ಗರ್ಭಧಾರಣೆಯ ಸಮಯದಲ್ಲಿ ರೈಲಿನಲ್ಲಿ ಪ್ರಯಾಣ ಮಾಡುವುದು ಎಷ್ಟು ಸುರಕ್ಷಿತ?

0
1867

ಅನಾನುಕೂಲದ ಕಾರಣದಿಂದ ಗರ್ಭಧಾರಣೆಯ ಸಮಯದಲ್ಲಿ ಪ್ರವಾಸವನ್ನು ತಪ್ಪಿಸುವುದು ಉತ್ತಮ ಅಂದರೆ ದೀರ್ಘ ಸಮಯದ ವರೆಗೂ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು. ಅದಾಗ್ಯೂ, ಜೀವನ ಯಾವಾಗಲೂ ಪರಿಪೂರ್ಣವಾಗಿರುವುದಿಲ್ಲ. ಇಂದಿನ ವೇಗದ ಜೀವನದಲ್ಲಿ, ತಾಯಿಯು ಪ್ರವಾಸಗಳನ್ನು ತಪ್ಪಿಸುವ ಆಲೋಚನೆಯನ್ನು ಮಾಡುವಂತಿಲ್ಲ. ಗರ್ಭಧಾರಣೆಯ ಸಮಯದಲ್ಲಿ ರಲನ್ಲ ಪ್ರಯಾಣಿಸುವ ಬಗ್ಗ ನಮಗೆ ಸಿಕ್ಕಿರುವ ಪುನರಾವರ್ತತ ಪ್ರಶ್ನೆಗಳ ಮೂಲಕ, ಇದರ ಒಂದು ಒಳ್ಳೆಯ ಸೂಚನೆ ನಮಗ ಸಿಗುತ್ತದೆ. ಹಾಗಗಿ, ನಿಷ್ಠಾವಂತ ರೈಲುಯಾತ್ರಿಗಳಿಂದ ಕೇಳಲ್ಪಟ್ಟ ಕೆಲವು ಪ್ರಶ್ನೆಗಳಿಗೆ ನಾವು ಉತ್ತರಿಸಲು ನಿರ್ಧರಿಸಿದ್ದೇವೆ.

 ಗರ್ಭಧಾರಣೆಯ ಸಮಯದಲ್ಲಿ ರೈಲಿನಲ್ಲಿ ಪ್ರಯಾಣ ಮಾಡುವುದು ಎಷ್ಟು ಸುರಕ್ಷಿತ?
ರೈಲು ಪ್ರಯಾಣವು ಯಾವುದೇ ಗರ್ಭಿಣಿ ಮಹಿಳೆಗಾಗಿ ಒಂದು ಸುರಕ್ಷಿತ ಬಗೆಯ ಪ್ರಯಾಣವಾಗಿದ್ದು. ರಸ್ತೆ ಪ್ರಯಾಣದಲ್ಲಿ ಉಬ್ಬುಗಳು, ತ್ವರಿತ ತಿರುವುಗಳು ಮತ್ತು ತಕ್ಷಣದ ಫಾರ್ವರ್ಡ್ ಥ್ರಸ್ಟ್ (ಯಾವಾಗ ಬ್ರೇಕುಗಳು ಹಾಕಲಾಗುತ್ತದೆಯೋ) ಇವುಗಳು ಇರುತ್ತವೆ. ವೈಮಾನಿಕ ಪ್ರಯಾಣದಲ್ಲಿ ಗರ್ಭಿಣಿ ಮಹಿಳೆಯರನ್ನು ಪ್ರಯಾಣ ಮಾಡಲು ಬಿಡುವುದಿಲ್ಲ (ಆರೋಗ್ಯ ಅಪಾಯಗಳ ಕಾರಣದಿಂದ) ಗರ್ಭಧಾರಣೆಯ ಕೆಲವು ಹಂತಗಳಲ್ಲಿ. ಹಾಗಾಗಿ, ತಮ್ಮ ಸೌಮ್ಯವಾದ ನಿರಂತರ ಚಾಲನೆಯೊಂದಿಗೆ ರೈಲುಗಳು ತಾಯಿಗಾಗಿ ಮತ್ತು ಒಳಗಿರುವ ಮಗುವಿಗಾಗಿ ಇಬ್ಬರಿಗೂ ಸಹ ಉತ್ತಮವಾದುದು. ಅದಾಗ್ಯೂ, ನೀವು ಪ್ರಯಾಣದಲ್ಲಿ ತೊಡಗುವ ಮುನ್ನ ನಿಮ್ಮ ವೈಧ್ಯರನ್ನು ನೀವು ಸಮಾಲೋಚಿಸುವುದು ಅತ್ಯಗತ್ಯ.

 ನಾನು ಯಾವ ಕ್ಲಾಸನ್ನು ಆಯ್ಕೆ ಮಾಡಿಕೊಳ್ಳಬೇಕು?

Train travel during pregnancy
ಗರ್ಭಧಾರಣೆಯ ನಂತರ ಹಂತಗಳಲ್ಲಿ (6 ತಿಂಗಳ ನಂತರ), ತಾಯಿಗೆ ಅಥವಾ ಭ್ರೂಣದ ಆರೋಗ್ಯಕ್ಕಾಗಿ ತ್ವರಿತ ಚಾಲನೆಗಳು ಅಥವಾ ಜರ್ಕಿಂಗ್ ನಂತಹವು ಒಳ್ಳೆಯದಲ್ಲ. ಅಂತೆಯೇ, ತಾಯಿಗೂ ಸಹ ತನ್ನನ್ನು ಅನುಕೂಲಕರವಾಗಿರುಸಲು ಸರಿಯಾದ ಸ್ಥಳದ ಅಗತ್ಯವಿರುತ್ತದೆ. ಅದಕ್ಕಾಗಿಯೇ, ಗರ್ಭಿಣಿ ಮಹಿಳೆಯ ಜೊತೆಯಲ್ಲಿ ಪ್ರಯಾಣ ಮಾಡುವಾಗ ಪ್ರಯಾಣ ದಿನಾಂಕವನ್ನು ಹೆಚ್ಚು ಮುಂಚಿತವಾಗಿ ಯೋಜಿಸುವುದು ಅಗತ್ಯವಾದುದು. ಕೇವಲ ಲೋಯರ್ ಬರ್ತ್ ಸೀಟುಗಳನ್ನು ಬುಕ್ ಮಾಡಿ, ಹಾಗಾಗಿ ತಾಯಿಯು ಮೇಲಕ್ಕೆ ಏರುವುದನ್ನು ತಪ್ಪಿಸಬಹುದು.

 ನಾನು ಪ್ರಯಾಣದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಯಾವುದು?
ಅಂತಹ ಒಂದು ಪ್ರಯಾಣದ ಸಹಜವಾದ ತೊಂದರೆ ಎಂದರೆ ಭಾರಿ ತೂಕದ ಲಗೇಜನ್ನು ಎತ್ತುವುದು. ಆದರೆ ಒಬ್ಬ ಗರ್ಭಿಣಿಯು ಯಾವುದೇ ಬಗೆ ಲಗೇಜನ್ನು ವಯಕ್ತಿಕವಾಗಿ ಹೊರುವುದನ್ನು ಮಾಡಬಾರದು. ಕೊನೆಯ ಕ್ಷಣದ ಆತುರವನ್ನು ತಪ್ಪಿಸುವ ಸಲುವಾಗಿ ನೀವು ಆದಷ್ಟು ಮುಂಚಿತವಾಗಿ ರೈಲೇನಿಲ್ದಾಣಕ್ಕೆ ತೆರಳುವುದನ್ನು ಖಚಿತಪಡಿಸಿಕೊಳ್ಳಿ. ತಾಯಿಯು ತನ್ನ ಪ್ರತಿ ಹೆಜ್ಜೆಗಳನ್ನು ಎಚ್ಚರಿಕೆಯಿಂದ ಇಡಬೇಕು, ವಿಶೇಷವಾಗಿ ಇದು ಹೆಚ್ಚು ಜನಸಂದಣಿಯಿರುವ ನಿಲ್ದಾಣಗಳಲ್ಲಿ ಅತಿ ಮುಖ್ಯ. ಅಂತೆಯೇ, ತಾಯಿಯು ಹೆಚ್ಚು ಭಾಗುವುದಿಲ್ಲ ಎಂದು ಖಾತರಿಪಡಿಸಿಕೊಳ್ಳಿ. ಬಾಗುವುದರಿಂದ ಕಿಬ್ಬೊಟ್ಟೆಗೆ ಹೆಚ್ಚು ಒತ್ತಡವಾಗುತ್ತದೆ ಇದು ಶಿಶುವಿಗೆ ಒಳ್ಳೆಯದಲ್ಲ.

 ನಾನು ಪ್ರಯಾಣದಲ್ಲಿ ಯಾವ ಆಹಾರವನ್ನು ಸೇವಿಸಬೇಕು?

Tips-to-travel-during-Pregnancy_3
ಒಂದು ಪ್ರಯಾಣಕ್ಕಾಗಿ ಕಠಿಣವಾದ ಆಹಾರ ಪದ್ದತಿಯನ್ನು ಪಾಲಿಸುವುದು ಅವಶ್ಯಕ. ಅದು ಎಷ್ಟೇ ಆಕರ್ಷಕವಾಗಿ ಕಂಡರೂ ಸಹ ರೈಲ್ವೇ ಸ್ಟಾಲುಗಳಿಂದ ಅಥವಾ ಬೀದಿ ವ್ಯಾಪಾರಿಗಳಿಂದ ಆಹಾರವನ್ನು ತಿನ್ನಬೇಡಿ. ಯಾವಾಗಲೂ ಹೆಸರಾಂತ ಸೇವಾ ಸೌಲಭ್ಯದಾರರಿಂದ ಆಹಾರವನ್ನು ಬುಕ್ ಮಾಡಿ ಮತ್ತು ಖಾರ-ವಿಲ್ಲದ, ಮನೆಯ ಆಹಾರವನ್ನು ಕೇಳಿ. ಒಂದೊಮ್ಮೆ ನೀವು ಹಸಿದಿದ್ದರೆ, ಕೇವಲ ಸ್ವಲ್ಪ ಹಣ್ಣುಗಳನ್ನು ಸೇವಿಸಿ (ಆದರೆ ಅವು ಈ ಮುಂಚಿತವಾಗಿ ಕತ್ತರಿಸಿ ಇಟ್ಟಿಲ್ಲ ಎಂದು ಖಚಿತಪಡಿಸಿಕೊಳ್ಳಿ). ಪ್ಯಾಕ್ ಮಾಡಿಡ ನೀರಿನ ಬಾಟಲಿಯನ್ನು ಖರೀದಿಸಿ ಮತ್ತು ಜೊತೆಗೆ ತೆಗೆದುಕೊಂಡು ಹೋಗಿ, ಅದು ನಿಮ್ಮನು ಚೆನ್ನಾಗಿ ಹೈಡ್ರೇಟ್ ಆಗಿರಿಸುತ್ತದೆ.

ನಾನು ಗರ್ಭಾವಸ್ಥೆಯಲ್ಲಿ ಒಬ್ಬಂಟಿಯಾಗಿ ಏಕೆ ಪ್ರಯಾಣ ಮಾಡಬಾರದು?
ಗರ್ಭಾವಸ್ಥೆಯ ನಂತರದ ಹಂತಗಳು ಬಹಳ ಕ್ಲಿಷ್ಟಕರವಾದ ಸಮಯವಾಗಿದ್ದು ಒಂದೇ ಸಮಯದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳಿಂದ ಕೂಡಿರುತ್ತದೆ. ಅಂತಹ ಸಮಯದಲ್ಲಿ ನಿಮಗೆ ಯಾವಾಗಲೂ ಒಬ್ಬ ಸಹಚರರ ಅಗತ್ಯವಿರುತ್ತದೆ. ಲಗೇಜನ್ನು ಎತ್ತಿಕೊಳ್ಳುವುದರಿಂದ ಹಿಡಿದು ನಿಮ್ಮನ್ನು ಶೌಚಾಲಯಕ್ಕೆ ಕರೆದೊಯಲು, ನೀವು ನಿರಂತರವಾಗಿ ಒಬ್ಬ ಸಹಚರರ ಮೇಲೆ ಆಧಾರ ಪಟ್ಟಿರಲೇ ಬೇಕು. ಅಂತಹ ಒಂದು ಪ್ರಯಾಣದಲ್ಲಿ ನಿಮ್ಮ ಹೊಣೆಗಾರಿಕೆ ಏನೆಂದರೆ ನೀವು ಸಮರ್ಪಕವಾದ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು ಮತ್ತು ನಿಮ್ಮ ಯಾವುದೇ ಒಂದು ಕ್ರಮವು ಭ್ರೂಣದ ಮೇಲೆ ಪ್ರತಿಕೂಲವಾಗಿ ಪ್ರಭಾವ ಬೀರದಂತೆ ನೋಡಿಕೊಳ್ಳಿ.

 ಇತರೆ ಸಲಹೆಗಳು

Tips-to-travel-during-Pregnancy_4

  •  ತಾಯಿಯು ಒಂದು ಅನುಕೂಲಕರ ಸ್ಥಿತಿಯಲ್ಲಿ ಕೂಡಬೇಕು.
  •  ನೀವು ದೂರ ಪ್ರಯಾಣ ಮಾಡುವಾಗ, ಬಹಳ ಸಮಯದ ವರೆಗೂ ಒಂದೇ ಭಂಗಿಯಲ್ಲಿ ಕೂಡಬೇಡಿ. ಯಾವಾಗ ಸಾಧ್ಯವೋ ಆಗ ಮಲಗಿ.
  •  ಕಾಲಕಾಲಕ್ಕೆ ರೈಲು ಕಂಪಾರ್ಟ್ಮೆಂಟಿನ ಒಳಗೆಯೇ ಅಡ್ಡಾಡಿ. ಇದು ರಕ್ತ ಸಂಚಾರವನ್ನು ಸುಧಾರಿಸುತ್ತದೆ.
  •  ಯಾವಾಗಲೂ ಅವಶ್ಯಕವಾದ ಮತ್ತು ಸೂಚಿತ ಔಷಧಿಗಳನ್ನು ಜೊತೆಗೆ ಇರಿಸಿಕೊಳ್ಳಿ. ಅವುಗಳನ್ನು ತಕ್ಷಣವಾಗಿ ಸಿಗುವ ಒಂದು ಬ್ಯಾಗಿನಲ್ಲಿ ಇರಿಸಿಕೊಳ್ಳಿ.

 ನಿರಾಳವಾಗಿರಿ, ನಿಜವಾಗಲು ನಿರಾಳವಾಗಿರಿ
ನೀವು ಪ್ರಯಾಣಿಸುವಾಗ, ನೀವು ಎಲ್ಲಾ ಚಿಂತೆಗಳನ್ನು ಬದಿಗಿರಿಸಿ. ಆರಾಮವಾಗಿ ಕುಳಿತುಕೊಳ್ಳಿ ಮತ್ತು ಮಗುವಿನೊಂದಿಗೆ ನಿಮ್ಮ ಮೊದಲ ಪ್ರಯಾಣವನ್ನು ಆನಂದಿಸಿ. ಯಾವುದಾದರೂ ಮಧುರವಾದ ಸಂಗೀತವನ್ನು ಆಲಿಸಿ ಮತ್ತು ವಿಶ್ರಮಿಸಿ. ಬೇಕಿದ್ದರೆ ನೀವು ನಿಮ್ಮ ಪ್ರಯಾಣದ ಜೊತೆಗೆ ಆಸ್ವಾದಿಸಲು ನಿಮ್ಮ ನೆಚ್ಚಿನ ತಿನಿಸನ್ನು ಅಥವಾ ಚಾಕಲೇಟುಗಳನ್ನು ಶೇಖರಿಸಿಕೊಳ್ಳಿ.

LEAVE A REPLY

Please enter your comment!
Please enter your name here