ಕಲ್ಪತಿ:ದಕ್ಷಿಣದ ಕಾಶಿಯ ಅನನ್ಯ ಆಕರಷಣೆಗಳು

0
1108

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿರುವ ಕಲ್ಪತಿಯನ್ನು ಪಾರಂಪರಿಕ ಗ್ರಾಮವಾಗಿ ಘೋಷಿಸಲಾಗಿದೆ. ಈ ಗ್ರಾಮವು ಶ್ರೀ ವಿಶಾಲಾಕ್ಷಿ ಸಮೇತ ಶ್ರೀ ವಿಶ್ವನಾಥ ಸ್ವಾಮಿ ದೇವಸ್ಥಾನಕ್ಕೆ ಪ್ರಸಿದ್ಧವಾಗಿದ್ದು, ಪ್ರತಿ ವರ್ಷ ತೇರು ಉತ್ಸವ ನಡೆಯುತ್ತದೆ. ಪ್ರಕೃತಿಯ ಸೊಬಗಿನ ಸೌಂದರ್ಯದಿಂದ ತುಂಬಿರುವ ಕಲ್ಪತಿ, ತನ್ನದೇ ರೀತಿಯಲ್ಲಿ ವಿಶಿಷ್ಟವಾಗಿದೆ. ಈಗ ಈ ಗ್ರಾಮವನ್ನು ಅನ್ವೇಷಿಸೋಣ.

ಅನನ್ಯವಾದ ಅಗ್ರಹಾರಗಳು

Agraharams

ಅಗ್ರಹಾರಗಳೆಂದರೆ, ಕಲ್ಪತಿಯ ಬ್ರಾಹ್ಮಣರು ವಾಸಿಸುವ ಮನೆಗಳ ಪ್ರದೇಶ. ಪ್ರತಿ ಮನೆಗೂ ನಿರ್ದಿಷ್ಟ ನಿರ್ಮಾಣ ವಿನ್ಯಾಸವಿದೆ. ಸಮಾನ ಗೋಡೆಗಳು, ಪೂರ್ವದಿಂದ ಪಶ್ಚಿಮದ ಕಡೆಗೆ ಕಟ್ಟಿದ ಇಳಿಜಾರಿನ ಛಾವಣಿಗಳು ವಿರುದ್ಧ ದಿಕ್ಕಿಗಳಲ್ಲಿ ಒಂದುಗೂಡುತ್ತವೆ. ಮಕ್ಕಳು ಆಟವಾಡಲು ಮೈದಾನ, ಧಾರ್ಮಿಕ ಕಾರ್ಯಗಳನ್ನು ನಡೆಸಲು ಪ್ರತ್ಯೇಕ ಸ್ಥಳ ಹಾಗೂ ಶೇಖರಣಾ ಕೊಠಡಿಗಳಿಂದ ಅಗ್ರಹಾರಗಳನ್ನು ನಿರ್ಮಿಸಲಾಗಿರುತ್ತದೆ.

ಅಗ್ರಹಾರ

Agrahara

ಅಗ್ರಹಾರಗಳು ಬ್ರಾಹ್ಮಣರು ವಾಸಿಸುವ ಸಮುಚ್ಛಯಗಳಾಗಿದ್ದು ಹೊಸ ಕಲ್ಪತಿ, ಹಳೆ ಕಲ್ಪತಿ, ಛಾತ್ತಪುರಂ ಮತ್ತು ಗೋವಿಂದರಾಜಪುರಂ ಮುಂತಾದ ವಿವಿಧ ಅಗ್ರಹಾರಗಳಾಗಿ ಶಾಖೆಗಳಿಂದ ಕೂಡಿದೆ. ಹಳೆ ಕಲ್ಪತಿಯಲ್ಲಿ ಶ್ರೀ ಲಕ್ಷ್ಮೀನಾರಯಣ ಪೆರುಮಾಳ್ ದೇವಸ್ಥಾನವಿದೆ, ಛಾತ್ತಾಪುರಂನಲ್ಲಿ ಪ್ರಸನ್ನ ಮಹಾ ಗಣಪತಿ ಹಾಗೂ ಹೊಸ ಕಲ್ಪತಿಯಲ್ಲಿ ಮಂಠಕರ ಮಹಾ ಗಣಪತಿ ದೇವಸ್ಥಾವಿದೆ. ಈ ದೇವಸ್ಥಾನಗಳು, ಆಯಾ ಬ್ರಾಹ್ಮಣರ ಅಗ್ರಹಾರಗಳಲ್ಲಿರುವ ಮನೆಗಳ ಹಾಗೂ ಆಚರಣೆಗಳನ್ನು ಸೂಚಿಸುತ್ತವೆ ಎಂದು ಇಲ್ಲಿಯ ಬ್ರಾಹ್ಮಣರ ನಂಬಿಕೆ.

ಶ್ರೀ ವಿಶಾಲಾಕ್ಷಿ ಸಮೇತ ಶ್ರೀ ವಿಶ್ವನಾಥ ಸ್ವಾಮಿ ದೇವಸ್ಥಾನ

Temple in Kalpathy

ಸ್ಥಳೀಯವಾಗಿ “ಕುಂದು ಕೋವಿಲ್: ಎಂದು ಕರೆಯಲ್ಪಡುವ ಶ್ರೀ ವಿಶಾಲಾಕ್ಷಿ ಸಮೇತ ಶ್ರೀ ವಿಶ್ವನಾಥ ಸ್ವಾಮಿ ದೇವಸ್ಥಾನ, ಶಿವ-ಪಾರ್ವತಿಯರ ದೇವಸ್ಥಾನ. ಮಲಬಾರ್ ಪ್ರದೇಶದಲ್ಲಿ ಇದು ಅತ್ಯಂತ ಪುರಾತನ ದೇವಸ್ಥಾನ. ಕಲ್ಪತಿ ನದ್ದಂಡೆ ಮೇಲೆ ಸ್ಥಾಪಿತವಾಗಿ, ಅತ್ಯಂತ ಪ್ರಮುಖ ದೇವಸ್ಥಾನವಾಗಿದೆ. ವಿಶ್ವನಾಥ ಸ್ವಾಮಿ ದೇವಸ್ಥಾನವು ಹದಿನೆಂಟು ಮೆಟ್ಟಿಲುಗಳ ತಳದಲ್ಲಿ ಸ್ಥಾಪಿತವಾಗಿದ್ದು, ಇದನ್ನು ಕುಂದಂಬಲಂ ಎನ್ನುತ್ತಾರೆ.

ಕಲ್ಪತಿ ರಥೋತ್ಸವ ಅಥವಾ ಕಲ್ಪತಿ ತೇರು

Rathotsavam

ನವೆಂಬರ್ ತಿಂಗಳ ಮೊದಲೆರಡು ವಾರದಲ್ಲಿ(ನವೆಂಬರ್ 8010 ಈ ವರ್ಷ) ನಡೆಯುವ ಈ ಉತ್ಸವ, ಕೇರಳ ಈ ಪುಟ್ಟ ಗ್ರಾಮದ ಅತಿ ದೊಡ್ಡ ಉತ್ಸವ. 700 ವರ್ಷಗಳಿಂದ ಆಚರಿಸಲ್ಪಡುತ್ತಿರುವ ಈ ಉತ್ಸವದಲ್ಲಿ ಕಲ್ಪತಿಯ ನಾಲ್ಕು ದೇವಸ್ಥಾನಗಳಿಂದ ಭಕ್ತರು 4 ರಥಗಳನ್ನು ಎಳೆದು, ಗ್ರಾಮದ ಬೀದಿಗಳಲ್ಲಿ ಓರುವಲಂ ಎನ್ನುವ ಮೆರವಣಿಗೆಯಲ್ಲಿ ಸಾಗುತ್ತವೆ. ಪ್ರಧಾನ ರಥದಲ್ಲಿ ಶಿವನ ಮೂರ್ತಿ ಒಯ್ಯಲ್ಪಡುತ್ತದೆ ಹಾಗೂ ಉಳಿದ 2 ಸಣ್ನ ರಥಗಳಲ್ಲಿ ಅವನ ಇಬ್ಬರು ಮಕ್ಕಳಿರುತ್ತಾರೆ. ಇತರ ಗ್ರಾಮಗಳಿಂದ ಸೇರಿಕೊಳ್ಳುವ ರಥಗಳು ಸೇರಿಕೊಂಡು ದೇವರತಾ ಸಂಗಮಂ ಆಗುತ್ತದೆ. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಸಂಗೀತೋತ್ಸವ. ವಿಶ್ವಾದ ನಾನಾ ಭಾಗಗಳ ಪ್ರಸಿದ್ಧ ಸಂಗಿತಗಾರರು, ಯವೌದೇ ಸಂಭಾವನೆ ಸ್ವೀಕರಿಸದೆ ಇಲ್ಲಿ ಬಂದು ಹಾಡುತ್ತಾರೆ.

ಕಲ್ಪತಿ ತಲುಪುವುದು ಹೇಗೆ?

ಸಮೀಪದ ಪಟ್ಟಣ: ಪಾಲಕ್ಕಾಡ್(3 ಕಿ.ಮೀ)

ಸಮೀಪದ ರೈಲು ನಿಲ್ದಾಣ : ಪಾಲಕ್ಕಾಡ್ ಜಂಕ್ಷನ್(1 ಕಿ.ಮೀ)

ಸಮೀಪದ ವಿಮಾನ ನಿಲ್ದಾಣ : ಕೊಯಮತ್ತೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(55 ಕಿ.ಮೀ)

 

Originally written by Jayakrishnan Jayaraj Kozhipurath. Read here.

LEAVE A REPLY

Please enter your comment!
Please enter your name here