ಪೋರ್ಟ್ ಬ್ಲೇರ್, ಇಲ್ಲಿ ಕಥೆಯ ಆರಂಭ

0
2250
Malayalam Blog

ನಿಮ್ಮ ಅಂಡಮಾನ್ಸ್ ಭೇಟಿಯ ಮೊದಲ ನಿಲ್ದಾಣವೇ ಪೋರ್ಟ್ ಬ್ಲೇರ್. ನನ್ನನ್ನು ನಂಬಿ, ಅದರ ಪರಿಶುದ್ಧ ನೋಟಗಳು ಮತ್ತು ಸಮುದ್ರದಡಗಳನ್ನು ನೀವು ಇಷ್ಟಪಡುವುದಲ್ಲದೆ, ಇದು ಅಂಡಮಾನ್ಸ್ ನಲ್ಲಿ ದ್ವೀಪದ ಊಹೆಯಲ್ಲಿ ನೀವು ಹೋಗುವಾಗ ಕಾಣಬಯಸುವ ನೋಟಗಳ ಅರ್ಧದಷ್ಟು ಮಾತ್ರ ಇಲ್ಲಿದೆ. ಭಾರತೀಯ ಸ್ವತಂತ್ರ ಸಂಗ್ರಾಮದ ಸೆಲ್ಯುಲಾರ್ ಜೈಲುಗಳೊಂದಿಗಿನ ಪ್ರಯತ್ನಗಳು ನೋಡಲೇಬೇಕಾದ ಒಂದು ತಾಣ, ಅನಗತ್ಯ ತೊಂದರೆಗಳನ್ನು ತಡೆಯಲಿ ನಿಮ್ಮ ಪ್ರವೇಶ ಟಿಕೆಟನ್ನು ಆನ್ಲೈನ್ ಬುಕ್ ಮಾಡಿ. ಪೋರ್ಟ್ ಬ್ಲೇರ್ ನಲ್ಲಿನ ಇತರೆ ಮಾಡಲೇಬೇಕಾದ ಚಟುವಟಿಕೆ ಎಂದರೆ ರಾಜೀವ್ ಗಾಂಧಿ ವಾಟರ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮತ್ತು ನಾರ್ತ್ ಬೇ ಬೀಚ್ ನಲ್ಲಿನ ಜಲ ಕ್ರೀಡೆಗಳು.

ಹಾವ್ಲಾಕ್, ಹೊಸ ಗೋವ

Kannada Travel Blog

ವಿಲಕ್ಷಣ ಮತ್ತು ಇನ್ನೂ ಕಚ್ಚ ಆಗಿರುವ, ಹಾವ್ಲಾಕ್ ದ್ವೀಪವು ಭಾರತೀಯ ಅಂತೆಯೇ ವಿದೇಶಿ ಪ್ರವಾಸಿಗರಲ್ಲಿ ನಿಧಾನವಾಗಿ ಆದರೆ ಸದೃಢವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಏಷಿಯಾದ ಅತಿಶುದ್ಧ ಸಮುದ್ರದಡವನ್ನು ನೀವು ಇಲ್ಲಿ ನೋಡಲಿದ್ದೀರಿ ದಿ ರಾಧನಗರ್ ಬೀಚ್ ಇದು ಸೌಂದರ್ಯದ ನಿಧಿ. ಕೊನೆಯಲ್ಲಿದ ಶುದ್ಧ ಮರುಳಿನ ಹಾದಿಯೊಂದಿಗೆ ಹಾಗೂ ಸ್ಫಟಿಕದಷ್ಟು ಸ್ಪಷ್ಟವಾದ ತಿಳಿನೀರಿನ, ರಾಧನಗರ್ ಬೀಚ್ ನಲ್ಲಿನ ಒಂದು ಸಂಜೆಯು ನಿಜವಾಗಿಯೂ ಉಲ್ಲಸದಾಯಕವಾಗಿರುತ್ತದೆ.

ಹಾವ್ಲಾಕ್ 

Kannada Travel blog

ನಲ್ಲಿ ಇತರೆ ಸಮುದ್ರದಡಗಳೆಂದರೆ ಎಲಿಫಂಟ್ ಬೀಚ್ ಮತ್ತು ಕಾಲಾಪತ್ತರ್ ಬೀಚ್. ಕಾಲಾಪತ್ತರ್ ಹಳ್ಳಿಗೆ ಸ್ವಲ್ಪ ಹತಿರವಿದ್ದರೂ ಸಹ ಹೆಚ್ಚು ಆಸಕ್ತಿಕರವಾದುದು ಏನು ಇಲ್ಲ, ಜನರು ಸ್ನೋರ್ಕೆಲ್ಲಿಂಗ್ ಮತ್ತು ಸ್ಕೂಬಾ ಡೈವಿಂಗ್ ಗಾಗಿ ಎಲಿಫಂಟ್ ಬೀಚ್ ಗೆ ಓಡುತ್ತಾರೆ. ಹಾವ್ಲಾಕ್ ಅನ್ನು ನನ್ನ ಉತ್ತಮ ಆಯ್ಕೆ ಮಾಡುವ ಮತ್ತೊಂದು ಅಂಶವೆಂದರೆ ಆಕರ್ಷಣೀಯ ಸ್ಥಳಗಳು ಇಲ್ಲಿ ನೀವು ನಿಮ್ಮ ಸ್ಕೂಟಿಯಲ್ಲಿ ಅಪ್ರಯತ್ನಪೂರ್ವಕವಾಗಿ ನಿಮ್ಮ ಮುಖವನ್ನು ತಾಜಾ ಗಾಳಿಗೆ ಒಡ್ಡುತ್ತಾ ಸಮೃದ್ಧ ಹಸಿರಿನ ನಡುವೆ ಡ್ರೈವ್ ಮಾಡಬಹುದು. ಇವೆಲ್ಲವು ಕೂಡ ಇದನ್ನು ಮತ್ತೊಂದು ಗೋವ ಆಗಿಸುತ್ತದೆ.

ರಾಸ್ ದ್ವೀಪ, ನಿಜವಾಗಿಯೂ ಇಂಗ್ಲಿಷ್

Regional Travel blog

ರಾಸ್ ದ್ವೀಪದ ಪ್ರಯಾಣವು ನಾಟಕೀಯವಾಗಿತ್ತು, ನಾವು ಫೋಟೊಗ್ರಫ್ಸ್ ನಲ್ಲಿ ನೋಡಿದಂತೆಯೇ ಇತ್ತು. ನೀಲಿ ಬಣ್ಣದ ಆಕಾಶವು ಬಿಳಿ ಮೋಡಗಳೊಂದಿಗೆ ಚಿಮ್ಮಿದಂತೆ, ಒಂದೇ ಸಾಲಿನಲ್ಲಿ ತೂಗಾಡುವ ತೆಂಗಿನ ಮರಗಳು, ಹಾಗೂ ನಿಮ್ಮ ಸ್ನಾಪ್ ಶಾಟ್ ಸುಂದರವಾಗಿ ಬರಲು ನೀವು ಫಿಲ್ಟರ್ ಬಳಸುವ ಅಗತ್ಯವಿಲ್ಲ. ಇದು ಪ್ಲೇನ್ ಪಿಚ್ಚರ್ ಪರ್ಫೆಕ್ಟ್. ನೀವು ದ್ವೀಪದ ಮೇಲೆ ನಿಮ್ಮ ಪಾದವನ್ನು ಇರಿಸಿದಾಗ ನಮ್ಮ ಹಳೆಯ ಕಾಲವು ನೆನಪಾಗುತ್ತದೆ. ಹೊಸದಾಗಿ ಪೇಂಟ್ ಮಾಡಿದ ಬಂಕರ್ ಉದ್ದವಾಗಿ ನಿಂತಿದೆ ಮತ್ತು ಈ ಚಿಕ್ಕ ದ್ವೀಪದಲ್ಲಿ ನಿಮ್ಮ ಪ್ರಯಾಣ ಮುಂದುವರಿದಂತೆ, ನೀವು ಬ್ರಿಟೀಷರು ಹೇಗೆ ಜೀವನವನ್ನು ಸಂಪೂರ್ಣವಾಗಿ ಜೀವಿಸುತ್ತಿದ್ದರು ಎಂದು ನೋಡುತ್ತೀರಿ. ಬೇಕರಿ, ಸ್ವಿಮಿಂಗ್ ಪೂಲ್, ಮತ್ತು ಉಳಿದಂತೆ ಚರ್ಚುಗಳು ಎಲ್ಲವು ಹಳೆಯ ಸೌಂದರ್ಯವನ್ನು ಹೇಳುತ್ತವೆ.

ಬಾರಾಟಾಂಗ್, ಸುಣ್ಣದ ಗುಹೆ ಮತ್ತು ಉಷ್ಣವಲಯ ತೆಪ್ಪಗಳು

Travel Blog

ಬಾರಾಟಾಂಗ್ ನ ದೃಶ್ಯವು ಸುಂದರ ಹಾಗೂ ಉಷ್ಣ. ಜನರು ತಮ್ಮ ಕೆಲಸದಲ್ಲಿ ಮಗ್ನರಾಗಿರುತ್ತಾರೆ, ತೆಂಗಿನ ನೀರಿನ ಮಾರಾಟ ಅಥವಾ ಹಳ್ಳಿಗೆ ಕರೆದೊಯ್ಯಲು ಕರೆಯುವುದು ಇತ್ಯಾದಿ. ಒಂದು ಸಾಹಸಮಯ ಸ್ಪೀಡ್ ಬೋಟ್ ನಮ್ಮನ್ನು ಸುಣ್ಣದ ಗುಹೆಗೆ ಕರೆತಮ್ದಿತು ಹಾಗೂ ದಾರಿಯಲ್ಲಿ ಉಷ್ಣವಲಯದ ತೆಪ್ಪಗಳನ್ನು ನೋಡಿವುದು ಈ 30 ನಿಮಿಷಗಳ ಪ್ರಯಾಣದಲ್ಲಿ ಉತ್ತಮ ಭಾಗವಾಗಿತ್ತು. ಗುಹೆಯು ಗಾಢಕತ್ತಲೆಯಲ್ಲಿ ಸುಂದರವಾಗಿತ್ತು ಹಾಗೂ ನಡಿಗೆಯು ಉಲ್ಲಾಸದಾಯಕವಾಗಿತ್ತು.

ಸಾಹಸ ಅನಿಯಮಿತ

Water-Sports at Andman

ಸಾಹಸ ಎನ್ನುವುದು ಅಂಡಮಾನ್ಸ್ ನ ಮತ್ತೊಂದು ಹೆಸರಿರಬೇಕು. ಪೋರ್ಟ್ ಬ್ಲೇರ್ ಮತ್ತು ಇತರೆ ಎಲ್ಲಾ ದ್ವೀಪಗಳು ಕೊನೆಯಿಲ್ಲದ ಜಲಕ್ರೀಡಾ ಸೌಲಭ್ಯಗಳಿಂದ ಕೂಡಿವೆ. ನೀವು ಕೇಳುವ ಎಲ್ಲವೂ ಇಲ್ಲಿವೆ. ಅದು ಆಮೆಗಳೊಂದಿಗೆ ಈಜಿರಬಹುದು, ವರ್ಣರಂಜಿತ ಹವಳಗಳನ್ನು ಮುಟ್ಟುವುದು, ಕೆಟ್ಟದಾಗಿ ಕಾಣುವ ಸಮುದ್ರ ಸೌತೆಕಾಯಿಗಳನ್ನು ಚುಚ್ಚುವುದು ಅಥವಾ ಸಬ್ ಮರೇನ್ ಮೂಲಕ ಹಲವು ಬಣ್ಣದ ಮೀನುಗಳನ್ನು ವೀಕ್ಷಿಸುವುದು ಆಕರ್ಷಣೆಗಳು ಅನಿಯಮಿತ. ಸ್ನೋರ್ಕೆಲ್ಲಿಂಗ್ ಮತ್ತು ಸ್ಕುಬಾ ಡೈವಿಂಗ್ ಅನ್ನು ಪೋರ್ಟ್ ಬ್ಲೇರ್ ನಲ್ಲಿನ ಜಾಲಿ ಬೋಯ್ ನಲ್ಲಿ ತರಬೇತುದಾರರಿಂದ ಮಾಡಬಹುದು, ಹಾಗಾಗಿ ಏರ್ ಪೋರ್ಟಿಗೆ ಹೋಗುವ ಮುನ್ನ ಒಂದು ಕಡೆಯ ಸುತ್ತಿನ ಜಲ ಕ್ರೀಡೆಯನ್ನು ಮಾಡುವ ಮೂಲಕ ನಿಮ್ಮ ಪ್ರಯಾಣವನ್ನು ಅಂತ್ಯಗೊಳಿಸಬಹುದು.