಷಯ, ನಿಮಗೆ ಅದೃಷ್ಟವಿದ್ದರೆ ಕೆಲವು ಡಾಲ್ಫಿನ್ ಗಳನ್ನು ಸಹ ನೋಡಬಹುದು.

ಟ್ರಿವಿಯಾ: ಈ ಬೀಚ್ ವಿವಾಹಪೂರ್ವ ಫೋಟೊ ಶೂಟ್ ಗಾಗಿ ಒಂದು ಜನಪ್ರಿಯ ಸ್ಥಳವಾಗಿದೆ

ಜಲಂಧರ ಬೀಚ್

Jallandhar-Beach

ಜಲಂಧರ್ ಬೀಚ್, ತಾಳೆ ಮರಗಳಿಂದ ಕೂಡಿದ್ದು, ಚಿತ್ರಗಳಲ್ಲಿ ಬರೆಯುವ ಬೀಚ್ ಗಳ ನಿಜಜೀವನದ ಚಿತ್ರಣದಂತೆಯೇ ಇರುತ್ತದೆ. ಜನಸಂದಣಿ ರಹಿತ, ಪ್ರಶಾಂತ ಮತ್ತು ಪರಿಶುದ್ಧವಾದ ಅನುಭವ, ತಾಳೆ ಮರಗಳ ಎಲೆಗಳ ನೆರಳುಗಳ ಮಧ್ಯ ಹಾದುಹೋಗುವ ಆ ದೃಶ್ಯಕ್ಕಿಂತ ಮಿಗಿಲಾದ ಆನಂದ ಮತ್ತೊಂದಿಲ್ಲ.

ಟ್ರಿವಿಯಾ: ಈ ಬೀಚ್ ನ ಹೆಸರನ್ನು ಹತ್ತಿರ ಒಬ್ಬ ಧಾರ್ಮಿಕ ರಾಕ್ಷಸನಿಗೆ ಸೇರಿದ ದೇವಾಲಯಕ್ಕೆ ಅರ್ಪಿಸಲಾಗಿದೆ ಜಲಂಧರ. ಈ ರಾಕ್ಷಸನ್ನು ಕೊಂದದ್ದು ಶ್ರೀ ಕೃಷ್ಣ ಪರಮಾತ್ಮ.

ಹಾಗಾಗಿ, ನೀವು ದಮನ್ ಮತ್ತು ಡಿಯು ಬೀಚ್ ನ ತಾಜಾ, ಲವಣಮಯ ಗಾಳಿಯನ್ನು ಸೇವೆಸಲು ಬಯಸಿತ್ತೀರಾ?