ಉದಯಪುರದ 5 ವೀಕ್ಷಿಸಲೇ ಬೇಕಾದ ಕೆರೆಗಳು

0
1137

ಪ್ರಮುಖ ಪ್ರವಾಸಿ ಪತ್ರಿಕೆಗಳಿಂದ ಉತ್ತಮವಾದ ನಗರ ಎಂದು ಮಾನ್ಯತೆ ಪಡೆದಿರುವ,ಉದಯಪುರವು ರಾಜಾಸ್ಥಾನದ ಇತಿಹಾಸದಲ್ಲಿ ಒಂದು ವಿಶೇಷವಾದ ಸ್ಥಾನವನ್ನು ಹೊಂದಿದೆ. 1553 ರಲ್ಲಿ ಮಹರಾಜಾ ಉದಯ ಸಿಂಗ್ ಇವರಿಂದ ಉದ್ಘಾಟಿಸಲಾದ, ಉದಯಪುರವು ಅದರ ಸುಂದರವಾದ ಕೆರೆಗಳಿಗೆ ಹೆಸರುವಾಸಿಯಾದುದು. ಜನಪ್ರಿಯವಾಗಿ ಕೆರೆಯ ನಗರ ಆಥವಾ ಕೆರೆಗಳ ನಗರ ಎಂದು ಕರೆಯಲ್ಪಡುವ, ಉದಯಪುರದ ತುಂಬೆಲ್ಲಾ ಮನಮೋಹಕವಾದ ಕೆರೆಗಳಿವೆ ಅವುಗಳು ಅದರ ಆಂತರಿಕ ಸೌಂದರ್ಯದಿಂದ ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ಹಾಗಾಗಿ, ನೀವು ಯಾವಗಲೇ ಉದಯಪುರಕ್ಕೆ ಒಂದು ಪ್ರಯಾಣವನ್ನುಯೋಜಿಜಿಸಿದರೆ, ಈ ಕೆರೆಗಳ ಯಾವುದೇ ಒಂದರಲ್ಲಿ ಒಂದು ದೋಣಿ ವಿಹಾರವನ್ನು ಮಾತ್ರ ತಪ್ಪಿಸಿಕೊಳ್ಳಬೇಡಿ.

ಫಥೇಹ್ ಸಾಗರ್ ಕೆರೆ

Fateh Sagar Lake
ಈ ಕೆರೆಯಲ್ಲಿ ಮೂರು ದ್ವೀಪಗಳಿವೆ – ನೆಹರು ಪಾರ್ಕ್ (ಕೆರೆಯ ಒಳಗೆಯೇ ಒಂದು ಜನಪ್ರಿಯ ಪ್ರವಾಸಿ ತಾಣ), ಒಂದು ಸಾರ್ವಜನಿಕ ಪಾರ್ಕ್ ಇದರಲ್ಲಿ ವಾಟರ್-ಜೆಟ್ ಫೌಂಟೇನ್ ಇದೆ ಮತ್ತು ಇದು ಉಅದಯಪುರ ಸೌರಶಕ್ತಿ ವೀಕ್ಷಣಾಲಯ (ಯುಎಸ್ಒ) ಕಚೇರಿ ಇರುವ ಒಂದು ದ್ವೀಪ. 1889 ರಲ್ಲಿ, ದಿ “:ಕೊನ್ನಾಟ್ ಡ್ಯಾಮ್” ಅನ್ನು ನಿರ್ಮಿಸಲಾಯಿತು ಮಹಾರಾಣ ಫಥೇಹ್ ಸಿಂಗ್, ವಿಕ್ಟೋರಿಯಾ ರಾಣಿ, ಕೊನ್ನಾಟ್ ನ ಡ್ಯುಕ್ ರ ಭೇಟಿಯನ್ನು ಸ್ಮರಣಾರ್ಥಕಗೊಳಿಸಲು.ಈ ಆಣೆಕಟ್ಟನ್ನು ಆನಂತರ ದೊಡ್ಡೌ ಮಾಡಲಾಯಿತು ಮತ್ತು ಫಥೆಹ್ ಸಾಗರ್ ಕೆರೆ ಎಂದು ಮರುನಾಮಕರಣ ಮಾಡಲಾಯಿತು. ದಟ್ಟವಾದ ಹಸಿರು ಪರ್ವತಗಳೊಂದಿಗೆ ಕೆರೆಯ ತಿಳಿ ನೀಲಿ ಬಣ್ಣವು ಅಂತೆಯೇ ಅದರ ಹಿನ್ನೆಲೆಯು ದೂರದ ಮತ್ತು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ತಾಣವು ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಾರ್ಯಕ್ರಮಗಳಿಗೆ ಒಂದು ನಿಗದಿತ ಸ್ಥಳವಾಗಿದೆ. ಒಂದು ಎರಡು-ದಿನಗಳ ಜಾಗತಿಕ ಸಂಗೀತ ಹಬ್ಬವನ್ನು ಇಲ್ಲಿ ಪ್ರತಿ ವರ್ಷದ ಫೆಬ್ರವರಿಯಲ್ಲಿ ನಡೆಸಲಾಗುತ್ತದೆ ಇದು ಎಲ್ಲಾರಿಗೆ ಒಂದು ದೊಡ್ಡ ಸಂಪತ್ತು. ಈ ಅಭೂತಪೂರ್ವ ಅತ್ಯಾಮೋಘ ಕಾರ್ಯಕ್ರಮಕ್ಕಾಗಿ ಪ್ರಪಂಚದ ಮೂಲೆ ಮೂಲೆಯಿಂದಲೂ ಕಲಾವಿದರು ಇಲ್ಲಿಗೆ ಬರುತ್ತಾರೆ.

ಪಿಚೋಲ ಕೆರೆ

Lake Pichola
ಈ ಕೃತಕ ಕೆರೆಯನ್ನು 1362ರಲ್ಲಿ ಸೃಷ್ಟಿಸಲಾಯಿತು ಮತ್ತು ಅದನ್ನು ಹತ್ತಿರದ ಪಿಚೋಲಿ ಗ್ರಾಮದ ಮೇಲೆ ಹೆಸರಿಸಲಾಯಿತು. ಈ ಕೆರೆಯು 4 ಕಿ.ಮೀ ಉದ್ದವಾಗಿದೆ ಮತ್ತು ನಾಲ್ಕು ಸಣ್ಣ ದ್ವೀಪಗಳನ್ನು ಹೊಂದಿದೆ; ಜಗ್ ಮಂದಿರ್, ಆರ್ಸಿ ವಿಲಾಸ್, ಮೋಹನ್ ಮಂದಿರ್ ಮತ್ತು ಲೇಕ್ ಪ್ಯಾಲೆಸ್. ದಿ ಲೇಕ್ ಪ್ಯಾಲೆಸ್ ಅನ್ನು ಈಗ ಒಂದು ದೊಡ್ಡ ಐತಿಹಾಸಿಕ ಹೋಟೆಲ್ ಆಗಿ ಪರಿವರ್ತಿಸಲಾಗಿದೆ ಮತ್ತು ಉದಯಪುರದ ಭೇಟಿ ಮಾಡಲೇ ಬೇಕಾದ ತಾಣವಾಗಿದೆ. ಪ್ರಚಲಿತವಾದ ಜೇಮ್ಸ್ ಬಾಂಡ್ ಚಲನಚಿತ್ರವಾದ “ಆಕ್ಟೋಪುಸ್ಸಿ” ಅನ್ನು (1983ನೇ ವರ್ಷದಲ್ಲಿ ಬಿಡುಗಡೆಯಾಗಿದ್ದು) ಲೇಕ್ ಪ್ಯಾಲೇಸ್ ನಲ್ಲಿ ಚಿತ್ರಿಸಲಾಗಿದೆ. ಐತಿಹಾಸಿಕವಾಗಿ ಹೇಳುವುದಾದರೆ, ಶಾಹ್ ಜಹಾನನು ತನ್ನ ತಂದೆಯ ವಿರುದ್ಧ ದಂಗೆ ಎದ್ದಾಗ ಜಗ್ ಮಂದಿರದಲ್ಲಿ ಉಳಿದುಕೊಂಡಿದ್ದ. ಆದರೆ ಇಂದು, ಪಿಚೋಲ ಕೆರೆಯು ಉದಯಪುರದ ಅತ್ಯಂತ ಚಿತ್ರೋಪಮ ಕೆರೆಯಾಗಿದೆ.

ಜೈಸಮಂದ್ ಕೆರೆ

Jaisamand Lake
ಭೋಪಾಲದ ಅಪ್ಪರ್ ಲೇಕ್ ನ ನಂತರ ಭಾರತದ ಎರಡನೆಯ ಅತಿದೊಡ್ಡ ಕೃತಕ ಕೆರೆ, ಜೈಸಮಂದ್ ಕೆರೆಯನ್ನು ಜನಪ್ರಿಯವಾಗಿ “ವಿಕ್ಟೋರಿಯಾ ರಾಣ” ಎಂದು ಅಡ್ಡಹೆಸರಿಸಲಾಗಿದೆ. ಕೆರೆಯು 87 ಕಿ,ಮೀ ನಷ್ಟು ವಿಸ್ತಾರವಾಗಿದೆ ಮತ್ತು ಅದು ಸ್ಥಳಿಯರು ಅಂತೆಯೇ ಪ್ರವಾಸಿಗರ ಜನಪ್ರಿಯ ತಾಣ. ಈ ಕೆರೆಯಲ್ಲಿ ಹಲವಾರು ದ್ವೀಪಗಳಿವೆ ಅವು ಅಕ್ಷರಸಃ ನಿಮ್ಮನ್ನು ನಗರದ ಶಬ್ದಮಲಿನ್ಯ ಮತ್ತು ಗದ್ದಲದಿಂದ ದೂರವಾಗಿಸುತ್ತದೆ. ಹತ್ತಿರದ ವನ್ಯಜೀವಿ ಅಭಯಾರಣ್ಯವು ಸಹ ಭೇಟಿ ಮಾಡುವಂತಹದ್ದು. ಮಹರಾಣ ಜೈ ಸಿಂಗ್ ಒಂದು ಮಾರ್ಬಲ್ ಆಣೆಕಟ್ಟನ್ನು ಕೆರೆಗೆ ನಿರ್ಮಿಸಿದ್ದಾರೆ ಅದು ಪ್ರಮುಖ್ಯ ಹವಾ ಮಹಲ್ ಪ್ಯಾಲೆಸ್ ಅನ್ನು ಹೊಂದಿದೆ. ಇನ್ನು ಹೆಚ್ಚಿನದ್ದೆಂದರೆ ನೀವು ಇಲ್ಲೆ ಲಭ್ಯವಿರುವ ಹಲವಾರು ಜಲ ಕ್ರೀಡೆಗಳ ಸೌಲಭ್ಯದ ಆನಂದವನ್ನು ಪಡೆಯಬಹುದು.

ಉದಯಸಾಗರ್ ಕೆರೆ

Udaisagar Lake
ಈ ೪ ಕಿಮೀ ಉದ್ದದ ಕೆರೆಯು ಉದಯಪುರದ ಐದು ಪ್ರಮುಖ ಕೆರೆಗಳಲ್ಲಿ ಒಂದು. ಈ ಚಿತ್ರೋಪಮ ಕೆರೆಯನ್ನು ಮಹಾರಾಣ ಉದೈ ಸಿಂಗ್ ರವರು 1565ರಲ್ಲಿ ನಿರ್ಮಿಸಿದರು ಮತ್ತು ಅಂದಿನಿಂದ ಇದು ಉದಯಪುರದ ಸೌಂದರ್ಯದ ಒಂದು ಅಂತರ್ಗತ ಭಾಗವಾಗಿದೆ. ಈ ಕೆರೆಯು ಇಲ್ಲಿ ಒಂದು ಪರಿಪೂರ್ಣವಾದ ಫ್ರೇಂಅನ್ನು ಚಿತ್ರಿಸಲು ಬರುವ ಫೋಟೋಗ್ರಾಫರ್ ಗಳಿಗೆ ಒಂದು ಸ್ವರ್ಗವೇ ಸರಿ. ತಿಳಿ ನೀಲಿ ಬಣ್ಣದ ನೀರು, ಮೇಲೆ ಸ್ಪಷ್ಟವಾದ ಆಗಸ ಮತ್ತು ಸುತ್ತಲೂ ಹಸಿರು ಬೆಟ್ಟಗಳು ಯಾವುದೇ ಫೋಟೋಗ್ರಾಫರ್ ನ ಒಂದು ಸಂತಸಕ್ಕೆ ಕಾರಣವಾಗುತ್ತದೆ ಹಾಗಾಗಿ ಅವರನ್ನು ಉದಯಪುರ ಕೆರೆಗೆ ಕರೆದುಕೊಳ್ಳುತ್ತದೆ.

ದೂದ್ ತಲಾಯಿ ಕೆರೆ

Doodh Talai Lake
ದೂದ್ ತಲಾಯಿ ಕೆರೆಯು ಹತ್ತಿರದಲ್ಲಿ ಹೆಚ್ಚು ಫಲಹಾರ ಮಂದಿರಗಳನ್ನು ಹೊಂದಿದೆ. ಒಂಟೆಯ ಸವಾರಿ, ಕುದುರೆ ಸವಾರಿ ಮತ್ತು ದೋಣಿ ವಿಹಾರವು ಇಲ್ಲಿನ ಮುಖ್ಯ ಆಕರ್ಷಣೆಗಳು. ಕೆರೆಯು ಬೆಟ್ಟತುದಿಗಳಿಂದ ಸುತ್ತುವರಿದಿದೆ, ಅವುಗಳಲ್ಲಿ ಒಂದು ಬೆಟ್ಟದ ತುದಿಯಲ್ಲಿ ಕರ್ಣಿ ಮಾತ ಮಂಡಿರವಿದೆ ಅದನ್ನು ಒಂದು ಹಗ್ಗ ಮಾರ್ಗದಲ್ಲಿ ತಲುಪಬೇಕು. ಸವಾರಿಯು 500 ಮೀಟರ್ ಎತ್ತರಕ್ಕೆ ಹೋಗುತ್ತದೆ ಮತ್ತು ಪಿಚೋಲ ಕೆರೆ, ಸಜ್ಜನ್ ಘರ್ ಕೋಟೆ ಮತ್ತು ದೂದ್ ತಲಾಯಿ ಕೆರೆಯ ಒಂದು ಆಕರ್ಷಕ ನೋಟವನ್ನು ಅದರ ಕ್ಯಾಬಿನ್ ನಿಂದ ನೋಡಬಹುದು.

LEAVE A REPLY

Please enter your comment!
Please enter your name here