ಅಸಾಂಪ್ರದಾಕ ದೇವತೆಗಳಿರುವ ೮ ಭಾರತದ ದೇವಸ್ಥಾನಗಳು

0
96

ಭಾರತವು ಧಾರ್ಮಿಕತೆಯ ದೇಶ; ನಾವು ಪರಮಶಕ್ತಿಯನ್ನು ಅನೇಕ ರೂಪಗಳಲ್ಲಿ ಪೂಜಿಸುತ್ತೇವೆ. ಭಾರತದಾದ್ಯಂತ ಲಕ್ಷಾಂತರ ಸಾಂಪ್ರದಾಕ ದೇವಸ್ಥಾನಗಳಿದ್ದರೂ, ಕೆಲವು ಅಸಾಂಪ್ರದಾಕ ದೇವಾಲಯಗಳೂ ಇವೆ.

Ravana-Temple-in-Ravangram

೧. ಮಧ್ಯಪ್ರದೇಶದ ರಾವಣಗ್ರಾಮದಲ್ಲಿರುವ ರಾವಣನ ದೇವಾಲಯ: ರಾಮಾಯಣದಲ್ಲಿ ತೋರಿಸಿರುವಂತೆ, ರಾವಣ ಸೀತೆಯನ್ನು ಅಪಹರಿಸಿದಂತಹ ದುರಾತ್ಮ. ಆದರೆ ವಿದಿಶಾ ಜಿಲ್ಲೆಯ ರಾವಣಗ್ರಾಮವೆಂಬ ಪುಟ್ಟ ಗ್ರಾಮದಲ್ಲಿ, ರಾವಣನನ್ನು ಪೂಜಿಸಲಾಗುತ್ತದೆ. ಅಲ್ಲಿ ೧೦ ಅಡಿ ಉದ್ದದ ಮಲಗಿರುವ ರಾವಣನ ಪ್ರತಿಮೆದೆ.

Hadimba-Temple-in-Manali

೨. ಹಿಮಾಚಲ ಪ್ರದೇಶದ ಮನಾಲಿಯಲ್ಲಿರುವ ಹಡಿಂಬಾ ದೇವಾಲಯ: ಈ ದೇವಾಲಯದ ಪ್ರಧಾನ ದೇವತೆ, ಭೀಮನ ಪತ್ನಿ ಮತ್ತು ಘಟೋತ್ಕಚನ ತಾಯಾದ ಹಡಿಂಬಾ ದೇವಿ. ಹಿಡಿಂಬಾ ದೇವಿಯು ತಪಸ್ಸನ್ನಾಚರಿಸಿ, ಬ್ರಹ್ಮಜ್ಞಾನ ಪಡೆದಳು ಎಂದು ಇಲ್ಲಿನ ಸ್ಥಳೀಯರ ನಂಬಿಕೆ. ಈ ದೇವಾಲಯದಲ್ಲಿ ಯಾವುದೇ ಪ್ರತಿಮೆಗಳಿಲ್ಲ; ಭಕ್ತಾದಿಗಳು ಎರಡು ದೊಡ್ಡ ಪಾದಚಿಹ್ನೆಗಳನ್ನು ಪೂಜಿಸುತ್ತಾರೆ.

Peruviruthy-Malanada-Temple-in-Poruvazhy

೩. ಕೇರಳದ ಪುರುವಾಯಲ್ಲಿರುವ ಪೆರುಚಿರುತ್ತಿ ಮಲನಾಡ ದೇವಾಲಯ: ಈ ದೇವಾಲಯವನ್ನು ದುರ್ಯೋಧನನಿಗೆ ಸಮರ್ಪಿಸಲಾಗಿದೆ. ಅದ್ಭುತವಾದ ಕೇರಳಾ ವಾಸ್ತುಶಿಲ್ಪ ಶೈಲಿಯಲ್ಲಿ ರಚಿಸಲಾದ ಈ ದೇವಾಲಯದಲ್ಲಿ ಯಾವುದೇ ಸಾಂಪ್ರದಾಯಿಕ ಮೂರ್ತಿಯಿಲ್ಲ, ಆದರೆ ಮಂಡಪ ಎಂದು ಕರೆಯಲಾಗುವ ಎತ್ತರಿಸಲಾದ ವೇದಿಕೆ ಮಾತ್ರವಿದೆ. ದುರ್ಯೋಧನನು ಜನರ ಕಲ್ಯಾಣಕ್ಕಾಗಿ ಮಹಾದೇವನನ್ನು ಪೂಜಿಸಿದ್ದರಿಂದ ಇಲ್ಲಿನ ಜನರು ಅವನನ್ನು ಪೂಜ್ಯನೆಂದು ಪರಿಗಣಿಸುತ್ತಾರೆ.

Bullet-Baba-Temple-in-Jodhpur

೪. ರಾಜಸ್ಥಾನದ ಜೋಧ್‌ಪುರದಲ್ಲಿ ಬುಲೆಟ್ ಬಾಬಾ ದೇವಾಲಯ: ಈ ದೇವಾಲಯದಲ್ಲಿ ಭಕ್ತಾದಿಗಳು ಒಂದು ಮೋಟಾರ್ ಸೈಕಲ್, ೩೫೦ ಸಿಸಿ ರಾಯಲ್ ಎನ್ಫೀಲ್ಡ್ ಬುಲೆಟ್ ಅನ್ನು ಪೂಜಿಸುತ್ತಾರೆ. ಈ ಬುಲೆಟ್ ಓಂ ಬಾಬಾ ಎನ್ನುವ ವ್ಯಕ್ತಿಯದಾಗಿತ್ತು; ಒಂದು ರಸ್ತೆ ಅಪಘಾತದಲ್ಲಿ ಅವರು ಮೃತಪಟ್ಟರು. ಅಪಘಾತದ ಸ್ಥಳದಿಂದ ಪೋಲಿಸರು ಮೂರು ಬಾರಿ ವಾಹನವನ್ನು ಒಯ್ದರೂ, ಅದು ಮತ್ತೆ ಅದೇ ಜಾಗದಲ್ಲಿ ಕಾಣಿಸಿಕೊಳ್ಳುತ್ತಿತ್ತು.

೫. ಉತ್ತರ ಪ್ರದೇಶದ ಹರ್ದಾ ರಸ್ತೆಯಲ್ಲಿರುವ ಕಂಸನ ದೇವಾಲಯ: ಹಿಂದೂ ಪುರಾಣಗಳ ಕಂಸ ಒಬ್ಬ ದುಷ್ಟನಾಗಿದ್ದು, ತನ್ನ ಪ್ರಾಣರಕ್ಷಣೆಗಾಗಿ ತನ್ನ ತಂಗಿ ಮತ್ತಾಕೆಯ ಪತಿಯನ್ನು ಸೆರೆಹಿಡಿದು, ಅವರ ಮಕ್ಕಳನ್ನು ಕೊಲ್ಲುತ್ತಾನೆ. ಆದರೆ ಹರ್ದಾಯಲ್ಲಿರುವ ಈ ದೇವಾಲಯದ ದೇವತೆ ಕಂಸ. ಇಲ್ಲಿ ಕಂಸನು ಅನೇಕ ವರ್ಷಗಳು ತಪಸ್ಸನ್ನಾಚರಿಸಿದನು ಎಂದು ಗ್ರಾಮಸ್ಥರು ನಂಬಿದ್ದಾರೆ.

Nagaraja-Temple-in-Mannarasala

೬. ಕೇರಳದ ಮಣ್ಣಾರಸಾಲದಲ್ಲಿರುವ ನಾಗರಾಜನ ದೇವಾಲಯ: ಸರ್ಪಗಳ ರಾಜ ನಾಗರಾಜನಿಗೆ ಅನೇಕ ದೇವಾಲಯಗಳಿದ್ದರೂ, ಇಲ್ಲಿನ ದೇವಾಲಯ ಭಾರತದ ಅತಿ ದೊಡ್ಡದು. ಸಂತಾನ ಅಪೇಕ್ಷಿಗಳಾದ ಮಹಿಳೆಯರಿಗೆ ಇದು ಬಹಳ ಮುಖ್ಯವಾದ ದೇಗುಲ. ಈ ದೇವಾಲಯದ ಆವರಣದಲ್ಲಿ ೩೦೦೦೦ ಕ್ಕೂ ಹೆಚ್ಚು ಸರ್ಪಗಲ ಕಲ್ಲಿನ ಪ್ರತಿಮೆಗಳಿವೆ.

Dog-Temple-in-Channapatna

೭. ಕರ್ನಾಟಕದ ಚೆನ್ನಪಟ್ಣದಲ್ಲಿರುವ ನಾಯಿ ದೇವಾಲಯ: ನಾಗಳನ್ನು ಮತ್ತು ಅವುಗಳ ನಿಷ್ಠೆಯನ್ನು ಗೌರವಿಸಲು ೨೦೦೯ರಲ್ಲಿ ಈ ಅಸಾಂಪ್ರದಾಕ ದೇವಾಲಯವನ್ನು ಸ್ಥಾಪಿಸಲಾತು. ಈ ದೇವಾಲಯದಲ್ಲಿ ಎರಡು ನಾಯ ಮುಖದ ಪ್ರತಿಮೆಗಳನ್ನು ಇಡಲಾಗಿದೆ. ಈ ಶ್ವಾನದೇವರುಗಳು ಈ ಪ್ರದೇಶದಲ್ಲಿ ಯಾವುದೇ ಅಪಘಾತಗಳಾಗದಂತೆ ಕಾಪಾಡುತ್ತವೆ ಎಂಬುದು ಗ್ರಾಮಸ್ಥರ ನಂಬಿಕೆ.

Bharat-Mata-Temple-in-Haridwar

೮. ಉತ್ತರಖಂಡದ ಹರಿದ್ವಾರದಲ್ಲಿರುವ ಭಾರತ ಮಾತೆ ದೇವಾಲಯ: ನಮ್ಮ ದೇಶಕ್ಕೆ ಒಂದು ದೇವತಾಮೂರ್ತಿಯ ಸ್ವರೂಪ ನೀಡಿರುವ ಈ ದೇಗುಲವನ್ನು ಸ್ವಾಮಿ ಸತ್ಯಮಿತ್ರಾನಂದ ಗಿರಿಯವರು ೧೯೮೩ರಲ್ಲಿ ಸ್ಥಾಪಿಸಿದರು. ಈ ೮ ಮಹಡಿಗಳ ಕಟ್ಟಡದಲ್ಲಿ ಭಾರತಾಂಬೆಯ ಮೂರ್ತಿಯು ಕೇಸರಿ ಬಣ್ಣದ ಸೀರೆಯನುಟ್ಟು, ಕೈಯಲ್ಲಿ ಭಾರತದ ಬಾವುಟವನ್ನು ಹಿಡಿದು ನಂತಿದ್ದಾಳೆ.

 

LEAVE A REPLY

Please enter your comment!
Please enter your name here