Simplifying Train Travel

ಪ್ರಯಾಣಿಸುವಾಗ ಆಹಾರ ಸೇವನೆಗೆ ಆರೋಗ್ಯಕರ ಸಲಹೆಗಳು

ಇವರಿಂದ: ಫರಾಹ್ ಅರ್ಫೀನ್, ಚಿರಪರಿಚಿತ ನ್ಯುಟ್ರೀಷನಿಷ್ಟ್

ಪ್ರಯಾಣಿಕರು ಸಮಾನ್ಯವಾಗಿ ಪ್ರಯಾಣದ ಸಮಯದಲ್ಲಿ ಆರೋಗ್ಯಕರ ಆಹಾರ ಸೇವಿಸಲಾಗುವುದಿಲ್ಲ ಎಂದು ದೂರುತ್ತಾರೆ. ಒಳ್ಳೆಯ ಸಮಾಚಾರವೇನೆಂದರೆ ಸ್ವಲ್ಪ ಯೋಜನೆಗಳಿಂದ, ನೀವು ಪ್ರಯಾಣಿಸುವ ಸಮಯದಲ್ಲಿ ನೀವು ತೃಪ್ತಿಯಾಗುವಂತಹ ಆರೋಗ್ಯಕರ ಆಹಾರ ಸೇವಿಸಬಹುದು. ಈ ಕೆಳಗೆ ಕೆಲವು ಆರೋಗ್ಯಕರ ಸಲಹೆಗಳನ್ನು ನೀಡಲಾಗಿದೆ ಅವುಗಳು ನಿಮ್ಮ ಪ್ರಯಾಣದ ಸಮಯದಲ್ಲಿ ಆರೋಗ್ಯಕರವಾಗಿ ಉಳಿಯಲು ಸಹಾಯ ಮಾಡುತ್ತವೆ.

ಸುಲಭವಾದ ಆರೋಗ್ಯಕರ ತಿನಿಸುಗಳು

ಅನಾರೋಗ್ಯವನ್ನು ತಡೆಯಲು, ಪ್ರಯಾಣಿಸುವ ಸಮಯದಲ್ಲಿ ನಿಮಗೆ ಸುಲಭವಾಗಿ ಸಿಗುವ ತಿನಿಸುಗಳಂತಿರುವ ಒಳ್ಳೆಯ ಪ್ರೋಟೀನ್ ಪೂರ್ಣ ಆಹಾರ ಪದಾರ್ಥಗಳು ನಿಮಗೆ ಬಹಳ ಉತ್ತವಾದುವು, ಆಯ್ಕೆಗಳು ಬಹಳಷ್ಟಿವೆ, ಅವುಗಳೆಂದರೆ ಕಡಳೆಕಾಳು ಜೊತೆಗೆ ಮುರಿ ಮಿಕ್ಸ್ (ಚುರುಮುರಿ), ಅವಲಕ್ಕಿ ಜೊತೆ ಕಡಲೆಕಾಯಿ, ಪುದಿನಾ ಚಟ್ನಿ ಅಥವಾ ಸಾಸ್ ನೊಂದಿಗೆ ಖಾಕ್ರ, ಹಮ್ಮಸ್ ನೊಂದಿಗೆ ಹಣ್ಣುಗಳು ಮತ್ತು ತರಕಾರಿಗಳು. ಉತ್ತಮವಾದ ವಿಷಯವೆಂದರೆ ಈಗ ರೈಲ್ ಯಾತ್ರಿ ಹೈಜೀನ್ ಮೆನು ನೊಂದಿಗೆ ರೈಲಿನಲ್ಲಿಯೇ ಒಳ್ಳೆಯ ಮಿತವಾದ ಆಹಾರವನ್ನು ಪಡೆಯಬಹುದು. ಈಗ ನಿಮ್ಮ ಆರೋಗ್ಯದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಇಡ್ಲಿ, ಪೋಹ, ಸ್ಯಾಂಡ್ವಿಜ್ ಅಥವಾ ಉಪ್ಮಾ ಆರ್ಡರ್ ಮಾಡಿ ಮತ್ತು ಮಿತವಾದ ಆಹಾರದೊಂದಿಗೆ ಆನಂದಿದಿರಿ.

ಮಿಕ್ಸ್-ಸೀಡ್, ಪ್ರೋಟೀನ್ ಡೈಯೆಟ್

ಡ್ರೈ ಫ್ರೂಟ್ಸ್ ಮತ್ತು ಬಾದಾಮಿ, ಅಕ್ರೋಟ್, ಕುಂಬಳಕಾಯಿ ಬೀಜಗಳು, ಅಗಸೆ ಬೀಜಗಳು, ಎಳ್ಳು ಇತ್ಯಾದಿ ಗಳಂತಹ ಬೀಜ ಮಿಶ್ರಣಗಳು, ಪ್ರೋಟೀನ್ ಪೂರಕಗಳಾಗಿವೆ ಮತ್ತು ಶಕ್ತಿಯುತವಾಗಿರಲು ಸಹಾಯ ಮಾಡುತ್ತವೆ. ಅವುಗಳನ್ನು ಜಿಪ್ ಲಾಕ್ ಪೌಚ್ ಗಳಲ್ಲಿ ತುಂಬಿಕೊಳ್ಳಿ ಮತ್ತು ನಿಮ್ಮೊಡನೆ ತೆಗೆದುಕೊಂಡು ಹೋಗಿ, ನೀವು ಅವುಗಳನ್ನು ಒಣದ್ರಾಕ್ಷಿ ಮತ್ತು ಒಣ ಬೆರ್ರಿಗಳು, ಒಣ ಅಂಜೂರ ಅಥವಾ ಇತರೆ ಡ್ರೈ ಫ್ರೂಟ್ಸ್ ನೊಂದಿಗೆ ಮಿಶ್ರಣ ಮಾಡಬಹುದು.

ಹಣ್ಣುಗಳನ್ನು ತೆಗೆದುಕೊಳ್ಳಿ

Kannada Blog

ಕೆಲವು ಕಾಲೋಚಿತ ಹಣ್ಣಗಳನ್ನು ಜೊತೆಗೆ ತೆಗೆದುಕೊಂಡು ಹೋದರೆ ಪ್ರಯಾಣವು ಹೆಚ್ಚು ಸಹಾಯಕವಾಗುತ್ತದೆ, ಆ ಹಣ್ಣುಗಳೆಂದರೆ ಸೇಬು, ಕಿತ್ತಳೆ, ದ್ರಾಕ್ಷಿ, ಪೇರಳೆ ಅಥವಾ ಯಾವುದೆ ನಿಮ್ಮ ಆಯ್ಕೆಯ ಹಣ್ಣು. ಅಂತೆಯೇ ಹಣ್ಣುಗಳು ಅನಾರೋಗ್ಯಕರ ಸಕ್ಕರೆಯುಕ್ತ ಆಹಾರ ಸೇವಸಬೇಕು ಎನ್ನುವ ಭಾವನೆಯನ್ನು ತಡೆಯುತ್ತವೆ.

ಶೀಘ್ರ ತಿನಿಸುಗಳು

ಕಡಿಮೆ ಗಜಿಬಿಜಿಯಿರುವ ಅಥವಾ ಒಂದು ತುತ್ತಿನ ಅಳತೆಯಲ್ಲಿರುವ ಆಹಾರವನ್ನು ಆಯ್ಕೆ ಮಾಡಿಕೊಳ್ಳಿ. ಅಂದರೆ ಸ್ಯಾಂಡ್ವಿಜ್, ಚೀಸ್ ಸ್ಯಾಂಡ್ವಿಜ್, ಪನೀರ್ ರೋಲ್, ಪೀನಟ್ ಬಟರ್ ಸ್ಯಾಂಡ್ವಿಜ್, ಸ್ಪ್ರೆಡ್ ಆನ್ – ಸಂಪೂರ್ಣ ಗೋದಿ ಬ್ರೆಡ್, ಇತ್ಯಾದಿ. ನೀವು ನಿಮ್ಮ ರೈಲಿನಲ್ಲಿ ಯಾವುದೇ ಸಮಯದಲ್ಲಿಯಾದರೂ ರೈಲ್ ಯಾತ್ರಿ ಯೊಂದಿಗೆ ಶೀಘ್ರ ತಿನಿಸುಗಳನ್ನು ಆರ್ಡ ಮಾಡಬಹುದು.

ಬೇಯಿಸಿದ ಮೊಟ್ಟೆಗಳು

ಇವುಗಳು ಬೇಯಿಸಲು ಸುಲಭವಾದುವು, ಪ್ರೋಟೀನ್ ಪೂರಕ ಮತ್ತು ಅವಶ್ಯಕ ಅಮಿನೊ ಆಮ್ಲಗಳನ್ನು ಹೊಂದಿವೆ ಅವು ಬ್ಲಡ್ ಶುಗರ್ ಅನ್ನು ನಿಯಂತ್ರಿಸುತ್ತವೆ, ಶಕ್ತಿಯ ಮಟ್ಟವನ್ನು ಸುಧಾರಿಸುತ್ತವೆ ಹಾಗೂ ತೂಕವನ್ನು ಸಮೋತಲನ ಮಾಡಲು ಸಹಾಯ ಮಾಡುತ್ತವೆ. ಮೊಟ್ಟೆ ಹಾಗೆಯೇ ತಿನ್ನಿ ಅಥವಾ ತರಕಾರಿಗಳು ಅಥವಾ ಹಸಿರು ಎಲೆಗಳನ್ನು ಸೇರಿಸುವ ಮೂಲಕ ಎಗ್ ರೋಲ್/ಎಗ್ ಸ್ಯಾಂಡ್ವಿಜ್ ಮಾಡಿ ತಿನ್ನಿ.

ತಾಜಾ ಆಹಾರ

ಒಂದೊಮ್ಮೆ ಯಾರಾದರೂ ಏಸಿ ಕೋಚ್ ನಲ್ಲಿ ಪ್ರಯಾಣಿಸುತ್ತಿದ್ದರೆ ಆಗ ಹಳಸುವ ಮತ್ತು ಹಳಸದೇ ಇರುವ ಆಹಾರ ಪದಾರ್ಥಗಳನ್ನು ಪರಿಶೀಲಿಸಿ ಹಾಗೂ ಒಣ ಆಹಾರ ಪದಾರ್ಥಗಳಾದ ಒಣಗಿದ ಹಾಗಲಕಾಯಿ ಮತ್ತು ಚಪಾತಿಗಳನ್ನು, ಮಸಾಲೆ ತುಂಬಿದ ಬೆಂಡೆಕಾಯಿ ಮತ್ತು ಚಪಾತಿಗಳನ್ನು, ದಾಲ್ ತುಂಬಿದ ರೋಟಿ ಅಥವಾ ದಾಲ್/ಬೇಸನ್ ಚಿಲ್ಲ, ಮಿಸ್ಸಿ ರೋಟಿ ಮತ್ತು ಮೊಸರು (ಬೇಕಾದಂತೆ ಪ್ಯಾಕ್ ಮಾಡಿ ಸುಲಭವಾಗಿ ಲಭ್ಯವಿರುವ) ಜೊತೆಗೆ ತೆಗೆದುಕೊಂಡು ಹೋಗಿ. ಅಥವಾ ಮನೆಯಿಂದಲೇ ಈ ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡುವ ಗೊಂದಲವೇಕೆ, ನಿಮ್ಮ ಸೇವೆಗಾಗಿ ರೈಲ್ ಯಾತ್ರಿ ಹೈಜೀನಿಕ್ ಮೆನು ಲಭ್ಯವಿದೆ? ಈಗಲೇ ಆರ್ಡರ್ ಮಾಡಿ!

ಸಾಕಷ್ಟು ನೀರು ಕುಡಿಯಿರಿ

ನಮಗೆಲ್ಲರಿಗೂ ನೀರು ಬಹಳ ಮುಖ್ಯ, ಹಾಗಾಗಿ ನಿಮ್ಮೊಂದಿಗೆ ಒಂದು ನೀರಿನ ಬಾಟಲ್ ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. ನಿಮ್ಮ ಹೈಡ್ರೇಷನ್ ನಿಂದಾಗಿ ಪ್ರಯಾಣವನ್ನು ತೊಂದರೆಮಯ ಮಾಡಿಕೊಳ್ಳಬೇಡಿ.


2 thoughts on “ಪ್ರಯಾಣಿಸುವಾಗ ಆಹಾರ ಸೇವನೆಗೆ ಆರೋಗ್ಯಕರ ಸಲಹೆಗಳು

  1. Panchaksharayya. M

    ಧನ್ಯವಾದಗಳು ನಿಮಗೆ, ಏಕಂದರೇ ಪ್ರಯಾಣದ ನೋಡುವಂತಹ ಸುಂದರವಾದ ಸ್ಥಳಗಳು ಹಾಗು ಪ್ರಯಾಣದ ಸಂಧರ್ಭದಲ್ಲಿ ಸೇವಿಸುವ ಒಳ್ಳೆಯ ಪೌಷ್ಟಿಕ ಆಹಾರ ಮತ್ತು ಸುಚಿರುಚಿಯಾದ ತಿಂಡಿತಿನಿಸುಗಳನ್ನು ತಿಳಿಸಿದ್ಧಕ್ಕೇ. ಹಾಗೇನೇ ನಿಮಗೊಂದು ಮನವಿ, ದೇಶದ ಯಾತ್ರ ಸ್ಥಳಗಳು ಹಾಗು ಸುಂದರವಾದ ಸ್ಥಳಗಳು ಇದ್ದರೇ ಹೇಳಿರಿ.

    Comment

Leave a Reply

Your email address will not be published. Required fields are marked *