ತೇಲುವ ದ್ವೀಪಗಳ ನಿಗೂಢವಾದ ಕೆರೆ

0
179

ಭಾರತವು ಮೋಹಕ ತಾಣಗಳ ದೇಶವಾಗಿದೆ; ಇದರಲ್ಲಿ ಈಶಾನ್ಯ ರಾಜ್ಯಗಳೂ ಸೇರಿವೆ. ಭಾರತದ ಈಶಾನ್ಯ ಪ್ರದೇಶವು ಅದ್ಭುತವಾದ ತಾಣಗಳು, ದಿಗ್ಭ್ರಮೆಗೊಳಿಸುವ ಅರಣ್ಯಗಳು, ಪ್ರಾಚೀನ ಶುದ್ಧವಾದ ಕೆರೆಗಳು ಮತ್ತು ಶಾಂತವಾದ ಮೊನಾಸ್ಟೆರಿಗಳಿಂದ ತುಂಬಿದೆ. ಈಶಾನ್ಯದ ಹಲವು ಸುಂದರ ರತ್ನಗಳಲ್ಲಿ, ಲೊಹ್ತಾಕ್ ಕೆರೆಯು ಒಂದಾಗಿದ್ದು, ಮಣಿಪುರದ ಸೌಂದರ್ಯವನ್ನು ಆಸ್ವಾದಿಸುವವರಿಗೆ ಇದನ್ನು ತಪ್ಪಿಸಲು ಸಾಧ್ಯವಿಲ್ಲ.

ಲೊಕ್ತಾಕ್ ಕೆರೆಯು ಮಣಿಪುರದ ರಾಜ್ಯದಲ್ಲಿದ್ದು, ಈಶಾನ್ಯ ಭಾರತದ ಅತಿದೊಡ್ಡ ಶುದ್ಧನೀರಿನ ಕೆರೆಯಾಗಿದೆ. ಇದು ವಿಶ್ವದ ತೇಲುವ ಕೆರೆಯೆಂದೂ ಗುರುತಿಸಲಾಗಿದೆ, ಫುಂಡಿ ಗಳ ಕಾರಣದಿಂದ. ಈ ಫುಂಡಿಗಳು ದೊಡ್ಡ, ಸ್ಪಾಂಜಿನಂತಹ, ಸಾಸರ್ ಆಕಾರದ ಸಸ್ಯ ಮತ್ತು ಮಣ್ಣಿನ ದೊಡ್ಡ ತುಂಡುಗಳಾಗಿದ್ದು, ಇವು ಯಾವಾಗಲೂ ನೀರಿನಡಿ ಮುಳುಗಿರುತ್ತವೆ. ಈ ನೈಸರ್ಗಿಕ ಫುಂಡಿಗಳು ಗಾತ್ರದಲ್ಲೂ, ಜನಸಂಖ್ಯೆಯಲ್ಲೂ ಅದ್ಭುತವಾಗಿದ್ದು, ಅನೇಕವಾಗಿವೆ ಮತ್ತು ನಿರಂತರವಾಗಿ ಚಲಿಸುತ್ತಿರುತ್ತವೆ. ಹೌದು, ಅವು ವರ್ಷದ ಭಿನ್ನ ಋತುಗಳಲ್ಲಿ ತಮ್ಮ ಗಾತ್ರವನ್ನು ಬದಲಿಸಿಕೊಳ್ಳುತ್ತವೆ ಮತ್ತು ಕೆರೆಯಲ್ಲಿ ಚಲಿಸುತ್ತಿರುತ್ತವೆ.

Keibul Lamjao

ಮಣಿಪುರದ ಜನರು ಈ ಲೋಕ್ತಾಕ್ ಕೆರೆಯ ಮೇಲೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಹಳ ಅವಲಂಬಿಗಳಾಗಿದ್ದಾರೆ. ವಾಸ್ತವವಾಗಿ, ಈ ಕೆರೆಯು ಮಣಿಪುರದ ಜೀವಸಲೆಯಾಗಿದೆ ಮತ್ತು ೪೦೦೦ಕ್ಕಿಂತ ಹೆಚ್ಚು ಜನರು ಈ ತೇಲುವ ದ್ವೀಪಗಳ ಮೇಲೆ ಜೀವಿಸಿ, ತಿಂದು, ಜೀವನೋಪಾಯ ನೋಡಿಕೊಳ್ಳುತ್ತಾರೆ. ಈ ಫುಂಡಿಗಳು ವಿಶ್ವದ ಏಕೈಕ ತೇಲುವ ರಾಷ್ಟ್ರೀಯ  ಉದ್ಯಾನವನವಾದ ಕೀಬುಲ್ ಲಂಜಾವುಗೆ ಆಶ್ರಯವಾಗಿದ್ದು, ಮಣಿಪುರದ ನಾಶದ ಅಂಚಿನಲ್ಲಿರುವ ಕುಣಿಯುವ ಜಿಂಕೆ, ಸಾಂಗಾಯ್‌ಯನ್ನು ಕಾಪಾಡಲು ಇದನ್ನು ಸ್ಟೃಸಲಾಗಿದೆ; ಇವು ಕೇವಲ ಫುಂಡಿಗಳಲ್ಲಿ ಮಾತ್ರ ಕಂಡುಬರುತ್ತವೆ.

Loktak Lake: The Mystical Lake with Floating Islands

ಲೋಕ್ತಾಕ್ ಕೆರೆಯು ಶ್ರೀಮಂತ ಜೀವಸಂಕುಲಕ್ಕೆ ಆಶ್ರಯದಾಣವಾಗಿದ್ದು, ಇಲ್ಲಿ ೨೩೩ ರೀತಿಯ ಜಲಚರ ಸಸ್ಯಗಳಿವೆ. ಈ ಕೆರೆಗಳಲ್ಲಿ ೧೦೦ಕ್ಕೂ ಹೆಚ್ಚು ಪ್ರಜಾತಿಯ ಪಕ್ಷಿಗಳು ವಾಸವಾಗಿದೆ ಮತ್ತು ಬಹಳ ವಿರಳವಾದ ಭಾರತೀಯ ಹೆಬ್ಬಾವು, ಬೊಗಳುವ ಜಿಂಕೆ, ಮತ್ತು ಸಾಂಭಾರ್ ಗಳಂತಹ ೪೨೫ ಪ್ರಜಾತಿಯ ಪ್ರಾಣಿಗಳು ಫುಂಡಿಯನ್ನು ತಮ್ಮ ಮನೆಯನ್ನಾಗಿಸಿಕೊಂಡಿವೆ.

ನಂಬಲಾಗದ ಈ ತೇಲುವ ದ್ವೀಪಗಳ ಮೇಲೆ ಸ್ವಲ್ಪ ಸಮಯ ಕಳೆಯಲು ಈ ಕೆರೆಯು ಒಂದು ಅದ್ಭುತವಾದ ಗಮ್ಯತಾಣವಾಗಿದೆ; ನೈಸರ್ಗಿಕ ಸೌಂದರ್ಯದ ವಿಶಿಷ್ಟ ಲೋಕಕ್ಕೆ ನಮ್ಮನ್ನೊಯ್ಯುವ ಈ ಕೆರೆಯು ನಿಜವಾಗಿಯೂ ಅಕಳಂಕವಾಗಿದೆ. ಬೆಳಿಗ್ಗೆ ೬.೦೦ ರಿಂದ ೧೦.೦೦ ವರೆಗೆ ಸಾಂಗಾಯ್ ಜಿಂಕೆಗಳು ಹಿಂಡಾಗಿ ಮೇಯಲು ಬಂದಾಗ ಈ ಉದ್ಯಾನವನ್ನು ವೀಕ್ಷಿಸಲು ಇದು ಉತ್ತಮವಾದ ಸಮಯವಾಗಿದೆ.

LEAVE A REPLY

Please enter your comment!
Please enter your name here