5. ಚೆನ್ನೈನಲ್ಲಿ ಬೇಟಿ ಮಾಡಲೇ ಬೇಕಾದ ಸ್ಥಳೀಯ ಸೌಂದರ್ಯಗಳು

0
587

ಚೆನ್ನೈ ನಮ್ಮಿ ಹೆಚ್ಚಿನ ಸ್ಥಳೀಯ ಕಟ್ಟಡಗಳು ಮತ್ತು ಸೌಂದರ್ಯಗಳಿವೆ. ಒಂದೊಮ್ಮೆ ನೀವು ಶಿಲ್ಪಕಲಾ ಮತ್ತು ಐತಿಹಾಸಿಕತೆಯ ಪ್ರೇಮಿಯಾಗಿದ್ದರೆ, ಚೆನ್ನೈ ಇಂತಹ ಆಕರ್ಷಣೆಗಳಿಂದ ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ.

ಸರ್ಕಾರಿ ವಸ್ತು ಸಂಗ್ರಹಾಲಯ, ಈಗ್ಮೋರ್ – ಇದು ಭಾರತದ ಎರಡನೆಯ ಅತಿ ಪುರಾತನ ವಸ್ತು ಸಂಗ್ರಹಾಲಯ ಅದು 6 ಕಟ್ಟಡಗಳು ಮತ್ತು 46 ಪ್ರದರ್ಶನ ಮಂದಿರಗಳನ್ನು ಹೊಂದಿದೆ. ಹಲವಾರು ಬಗೆಯ ವಿಷಯಗ ಕಲಾಕೃತಿಗಳನ್ನು ಇಲ್ಲಿ ನೋಡಬಹುದು ಅವುಗಳೆಂದರೆ ಶಿಲ್ಪಶಾಸ್ತ್ರ, ಭೌಗೋಳಿಕ ಶಾಸ್ತ್ರ, ಜೀವಶಾಸ್ತ್ರ, ಮಾನವಶಾಸ್ತ್ರ, ನ್ಯುಮಿಸ್ಮಾಟಿಕ್ಸ್, ಸಸ್ಯಶಾಸ್ತ್ರ ಮತ್ತು ವಾಸ್ತುಶಿಲ್ಪಕಲೆಗಳು.

Government Museum

ವೀಕ್ಷಕರಿಗೆ ಸೂಚನೆಗಳು
ಪ್ರವೇಶ ಸಮಯ – ಬೆಳಿಗ್ಗೆ 9:30 ರಿಂದ ಸಂಜೆ 5 ಗಂಟೆಗಳ ವರೆಗೆ (ಶುಕ್ರವಾರ ಮತ್ತು ರಾಷ್ಟ್ರೀಯ ರಜೆಗಳನ್ನು ಹೊರತುಪಡಿಸಿ)
ಪ್ರವೇಶ ಶುಲ್ಕ – ರೂ 15/- ಭಾರತೀಯರಿಗೆ ಹಾಗು ವಿದೇಶಿಗರಿಗೆ ಯುಎಸ್ $5 ಡಾಲರ್.
ಉಚಿತ ಮಾರ್ಗಸೂಚಕರ ಸೇವೆಯು ಮುಂಜಾನೆ 11 ರಿಂದ ಮಧ್ಯಾನ 3 ಗಂಟೆಗಳ ವರೆಗೂ ಲಭ್ಯ.
ಹತ್ತಿರದ ರೈಲ್ವೇ ನಿಲ್ದಾಣ: ಚೆನ್ನೈ ಎಗ್ಮೋರ್ (500 ಮಿ ದೂರ)

ಸನ್ ಥೋಮ್ ಬಸಿಲಿಕ – ಮೂಲವಾಗಿ 16ನೇ ಶತಮಾನದಲ್ಲಿ ಸೆ.ಥೊಮಸ್ ಗೋಪುರದ ಮೇಲೆ ನಿರ್ಮಿಸಲಾಯಿತು ಹಾಗೂ 1893ರಲ್ಲಿ ನಿಯೊ-ಗೋತಿಕ್ ಶೈಲಿಯಲ್ಲಿ ಬ್ರಿಟೀಷರಿಂದ ಪುನರ್ ನಿರ್ಮಿಸಲಾಯಿತು, ಸನ್ ಥೋಮ್ ಬಸಿಲಿಕ ಒಂದು ಪುರಾತನ ಧಾರ್ಮಿಕ ಅನುಭವವನ್ನು ಪ್ರವಾಸಿಗರಿಗೆ ಒದಗಿಸುತ್ತದೆ.

San Thome Basilica

ವೀಕ್ಷಕರಿಗೆ ಸೂಚನೆಗಳು
ಪ್ರವೇಶ ಸಮಯ – ಮುಂಜಾನೆ 6 ರಿಂದ ರಾತ್ರಿ 9ರ ವರೆಗೆ
ಯಾವುದೇ ಪ್ರವೇಶ ಶುಲ್ಕವಿಲ್ಲ
ಹತ್ತಿರದ ಮೆಟ್ರೋ ನಿಲ್ದಾಣ: ತಿರುಮಯಿಲೈ ಎಂ.ಆರ್.ಟಿ.ಎಸ್ ನಿಲ್ದಾಣ (1.4ಕಿಮೀ ದೂರ)

ಫೋರ್ಟ್ ಸೆ. ಜಾರ್ಜ್ – ಬ್ರಿಟೀಷರು ಈ ಕಟ್ಟಡದಿಂದ ಮದ್ರಾಸ್ ಪ್ರಾಂತ್ಯವನ್ನು ಆಳುತ್ತಿದ್ದರು ಮತ್ತು ಇಂದು ತಮಿಳುನಾಡು ಸರ್ಕಾರದ ವಿಧಾನ ಸಭೆಯಾಗಿ ಸೇವೆ ಸಲ್ಲಿಸುತ್ತಿದೆ. ಈ ಒಂದು ಕಟ್ಟಡವೂ 1644ರಿಂದ ಶತಮಾನಗಳ ವರೆಗೂ ರಾಜರ ಆಸ್ಥಾನವನ್ನು ಕಂಡಿದೆ ಹಾಗೂ ತಮಿಳುನಾಡಿನಲ್ಲಿ ಅತ್ಯಂತ ಪ್ರಮುಖ ಕಟ್ಟಡಗಳಲ್ಲಿ ಒಂದು.

Fort St George

ವೀಕ್ಷಕರ ಸೂಚನೆಗಳು
ಪ್ರವೇಶ ಸಮಯ- ಮುಂಜಾನೆ 10 ರಿಂದ ಸಂಜೆ 5ರ ವರೆಗೆ (ಶುಕ್ರವಾರ ಮತ್ತು ರಾಷ್ಟ್ರೀಯ ರಜೆಗಳನ್ನು ಹೊರತುಪಡಿಸಿ)
ಕೋಟೆ ವಸ್ತು ಸಂಗ್ರಾಹಲಯವು ಕೋಟೆ ಸಂಕೀರ್ಣದ ಒಳಗೆ ಸ್ಥಾಪಿತವಾಗಿದೆ ಆದರೆ ಇತರೆ ಪ್ರದೇಶಗಳು ಪ್ರವಾಸಿಗರಿಗೆ ನಿಷೇಧಿಸಲಾಗಿದೆ.
ಹತ್ತಿರದ ರೈಲ್ವೇ ನಿಲ್ದಾಣ: ಚೆನ್ನೈ ಕೋಟೆ (2 ಕಿಮೀ ದೂರ)

ರಿಪೊನ್ ಕಟ್ಟಡ – ಇದು ಪ್ರಸ್ತುತ ಚನ್ನೈ ಪುರಸಭೆಯ ಆಡಳಿತ ಕಚೇರಿಯಾಗಿದೆ. ಈ ಕಟ್ಟಡವು ಸಂಪೂರ್ಣ-ಶ್ವೇತ ವರ್ಣದ ರಚನೆಯಾಗಿದೆ, ನಿಯೋ-ಕ್ಲಾಸಿಕ್ ಶೈಲಿಯ ಶಿಲ್ಪಕಲೆಯಲ್ಲಿ ನಿರ್ಮಿಸಲಾಗಿದೆ, ಇದು ಗೊತಿಕ್, ಐಕಾನಿಕ್ ಮತ್ತು ಕೊರಿನ್ಥಿಯನ್ ಶೈಲಿಗಳ ಸಂಯೋಗವಾಗಿದೆ.

Ripon Building

ವೀಕ್ಷಕರಿಗೆ ಸೂಚನೆಗಳು
ಕಟ್ಟಡವು ಸರ್ಕಾರಿ ಕಚೇರಿ ಹಾಗಾಗಿ ಪ್ರವಾಸಿಗರಿಗೆ ಪ್ರವೇಶವಿಲ್ಲ
ಹತ್ತಿರದ ಮೆಟ್ರೋ ನಿಲ್ದಾಣ: ಚನ್ನೈ ಸೆಂಟ್ರಲ್ (1 ಕಿಮೀ ದೂರ)

ಚೆನ್ನೈ ಸೆಂಟ್ರಲ್ – ಇದು ಒಂದು ಭಾರತದ ಅತ್ಯಂತ ಪ್ರಮುಖ ರೈಲ್ವೇ ನಿಲ್ದಾಣಗಳಲ್ಲಿ ಒಂದು ಹಾಗು ಬ್ರಿಟೀಷರ ಶಿಲ್ಪಕಲೆಯ ಒಂದು ಅಮೋಘ ಉದಾಹರಣೆ. 142 ವರ್ಷಗಳ ಹಳೆಯ ಕಟ್ಟಡವನ್ನು ಜಾರ್ಜ್ ಹಾರ್ಡಿಂಗ್ ಎಂಬ ಶಿಲ್ಪಕಾರನಿಂದ ವಿನ್ಯಾಸಗೊಳಿಸಲಾಗಿದೆ.

Chennai Central

ವೀಕ್ಷಕರ ಸೂಚನೆಗಳು
ಇದು ಒಂದು ಪ್ರವಾಸಿ ತಾಣವಲ್ಲ ಆದರೆ ಚೆನ್ನೈನ ಒಂದು ಪ್ರಮುಖ ಸ್ಮಾರಕ

LEAVE A REPLY

Please enter your comment!
Please enter your name here