ಭಾರತದಲ್ಲಿನ 10 ಮನಮೋಹಕ ಬಗೆ ರೈಲು ಪ್ರಯಾಣಿಕರು

0
251
Unique experience in Indian trains

ಒಂದು ರೈಲು ಪ್ರಯಾಣವನ್ನು ಮಾಡುವುದು ಯಾವುದೇ ಬಾಲಿವುಡ್ ಚಲನಚಿತ್ರಕ್ಕಿಂತ ಕಡಿಮೆ ಇರುವುದಿಲ್ಲ ಅದರಲ್ಲಿ ಎಲ್ಲವು ಇರುತ್ತದೆ – ಮನೋರಂಜನೆ, ಕಾಮಿಡಿ, ಡ್ರಾಮ ಮತ್ತು ಕೆಲವೊಮ್ಮೆ ಆಕ್ಷನ್ ಸಹ. ಬಹಳಷ್ಟು ಪ್ರಯಾಣದಲ್ಲಿ ನಾವು ವೈವಿಧ್ಯಮಯ ವ್ಯಕ್ತಿತ್ವದ ಜನರನ್ನು ನೋಡುತ್ತೇವೆ ಅವರು ಒಂದು ಪ್ರಯಾಣವನ್ನು ಅನುಕೂಲಕರ ಮಾಡುತ್ತಾರೆ ಇಲ್ಲವೇ ಬಹಳಷ್ಟು ಸಮಯದಲ್ಲಿ ತೊಂದರೆ ನೀಡುತ್ತಾರೆ. ಈ ರೀತಿಯ ರೈಲು ಪ್ರಯಾಣಿಕರ ಪಟ್ಟಿಯನ್ನು ನಾವು ಒಮ್ಮೆ ನೋಡಣ. ಇಂತಹ ವ್ಯಕ್ತಿಗಳನ್ನು ನೀವು ಎಲ್ಲಿಯಾದರೂ, ಎಂದಾದರು ನೋಡಿಯೇ ಇರುತ್ತೀರಿ ಎಂದು ನಮ್ಮ ನಂಬಿಕೆ.

home made food

• ಡಬ್ಬ-ವಾಲಾಗಳು- ತಮ್ಮ ಡಬ್ಬಿಗಳಲ್ಲಿ ತಿಂಡಿತಿನಿಸುಗಳನ್ನು ತುಂಬಿಕೊಂಡಿರುವವರು, ಕೆಲವು ಜನರು ಪ್ರಯಾಣಿಸುವ ಪ್ರತಿ ಗಂಟೆಗೂ ಒಮ್ಮೆ ಆಹಾರ ಸೇವಿಸುತ್ತಾರೆ. ತಮ್ಮ ಮನೆಯಲ್ಲಿ-ತಯಾರಿಸಿದ ಆಹಾರದ ವಾಸನೆ ಅದರೊಂದಿಗೆ ಅಗೆಯುವ ಶಬ್ದವು ನಿಮ್ಮ ಮೂಗು ಮತ್ತು ಕಿವಿಗಳನ್ನು ತಲುಪಿ ನಿಮ್ಮನ್ನು ಕಸಿವಿಸಿ ಮಾಡುವುದಂತೂ ಖಚಿತ. ಇದಲ್ಲದೇ, ಮಕ್ಕಳು ತಿರುಗಾಡುವ ವ್ಯಾಪಾರಿಗಳಿಗೆ ಒಳ್ಳೆಯ ವ್ಯಾಪಾರ ನೀಡುತ್ತಾರೆ.

music on train

• ಕಿಶೋರ್ ಕುಮಾರ್ ಗಳು- ನಾವೆಲ್ಲರೂ ಸಹ ಸಂಗೀತಾರಾಧಕರೆ, ಅಲ್ಲವೇ? ಆದರೆ ಈ ಹುಡುಗರು, ಅವರುಗಳಿಗೆ ಸಂಗೀತವೆಂದರೆ ‘ತುಂಬಾಆಆಆಆಆಆಅ ಪ್ರೀತಿ’. ಇವರು ತಮ್ಮ ಮೊಬೈಲ್ ಫೋನುಗಳಲ್ಲಿ ನಾನ್-ಸ್ಟಾಪ್ ಮ್ಯೂಸಿಕ್ ಪ್ಲೇ ಮಾಡುವುದಲ್ಲದೇ, ಅದರೊಂದಿಗೆ ತಮ್ಮ ದೊಡ್ಡ ದನಿಯಲ್ಲಿ ಹಾಡಲು ಸಹ ಹಿಂಜರಿಯುವುದಿಲ್ಲ ಹಾಗಾಗಿ ಸಹ ಪ್ರಯಾಣಿಕರು ಸಹ ಅವರ ಈ ತಾಳತಪ್ಪಿದ ಹಾಡುಗಾರಿಕೆಯನ್ನು ‘ಆನಂದಿಸಬಹುದು’.

cbi folks on train

• ಸಿಬಿಐ ವ್ಯಕ್ತಿಗಳು – ನೀವು ನಿಮ್ಮ ರೈಲನ್ನು ಹತ್ತಿದ ನಂತರ ನಿಮ್ಮ ಪಕ್ಕದ ಸೀಟಿನಲ್ಲಿ ಕೆಲವು ತುಂಬಾ ಒಳ್ಳೆಯ ಜನರು ಕುಳಿತಿರುತ್ತಾರೆ. ಅವರುಗಳು ಕೇವಲ ಒಂದು “ಹೆಲೊ, ಎಲ್ಲಿಗೆ ಹೋಗುತ್ತಿದ್ದೀರಿ” ಎನ್ನುವಂತಹ ಪ್ರಶ್ನೆಗಳಿಂದ ಮಾತುಕತೆಯನ್ನು ಪ್ರಾರಂಭಿಸುತ್ತಾರೆ, ಮತ್ತೆ ನಿಧಾನವಾಗಿ ನಿಮ್ಮ ವಯಕ್ತಿಕ ಬದುಕಿನೆಡೆಗೆ ಮುಂದುವರಿಯುತ್ತಾರೆ. ಭಾರತೀಯ ರೈಲಿನಲ್ಲಿ ಖಚಿತಾವಾಗಿಯೂ ಪ್ರಯಾಣದ ಪರ್ಯಂತವೂ ಡಜನ್ ಗಟ್ಟಲೆ ಮಾತುಗಳನ್ನಾಡುವ ಇಂತಹ ಒಬ್ಬ ಮಾತಿನಮಲ್ಲರು ಸಿಕ್ಕೆ ಸಿಗುತ್ತಾರೆ.

snory glory on train

• ಗೊರಕೇ ಸಾಮ್ರಾಟರು – ಇಂತಹ ಬಗೆಯ ಜನರು ತಮ್ಮ ಲೋಯರ್ ಬರ್ಥ್ ಗೆ ಬದಲಾಗಿ ಅಪ್ಪರ್ ಬರ್ಥ್ ಅನ್ನು ಕೇಳಿಪಡೆಯುತ್ತಾರೆ, ಕೇವಲ ದಿನವೆಲ್ಲಾ, ರಾತ್ರಿಗಳೆಲ್ಲ, ಸಂಜೆಗಳೆಲ್ಲ ಮತ್ತು ಶತಮಾನಗಳೆಲ್ಲಾ ನಿದ್ರೆ ಮಾಡಲು. ಜಗಳವಾಡುವ ಸಂಸಾರಗಳು, ಕಿರುಚಾಡುವ ಮಕ್ಕಳು ಅಥವಾ ಅಂತ್ಯಾಕ್ಷರಿಯ ಅಕ್ರಮಣಕಾರಿ ಸುತ್ತುಗಳು; ಇಂತಹ ಗೊರಕೇ ಸಾಮ್ರಾಟರ ಗಾಢ ನಿದ್ರೆಗೆ ಭಂಗ ಮಾಡಲು ಬೇಕಾಗುವಷ್ಟು ಸತ್ವವನ್ನು ಹೊಂದಿರುವುದಿಲ್ಲ.

Luggage Over dosers on train

• ಮಿತಿಮೀರಿದ ಲಗೇಜುದಾರರು – ಇಂತಹ ಜನರು ಒಂದು ಹೊಸ ನಾಗರೀಕತೆಯನ್ನು ಪ್ರಾರಂಭಿಸಲು ಸಾಕಾಗುವಷ್ಟು ಲಗೇಜನ್ನು ತರುತ್ತಾರೆ. ತಮ್ಮ ಸುತ್ತಲಿನ ಪ್ರತಿಯೊಂದು ಇಂಚನ್ನು ಸಹ ಅವರ ಲಗೇಜಿನ ಪಾರ್ಕಿಂಗ ಸ್ಥಳವಾಗಿ ಬದಲಾಯಿಸಿರುತ್ತಾರೆ ಇವರು. ಕೆಲವೊಮ್ಮೆ ನಿಮಗೂ ಸಹ ಬರು ಏಕೈಕ ಅನುಮಾನವೆಂದರೆ ಇವರುಗಳನ್ನು ನಿಜವಾಗಲೂ ಮನೆಯಿಂದ ಹೊರದಬ್ಬಿದ್ದಾರೆಯೇ ಮತ್ತು ಇವರು ಒಂದು ಹೊಸ ಜೀವನ ಪ್ರಾರಂಭಿಸಲು ಹೊರಟಿದ್ದಾರೆಯೇ ಎಂದು.

romantic couples on train

• ಎಕ್-ದೂಜೆ-ಕೆಲಿಯೇ- ನೀವು ಯಾವುದೇ ರೈಲು ಪ್ರಯಾಣದಲ್ಲಿ ಇವರನ್ನು ನೋಡದೇ ಇರಲು ಸಾಧ್ಯವೇ ಇಲ್ಲ. ಅವರಿಗೆ ತಮ್ಮ ಸುತ್ತಲೂ ಯಾರು ಸಹ ಕಾಣುವುದೇ ಇಲ್ಲ ಹಾಗೂ ಯಾವಾಗಲೂ ಒಬ್ಬರಿಗೆ ಒಬ್ಬರು ಅಂಟಿಕೊಂಡೇ ಇರುತ್ತಾರೆ. ಅವರುಗಳ ಕುಚಿಕುಗಳು ಮತ್ತು “ಏನಾದರೂ ಬೇಕೆ ಬೇಬಿ?” ಎನ್ನುವ ಸನ್ನಿವೇಶಗಳು ಮುಗಿಯುವುದೇ ಇಲ್ಲ, ಮುಗಿಯುವುದು ಬೇಡ ಬಿಡಿ. ಏಕಂದರೆ ರೈಲು ಪ್ರಯಾಣವು ಪ್ರಣಯ ಮಯವಾಗಿರಬೇಕು, ಅಲ್ಲವೇ?

Ye seat mujhe de de thakur on train

• “ಈ ಸೀಟ್ ನನಗೆ ಕೊಡೊ ಠಾಕೂರ್”- ಇಂತಹ ಜನರು ತಾವು ತಮ್ಮ ಜನಗಳೊಂದಿಗೆಯೇ ಕೂರಬೇಕು ಎನ್ನುವಾ ಕಾರಣದಿಂದಾಗಿ ತಮ್ಮ ಸಂಪೂರ್ಣ ಪ್ರಯಾಣವನ್ನು ಸಹ-ಪ್ರಯಾಣಿಕರೊಂದಿಗೆ ಸೀಟಿನ ವಾಹಿವಾಟು ಮಾಡುವುದರಲ್ಲೇ ಕಳೆಯುತ್ತಾರೆ. ಅವರುಗಳಿಗೆ ಅಕ್ಕಪಕ್ಕದ ಸೀಟು ಸಿಗಲಿಲ್ಲವೆಂದರೆ, ಅವರುಗಳು ಸಹ-ಪ್ರಯಾಣಿಕರನ್ನು “ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಿ” ಎಂದು ಕೇಳಿಕೊಳ್ಳುತ್ತಾರೆ ಹಾಗಾಗಿ ಅವರುಗಳು ತಮ್ಮ ಪ್ರೀತಿ ಪಾತ್ರರೊಂದಿಗೆ ಬಿಗಿಯಾಗಿ ಕೂರಬಹುದು ಎಂದು; ಏಕೆಂದರೆ ತಮ್ಮ ಪ್ರೀತಿ ಪಾತ್ರರಿಲ್ಲದೆ ಮಾಡಿದಂತಹ ಒಂದು ರೈಲು ಪ್ರಯಾಣವು ಅವರಿಗೆ ಖಚಿತವಾಗಿಯೂ ವಿನಾಶಕಾರಿಯಾಗಿ ಪರಿಣಮಿಸುತ್ತದೆ.

ಈ ವರ್ಗದ ಅಡಿಯಲ್ಲಿನ ಮತ್ತೊಂದು ಬಗೆ ಪ್ರಯಾಣಿಕರೆಂದರೆ ‘ಜುಗಾಡಿಗಳು’ ಟಿಕೆಟ್-ರಹಿತ ಪ್ರಯಾಣಿಕರು. ಇವರನ್ನು ನೀವು ಯಾವಾಗಲೂ ಟಿಟಿಇ ನೊಡನೆ ಅಥವಾ ಸಹ ಪ್ರಯಾಣಿಕರೊಂದಿಗೆ ಸೀಟಿಗಾಗಿ ಚೌಕಾಸಿ ಮಾಡುತ್ತಿರುವಾಗ ನೋಡಿರುತ್ತೀರಿ.

Hotshot Corporates on train

• ಹಾಟ್-ಸ್ಪಾಟ್ ಕಾರ್ಪೊರೇಟ್ಸ್ – ಇವರನ್ನು ನೋಡಿದರೆ ಒಂದು ಸಮಗ್ರ ಕಾರ್ಪೊರೇಟ್ ಕಚೇರಿಯೇ ನಿಮ್ಮ ಕಣ್ಣಮುಂದೆ ಬಂದು ನಿಲ್ಲುತ್ತದೆ. ಇವರು ಚಾರ್ಜಿಂಗ್ ಪಾಯಿಂಟ್ ಹುಡುಕುವ ಮತ್ತೊಂದು ಪ್ರಮುಖ ವರ್ಗದವರು, ಈ ಕಾರ್ಪೋರೇಟ್ ಹಾಟ್ ಸ್ಪಾಟುಗಳು ತಮ್ಮ ಲ್ಯಾಪ್ ಟಾಪುಗಳನ್ನು ಹೊರತರುತ್ತಾರೆ ತಮ್ಮ ಸಹ-ಪ್ರಯಾಣಿಕರ ಲಾಭಕ್ಕಾಗಿ ಅವುಗಳಲ್ಲಿ ಮ್ಯೂಸಿಕ್ ಅನ್ನು ಹಾಕುವುದು ಅಥವಾ ಚಲನಚಿತ್ರವನ್ನು ಪ್ಲೇ ಮಾಡುತ್ತಾರೆ. ಇವರು ತಮ್ಮ ದುಬಾರಿ ಸ್ಮಾರ್ಟ್ ಫೋನುಗಳಿಂದ ಕಾರ್ಯ-ನಿಮಿತ್ತವಾಗಿ ಜೋರಾಗಿ ಮಾತನಾಡುತ್ತಾರೆ ಅದರೊಂದಿಗೆ ತಮ್ಮ ಲ್ಯಾಪ್ ಟಾಪುಗಳಲ್ಲಿ ಕೆಲವು ಪ್ರೆಸೆಂಟೇಶನ್ ಗಳನ್ನು ಸಹ ಟೈಪ್ ಮಾಡುತ್ತಿರುತ್ತಾರೆ.

440 volt debators

• 440-ವೋಲ್ಟ್ ಚರ್ಚಾಗಾರರು – ರಾಜಕೀಯ, ದೇಶ, ಅರಾಜಕೀಯ, ನಿರುದ್ಯೋಗ, ನಿಮ್ಮ ಪರಿಜ್ಞಾನಕ್ಕೆ ಪ್ರಶ್ನೆ ಮಾಡುವಂತಹ ಏನನ್ನಾದರು ತೆಗೆದುಕೊಳ್ಳಿ. ಯಾವುದೇ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ಇವರುಗಳು ಅದರ ಮೇಲೆ ಯಾವುದೇ ಬಗೆಯ ಚರ್ಚೆಯನ್ನು ಮಾಡಲು ಸದಾ ಸಿದ್ದರಿರುತ್ತಾರೆ!

Daredevils on train

• ದೈರ್ಯಶಾಲಿಗಳು – ಇಂತಹ ವ್ಯಕ್ತಿಗಳು ತಮ್ಮ ಸೀಟುಗಳಲ್ಲಿ ಕೂರಲಾಗುವುದಿಲ್ಲ ಹಾಗು ಪ್ರತಿ ಬಾರಿಯು ರೈಲಿನ ಬಾಗಿಲಿಗೆ ಹೋಗಿ ನಿಲ್ಲಲು ನಿಮ್ಮಗೆ ತೊಂದರೆ ನೀಡುತ್ತಾರೆ. ತಾಜಾ ಗಾಳಿಯನ್ನು ಆಸ್ವಾದಿಸಲು ಮತ್ತು ಬಾಗಿಲಲ್ಲಿ ನೇತಾಡುತ್ತಿರುವಾಗ ಕಾಣುವ ಪ್ರಕೃತಿ ಸೌಂದರ್ಯಕ್ಕಾಗಿ ಅವರು ಯಾವುದೇ ಆಪತ್ತನ್ನು ಸಹ ಲೆಕ್ಕಿಸುವುದಿಲ್ಲ.

ನಿಮ್ಮನ್ನು ಕಸಿವಿಸಿಗೊಳಿಸುವ ಇಂತಹ ಎಲ್ಲಾ ಬಗೆಯ ಜನರನ್ನು ನೀವು ನೋಡಿದ್ದೀರಿ ಎಂದು ನಾವು ಖಚಿತವಾಗಿ ಹೇಳಬಲ್ಲೆವು. ಆದರೆ ಏನೆ ಆಗಲಿ, ರೈಲಿನ ದೂರ ಪ್ರಯಾಣದಲ್ಲಿ ಇವುಗಳೆ ನಿಜವಾದ ಮನೋರಂಜನೆಗಳು ಹಾಗೂ ನಾವೆಲ್ಲರೂ ಅವುಗಳನ್ನು ಪ್ರೀತಿಸುತ್ತೇವೆ!

LEAVE A REPLY

Please enter your comment!
Please enter your name here