ನೀವು ನಿಮ್ಮ ಬೇಸಿಗೆ ಪ್ರವಾಸವನ್ನು ಆಲೋಚಿಸುತ್ತಿರುವಾಗ, ನಿಮಗಿರುವ ಅತ್ಯಂತ ದೊಡ್ಡ ಸವಾಲೆಂದರೆ ಒಂದು ಕನ್ಫರ್ಮ್ ಆದ ರೈಲ್ ಟಿಕ್ಟ್ ಪಡೆಯುವುದು. 120 ದಿನಗಳ ಮುಂಗಡ ಬುಕಿಂಗ್ ಅವಕಾಶದೊಂದಿಗೆ ಮತ್ತು ಆನ್ಲೈನ್ ಟಿಕೆಟ್ಸ್ ಬುಕಿಂಗ್ ನ ಸರಳತೆಯೊಂದಿಗೆ, ವರ್ಷದ ಪರ್ಯಂತವೂ ಟಿಕೆಟುಗಳಿಗಾಗಿಯಾವಾಗಲೂ ಅಭಾವವಿರುತ್ತದೆ. ಯಾವಾಗ ಕುಟುಂಬದವರಿಗೆ ರಿಸರ್ವೇಷನ್ ಕನ್ಫರ್ಮ್ ಆಗುವುದಿಲ್ಲವೋ, ಆಗ ಅವರು ತಮ್ಮ ಪ್ರಯಾಣ ಯೋಜನೆಯನ್ನು ರದ್ದುಪಡಿಸಿಕೊಳ್ಳಬೇಕು ಇಲ್ಲವಾದಲ್ಲಿ ಮುಂದೂಡಬೇಕು. ಅದಾಗ್ಯೂ, ರೈಲ್ ಯಾತ್ರಿ ಯೊಂದಿಗೆ, ನೀವು ನಿಮ್ಮ ಪ್ರವಾಸ ಯೋಜನೆಯನ್ನು ರದ್ದುಪಡಿಸುವ ಆಲೋಚನೆ ಮಾಡುವಂತಿಲ್ಲ. ನಮ್ಮ ಆಪ್ ಜನನಿಬಿಡ ಸಮಯದಲ್ಲಿಯೂ ಸಹ ಒಂದು ಕನ್ಫರ್ಮ್ ಆದ ಟಿಕೆಟ್ ಪಡೆಯಲು ಅಗತ್ಯವಾದ ಪರಿಶೋಧನೆಯನ್ನು ನಿರ್ವಹಸಿ ನಿಮಗೆ ಸಹಾಯ ಮಾಡುತ್ತದೆ.
ಕನ್ಫರ್ಮ್ ಆದ ರೈಲ್ ಟಿಕೆಟ್ ಪಡೆಯುವ 5 ಹಂತಗಳು
1. ಸ್ಟೇಷನ್ ಗಳ ನಡುವಿನ ರೈಲುಗಳನ್ನು ತಿಳಿಯಿರಿ:
ಪ್ರತಿ ಕುಟುಂಬದಲ್ಲೂ ಒಬ್ಬ ಪ್ರಯಾಣ ಯೋಜಕರು ಇರುತ್ತಾರೆ, ಅವರು ತಮ್ಮ ಸಹೋದ್ಯೋಗಿಗಳನ್ನು ಮತ್ತು ಸ್ನೇಹಿತರನ್ನು ಹೊರಡಬಹುದಾದ ರೈಲುಗಳ ನಿರೀಕ್ಷಿತ ಪಟ್ಟಿಯ ಬಗ್ಗೆ ಚರ್ಚಿಸುತ್ತಾರೆ. ಭಾರತೀಯ ರೈಲ್ವೇ ಹೆಚ್ಚಾದ ಜನಸಂದಣಿಯನ್ನು ನಿರ್ವಹಿಸಲು ವಿಶೇಷ ರೈಲುಗಳನ್ನು ಒದಗಿಸುತ್ತದೆ. ನೀವು ಮಾರ್ಗದ ಜೊತೆಯಲ್ಲಿ ಸಂಪೂರ್ಣ ರೈಲುಗಳ ಪಟ್ಟಿಯನ್ನು ಪಡೆಯಬಹುದು (ಸಾಮಾನ್ಯ ಮತ್ತು ವಿಶೇಷ). ಇದಲ್ಲದೇ, ಒಂದೊಮ್ಮೆ ನೀವು ಒಂದು ನಿರ್ದಿಷ್ಟ ಪ್ರವಾಸವನ್ನು ಸೇವ್ ಮಾಡಿದರೆ, ರೈಲ್ ಯಾತ್ರಿ ಆಪ್ ವಿಶೇಷ ರೈಲುಗಳ ಘೋಷಣೆಗಳ ಬಗ್ಗೆ ನಿಮಗೆ ಸೂಚಿಸುತ್ತದೆ.
2. ವಾರದ ಅತಿ ಕಡಿಮೆ ಜನಸಂದಣಿಯ ದಿನಗಳನ್ನು ಗುರುತಿಸಿ:
ರೈಲ್ ಯಾತ್ರಿ ಯಲ್ಲಿನ ಡೆಟಾ ಅನಾಲಿಸ್ಟ್ ತಂಡದವರು ಎಲ್ಲಾ ರೈಲ್ ಪ್ರಯಾಣಿಕರಿಗಾಗಿ ಒಂದು ಆಕರ್ಷಕ ಒಳನೋಟವನ್ನು ನೀಡುತ್ತಾರೆ. ದತ್ತಾಂಶವು ತೋರಿಸುವಂತೆ ವಾರದಲ್ಲಿ ಗರಿಷ್ಠ ಜನಸಂದಣಿ ಇರುವ ದಿನಗಳೆಂದರೆ ಶುಕ್ರವಾರ ಮತ್ತು ಭಾನುವಾರ ಹಾಗಾಗಿ, ನೀವು ಒಂದು ಪ್ರವಾಸವನ್ನು ಯೋಜಿಸುವಾಗ, ಹೊರಡುವ ಮತ್ತು ಮರಳುವ ದಿವಸಗಳಲ್ಲಿ ಈ ಎರಡು ದಿನಗಳು ಇರದಂತೆ ನೋಡಿಕೊಳ್ಳಿ. ಬೇಡಿಕೆ ಕಡಿಮೆ ಇರುವಂತಹ ವಾರದ ಮಧ್ಯದ ದಿನಗಳನ್ನು ಆಯ್ಕೆ ಮಾಡಿಕೊಳ್ಳಿ.
3. ಸಣ್ಣ ಪರ್ಯಾಯ ಸ್ಟೇಷನ್ ಗಳ ಬಗ್ಗೆ ಬುದ್ದಿವಂತಿಕೆ:
ಬಹಳಷ್ಟು ಜನರು ಪ್ರತಿಯೊಂದು ಸ್ಟೇಷನ್ನಿನಲ್ಲೂ ಸಹ ಒಂದೇ ರೀತಿಯ ಪ್ರಯಾಣಿಕರ ಪ್ರಮಾಣವಿರುತ್ತದೆ ಎಂದು ನಂಬಿರುತ್ತಾರೆ. ಆದರೆ ಸತ್ಯಾಂಶವೇನೆಂದರೆ ನೀವು ಹೊರಡುವ ಸ್ಟೇಷನ್ನಿನಿಂದ ಅತೀ ವಿರಳವಾಗಿ ಪ್ರಯಾಣಿಕರು ಕೆಲವು ಸ್ಟೇಷನ್ನುಗಳಿಗೆ ಪ್ರಯಾಣಿಸುತ್ತಾರೆ. ಯಾವಾಗ ಪ್ರಮುಖ ಸ್ಟೇಷನ್ನುಗಳಿಗೆ ಟಿಕೆಟ್ ಗಳು ಸಿಗುವುದು ಕಷ್ಟವೆನಿಸಿತ್ತದೆಯೋ, ಆಗ ನೀವು ಹೆಚ್ಚು ಸುಲಭವಾಗಿ ತಲುಪಬಹುದಾದ ಒಂದು ಸಣ್ಣ ಸ್ಟೇಷನ್ನಿಗೆ ಟೆಕೆಟುಗಳನ್ನು ಸರಳವಾಗಿ ಪಡೆಯಬಹುದು.
4. ಸಾಧ್ಯತೆಗಳನ್ನು ಹುಡುಕಿ:
ಒಂದೊಮ್ಮೆ ನೀವು ಈ ಹಿಂದೆ ಹಲವಾರು ಬಾರಿ ಪ್ರಯಾಣ ಮಾಡಿದ್ದಲ್ಲಿ, ನೀವು ಎಲ್ಲಾ ಸ್ಟೇಷನ್ನುಗಳಲ್ಲು ಸಹ ಹತ್ತುವ ಮತ್ತು ಇಳುವ ಜನರ ಸಂಖ್ಯೆಯು ಒಂದೇ ರೀತಿಯಾಗಿ ಇರುವುದಿಲ್ಲ ಎಂದು ನಿಮಗೆ ತಿಳಿದಿರುತ್ತದೆ. ನಿಮ್ಮ ಮಾರ್ಗದಲ್ಲಿ ಕೆಲವು ನಿರ್ದಿಷ್ಟ್ ಸ್ಟೇಷನ್ನುಗಳಿರುತ್ತವೆ ಅಲ್ಲಿ ಪ್ರಯಾಣಿಕರು ಇಳಿಯುವುದು ಹೆಚ್ಚು ಮತ್ತು ಕೆಲವು ಸ್ಥಳದಲ್ಲಿ ಪ್ರಯಾಣಿಕರು ಹತ್ತುವುದು ಹೆಚ್ಚು. ಒಂದೊಮ್ಮೆ ನೀವು ಈ ಅಭ್ಯಾಸದ ಬಗ್ಗೆ ಸ್ವಲ್ಪ ಪರಿಶೋಧನೆ ಮಾಡಿದರೆ, ಆಗ ಕನ್ಫರ್ಮ್ ಟಿಕೆಟ್ ಪಡೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ರೈಲ್ ಯಾತ್ರಿಯು ಲಕ್ಷಾಂತರ ರೈಲು ಪ್ರಯಾಣಿಕರಿಂದ ಈ ಜನಸಂದಣಿಯ ಮೂಲ ದತ್ತಂಶದೊಂದಿಗೆ ಈ ಮಾಹಿತಿಯನ್ನು ನಿಮಗೆ ಒದಗಿಸುತ್ತದೆ.
5. ಕನ್ಪರ್ಮೇಷನ್ ಸಾಧ್ಯತೆಯ ಬಗ್ಗೆ ಖಚಿತವಾಗಿರಿ:
ನಿಮಗೆ ಕನ್ಫರ್ಮ್ ಟಿಕೆಟ್ಸ್ ಸಿಗದಿರುವ ಸನ್ನಿವೇಶಗಳು ಸಹ ಇರುತ್ತದೆ. ನೀವು ವೇಯ್ಟಿಂಗ್ ಲಿಸ್ಟ್ ನಲ್ಲಿ ಟಿಕೆಟ್ ಗಳನ್ನು ಬುಕ್ ಮಾಡಬೇಕಿರುತ್ತದೆ. ಆದರೆ ನೀವು ವೇಯ್ಟಿಂಗ್ ಲಿಸ್ಟ್ ನಲ್ಲಿ ಟಿಕೆಟ್ ಗಳನ್ನು ಬುಕ್ ಮಾಡಬೇಕಿದ್ದಾಗ, ನೀವು ರೈಲ್ ಯಾತ್ರಿ ಆಪ್ ನಲ್ಲಿ ಕನ್ಫರ್ಮೇಷನ್ ಸಾಧ್ಯತೆಯನ್ನು ಸಹ ಪರೀಕ್ಷಿಸಬಹುದು. ಈ ಸಾಧ್ಯತೆಯನ್ನು ವಿವಿಧ ಅಂಶಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ ಅವುಗಳೆಂದರೆ ಟಿಕೆಟ್ ಗಳಿಗಾಗಿ ಬೇಡಿಕೆ, ಈ ಹಿಂದೆ ರದ್ದುಪಡಿಸಿದ ದತ್ತಾಂಶಗಳು, ಹತ್ತುವ ಮತ್ತು ಇಳಿಯುವ ಅಂಕಿಅಂಶಗಳು, ಇತ್ಯಾದಿಗಳು. ನಿಮ್ಮ ಮೊಬೈಲ್ ನಲ್ಲಿ ರೈಲ್ ಯಾತ್ರಿ ಇದ್ದಾಗ, ಹಲವಾರು ಪ್ರವಾಸ ಸಾಧ್ಯತೆಗಳು ಸಾಧ್ಯ. ನಮ್ಮ ಆಪ್ ನ ವಿವಿಧ ವಿಶೇಷತೆಗಳನ್ನು ಬಳಸುವ ಮೂಲಕ ನಿವು ನಿಮ್ಮ ನೆಚ್ಚಿನ ಪ್ರಾವಾಸಿ ಸ್ಥಳಕ್ಕೆ ಗೊಂದಲ ರಹಿತವಾಗಿ ಪ್ರಯಾಣ ಮಾಡಬಹುದು.